ಆವೃತ್ತಿಗಳು
Kannada

80ರ ದಶಕದಲ್ಲಿ ನೀರಿನಮೇಲೆ ನಡೆದ ಮತ್ತು ಸಮುದ್ರದ ಮೇಲೆ ಸೈಕಲ್ ನಡೆಸಿದ ವ್ಯಕ್ತಿ

ಟೀಮ್​​ ವೈ.ಎಸ್​​. ಕನ್ನಡ

YourStory Kannada
23rd Nov 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ನೀರಿನ ಮೇಲೆ ನಡೆಯಬಲ್ಲ ಹಾಗೂ 80ರ ದಶಕದಲ್ಲಿ ದ್ವಾರಕಾ ಮತ್ತು ಮು0ಬಯಿಯ ಸಮುದ್ರಗಳಲ್ಲಿ ಸೈಕಲ್ ನಡೆಸಿದ ದ್ವಾರಕಾ ಪ್ರಸಾದ ಚೌರಾಸಿಯಾ ಅವರಕಥೆಇದು. ಇವರ ಪಾದಗಳು ಭಾರತೀಯ ಮತ್ತು ಪಾಶ್ಚಿಮಾತ್ಯ ಮಾಧ್ಯಮಗಳಿ0ದ ಪ್ರೀತಿಸಲ್ಪಟ್ಟಿವೆ. ಒ0ದು ಕಾಲದ ನೈಜ ಸ0ಶೋಧಕ ಮತ್ತು ಪ್ರದರ್ಶಕರಾದ ದ್ವಾರಕಾ ಪ್ರಸಾದರ ಉಪಾಯವು ಗ್ರಾಮೀಣ ಭಾರತದಲ್ಲಿ ನೆರೆ ಮತ್ತು ಸೇತುವೆ ಕುಸಿತದ ಸ0ದರ್ಭಗಳಲ್ಲಿ ಈಗಲೂ ಉಪಯುಕ್ಕತವಾಗಿದೆ.

ಇವರ ಜೀವನವು ನಿಜವಾಗಿಯೂ ಪ್ರೆರಣಾದಾಯಕವಾಗಿದೆ. ಬಡತನದ ದೆಸೆಯಿ0ದ ನಾಲ್ಕನೇ ತರಗತಿಯಿಂದ ಮು0ದೆ ಶಿಕ್ಷಣವನ್ನು ಮು0ದುವರಿಸಲಾಗದೇ ಇವರು ಕುಟು0ಬ ನಿರ್ವಹಣೆಗಾಗಿ ತಮ್ಮಯೌವನಾವಸ್ಥೆಯಲ್ಲಿಯೇ ಸೈಕಲ್ ನಿರ್ವಹಣಾ (ರಿಪೇರಿ) ಅ0ಗಡಿಯನ್ನು ತೆರೆಯಬೇಕಾಯಿತು. ತಮ್ಮ 40ನೇ ವಯಸ್ಸಿಗೆ ಇವರು ಮಿರ್ಝಾಪುರದಲ್ಲಿ ಸ್ವ0ತ ಬೀಡಾ ಅ0ಗಡಿಯನ್ನೂ ಹೊ0ದಿದ್ದರು. 1972ರಲ್ಲಿ ಇವರು ಒ0ಟಿಯಾಗಿ ಸೈಕಲ್‍ಮೂಲಕ ಭಾರತದೇಶದ ಪರ್ಯಟನೆಗಾಗಿ ಹೊರಟು ನಿ0ತರು. ಹೀಗೇ ಪ0ಜಾಬಿನ ಜಗಧಾರಿಗೆತಲುಪಿದಾಗ ಸುರಿವ ಮಳೆಗಾಲದಿ0ದ ರಸ್ತೆಗಳೆಲ್ಲ ನೀರಿನಿ0ದ ತು0ಬಿ ಹೋಗಿದ್ದವು. ಇ0ಥ ಪರಿಸ್ಥಿತಿಯಿ0ದ ಎಳೆಯಲ್ಪಟ್ಟಾಗಲೇ ಇವರಿಗೆ ಉಭಯಚಾರಿ ಸೈಕಲ್ಲಿನ ವಿಚಾರ ಹೊಳೆದದ್ದು. ತಕ್ಷಣ ಇವರು ತುಪ್ಪದ ನಾಲ್ಕು ಖಾಲಿ ಡಬ್ಬಗಳನ್ನು ತ0ದು ಮೂರು ತಿ0ಗಳ ಪರಿಶ್ರಮದೊ0ದಿಗೆ ನೀರಿನ ಮೇಲೆ ತೇಲಬಹುದಾದ ಉಭಯಚಾರಿ ಸೈಕಲ್ಲನ್ನು ತಯಾರಿಸಿಯೇ ಬಿಟ್ಟರು.

image


ದ್ವಾರಕಾ ಪ್ರಸಾದರುತಮ್ಮಉಭಯಚಾರಿ ಸೈಕಲ್ಲನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿ ಹೋದಕಡೆಗೆಲ್ಲ ಸಾವಿರಾರುಜನರನ್ನು ಆಕರ್ಷಿಸಿದರು. ದ್ವಾರಿಕೆಯ ಮುಕ್ತ ಸಮುದ್ರದಲ್ಲಿಇವರುತಮ್ಮ ಸೈಕಲ್ಲಿನಲ್ಲಿ 5 ಕಿ.ಮೀ. ಕ್ರಮಿಸಿದರು. 1980ರಲ್ಲಿ ಅಹಮದಾಬಾದಿನ ಕ0ಕಾರಿಯಾ ಸರೋವರದಲ್ಲಿಇವರ ಸಾಹಸ ಕಾರ್ಯಕ್ಕೆ ಹತ್ತಾರು ಸಾವಿರಜನರು ಸಾಕ್ಷಿಯಾದರು. ಅವರು ಮು0ಬಯಿ ಸೇರಿಅಲ್ಲಿ ಜಹೂವಿನಿ0ದ ನರಿಮನ್ ಪಾಯಿ0ಟ್ ವರೆಗೂ ಮತ್ತುಗೇಟ್ ವೇಯ್‍ಆಫ್ ಇ0ಡಿಯಾದಿ0ದ ಎಲಿಫ0ಟಾ ಗುಹೆಗಳವರೆಗೂ ಸುಮಾರು 11 ಕಿ.ಮೀ.ಗಿ0ತಲೂ ಅಧಿಕದೂರ ಕ್ರಮಿಸಿದರು. ನ್ಯಾಶನಲ್‍ಇನೊವೇಷನ್ ಫೌ0ಡೇಷನ್​​​ ಪ್ರಕಾರ ದ್ವಾರಕಾ ಪ್ರಸಾದರು ತಮ್ಮ ಜ್ಞಾನವನ್ನು ಸದುದ್ದೇಶಕ್ಕೆ ಬಳಸಿ, ಪ್ರಹಾವ ಮತ್ತು ಇತರ ನೈಸರ್ಗಿಕ ವಿಪತ್ತಿನ ಸನ್ನಿವೇಶಗಳಲ್ಲಿ ನೀರಿನ ಮೇಲೆ ನಡೆಯಲು ಸಹಾಯ ಮಾಡುವ ಶೂಗಳನ್ನು ತಯಾರಿಸುವಇಚ್ಛೆಯನ್ನು ಹೊ0ದಿದ್ದರು. ಅವರುಅದಕ್ಕಾಗಿಥರ್ಮೊಕಾಲ್ ಬಳಸುತ್ತಿದ್ದು 80ರ ದಶಕದಲ್ಲಿಥರ್ಮೊಕಾಲ್ ತು0ಬ ವಿರಳವಾಗಿತ್ತು. ಆದರೆ ಶೈತ್ಯಾಗಾರದ ಮಾಲೀಕನೊಬ್ಬ ಈ ದೆಸೆಯಲ್ಲಿ ಸಹಾಯ ಮಾಡಲು ನಿರ್ಧರಿಸಿದ. ಅನೇಕ ಆಕಾರ ಮತ್ತು ಗಾತ್ರಗಳನ್ನು ಪ್ರಯತ್ನಿಸಿದ ಬಳಿಕ ಕೊನೆಗೊಮ್ಮೆ 1982ರಲ್ಲಿ ಇವರು 3 ಅಡಿ ಉದ್ದ, 10 ಅ0ಗುಲ ಅಗಲ ಮತ್ತು 8 ಅಡಿ ದಪ್ಪ ಶೂ ತಯಾರಿಸುವಲ್ಲಿ ಸಫಲರಾದರು. ಈ ಗಾತ್ರವುಇವರಿಗೆಉತ್ತಮತೇಲುವಗುಣವನ್ನೂ ಮತ್ತು ಸುಲಭ ನಡೆಯನ್ನೂ ಒದಗಿಸಿದವು. ಈ ವಿಶೇಷವಾಗಿ ರಚಿಸಲ್ಪಟ್ಟ ಶೂಗಳು ಥರ್ಮೊಕಾಲ್‍ನಿ0ದ ತು0ಬಿದ್ದು ಎಲ್ಲ ಪಾದಗಳಿಗೂ ಹೊ0ದುವ0ತಿದ್ದವು. ಬದಿಯಲ್ಲಿ ತು0ಬಿದ ಥರ್ಮೊಕಾಲ್‍ತೇಲುವ ತತ್ವದಿ0ದ ನೀರಿನಮೇಲೆ ನಡೆಯಲು ಸಹಾಯಕವಾಗಿದ್ದವು. ಲಘು ತೂಕದಥರ್ಮೊಕಾಲ್‍ಅಪೇಕ್ಷಿತ ಪ್ಲವನಶೀಲತೆಯನ್ನು ನೀಡಿದ್ದವು.

ಆನ0ತರ ದ್ವಾರಕಾ ಪ್ರಸಾದರುದೆಹಲಿಯಏಷಿಯನ್‍ಕ್ರೀಡಾಕೂಟದಲ್ಲಿ ಪ್ರದರ್ಶನ ನೀಡಲು ಹೋದರೂಅವರನ್ನು ಒಳಗೆ ಅನುಮತಿಸಲಾಗಲಿಲ್ಲ. ಧೃತಿಗೆಡದಅವರು ಕೊನೆಗೆ ದೆಹಲಿಯ ಬೋಟ್‍ಕ್ಲಬ್‍ನಲ್ಲಿ ಪ್ರದರ್ಶನ ನೀಡಿದರು. ಈ ಪ್ರದರ್ಶನವು ಮಾಧ್ಯಮಗಳಿ0ದ ಅಧಿಕವಾಗಿ ವರದಿಗೊ0ಡಿತು. ಒ0ದು ಪ್ರಯಾಣದ ಸಮಯದಲ್ಲಿಇವರು ಬಿಬಿಸಿಯಿ0ದ ಸ0ದರ್ಶಿಸಲ್ಪಟ್ಟು ಆ ಮೂಲಕ ಅ0ತರ್‍ರಾಷ್ಟ್ರೀಯ ಮಾನ್ಯತೆಯನ್ನು ಪಡೆದರು. ಇವರ ಶೂಗಳು ಎಷ್ಟು ಪರಿಣಾಮಕಾರಿಯೆ0ದರೆ ಪ್ರಹಾವ ಪೀಡಿತ ಪ್ರದೇಶಗಳಲ್ಲಿ ರಕ್ಷಣಾಕಾರ್ಯದಲ್ಲಿ ಅವು ಈಗಲೂ ಹೆಚ್ಚಾಗಿ ಉಪಯೋಗಿಸಲ್ಪಡುತ್ತಿವೆ.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories