ಆವೃತ್ತಿಗಳು
Kannada

ಉದ್ದೇಶ, ಪೊಸಿಷನ್ ಮತ್ತು ಜೊತೆಗಾರರು: ಮಾರುಕಟ್ಟೆ ಗೆಲ್ಲಲು ಮೂರು ಟಿಪ್ಸ್

ಟೀಮ್​​ ವೈ.ಎಸ್​​. ಕನ್ನಡ

YourStory Kannada
20th Nov 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಭಾರತದಲ್ಲೀಗ ಡಿಜಿಟಲ್ ತಾಂತ್ರಿಕತೆಯ ಕ್ರಾಂತಿ ನಡೆಯುತ್ತಿದೆ. ಇದರ ಜೊತೆಗೆ ಉದ್ಯಮ ಸ್ಥಾಪನೆಯ ಉತ್ಸಾಹ ಯುವಕರಲ್ಲಿ ಹೆಚ್ಚಾಗ್ತಿದೆ. ಇವೆರಡೂ ಸೇರಿಕೊಂಡು ದೇಶದಲ್ಲಿ ಈಗ ಸ್ಟಾರ್ಟ್ ಅಪ್ ಕ್ರಾಂತಿ ನಡೆಯುತ್ತಿದೆ. ಲಕ್ಷಾಂತರ ಗ್ರಾಹಕರು, ಬಿಲಿಯನ್ ಗ್ರಾಹಕರನ್ನು ಸೆಳೆಯಲು ಪೈಪೋಟಿ ನಡೆಯುತ್ತಿದೆ.

ಯುವರ್​​ಸ್ಟೋರಿ ಆಯೋಜಿಸಿದ್ದ ಟೆಕ್ಸ್​​ಸ್ಪಾರ್ಕ್ಸ್ ಸಮ್ಮೇಳನದಲ್ಲಿ 10 ಎಕ್ಸ್​​​ಪರ್ಟ್​ಗಳು ನವ್ಯೋದ್ಯಮ ಸ್ಥಾಪನೆ ಮಾಡುವವರಿಗೆ ಹಲವು ಟಿಪ್ಸ್​​​ಗಳನ್ನು ಕೊಟ್ಟಿದ್ದರು. ಪ್ರುಕಲ್ಪಾ ಸಂಕರ್(ಸೋಷಿಯಲ್​​ ಕಾಪ್ಸ್), ಆನಂದ್ ನಾಯ್ಕ್(ಬೋರ್ಬಿಸ್ ಟೆಕ್), ಮದನ್ ಪಡಕಿ(ಹೆಡ್​​ಹೆಲ್ಡ್​​ ಹೈ), ರೇವತಿ ಅಶೋಕ್(ಐಎಎನ್), ನೇಹಾ ಮೋಟ್ವಾನಿ(ಫಿಟರ್​​ನೆಟಿ ), ಅರುಣ ಶ್ವಾರ್ಜ್(ಸ್ಟೇಲ್ ಟೆಕ್ನಾಲಜೀಸ್), ರಾಜೀವ್ ರಘುನಂದನ್(ಸೀಡ್ಎಕ್ಸ್), ಕಾರ್ತಿಕ್ ಶತುರಗಿರಿ(ಅಕಾಮೈ ಟೆಕ್ನಾಲಜೀಸ್), ದೇವಾಂಗ್ ನೆರಲ್ಲಾ (ಆಟಂ ಟೆಕ್ನಾಲಜೀಸ್) ಮತ್ತು ಸರ್ವಶ್ರೇಷ್ಠ ಪಲಿವಾಲ್ (ಮೈಕ್ರೋಸಾಫ್ಟ್) ಮತ್ತಿತರರು ಇಲ್ಲಿ ಟಿಪ್ಸ್ ಹಂಚಿಕೊಂಡಿದ್ದರು.

image


ಈ ಹತ್ತೂ ಜನರ ಸಲಹೆಗಳಲ್ಲಿ ಮೂರು ಸಲಹೆಗಳು ಎಲ್ಲರಿಂದಲೂ ಮೂಡಿಬಂದಿದ್ದವು.

1. ಉದ್ದೇಶ 

ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಆರಂಭಕ್ಕೆ ಉತ್ಸಾಹ ಅಗತ್ಯ. ಆದರೆ, ಸ್ಪಷ್ಟ ಉದ್ದೇಶ ನಿಮ್ಮನ್ನು ಉದ್ಯಮದಲ್ಲಿ ಗೆಲ್ಲಿಸುತ್ತದೆ. ಹೆಚ್ಚು ಅವಕಾಶಗಳಿರುವ ಕ್ಷೇತ್ರಗಳಾದ ಉದ್ಯಮ ಕೌಶಲ್ಯ ಹೆಚ್ಚಳ, ಶಿಕ್ಷಣ, ಮತ್ತು ಆರೋಗ್ಯಸೇವೆಗಳ ಕ್ಷೇತ್ರಗಳನ್ನು ಆಯ್ದುಕೊಳ್ಳಿರಿ, ಈ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿ.

ಅರ್ಥಪೂರ್ಣ ವಿಚಾರಗಳು, ಆರ್ಥಿಕ ಸೇವೆಗಳು, ಸಂಪರ್ಕ ಮತ್ತು ಉದ್ಯಮದ ಬಾಗಿಲು ತೆರೆಯುವ ಅವಕಾಶಗಳನ್ನು ಬಳಸಿಕೊಳ್ಳಲು ಇರುವ ಅಡ್ಡಿಗಳನ್ನು ಗುರುತಿಸಿಕೊಳ್ಳಿರಿ. ಈ ಪೈಕಿ ಕೆಲವು ಗ್ರಾಹಕರ ಸಮಸ್ಯೆಗಳು ಮತ್ತು ಸಾಂಸ್ಥಿಕ ಸಮಸ್ಯೆಗಳೂ ಇರಬಹುದು. ಈ ಡಿಜಿಟಲ್ ಯುಗದಲ್ಲಿ, ಗ್ರಾಹಕರೂ ಕೂಡಾ ಸಹಭಾಗಿತ್ವ ಹೊಂದಲು ಮತ್ತು ಒಳ್ಳೆಯ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ.

ಸಮಸ್ಯೆಯನ್ನು ಪ್ರೀತಿಸುವುದು ಕೂಡಾ ಇಲ್ಲಿ ಅತಿ ಮುಖ್ಯವಾಗಿರುತ್ತದೆ. ಪ್ರತಿಬಾರಿಯೂ ಗ್ರಾಹಕರ ಮೇಲೆ ಗಮನಹರಿಸಬೇಕಾಗುತ್ತದೆ. ಇಲ್ಲದಿದ್ದರೆ, ಸಂಸ್ಥಾಪಕರು ತಮ್ಮದೇ ತಂತ್ರಜಾನದಿಂದ ವಿಮುಖರಾಗಬೇಕಾಗುತ್ತದೆ ಅಥವಾ ಒರಿಜಿನಲ್ ಪರಿಹಾರಗಳ ಜೊತೆ ಹೋರಾಡಬೇಕಾಗುತ್ತದೆ. ಒಮ್ಮೆ ಉತ್ಸಾಹ ಮತ್ತು ಉದ್ದೇಶ ಜೊತೆ ಸೇರಿದರೆ, ಸಂಸ್ಥಾಪಕರು ತಮ್ಮ ಮುಂದಿನ ಹಾದಿ, ಮೈಲಿಗಲ್ಲುಗಳನ್ನು, ಅವಕಾಶಗಳನ್ನು ನಿರ್ಧರಿಸಿಕೊಳ್ಳಬಹುದಾಗಿದೆ.

ಈ ಎಲ್ಲಾ ವಿಚಾರಗಳನ್ನು ಗುರುತಿಸಿಕೊಂಡರೆ, ಉದ್ಯಮಸ್ಥಾಪಕರು ತಮ್ಮ ಕ್ಷೇತ್ರವನ್ನು ಆರಿಸಿಕೊಳ್ಳುವುದು ಸುಲಭವಾಗುತ್ತದೆ ಎನ್ನುತ್ತಾರೆ ಪ್ರುಕಲ್ಪಾ ಸಂಕರ್, ಆನಂದ್ ನಾಯ್ಕ್ ಮತ್ತು ಮದನ್ ಪಡಕಿ.

2. ಪೊಸಿಷನ್ :

ಕ್ಷೇತ್ರದ ಆಯ್ಕೆಯಾದ ಬಳಿಕ, ಉದ್ಯಮ ಸ್ಥಾಪಕರು ಉತ್ಪನ್ನ ತಯಾರು ಮಾಡಬೇಕೋ? ಸೇವೆ ಒದಗಿಸಬೇಕೋ? ಅಥವಾ ಉತ್ಪಾದನೆ ಆಧರಿತ ಸೇವೆ ನೀಡಬೇಕೋ ಎನ್ನುವುದನ್ನು ನಿರ್ಧರಿಸಬೇಕು. ಪ್ರತಿಯೊಂದನ್ನೂ ಪೂರೈಸುವ ಹಾದಿ ವಿಭಿನ್ನವಾಗಿರುತ್ತದೆ. ಉತ್ಪನ್ನವನ್ನು ತಯಾರಿಸುವುದು, ಪ್ಯಾಕಿಂಗ್ ಮಾಡುವುದು, ವಿತರಿಸುವುದು, ಬೆಲೆನಿಗದಿಪಡಿಸುವುದು ಮತ್ತು ಮಾರಾಟ ಮಾಡುವ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.

ಸೇವಾ ಕಾರ್ಯಗಳು ಆರಂಭದಲ್ಲಿಯೇ ಹಣದ ಹರಿವನ್ನು ಸಂಪಾದಿಸುವ ಅವಕಾಶ ಕಲ್ಪಿಸುತ್ತದೆ. ಆದರೆ, ಇವೆಲ್ಲವೂ ತ್ರೈಮಾಸಿಕ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕಾಗುತ್ತದೆ. ಉತ್ಪನ್ನಗಳಿಗೆ ಹೆಚ್ಚಿನ ಬಂಡವಾಳ ಹೂಡಬೇಕಾಗುತ್ತದೆ. ಆದಾಯವೂ ತಡವಾಗಿಯೇ ಲಭಿಸುತ್ತದೆ. ಆದರೆ, ಇದರಲ್ಲಿ ದೀರ್ಘಕಾಲೀನವಾಗಿ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿದೆ. ಸೇವಾ ಕ್ಷೇತ್ರದಲ್ಲೂ, ಕನ್ಸಲ್ಟೇಷನ್ ಮೂಲಕ ಹೊಸ ಆದಾಯ ಹಾದಿಯನ್ನು ಕಂಡುಕೊಳ್ಳಬಹುದಾಗಿದೆ.

ಬಹುತೇಕ ನವ್ಯೋದ್ಯಮಗಳು ಹಿನ್ನಡೆ ಅಥವಾ ಮುನ್ನಡೆ ಸಾಧಿಸುವುದು ಇದೇ ಹಂತದಲ್ಲಿ. ಹೂಡಿಕೆದಾರರು, ಈ ಎರಡು ಅವಕಾಶಗಳಲ್ಲಿ ಯಾವುದು ಹೆಚ್ಚು ಸುರಕ್ಷಿತ ಎನ್ನುವುದನ್ನು ಗಮನಿಸಿಯೇ ಇರುತ್ತಾರೆ. ಅಲ್ಲದೆ, ಸ್ಥಾಪಕರು ತಮ್ಮ ಉದ್ಯಮದುದ್ದಕ್ಕೂ ಪಾಠಗಳನ್ನು ಕಲಿಯುತ್ತಿದ್ದಾರೆ ಎನ್ನುವುದನ್ನು ಸಾಬೀತುಪಡಿಸಬೇಕೆಂದು ಬಯಸುತ್ತಾರೆ.

image


ಇಂತಹ ಕೆಲವು ಪ್ರಯೋಗಗಳಿಂದಾಗಿ, ಉದಾಹರಣೆಗೆ, ಸ್ಟೇಲ್ ಟೆಕ್ನಾಲಜೀಸ್ ವರು ಬಿ2ಸಿ ಉದ್ಯಮದ ಬಲದಾಗಿ ಬಿ2ಸಿ ಸೇವಾ ಉದ್ಯಮಗಳನ್ನು ಆರಿಸಿಕೊಂಡಿದ್ದು ಹಾಗೂ ಐಎಎನ್ ಅವರು ಬೇರೆಯವರ ಮಾತುಗಳನ್ನು ಕೇಳದರೆ ತಮ್ಮದೇ ತಂಡದ ಸಾಮರ್ಥ್ಯವನ್ನು ನಂಬಿಕೊಂಡು ಬೆಳೆದದ್ದು.

3. ಪಾಲುದಾರರು

ನವ್ಯೋದ್ಯಮಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆಯೇ, ತಾಂತ್ರಿಕ ಸೊಲ್ಯುಷನ್ಸ್​​​ಗಳ ದೊಡ್ಡ ಸಾಗರದಲ್ಲಿ, ಉದ್ಯಮಿಗಳು ಹಳೆಯ ಮೆಂಟರ್ಸ್, ಹೂಡಿಕೆದಾರರು, ಪಾಲುದಾರರು ಎನ್ನುವಂತಹ ಕಲ್ಪನೆಗಳಿಗೆ ಜೋತುಬೀಳಬೇಕಾಗಿಲ್ಲ.

ಸಮಾಜ, ಮೊಬೈಲ್, ಅನಾಲಿಟಿಕ್ಸ್ ಮತ್ತು ಕ್ಲೌಡ್ ಮೊದಲಾದ ಸ್ಮಾಕ್ ಸ್ಟಾಕ್​​ಗಳು ಸೇರಿದಂತೆ ಕಂಟೆಂಟ್ ಡೆಲಿವರಿ, ಪೇಮೆಂಟ್ ಮತ್ತು ಭದ್ರತಾ ಮೂಲಸೌಕರ್ಯಗಳನ್ನು ಇದು ಒಳಗೊಂಡಿರುತ್ತದೆ. ಪಾಲುದಾರರ ಆಯ್ಕೆಯು ತಂತ್ರಜಾನ ಮೊದಲಾದ ಅಂಶಗಳನ್ನು ಒಳಗೊಂಡಿರಬೇಕು.

ಹೀಗಾಗಿ, ಮೈಕ್ರೋಸಾಫ್ಟ್ ನವ್ಯೋದ್ಯಮಗಳ ಸ್ಥಾಪನೆಗಾಗಿ ಕ್ಲೌಡ್ ಸರ್ವೀಸ್​​ಗಳನ್ನು ಒದಗಿಸಿಕೊಡುವ ಮೂಲಕ, ಸ್ಟಾರ್ಟ್ಅಪ್​​ಗಳ ಬೆಳವಣಿಗೆಗೆ ಅತ್ಯುತ್ತಮ ಅವಕಾಶ ಕಲ್ಪಿಸಿದೆ. ಡಿಜಿಟಲ್ ಮಾಹಿತಿ ಕ್ಷೇತ್ರದಲ್ಲಿ ಅಕಾಮೈ ಲೀಡಿಂಗ್ ಕಂಟೆಂಟ್ ಡೆಲಿವರಿ ಜಾಲವಾಗಿ ಮುಂಚೂಣಿಯಲ್ಲಿ ನಿಂತಿದೆ. ಆಟಂ ಟೆಕ್ನಾಲಜಿಯು ಭಾರತದಲ್ಲಿ ದೀರ್ಘಕಾಲಿಕ ನವ್ಯೋದ್ಯಮ ಪಾಲುದಾರನಾಗಿದೆ, ಇದು ಐವಿಆರ್, ಆ್ಯಪ್ಸ್ ಮತ್ತು ಪಿಒಎಸ್ ಹಾಗೂ ಕಾರ್ಡ್​ಗಳ ಮೂಲಕ ಪೇಮೆಂಟ್ ಗೇಟ್​​ವೇ ಕಲ್ಪಿಸುತ್ತಿದೆ.

ಇವೆಲ್ಲವೂ ಮಾಡುವುದಕ್ಕೆ ಸುಲಭವಾಗಿವೆ. ಉದ್ದೇಶ, ಪೊಸಿಷನ್ ಮತ್ತು ಪಾಲುದಾರರು ಚೆಕ್​​ಲಿಸ್ಟ್ ಮಾಡುವುದು ಕಷ್ಟವೇನಲ್ಲ. ಈ ಸಲಹೆಗಾರರು ಉದ್ಯಮವನ್ನು ಕಾಡುತ್ತಿರುವ ಕೆಲವು ಸುಳ್ಳುಗಳ ಬಗ್ಗೆಯೂ ಪಟ್ಟಿ ಮಾಡಿ ಅವುಗಳಿಂದ ದೂರ ಉಳಿಯುವುದು ಹೇಗೆ ಎನ್ನುವುದನ್ನೂ ಅರ್ಥೈಸಿದ್ದಾರೆ. ಉದಾಹರಣೆ, ಸ್ಥಾಪಕ ತಂಡವು, ಎಲ್ಲವನ್ನೂ ಸಮಾನವಾಗಿ ನಿಭಾಯಿಸದೆ, ಕೇವಲ ತಾಂತ್ರಿಕತೆಯ ಮೇಲೆ ಗಮನ ಹರಿಸಿದರೆ, ಆಗ ಮಾರುಕ್ಟಟೆಯ ಮೇಲೆ ಪರಿಣಾಮ ಬೀರಬಹುದಾದ ಡಿಸ್​​ರಪ್ಟಿವ್ ಮಾದರಿಗಳನ್ನು ಮರೆತುಬಿಡಬಹುದು.

ಸಂಸ್ಥಾಪಕರು, ಎಂದಿಗೂ ತಮ್ಮ ತಪ್ಪುಗಳಿಂದ ಪಾಠ ಕಲಿಯುವ ಮನಸ್ಸು ಹೊಂದಿರಬೇಕು. ತಮ್ಮ ತಪ್ಪುಗಳು ಹಾಗೂ ಇತರರ ತಪ್ಪುಗಳನ್ನು ತಿದ್ದುವ ಮನೋಭಾವ ಹೊಂದಿರಬೇಕು. ಉದ್ಯಮಿಗಳು ಕುರುಡಾಗಿ ತಮ್ಮದೇ ಆದ ಕಲ್ಪನೆಗಳು, ಯೋಚನೆಗಳು ಮತ್ತು ಉತ್ಪನ್ನಗಳಿಗೆ ಗಂಟು ಬೀಳದೆ, ಮತ್ತೊಬ್ಬರ ಅಭಿಪ್ರಾಯಗಳನ್ನೂ ಸ್ವಾಗತಿಸಬೇಕು.

ಒಟ್ಟಾರೆಯಾಗಿ ಹೇಳುವುದಾದರೆ, ಉದ್ಯಮಿಗಳು ಸುದೀರ್ಘವಾಗಿ ಮತ್ತು ದೊಡ್ಡ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ತಳವೂರಬೇಕಾದರೆ, ಬಿಟ್ಟು ಬಿಡಬೇಡ ಮತ್ತು ಹೋಗಲಿ ಬಿಡು ಎಂಬ ಎರಡೂ ತತ್ವಗಳನ್ನು ಸಮದೂಗಿಸಿಕೊಂಡು ಹೋಗಬೇಕು.

ಲೇಖಕರು: ಮದನ್​​ಮೋಹನ್​​ ರಾವ್​​

ಅನುವಾದಕರು: ಪ್ರೀತಮ್​​​

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories