ಕಸ ದಿಂದ ರಸ, ಮನೆಯಲ್ಲೇ ಬೆಳೆಯಿರಿ ತಾಜಾ ತರಕಾರಿ..!

ಆರಾಧ್ಯ

3rd Mar 2016
  • +0
Share on
close
  • +0
Share on
close
Share on
close

ಗಾರ್ಡನ್ ಸಿಟಿ ಇದೀಗ ಗಾರ್ಬೆಜ್ ಸಿಟಿಯಾಗಿದೆ.. ಎಲ್ಲಿ ನೋಡಿದ್ರು ಬರೀ ಕಸ, ಕಸ ! .. ಈ ಕಸಕ್ಕೆ ಮುಕ್ತಿ ನೀಡಬೇಕು ಎಂದು ಬಿಬಿಎಂಪಿ ಹಸಿಕಸ, ಒಣಕಸ ವಿಂಗಡಣೆ ಮಾಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡ್ತಾನೆ ಇದೆ.. ಆದ್ರೆ ನಮ್ಮ ಜನ್ರು ಮಾತ್ರ ಆ ಬಗ್ಗೆ ತಲೆ ಕೇಡಿಸಿ ಕೊಂಡಿಲ್ಲ… ಆದ್ರೆ ಇಲ್ಲೊಂದು ಎನ್ ಜಿ ಒ ಇದೆ, ಅದ್ರ ಹೆಸರು ಸ್ವಚ್ಛ ಗೃಹ.ಕಾಮ್, ಇಲ್ಲಿ ಕಸವನ್ನು ರಸವಾಗಿಸೋದು ಹೇಗೆ ಅಂತ ಹೇಳಿಕೊಡ್ತಾರೆ..

image


ಪ್ರತಿನಿತ್ಯ ಮನೆಯಲ್ಲಿ ಉತ್ಪತ್ತಿಯಾಗೋ ಕಸವನ್ನ ಉಪಯೋಗಿಸಿ ನಮ್ಮ ಟೆರೇಸ್ ನಲ್ಲಿ ಹೇಗೆ ತರಕಾರಿಗಳನ್ನ ಬೆಳೆಯಬಹುದು ಈ ಬಗ್ಗೆ ಸ್ವಚ್ಛ ಗೃಹ.ಕಾಮ್ ಮಾಹಿತಿ ನೀಡ್ತಾರೆ.. ಹೌದು ಆಕಾಶದಲ್ಲಿ ಮನೆಮಾಡ್ಕೊಂಡಿರೋ ಬೆಂಗಳೂರಿಗರಿಗೆ ಗಾರ್ಡನಿಂಗ್ ಅಂದ್ರೆ ಟೆರೇಸ್ ಗಾರ್ಡನಿಂಗ್. ಆ ಚಿಕ್ಕಜಾಗದಲ್ಲಿ ಮನೆಗೆ ಬೇಕಾದ ತರಕಾರಿ, ಪೂಜೆಗೆ ಹೂವು, ಕಡಿಮೆ ಮಣ್ಣಲ್ಲಿ ಬೆಳೆಯೋ ಹಣ್ಣುಗಳನ್ನು ಬೆಳೆಯೋದು ಹೆಚ್ಚಾಗ್ತಿದೆ. ತರಕಾರಿ ಬೀಜ, ಹೂವಿನ ಗಿಡ ತಂದು ನೆಡೋದು ಒಂದು ಹಂತ ಆದ್ರೆ, ಅದಕ್ಕೆ ಬೇಕಾದ ಗೊಬ್ಬರ ಹಾಕಿ ಆರೈಕೆ ಮಾಡೋದು ಇನ್ನೊಂದು ಹಂತ. ಗೊಬ್ಬರಕ್ಕೆ ಹೊರಗೆಲ್ಲೂ ಹೋಗ್ಬೇಕಾಗಿಲ್ಲ. ಮನೆಯಲ್ಲಿಯ ತರಕಾರಿ ಸಿಪ್ಪೆ, ಹಾಳಾದ ತರಕಾರಿ, ಉಳಿದ ಹಾಳಾದ ಆಹಾರ ಪದಾರ್ಥಗಳು ..ಹೀಗೆ ಮಣ್ಣಲ್ಲಿ ಕರಗುವ ಎಲ್ಲವನ್ನೂ ಗೊಬ್ಬರವಾಗಿ ಪರಿವರ್ತಿಸಿದ್ರೆ ಆಯ್ತು, ಗಿಡಕ್ಕೆ ಗೊಬ್ಬರ, ಮನೆಯ ಕಸದಿಂದ ಮುಕ್ತಿ..

ಸ್ವಚ್ಛ ಗೃಹ.ಕಾಮ್ ಮನೆಯಲ್ಲಿ ಕಾಂಪೋಸ್ಟ್ ತಯಾರಿಸೋದು ಹೇಗೆ ಅನ್ನೋದನ್ನ ತಿಳಿಸಿಕೊಡತ್ತೆ. ಕಂಪೋಸ್ಟ್, ಬೆಳೆ ಮತ್ತು ಊಟ ಅನ್ನೋ ಕಾಂಸೆಪ್ಟ್ನಲ್ಲಿ ಇದನ್ನು ರೂಪಿಸಲಾಗಿದೆ. ಇದರಲ್ಲಿ ಮುಖ್ಯ ಒತ್ತು ಕಾಂಪೋಸ್ಟಿಂಗ್ಗೆ. ಸ್ವಚ್ಛ ಗೃಹ.ಕಾಮ್ ಕಾಂಪೊಸ್ಟಿಂಗ್ಗೆ ಬೇಕಾದ ಸಾಮಗ್ರಿಗಳ ವಿವರಗಳನ್ನ ನೀಡತ್ತೆ, ನೀವದನ್ನ ಆನ್ಲೈನ್ನಲ್ಲಿ ತರಿಸಿಕೊಂಡು ಬಳಸಿಕೊಳ್ಳಬಹುದು. ಈಗಷ್ಟೇ ಕಾಂಪೋಸ್ಟ್ ಮಾಡೋದನ್ನ ಶುರು ಮಾಡೋರಿಗೆ ಸ್ಟಾರ್ಟರ್ ಕಿಟ್ ಇರತ್ತೆ. ಇದರಲ್ಲಿ ಕಾಂಪೋಸ್ಟ್ ಮಾಡೋದರ ಬಗಿಗಿನ ಮಾಹಿತಿ ಜತೆಗೆ ಅದಕ್ಕೆ ಬೇಕಾದ ಸಲಕರಣೆಗಳು ಸಿಗುತ್ತದೆ...

image


ಕೇವಲ ಒಂದೂವರೆ ತಿಂಗಳ ಹಿಂದೆ ಪ್ರಾರಂಭವಾದ ಈ ಎನ್ ಜಿ ಒ ಬೆಂಗಳೂರಿನಲ್ಲಿ ಅನೇಕ ತಂಡಗಳನ್ನ ರೂಪಿಸಿಕೊಂಡು ಈ ವರೆಗೂ ನೂರಕ್ಕೂ ಹೆಚ್ಚು ಮಂದಿಗೆ ಕಾಂಪೋಸ್ಟ್ ಬಗ್ಗೆ ಟ್ರೈನ್ ಮಾಡಿದೆ, ಇನ್ನು ಒಂದು ಮಿಲಿಯನ್ ಜನಕ್ಕೆ ಈ ಬಗ್ಗೆ ಮಾಹಿತಿ ನೀಡಬೇಕು ಎಂಬುದು ಈ ಎನ್​ಜಿಒದ ಮುಖ್ಯ ಉದ್ದೇಶವಾಗಿದೆ.. ಇದಕ್ಕಾಗಿ ಅನೇಕ ಶಾಲೆಗಳಿಗೆ ಹಾಗೂ ಕಾರ್ಪೋರೇಟ್ ಕಛೇರಿಗಳಿಗೆ ತೆರಳಿ ಅಲ್ಲಿ ಕಾಂಪೋಸ್ಟ್ ನ ಮಹತ್ವವನ್ನ ತಿಳಿಸ್ತಾ ಇದ್ದಾರೆ..

ಒಟ್ಟಿನಲ್ಲಿ ಬೆಂಗಳೂರನ್ನ ಕಸ ಮುಕ್ತ ಮಾಡಬೇಕು ಎಂದು ಪಣ ತೊಟ್ಟಿರೋ ಈ ಸಂಸ್ಥೆ ಸಾರ್ವಜನಿಕರಿಗೆ ಒಂದು ವಾರದ ಚಾಲೆಂಜ್ ಕೂಡ ನೀಡುತ್ತಿದೆ.. ಇದರಲ್ಲಿ ಗೆದ್ದವರಿಗೆ ಅನೇಕ ಬಹುಮಾನಗಳನ್ನ ಕೂಡ ನೀಡುತ್ತಿದೆ..

ಅದ್ಯಾವ ಚಾಲೆಂಜ್ ಅಂತೀರಾ..!

ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗೋ ಹಸಿ ಕಸವನ್ನ ಹೊರಗಡೆ ಹಾಕದೆ, ಅದನ್ನ ಕಾಂಪೋಸ್ಟ್ ಮಾಡಿ ಯಾವುದಾದರೂ ಗಿಡವನ್ನ ಬೆಳೆಸಿದ್ರೆ ಅವರಿಗೆ ಈ ಬಗ್ಗೆ ಇನ್ನು ಉತ್ತಮ ರೀತಿಯಲ್ಲಿ ಟ್ರೈನ್ ಮಾಡಿ, ಕಾಂಪೋಸ್ಟಿಂಗ್​ನ ಸರಳ ತತ್ವಗಳ ಬಗ್ಗೆ ಮಾಹಿತಿ ನೀಡಿ ಬಹುಮಾನ ಕೂಡ ನೀಡುತ್ತಾರೆ. ಈ ಚಾಲೆಂಜ್ ನಲ್ಲಿ ಯಾರು ಬೇಕಾದ್ರು ಭಾಗವಹಿಸಿಬಹುದು..

ಒಟ್ಟಿನ ಲ್ಲಿ ಮನೆಯ ಹಸಿ ಕಸವನ್ನ ಉಪಯೋಗಿಸಿ ಎರಡು ಮೂರು ವಾರದಲ್ಲಿ ಹೇಗೆ ಕಾಂಪೋಸ್ಟ್ ಮಾಡಬಹುದು ಹಾಗೂ ಅದನ್ನ ಹೇಗೆ ಗೊಬ್ಬರವನ್ನಾಗಿ ಉಪಯೋಗಿಸಿ ತಾಜಾ ತರಕಾರಿಗಳನ್ನ ನಮ್ಮ ಮನೆಯ ಮುಂದೆ ಅಥವಾ ಟೇರೆಸ್ ನಲ್ಲಿ ಬೆಳೆಯಬಹುದು, ಅನ್ನೋದನ್ನ ಈ ಎನ್ ಜಿ ಒ ತಿಳಿಸುತ್ತೆ.. ಈ ಇದನ್ನ ನಮ್ಮ ಸಿಲಿಕಾನ್ ಸಿಟಿ ಜನ್ರು ಉಪಯೋಗಿಸಿದ್ರೆ, ಗಾರ್ಡನ್ ಸಿಟಿಯಲ್ಲಿ ಕಸ ಕಡಿಮೆಯಾಗೋದ್ರ ಜೊತೆಗೆ ತಾವೇ ನಮಗೆ ಬೇಕಾದ ತರಕಾರಿಗಳನ್ನ ಬೆಳಯಬಹುದು ಅಂತಾರೆ ಈ ಸ್ವಚ್ಛ ಗೃಹ.ಕಾಮ್ ಎನ್ ಜಿ ಒ ನಲ್ಲಿ ಕಾರ್ಯ ನಿರ್ವಹಿಸ್ತಾ ಇರೋ ಲಲಿತಾ ಮುನರೆಡ್ಡಿ .. 

Want to make your startup journey smooth? YS Education brings a comprehensive Funding and Startup Course. Learn from India's top investors and entrepreneurs. Click here to know more.

  • +0
Share on
close
  • +0
Share on
close
Share on
close

Our Partner Events

Hustle across India