ವಾಟ್ಸಾಪ್ ಮುಂದಿನ ವರ್ಷದಿಂದ ಕೆಲವು ಫೋನಗಳಲ್ಲಿ ಕಾರ್ಯನಿರ್ವಹಿಸದೇ ಇರಬಹುದು
ವಾಟ್ಸಾಪ್ ತನ್ನ ವೆಬ್ಸೈಟ್ ನ ಎಫ್ ಎ ಕ್ಯೂ ಪುಟದಡಿ ಫೆಬ್ರುವರಿ 1 ತಾನು ಬೆಂಬಲಿಸದಿರುವ ಆಪರೇಟಿಂಗ್ ಸಿಸ್ಟಮ್ಗಳ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
2009 ರಲ್ಲಿ ಬ್ರಿಯಾನ್ ಅಕ್ಟೋನ್ ತನ್ನ ಸ್ನೇಹಿತನ ಜೊತೆಗೂಡಿ ಸಂದೇಶ ವಿನಿಮಯವನ್ನು ಸುಲಭವಾಗಿಸಲು ವಾಟ್ಸಾಪ್ ಅನ್ನು ಪ್ರಾರಂಭಿಸಿದರು. ಮೊದಲು ಸಂದೇಶಳನ್ನಷ್ಟೇ ಕಳಿಸಲು ಶಕ್ತವಾಗಿದ್ದ ವಾಟ್ಸಾಪ್ ಸದಾ ಬದಲಾಗುತ್ತಿರುವ ಜಂಗಮ ವಾಹಿನಿಗಳ ಜಗತ್ತಿನ ಅವಿಷ್ಕಾರಗಳೊಂದಿಗೆ ಹೊಂದಿಕೊಳ್ಳಲು ನಿಯಮಿತವಾಗಿ ಹೊಸ ಹೊಸ ಆಯಾಮಗಳನ್ನು ನೀಡುತ್ತಾ ಹೋಯಿತು. ಇದರಿಂದ ಹಳೆಯ ಫೋನಗಳು ಹೊಸ ತಂತ್ರಜ್ಞಾನಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ವಿಫಲವಾದವು. ಅದಕ್ಕಾಗಿ ವಾಟ್ಸಾಪ್ ಪ್ರತಿವರ್ಷ ಹಳೆಯ ಫೋನಗಳಿಗೆ ಬೆಂಬಲಿಸುವುದನ್ನು ನಿಲ್ಲಿಸುತ್ತ ಬರುತ್ತಿದೆ.

ಅದೇ ತೆರನಾಗಿ ಮುಂದಿನ ವರ್ಷದ ಅಂದರೆ ಫೆಬ್ರುವರಿ 1 2020 ರಿಂದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ 2.3.7 ಆವೃತ್ತಿ ಮತ್ತು ಐಒಎಸ್ ಫೋನ್ ಹಳೆಯ ಆವೃತ್ತಿ ಐಒಎಸ್ 8 ಚಾಲಿತ ಫೋನ್ಗಳಿಗೆ ತನ್ನ ಸೇವೆಯನ್ನು ನಿಲ್ಲಿಸಲಿದೆ ಎಂದು ವಾಟ್ಸಪ್ ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಐಒಎಸ್ ೮ ಚಾಲಿತ ಹೊಸ ಖಾತೆಗಳನ್ನು ತೆರೆಯುವ ಅವಕಾಶವನ್ನು ಸ್ಥಗಿತಗೊಳಿಸಿದೆ.
ಕೇವಲ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಷ್ಟೇ ಅಲ್ಲದೆ ವಿಂಡೋಸ್ ಬಳಕೆದಾರರು ಇದರಿಂದ ಹೆಚ್ಚು ತೊಂದರೆ ಅನುಭವಿಸಬಹುದು ಏಕೆಂದರೆ ಈಗಾಗಲೇ ಮೈಕ್ರೋಸಾಫ್ಟ್ ವಿಂಡೋಸ್ ಓಸ್ ಗೆ ಎಳ್ಳುನೀರು ಬಿಟ್ಟಿದೆ ಈಗ ವಾಟ್ಸಾಪ್ ಕೂಡ ತನ್ನ ಅಪ್ಲಿಕೇಶನ್ ಅನ್ನು ಒದಗಿಸುವುದಿಲ್ಲ ಎಂದು ಪ್ರಕಟಿಸಿದೆ.
ಬದಲಾವಣೆ ಜಗದ ನಿಮಯ ಎಂಬಂತೆ ದಿನದಿಂದ ದಿನಕ್ಕೆ ತಂತ್ರಜ್ಞಾನ ಜಗತ್ತು ಹೊಸ ಹೊಸ ಆವಿಷ್ಕಾರಗಳಿಂದ ಮನುಷ್ಯನ ಜೀವನವನ್ನು ಸುಲಭವಾಗಿಸುತ್ತಿದೆ. ನೀವು ಮೇಲ್ಕಾಣಿಸಿದ ಯಾವುದೇ ಆಪರೇಟಿಂಗ್ ಸಿಸ್ಟಮ್ ನ ಫೋನ್ಗಳನ್ನು ಬಳಸುತ್ತಿದ್ದಲ್ಲಿ ತಕ್ಷಣ ನೀವು ಹೊಸ ಆಂಡ್ರಾಯ್ಡ್ ಅಥವಾ ಐಒಎಸ್ ಆವೃತ್ತಿ ಹೊಂದಿರುವ ಫೋನ್ ಖರೀದಿಸುವುದು ಉತ್ತಮ. ಐಒಎಸ್ ನಲ್ಲಿ, ಐಒಎಸ್ 12 ಮುಂಬರುವ ಮೂರೂ ವರ್ಷಗಳ ಕಾಲ ತನ್ನ ಸೇವೆಯನ್ನು ಒದಗಿಸಲಿದೆ ಮತ್ತು ಆಂಡ್ರಾಯ್ಡ್ನಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಫೋನ್ ಗಳು ಲಭ್ಯವಿವೆ.