ಇಂಡೋನೇಷ್ಯಾದ ಗುಹೆಯಲ್ಲಿ ಬೆಳಕಿಗೆ ಬಂದ ವಿಶ್ವದ ಅತ್ಯಂತ ಹಳೆಯ ಕಲಾಕೃತಿ

44,000 ವರ್ಷಕ್ಕೂ ಹಳೆಯದಿರಬಹುದಾದಂತಹ ಚಿತ್ರಗಳು ಇಂಡೋನೇಷ್ಯಾದ ಗುಹೆಯಲ್ಲಿ ಕಂಡುಬಂದಿದ್ದು, ಈ ಚಿತ್ರವನ್ನು ವಿಶ್ವದ ಅತ್ಯಂತ ಮುಂಚಿನ ಸಾಂಕೇತಿಕ ಕಲೆ ಎಂದು ಪರಿಗಣಿಸಬಹುದು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಇಂಡೋನೇಷ್ಯಾದ ಗುಹೆಯಲ್ಲಿ ಬೆಳಕಿಗೆ ಬಂದ ವಿಶ್ವದ ಅತ್ಯಂತ ಹಳೆಯ ಕಲಾಕೃತಿ

Friday December 13, 2019,

2 min Read

ಇದು ಇತಿಹಾಸಪೂರ್ವದ ಬೇಟೆಯಾಡುವ ದೃಶ್ಯವನ್ನು ಚಿತ್ರಿಸುವ ಇಂಡೋನೇಷ್ಯಾದ ಗುಹೆ ಚಿತ್ರಕಲೆಯಾಗಿದ್ದು ಸುಮಾರು 44,000 ವರ್ಷಗಳ ಹಿಂದಿನ ವಿಶ್ವದ ಅತ್ಯಂತ ಹಳೆಯ ಆಲಂಕಾರಿಕ ಕಲಾಕೃತಿಯಾಗಿರಬಹುದು ಎಂದು ಹೇಳಲಾಗುತ್ತಿದೆ, ಹೊಸ ಸಂಶೋಧನೆಯ ಪ್ರಕಾರ ಇದು ಸುಧಾರಿತ ಕಲಾತ್ಮಕ ಸಂಸ್ಕೃತಿಯನ್ನು ಸೂಚಿಸುತ್ತದೆ.


ಎರಡು ವರ್ಷಗಳ ಹಿಂದೆ ಸುಲವೇಸಿ ದ್ವೀಪದಲ್ಲಿ ಪತ್ತೆಯಾದ, 4.5 ಮೀಟರ್ (13 ಅಡಿ) ಅಗಲದ ವರ್ಣಚಿತ್ರದಲ್ಲಿ ಕಾಡು ಪ್ರಾಣಿಗಳನ್ನು ಅರ್ಧ-ಮಾನವ ಬೇಟೆಗಾರರು ಈಟಿಗಳು ಮತ್ತು ಹಗ್ಗಗಳ ಜೊತೆ ಬೆನ್ನಟ್ಟುವ ಚಿತ್ರವಿದೆ ಎಂದು ನೇಚರ್ ನಲ್ಲಿ ಬುಧವಾರ ಪ್ರಕಟವಾದ ಅಧ್ಯಯನವೊಂದು ವರದಿ ಮಾಡಿದೆ.


ಡೇಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು, ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯದ ತಂಡವು ಸುಣ್ಣದ ಗುಹೆ ಚಿತ್ರಕಲೆಯು ಪ್ಯಾಲಿಯೊಲಿಥಿಕ್ ಅವಧಿಗಿಂತ ಮೊದಲಿನದು ಅಂದರೆ ಕನಿಷ್ಠ 43,900 ವರ್ಷಗಳ ಹಿಂದಿನದು ಎಂದು ದೃಢಪಡಿಸಿದೆ ಎಂದು ವರದಿ ತಿಳಿಸಿದೆ.


ಚಿತ್ರಕೃಪೆ: ಎ ಎಫ್‌ ಪಿ




"ಈ ಬೇಟೆಯ ದೃಶ್ಯವು - ನಮ್ಮ ಜ್ಞಾನಕ್ಕೆ - ಪ್ರಸ್ತುತ ಕಥೆ ಹೇಳುವ ಅತ್ಯಂತ ಹಳೆಯ ಚಿತ್ರಾತ್ಮಕ ದಾಖಲೆ ಮತ್ತು ವಿಶ್ವದ ಅತ್ಯಂತ ಮೊದಲಿನ ಸಾಂಕೇತಿಕ ಕಲಾಕೃತಿಗಳು" ಎಂದು ಸಂಶೋಧಕರು ಹೇಳಿದ್ದಾರೆ.


ಇಂಡೋನೇಷ್ಯಾದ ಬೊರ್ನಿಯೊದ ಗುಹೆಯೊಂದರಲ್ಲಿ ಪ್ರಾಣಿಯ ಚಿತ್ರಕಲೆ ಕನಿಷ್ಠ 40,000 ವರ್ಷಗಳಷ್ಟು ಹಳೆಯದು ಎಂದು ಮೊದಲೇ ನಿರ್ಧರಿಸಿದ ನಂತರ ಈ ಚಿತ್ರಕಲೆ ಬೆಳಕಿಗೆ ಬಂದಿದೆ.


ಅನೇಕ ವರ್ಷಗಳಿಂದ, ಗುಹೆ ಚಿತ್ರಕಲೆಯು ಯುರೋಪಿನಿಂದ ಬಂದಿದ್ದು ಎಂದು ಭಾವಿಸಲಾಗಿತ್ತು, ಆದರೆ ಇಂಡೋನೇಷ್ಯಾದ ವರ್ಣಚಿತ್ರಗಳು ಆ ಸಿದ್ಧಾಂತವನ್ನು ಪ್ರಶ್ನಿಸಿವೆ.


ಸುಲಾವೆಸಿಯಲ್ಲಿ ಪ್ರದೇಶದಲ್ಲಿ ಮಾತ್ರ ಕನಿಷ್ಠ 242 ಗುಹೆಗಳು ಅಥವಾ ಪ್ರಾಚೀನ ಚಿತ್ರಣವಿರುವ ಆಶ್ರಯತಾಣಗಳಿವೆ, ಮತ್ತು ವಾರ್ಷಿಕವಾಗಿ ಹೊಸ ತಾಣಗಳನ್ನು ಕಂಡುಹಿಡಿಯಲಾಗುತ್ತಿದೆ ಎಂದು ತಂಡ ತಿಳಿಸಿದೆ.


ಇತ್ತೀಚೆಗೆ ದೊರೆತ ಚಿತ್ರದಲ್ಲಿ, ಬೇಟೆಗಾರರನ್ನು ಕಡು ಕೆಂಪು ಬಣ್ಣಗಳಲ್ಲಿ ಮಾನವ ದೇಹ ಮತ್ತು ಪಕ್ಷಿಗಳು ಮತ್ತು ಸರೀಸೃಪಗಳು ಸೇರಿದಂತೆ ಪ್ರಾಣಿಗಳ ತಲೆಗಳೊಂದಿಗೆ ಚಿತ್ರಿಸಲಾಗಿದೆ.


ಕಳಪೆ ಸ್ಥಿತಿಯಲ್ಲಿರುವ ಈ ಚಿತ್ರಕಲೆಯು ಸುಮಾರು 44,000 ವರ್ಷಗಳ ಹಿಂದೆ ಹೆಚ್ಚು ಸುಧಾರಿತ ಕಲಾತ್ಮಕ ಸಂಸ್ಕೃತಿ ಅಸ್ತಿತ್ವದಲ್ಲಿತ್ತು ಎಂಬುದನ್ನು ತಿಳಿಸುತ್ತದೆ, ಇದು ಜಾನಪದ, ಧಾರ್ಮಿಕ ಪುರಾಣಗಳು ಮತ್ತು ಆಧ್ಯಾತ್ಮಿಕ ನಂಬಿಕೆಗಳಿಂದ ದೂರವಿದೆ ಎಂದು ತಂಡ ತಿಳಿಸಿದೆ.


"ಈ ಚಿತ್ರವನ್ನು ವಿಶ್ವದ ಅತ್ಯಂತ ಮುಂಚಿನ ಸಾಂಕೇತಿಕ ಕಲೆ ಎಂದು ಪರಿಗಣಿಸಬಹುದು ಮತ್ತು ಪ್ಯಾಲಿಯೊಲಿಥಿಕ್ ಕಲೆಯಲ್ಲಿನ ನಿರೂಪಣೆಯ ಸಂವಹನಕ್ಕೆ ಹಳೆಯ ಪುರಾವೆಗಳೆಂದು ಪರಿಗಣಿಸಬಹುದು" ಎಂದು ಸಂಶೋಧಕರು ಹೇಳಿದ್ದಾರೆ.

"ಇದು ಗಮನಾರ್ಹವಾದುದು, ಕಾಲ್ಪನಿಕ ಕಥೆಗಳನ್ನು ಆವಿಷ್ಕರಿಸುವ ಸಾಮರ್ಥ್ಯವು ಮಾನವ ಭಾಷೆಯ ಅಭಿವೃದ್ಧಿಯ ಇತಿಹಾಸದಲ್ಲಿ ಕೊನೆಯ ಮತ್ತು ಅತ್ಯಂತ ನಿರ್ಣಾಯಕ ಘಟ್ಟವಾಗಿರಬಹುದು ಮತ್ತು ಆಧುನಿಕ ರೀತಿಯ ಅರಿವಿನ ಮಾದರಿಗಳ ಬೆಳವಣಿಗೆಯಾಗಿರಬಹುದು."