ಬಳಕೆದಾರರ ಗೌಪ್ಯತೆ ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ ವಾಟ್ಸ್ಯಾಪ್‌

By Press Trust of India|11th Jan 2021
ಕಳೆದ ವಾರದಲ್ಲಿ ವಾಟ್ಸ್ಯಾಪ್‌ ಫೇಸ್‌ಬುಕ್‌ ಜತೆಗೆ ಪಾಲುದಾರಿಕೆ ಮಾಡಿಕೊಂಡು ಹೇಗೆ ಬಳಕೆದಾರರ ದತ್ತಾಂಶವನ್ನು ಬಳಸಿಕೊಳ್ಳುತ್ತದೆ ಎಂಬುವುದರ ಬಗ್ಗೆ ಹೊಸ ಪ್ರೈವೆಸಿ ಪಾಲಿಸಿಗಳನ್ನು ಮತ್ತು ನಿಯಮಗಳನ್ನು ಹಂಚಿಕೊಂಡಿತ್ತು.
Clap Icon0 claps
 • +0
  Clap Icon
Share on
close
Clap Icon0 claps
 • +0
  Clap Icon
Share on
close
Share on
close

ತನ್ನ ಹೊಸ ನೀತಿಗಳಿಂದಾಗಿ ಜಾಗತಿಕವಾಗಿ ವಿವಾದಕ್ಕೊಳಗಾಗಿದ್ದ ವಾಟ್ಸ್ಯಾಪ್‌ ಸ್ಪಷ್ಟನೆ ನೀಡಿದ್ದು ತನ್ನ ಹೊಸ ನಡೆ ಫೇಸ್‌ಬುಕ್‌ನೊಂದಿಗೆ ಉದ್ಯಮ ಸಂವಹನವಾಗಿದೆ ಹೊರತು ಬಳಕೆದಾರರ ಡೇಟಾ ಹಂಚಿಕೊಳ್ಳುವುದು ಮೊದಲಿನಂತೆಯೆ ಇರಲಿದೆ ಎಂದು ತಿಳಿಸಿದೆ.


ಕಳೆದ ವಾರದಲ್ಲಿ ವಾಟ್ಸ್ಯಾಪ್‌ ಫೇಸ್‌ಬುಕ್‌ ಜತೆಗೆ ಪಾಲುದಾರಿಕೆ ಮಾಡಿಕೊಂಡು ಹೇಗೆ ಬಳಕೆದಾರರ ದತ್ತಾಂಶವನ್ನು ಬಳಸಿಕೊಳ್ಳುತ್ತದೆ ಎಂಬುವುದರ ಬಗ್ಗೆ ಹೊಸ ಪ್ರೈವೆಸಿ ಪಾಲಸಿಗಳನ್ನು ಮತ್ತು ನಿಯಮಗಳನ್ನು ಹಂಚಿಕೊಂಡಿತ್ತು.


ಬಳಕೆದಾರರು ವಾಟ್ಸ್ಯಾಪ್‌ ಬಳಕೆಯನ್ನು ಮುಂದುವರೆಸಬೇಕೆಂದರೆ ಫೆಬ್ರುವರಿ 8 2021 ರ ಒಳಗೆ ವಾಟ್ಸ್ಯಾಪ್‌ನ ಹೊಸ ನಿಯಮಗಳು ಮತ್ತು ಗೌಪ್ಯತಾ ನೀತಿಗಳನ್ನು ಒಪ್ಪಿಕೊಳ್ಳಲೆಬೇಕು ಎಂದು ಕಂಪನಿ ಹೇಳಿತ್ತು.


ಈ ನಡೆ ತೀವ್ರ ವಿರೋಧಕ್ಕೆ ಕಾರಣವಾಗಿ ವಾಟ್ಸ್ಯಾಪ್‌ ಸುತ್ತ ಹಲವು ಚರ್ಚೆಗಳು, ಮೀಮ್‌ಗಳು ಅಂತರ್ಜಾಲದಲ್ಲಿ ಹರಿದಾಡತೊಡಗಿದವು.


ಈ ಮಧ್ಯೆ ಸ್ಪರ್ಧಿಗಳಾದ ಸಿಗ್ನಲ್‌ ಮತ್ತು ಟೆಲಿಗ್ರಾಂ ಆ್ಯಪ್ಗಳಿಗೆ ಭಾರೀ ಬೇಡಿಕೆಯುಂಟಾಗಿದೆ.

ಹೊಸ ನೀತಿಗಳು ಸೃಷ್ಟಿಸಿರುವ ಗೊಂದಲಗಳಿಗೆ ತೆರೆ ಎಳೆಯಲು ವಾಟ್ಸ್ಯಾಪ್‌ ಮುಖ್ಯಸ್ಥ ವಿಲ್‌ ಕ್ಯಾಥ್‌ಕಾರ್ಟ್‌ ಸರಣಿ ಟ್ವೀಟ್‌ಗಳನ್ನು ಮಾಡಿ “ಕಂಪನಿ ಪಾರದರ್ಶಕವಾಗಿರಲು ಮತ್ತು ಉದ್ಯಮ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುವುದಕ್ಕಾಗಿ ನೀತಿಗಳಲ್ಲಿ ಬದಲಾವಣೆ ತಂದಿದೆ,” ಎಂದಿದ್ದಾರೆ.


“ಸ್ಪಷ್ಟತೆ ತುಂಬಾ ಮುಖ್ಯ; ಈ ಅಪಡೇಟ್‌ ಉದ್ಯಮ ಸಂವಹನದ ಬಗ್ಗೆ ತಿಳಿಸುತ್ತದೆ ಹೊರತು ವಾಟ್ಸ್ಯಾಪ್‌ನ ಡೇಟಾ ಹಂಚಿಕೊಳ್ಳುವ ವಿಧಾನದಲ್ಲಿ ಯಾವುದೇ ಬದಲಾವಣೆಗಳನ್ನು ತರುವುದಿಲ್ಲ. ಗೌಪ್ಯವಾಗಿ ಜನರು ತಮ್ಮ ಗೆಳೆಯರು ಕುಟುಂಬದವರೊಂದಿಗೆ ನಡೆಸುವ ಸಂವಹನಕ್ಕೆ ಇದರಿಂದ ಯಾವುದೇ ತರಹದ ತೊಂದರೆಯಾಗುವುದಿಲ್ಲ,” ಎಂದು ಟ್ವೀಟ್‌ ಮಾಡಿದ್ದಾರೆ.


ಎಂಡ್‌-ಟು-ಎಂಡ್‌ ಎಂಕ್ರಿಪ್ಷನ್‌(ಇ2ಇ) ವೈಶಿಷ್ಟ್ಯವಿರುವುದರಿಂದ ವಾಟ್ಸ್ಯಾಪ್‌ ಅಥವಾ ಫೇಸ್‌ಬುಕ್‌ ಯಾರೂ ಬಳಕೆದಾರರ ಚ್ಯಾಟ್‌ಗಳು, ಕಾಲ್‌ಗಳನ್ನು ನೋಡಲಾಗದು ಮತ್ತು ಕಂಪನಿ ಇ2ಇಗೆ ನಿಷ್ಟವಾಗಿರುತ್ತದೆ ಎಂದಿದೆ.

Clap Icon0 Shares
 • +0
  Clap Icon
Share on
close
Clap Icon0 Shares
 • +0
  Clap Icon
Share on
close
Share on
close