ಆವೃತ್ತಿಗಳು
Kannada

ಹಸಿದವರ ಹೊಟ್ಟೆ ತುಂಬಿಸಲು ನೆರವು ಕೇಳಿದ ಆಸ್ಕರ್ ವಿಜೇತ ನಟಿ

ಟೀಮ್​ ವೈ.ಎಸ್​. ಕನ್ನಡ

YourStory Kannada
6th Mar 2017
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಆಸ್ಕರ್ ಪ್ರಶಸ್ತಿ ಅನ್ನುವುದು ಸಿನೆಮಾ ಲೋಕದ ಶ್ರೇಷ್ಠ ಪ್ರಶಸ್ತಿ ಅನ್ನುವ ಬಗ್ಗೆ ಸಂಶಯವೇ ಇಲ್ಲ. ಇಲ್ಲಿಗೆ ಬರುವ ಸೆಲೆಬ್ರಿಟಿಗಳು ಹಾಕುವ ಬಟ್ಟೆ ಬಗ್ಗೆಯೇ ಜೋರಾಗಿ ಚರ್ಚೆಗಳು ನಡೆಯುತ್ತವೆ. ಧರಿಸುವ ಧಿರಿಸುಗಳ ಬಗ್ಗೆ ಗಮನವಿರುತ್ತದೆ. ರೆಡ್​ ಕಾರ್ಪೆಟ್​ನಲ್ಲಿ ನಡೆಯುವ ನಡಿಗೆ ಬಗ್ಗೆಯೂ ಮಾತುಗಳು ಇರುತ್ತದೆ. ಫ್ರೀಡಾ ಪಿಂಟೋ ಆಸ್ಕರ್ ವಿಜೇತ ನಟಿಯರ ಪೈಕಿ ಒಬ್ಬರು. ಆದ್ರೆ ಫ್ರೀಡಾ ಸಾಮಾಜಿಕ ಕಳಕಳಿಯನ್ನು ಕೂಡ ಹೊಂದಿದ್ದಾರೆ. ಪ್ರೀಡಾ ಚಿಕಾಗೋ ಮೂಲದ ಎನ್​ಜಿಒ ಒಂದರ ಜೊತೆ ಕೈ ಜೋಡಿಸಿ ಸಾಮಾಜಿಕ ಕೆಲಸಕ್ಕೆ ಕೈ ಹಾಕಿದ್ದಾರೆ. ಲಾಸ್ ಏಂಜಲೀಸ್​ನಲ್ಲಿ ಪಾರ್ಟಿಯ ನಂತರ ಹೊರಗಡೆ ಬಿಸಾಕುವ ಆಹಾರಗಳನ್ನು ಸಂಗ್ರಹಿಸಿ, ಹಸಿದವರಿಗೆ ನೀಡುವ ಕೆಲಸದಲ್ಲಿ ಫ್ರೀಡಾ ಕೈ ಜೋಡಿಸಿದ್ದಾರೆ.

image


ಆಸ್ಕರ್ ಸಮಯದಲ್ಲಿ ಪ್ರತೀವರ್ಷವೂ ಸಾಕಷ್ಟು ಆಹಾರ ಉಪಯೋಗವಿಲ್ಲದೆ ಕಸದ ತೊಟ್ಟಿ ಸೇರುತ್ತದೆ. ಈ ವರ್ಷದ ಆಸ್ಕರ್ ಪಾರ್ಟಿಯಲ್ಲೂ ಅಷ್ಟೇ, ಸಾಕಷ್ಟು ಆಹಾರಗಳು ಕಸದ ತೊಟ್ಟಿ ಸೇರಿಕೊಂಡಿದೆ. ಈ ಐಶಾರಾಮಿ ಊಟದಲ್ಲಿ ಚಿನ್ನದ ಅಂಶದಲ್ಲಿ ಬೇಯಿಸಿದ ಆಲೂಗೆಡ್ಡೆ, ಚಿನ್ನದ ಹುಡಿಗಳಿದ್ದ ಪಾಪ್​ಕಾರ್ನ್ ಸೇರಿದಂತೆ ರುಚಿರುಚಿಯಾದ ಡಿಷಸ್​ಗಳಿದ್ದವು. ಸುಮಾರು 3000 ಮಂದಿಗೆ ಐಶಾರಾಮಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಅಲ್ಲಿ ಹೆಚ್ಚು ಆಹಾರೋತ್ಪನ್ನಗಳು ಕಸದ ತೊಟ್ಟಿ ಸೇರಿವೆ ಅನ್ನುವುದರಲ್ಲಿ ಅಚ್ಚರಿ ಇಲ್ಲ.

“ ನಮ್ಮ ಚಿತ್ರದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲುತ್ತಿರಬಾರದು ಎಂದು ಹೇಳುತ್ತೇವೆ. ಆದ್ರೆ ಲಾಸ್ ಏಂಜಲೀಸ್​ನಂತಹ ನಗರದಲ್ಲೇ ಸಾಕಷ್ಟು ಜನರು ಹಸಿವಿನಿಂದ ಇದ್ದಾರೆ. ಅವರಿಗೆ ಪಾರ್ಟಿಗಳಲ್ಲಿ ಉಳಿದಿರುವ ಆಹಾರಗಳನ್ನು ಕೊಟ್ಟರೂ ಸಾಕು. ಹಸಿದವರ ಹೊಟ್ಟೆ ತುಂಬುತ್ತದೆ.”
- ಫ್ರೀಡಾಪಿಂಟೋ, ನಟಿ

ಫ್ರೀಡಾ ಅಭಿನಯಿಸಿದ್ದ "ಸ್ಲಂ ಡಾಗ್ ಮಿಲೇನಿಯರ್" ಹಾಲಿವುಡ್​ನಲ್ಲಿ ದೊಡ್ಡ ಸುದ್ದಿ ಮಾಡಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿತ್ತು. ಅಲ್ಲಿಂದ ಮೇಲೆ ಫ್ರೀಡಾ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಲಿವುಡ್​​ನಲ್ಲಿ ಬ್ಯೂಸಿಯಾಗಿರುವ ಫ್ರೀಡಾ, ಬಿಡುವು ಮಾಡಿಕೊಂಡು ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಫ್ರೀಡಾ ಮಾನವೀಯತೆ, ಏಂಜಲಿನಾ ಜೋಲಿ, ಮಲಾಲ ಯೂಸುಫ್​ಝಾಯಿ ಕೆಲಸದಂತೆ ಸ್ಫೂರ್ತಿದಾಯಕವಾಗಿದೆ.

ಚಲನಚಿತ್ರಗಳಲ್ಲಿ ನಟಿಸಿದ ಮಾತ್ರಕ್ಕೆ ನಟರು ಜನರು ಮನಸ್ಸು ಸೇರುತ್ತಾರೆ. ಆದ್ರೆ ಅದು ಕೇವಲ ಅಭಿಮಾನದಿಂದ ಮಾತ್ರ ಆಗಿರುತ್ತದೆ. ಆದ್ರೆ ಮಾನವೀಯತೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಕೈ ಜೋಡಿಸಿದರೆ ನಟ, ನಟಿಯರು ದೇವರಂತೆ ಕಾಣುತ್ತಾರೆ ಅನ್ನುವುದು ಸುಳ್ಳಲ್ಲ. ಫ್ರೀಡಾ ಕೆಲಸ ಭಾರತ ನಟ, ನಟಿಯರಿಗೂ ಮಾದರಿ ಆಗಲಿ ಅನ್ನುವುದೇ ಎಲ್ಲರ ಆಶಯ.

ಇದನ್ನು ಓದಿ: 

1. ಮಹಿಳಾ ಕ್ರಿಕೆಟ್​​ನಲ್ಲಿ ಹೊಸ ಸಂಚಲನ- ಅಂತರಾಷ್ಟ್ರೀಯ ಮಹಿಳಾ ದಿನದಂದು ಹೊಸ ಲೀಗ್ ಆರಂಭ 

2. ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಮಧ್ಯಾಹ್ನ ಊಟದ ಯೋಜನೆ ಲಾಭ ಸಿಗಲ್ಲ

3. ಪ್ರತಿಯೊಬ್ಬರ ಹೆಜ್ಜೆಗೂ "ಗೆಜ್ಜೆ"ಕಟ್ಟುವ ರೂಪಿಕಾ

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories