ಟಿಕ್‌ಟಾಕ್‌ನಲ್ಲಿರುವ ಈ ಮಹಿಳೆಯರು ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ಮತ್ತು ಹಣ ಸಂಪಾದಿಸಲು 15 ಸೆಕೆಂಡುಗಳನ್ನು ಹೇಗೆ ಬಳಸುತ್ತಿದ್ದಾರೆ ನೋಡಿ

ಚೀನಾದ ಬ್ಯುಸಿನೆಸ್ ದೈತ್ಯ ಬೈಟೆಡೆನ್ಸ್‌ನ ವೀಡಿಯೊ ಅಪ್ಲಿಕೇಶನ್ ಟಿಕ್‌ಟಾಕ್ ಬಳಸಿ, ಭಾರತದಾದ್ಯಂತ ಮಹಿಳೆಯರು ವಿಡಿಯೋ ಮಾಡಿ ಸೆಲೆಬ್ರಿಟಿಗಳಾಗಿ ಹೊರಹೊಮ್ಮುತ್ತಿದ್ದಾರೆ.

ಟಿಕ್‌ಟಾಕ್‌ನಲ್ಲಿರುವ ಈ ಮಹಿಳೆಯರು ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ಮತ್ತು ಹಣ ಸಂಪಾದಿಸಲು 15 ಸೆಕೆಂಡುಗಳನ್ನು ಹೇಗೆ ಬಳಸುತ್ತಿದ್ದಾರೆ ನೋಡಿ

Thursday October 17, 2019,

3 min Read

ಶಾರುಖ್ ಖಾನ್ ಮುಂಬೈಗೆ ಬಂದು, ಚಲನಚಿತ್ರದಲ್ಲಿ ಅವಕಾಶ ಪಡೆಯಲು ಹೆಣಗಾಡಿದರು ಮತ್ತು ನಗರದ ಫುಟ್‌ಪಾತ್‌ಗಳಲ್ಲಿ ಮಲಗಿದ್ದರು. ಅಂತಿಮವಾಗಿ, ಅವರು ಅವಕಾಶ ಪಡೆದುಕೊಂಡರು ಮತ್ತು ಸ್ಟಾರ್ ನಟರಾದರು. ಮತ್ತೊಂದೆಡೆ, ಅನೇಕ ಸ್ಟಾರ್ ಮಕ್ಕಳಿಗೆ ಚಿತ್ರರಂಗದಲ್ಲಿ ನೆಲೆಯೂರಲು ಸಹಾಯಮಾಡಿದ ನಿರ್ದೇಶಕ ಕರಣ್ ಜೋಹರ್ ಅವರಿಗೆ ಧನ್ಯವಾದಗಳು.


ಕಣ್ಣಿನಲ್ಲಿ ಅವಕಾಶಗಳ ಆಸೆಯನ್ನು ಇಟ್ಟುಕೊಂಡು ನಗರಕ್ಕೆ ಹೋದ ಎಲ್ಲ ಪುರುಷರು ಮತ್ತು ಮಹಿಳೆಯರು ಅದನ್ನು ನನಸಾಗಿಸಲು ಆಗಲಿಲ್ಲ. ಆದರೆ ಇದೆಲ್ಲವೂ ಸೋಷಿಯಲ್ ಮೀಡಿಯಾ ಚಾಲ್ತಿಗೆ ಬರುವ ಮೊದಲಾಗಿತ್ತು.


ಇಂದು ಸೆಲೆಬ್ರಿಟಿ ಆಗಲು ನಿಮಗೆ ಬೇಕಾಗಿರುವುದು ಕೇವಲ 15 ಸೆಕೆಂಡುಗಳ ವೀಡಿಯೊ ಐಡಿಯಾ ಮತ್ತು ಸ್ಮಾರ್ಟ್‌ಫೋನ್. ಟಿಕ್‌ಟೋಕ್ ಮಾಡಲು ನಿಜವಾಗಿಯೂ ಬೇಕಾಗಿರುವುದು ಅಷ್ಟೆ. ಈ ಹಿಂದೆ ಮ್ಯೂಸಿಕಲ್ಲಿ ಎಂದು ಕರೆಯಲಾಗಿದ್ದ ಒಂದು ಅಪ್ಲಿಕೇಶನ್ ತನ್ನ ವೀಡಿಯೊಗಳೊಂದಿಗೆ ಭಾರತವನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದಿದೆ. ಬಾಲಿವುಡ್ ಸಂಭಾಷಣೆಗಳಿಗೆ ನೃತ್ಯ, ಹಾಡುಗಾರಿಕೆ ಮತ್ತು ತುಟಿ ಸಿಂಕ್ ಮಾಡುವ ಬಹಳ ಜನರಿದ್ದಾರೆ.


ಎಡದಿಂದ ಬಲಕ್ಕೆ: ಗರಿಮಾ ಚೌರೇಶಿಯಾ, ಮೋನಿ ಕುಂಡು, ನಗ್ಮಾ ಮಿರಾಜ್ಕರ್ ಮತ್ತು ವಾಣಿ ಚೌಧರಿ


ಟಿಕ್‌ಟಾಕ್ ಇಂಡಿಯಾದ ಮಾರಾಟ ವಿಭಾಗ ಮತ್ತು ಸಹ ನಿರ್ದೇಶಕರಾದ ಸಚಿನ್ ಶರ್ಮಾ, ಯುವರ್‌ಸ್ಟೋರಿಯೊಂದಿಗಿನ ವಿಶೇಷ ಸಂದರ್ಶನದಲ್ಲಿ ಟಿಕ್ ಟಾಕ್ ಬಗ್ಗೆ ಹಂಚಿಕೊಂಡಿದ್ದಾರೆ,


ಬೇರೆ ಯಾವುದೇ ಪ್ಲಾಟ್‌ಫಾರ್ಮ್‌ಗಿಂತ ಭಿನ್ನವಾಗಿ, 15 ಸೆಕೆಂಡುಗಳ ಸ್ವರೂಪವು ಹೊಸತನವನ್ನು ತೋರಿಸಲು ಅವಕಾಶ ನೀಡುತ್ತದೆ. ಪ್ರತಿಯೊಬ್ಬರು ಪ್ರತಿ ಸೆಕೆಂಡ್ ಗಳಿಗೆ ಮಹತ್ವ ನೀಡುತ್ತಿದ್ದಾರೆ.


ಮತ್ತು ಆ 15 ಸೆಕೆಂಡುಗಳ ಖ್ಯಾತಿಯು ಭಾರತದ ಎಲ್ಲ ವಯಸ್ಸಿನ ಅನೇಕ ಮಹಿಳೆಯರನ್ನು ಆಕರ್ಶಿಸಿದೆ. ತಮ್ಮ ಮನೆಗಳಲ್ಲಿನ ಸೌಕರ್ಯದಿಂದ, ಅವರ ಸೆಲ್ ಫೋನ್ ಮತ್ತು ಕನಿಷ್ಠ ಪ್ರಯತ್ನದಿಂದ, ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ, ತಮ್ಮ ಹೃದಯಕ್ಕೆ ಹತ್ತಿರವಿರುವ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ ಅಥವಾ ಅವರ ಸೃಜನಶೀಲತೆಯ ಪ್ರಜ್ಞೆಯನ್ನು ಪ್ರದರ್ಶಿಸುತ್ತಿದ್ದಾರೆ.


ಸೆಲೆಬ್ರಿಟಿಯಲ್ಲದಿದ್ದರು, ಲಕ್ಷಾಂತರ ಅನುಯಾಯಿಗಳನ್ನು ಗಳಿಸಿದ ಮಹಿಳೆಯರು ಇಲ್ಲಿದ್ದಾರೆ.

ಸಮೃದ್ಧವಾದ ಮನರಂಜನೆ

ಮುಂಬೈನ ನಗ್ಮಾ ಮೀರಾಜ್ಕರ್ ನೃತ್ಯ ಮತ್ತು ಹಾಸ್ಯ ವೀಡಿಯೊಗಳನ್ನು ಮಾಡುತ್ತಾರೆ. ಅವರು ಟಿಕ್‌ಟಾಕ್‌ನಲ್ಲಿ 10.2 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. "ನಾನು ಮನರಂಜನೆಗಾಗಿ ಇಲ್ಲಿದ್ದೇನೆ" ಎಂದು ಅವರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


ನಾಗ್ಮಾ ಅವರು ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ (ಮಾರ್ಕೆಟಿಂಗ್) ಜೊತೆಗೆ ಸ್ನಾತಕೋತ್ತರ ಡಿಪ್ಲೊಮಾ ಇನ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪದವಿಯನ್ನು ಹೊಂದಿದ್ದಾರೆ. ಆದರೆ ಫ್ಯಾಷನ್ ಮತ್ತು ಸೌಂದರ್ಯದ ಬಗ್ಗೆ ಅವರು ಒಳ್ಳೆಯ ಪ್ರಜ್ಞೆ ಮತ್ತು ಪ್ರೀತಿಯನ್ನು ಹೊಂದಿದ್ದಾರೆ. ಫ್ಯಾಶನ್ ಮತ್ತು ಸೌಂದರ್ಯ ಬ್ಲಾಗರ್ ಆಗಿರುವ ಅವರು ತಮ್ಮ ಓಹ್ ಮೈ ಗೋರ್ಗ್ ಎಂಬ ಬ್ಲಾಗ್‌ನಲ್ಲಿ ಬರೆಯುತ್ತಾರೆ.


ಅವರು ಫ್ಯಾಷನ್ ಮೇಲಿನ ಪ್ರೀತಿಯನ್ನು ಹೊಂದಿದ್ದಾರೆ ಮತ್ತು ಟಿಕ್ಟಾಕ್ನಲ್ಲಿ ಸ್ಟೈಲ್ ಸೆನ್ಸೇಷನ್ ಆಗಿದ್ದಾರೆ. ಕೋಲ್ಗೇಟ್ನಂತಹ ಎಫ್ಎಂಸಿಜಿ ಬ್ರಾಂಡ್ಗಳು ತಮ್ಮ ಸಂದೇಶವನ್ನು ತಲುಪಿಸಲು ಇವರೊಂದಿಗೆ ಕೆಲಸ ಮಾಡಿವೆ.


ಗರಿಮಾ ಚೌರಾಸಿಯಾ 15.7 ಮಿಲಿಯನ್ ಅಭಿಮಾನಿಗಳನ್ನು ಹೊಂದಿರುವ ಟಿಕ್ ಟಾಕ್ ತಾರೆ. ಅವರು ಮಾಡೆಲ್ ಮತ್ತು ಅವರ ಡ್ಯಾನ್ಸ್ ವೀಡಿಯೊಗಳು, ಹಾಸ್ಯ ತುಣುಕುಗಳು ಮತ್ತು ತುಟಿ-ಸಿಂಕ್ ಮಾಡುವ ವೀಡಿಯೊಗಳಿಗೆ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಗರಿಮಾ ತನ್ನ ಸ್ನೇಹಿತ ರುಗೀಸ್ವನಿ ಅವರೊಂದಿಗೆ ಎಮಿವೇ ಬಂಟೈ ಅವರ ಮಚಾಯೆಂಗೆ ಹಾಡಿನ ವೀಡಿಯೊವನ್ನು ಮಾಡಿದ್ದು, ಅದು ವೈರಲ್ ಆಗಿದ್ದು ಟಿಕ್‌ಟಾಕ್ ಬಳಕೆದಾರರ ಗಮನ ಸೆಳೆಯಿತು ಮತ್ತು ಅವರ ಅಭಿಮಾನಿ ಬಳಗವನ್ನು ವಿಸ್ತರಿಸಿತು.

ಕುಟುಂಬದೊಂದಿಗಿನ ಸಂಬಂಧ

ಆ್ಯಪ್‌ನಲ್ಲಿ ಮೋನಿ ಕುಂಡು 2.8 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಒತ್ತಡ ಕಡಿಮೆ ಮಾಡುವಂತ ಮತ್ತು ತಮಾಷೆಯ ವಿಷಯವನ್ನು ರಚಿಸಿ ವಿಡಿಯೋ ಮಾಡುತ್ತಾರೆ. ಅವರು ತನ್ನ ಮಗ ಮತ್ತು ಗಂಡನೊಂದಿಗೆ ವೀಡಿಯೊಗಳನ್ನು ಮಾಡುತ್ತಾರೆ ಮತ್ತು ಆದ್ದರಿಂದ, ಈ ಕುಟುಂಬದ ತಮಾಶೆ ದೊಡ್ಡ ಹಿಟ್ ಆಗಿದೆ.


ಸ್ಥಳಗಳು ಮತ್ತು ವೀಡಿಯೊ ಮಾಡಲು ವಿಷಯಗಳಿಗಾಗಿ ನೀವು ಗಂಟೆಗಟ್ಟಲೆ ಕಳೆಯಬೇಕಾಗಿಲ್ಲ ಎಂದು ಇದು ತೋರಿಸುತ್ತದೆ. ಮಾಮೂಲಿ ಕೆಲಸ ಮಾಡುವಂತೆ ನಿಮಗೆ ಬೇಕಾಗಿರುವುದು ತಮಾಷೆಯ ಕಥಾಹಂದರ ಮತ್ತು ಕುಟುಂಬ.

ಟ್ಯುಟೋರಿಯಲ್ ಮತ್ತು ಇನ್ನಷ್ಟು

ವಾನಿ ಚೌಧರಿ ಟಿಕ್‌ಟಾಕ್‌ನಲ್ಲಿ 223.3 ಕೆ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಡಿಐವೈ ವೀಡಿಯೊಗಳು ಚರ್ಮದ ರಕ್ಷಣೆ ಮತ್ತು ಮನೆಯಲ್ಲಿ ಚರ್ಮದ ರಕ್ಷಣೆಯ ಪರಿಹಾರೋಪಾಯಗಳನ್ನು ತಿಳಿಸುತ್ತವೆ. 15 ಸೆಕೆಂಡುಗಳಲ್ಲಿ ಅವರು ತ್ವರಿತ ಮತ್ತು ಅನುಸರಿಸಲು ಸುಲಭವಾದ ವಿಷಯವನ್ನು ತಲುಪಿಸುತ್ತಾರೆ.


ಟಿಕ್‌ಟಾಕ್‌ನಲ್ಲಿ ಆಹಾರವು ಮತ್ತೊಂದು ಪ್ರಮುಖ ಆಕರ್ಷಣೆಯಾಗಿದ್ದು, ಹೆಚ್ಚಿನ ಮಹಿಳೆಯರು ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಲು ಇದನ್ನು ಮಾಧ್ಯಮವಾಗಿ ಬಳಸುತ್ತಾರೆ. ಮೋಜಿನ ಮನೋಭಾವದಿಂದ ಮಾಡಿದಾಗ, ಬಳಕೆದಾರರು ನಿಮ್ಮನ್ನು ಅನುಸರಿಸಲಿದ್ದಾರೆ ಎಂದು ನೀವು ಖಚಿತವಾಗಿ ಹೇಳಬಹುದು.


ಇನ್‌ಸ್ಟಾಗ್ರಾಮ್ ಪ್ರಭಾವಿಗಳ ನಂತರ, ನಾವು ಈಗ ಟಿಕ್‌ಟಾಕ್ ಸ್ಟಾರ್‌ ಗಳನ್ನು ಹೊಂದಿದ್ದೇವೆ, ಸಾಮಾಜಿಕ ಮಾಧ್ಯಮಗಳ ಪ್ರಭಾವವನ್ನು ಬಳಸಿ ಪ್ರಭಾವಶಾಲಿಯಾಗಲು ಮತ್ತು ಹಣ ಗಳಿಸಲು ಶಕ್ತಿ ಹೆಚ್ಚಲಿ ಮತ್ತು ಅವರ ಬದುಕು ಬೆಳಗಲಿ.