ವೋಡಾಫೋನ್‌ ನೆಟವರ್ಕ್‌ ಸ್ಥಗಿತ: ಕರ್ನಾಟಕದ ಗ್ರಾಹಕರ ಪರದಾಟ

ಬೆಂಗಳೂರು ಮತ್ತು ಕರ್ನಾಟಕದ ಇತರ ಪ್ರದೇಶಗಳಲ್ಲಿ ಕಳೆದ ಹಲವಾರು ನಿಮಿಷಗಳಿಂದ ವೋಡಾಫೋನ್‌ ನೆಟವರ್ಕ್‌ ಸೇವೆ ಸ್ಥಗಿತಗೊಂಡಿದ್ದು ಬಳಕೆದಾರರು ಪರದಾಡುವಂತಾಗಿದೆ.

ವೋಡಾಫೋನ್‌ ನೆಟವರ್ಕ್‌ ಸ್ಥಗಿತ: ಕರ್ನಾಟಕದ ಗ್ರಾಹಕರ ಪರದಾಟ

Friday February 07, 2020,

1 min Read

q

ಬೆಂಗಳೂರು ಮತ್ತು ಕರ್ನಾಟಕದ ಇತರ ಪ್ರದೇಶಗಳಲ್ಲಿ ಕಳೆದ ಹಲವಾರು ನಿಮಿಷಗಳಿಂದ ವೋಡಾಫೋನ್‌ ನೆಟವರ್ಕ್‌ ಸೇವೆ ಸ್ಥಗಿತಗೊಂಡಿದ್ದು ಬಳಕೆದಾರರು ಪರದಾಡುತ್ತಿದ್ದಾರೆ.


ಕಳೆದ ಹಲವಾರು ನಿಮಿಷಗಳಿಂದ ಬೆಂಗಳೂರು ಮತ್ತು ಕರ್ನಾಟಕದ ಇತರ ಪ್ರದೇಶಗಳಲ್ಲಿ ವೋಡಾಫೋನ್‌ ನೆಟವರ್ಕ್‌ ಸೇವೆ ಸ್ಥಗಿತಗೊಂಡಿರುವುದು ವರದಿಯಾಗಿದೆ. ಈ ಲೇಖನವನ್ನು ಪ್ರಕಟಿಸುವ ಸಮಯದಲ್ಲಿ ವೋಡಾಫೋನ್‌ ಬಳಕೆದಾರರು ಯಾವುದೇ ರೀತಿಯ ಕರೆಗಳನ್ನು, ಅಂತರ್ಜಾಲ ಸೇವೆಯನ್ನು ಪಡೆಯಲಾಗದೆ ಪರದಾಡುವ ಸ್ಥಿತಿ ಏರ್ಪಟ್ಟಿದೆ.


ಹಠಾತ್ತನೆ ಸ್ಥಗಿತಗೊಂಡಿರುವ ವೋಡಾಫೋನ್‌ ನೆಟವರ್ಕ್‌ ನಿಂದ ತೊಂದರೆ ಗೀಡಾಗಿರುವ 100 ಕ್ಕೂ ಹೆಚ್ಚು ಗ್ರಾಹಕರು ಬೆಂಗಳೂರಿನ ಇಂದಿರಾಗನರದ ವೋಡಾಫೋನ್‌ ಮಳಿಗೆಗೆ ಧಾವಿಸಿದ್ದಾರೆಂದು ಆನಂದ ವಿ ಎಮ್‌ ಎನ್ನುವವರು ಟ್ಟಿಟ್‌ ನಲ್ಲಿ ಹಂಚಿಕೊಂಡಿದ್ದಾರೆ.

“ನನ್ನ ಫೋನ್‌ನಲ್ಲಿ ಪ್ರತಿ ಇಪ್ಪತ್ತು ಸೆಕೆಂಡಿಗೆ ನಾನು ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಅನ್ನು ರಿಫ್ರೆಶ್ ಮಾಡುವುದನ್ನು ಬಿಟ್ಟು ನನ್ನ ಜೀವನವನ್ನು ಏನು ಮಾಡಬೇಕೆಂದು ನನಗೆ ತಿಳಿದಿಲ್ಲ,” ಎಂದು ಮೇಘಾ ಮಾಂಡವಿಯಾ ಟ್ವೀಟ್‌ ಮಾಡಿದ್ದಾರೆ.

“ಎರಡು ಗಂಟೆಯಿಂದ ವೋಡಾಫೋನ್‌ ನೆಟವರ್ಕ್‌ ಸಿಗುತ್ತಿಲ್ಲ, ನನ್ನ ಕುಟುಂಬದವರು ನನ್ನನ್ನು ಸಂಪರ್ಕಿಸಲಾಗುತ್ತಿಲ್ಲ. ದಯವಿಟ್ಟು ಆದಷ್ಟು ಬೇಗ ಇದನ್ನು ಸರಿ ಮಾಡಿ,” ಇಲಿಯಾಸ ಮನ್ಸುರಿ ಟ್ವಿಟ್‌ ಮಾಡಿದ್ದಾರೆ.


ಟ್ವಿಟರ್‌ ನಲ್ಲಿ ಗ್ರಾಹಕರಿಗೆ ಪ್ರತಿಕ್ರಿಯಿಸಿದ ವೋಡಾಫೋನ್‌,


“ನಮಸ್ತೆ! ಇದೊಂದು ತಾತ್ಕಾಲಿಕ ಸಮಸ್ಯೆ, ತಡೆರಹಿತ ನೆಟ್‌ವರ್ಕ್ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡವು ಅದರ ಮೇಲೆ ಕಾರ್ಯನಿರ್ವಹಿಸುತ್ತಿದೆ. ಸಮಸ್ಯೆಯನ್ನು ಬಗೆಹರಿಸಲು ದಯವಿಟ್ಟು ನಮಗೆ ಸ್ವಲ್ಪ ಸಮಯ ನೀಡಿ,” ಎಂದು ಬರೆದಿದೆ.

ಇಷ್ಟಾದರೂ ನೆಟವರ್ಕ್‌ ಸಮಸ್ಯೆ ಯಾವಾಗ ಬಗೆಹರಿಯಲಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಮೊಬೈಲ್‌ ಫೋನ್‌ ಇಲ್ಲದಿದ್ದರೆ ಜಗತ್ತೆ ನಿಂತಂತಾಗುವ ಈ ಪರಿಸ್ಥಿತಿಗಳು ನಾವೆಲ್ಲ ಮೊಬೈಲ್‌ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆಂದು ತೋರಿಸುತ್ತದೆ.