ಅಂದು ಕಡು ಬಡವ...ಇಂದು ಎರಡು ಕಂಪನಿಗಳ ಮಾಲೀಕ..!

ಉಷಾ ಹರೀಶ್​

1st Jan 2016
 • +0
Share on
close
 • +0
Share on
close
Share on
close

ಸಾಮಾನ್ಯವಾಗಿ ಹಾಲನ್ನು ನಮ್ಮ ಮನೆಗಳಿಗೆ ಪ್ಯಾಕೇಟ್​ನಲ್ಲಿ ತಂದು ಕೊಡುತ್ತಾರೆ. ಆದರೆ ಇಲ್ಲೊಬ್ಬ ಸಾಹಸಿ ಯುವಕ ಬಾಟಲಿಯಲ್ಲಿ ಪ್ರತಿದಿನ ಹಾಲನ್ನು ಮನೆ ಮನೆಗೂ ವಿತರಣೆ ಮಾಡುತ್ತಾನೆ. ಹೌದು, ತಮಿಳುನಾಡಿನ ಕೊಯಮತ್ತೂರು ಮೂಲದ ಟೆಕ್ಕಿ ಉದಯ್ ಕೃಷ್ಣ ಚೆನೈನಲ್ಲಿನ ಐಟಿ ಕಂಪನಿಯೊಂದರ ಕೆಲಸ ಬಿಟ್ಟು ತನ್ನದೇ ಒಂದು ಡೈರಿ ಫಾರಂ ತೆರೆದು ಅದರಲ್ಲಿ ಯಶಸ್ವಿಯಾಗಿದ್ದಾರೆ.

image


ಉದಯ್ ಎಂಟು ವರ್ಷದವಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಅಮ್ಮ ಬೇರೆಯವರ ಮನೆ ಕೆಲಸ ಮಾಡಿಕೊಂಡು ಕಷ್ಟಪಟ್ಟು ಉದಯ್ ಮತ್ತು ಅವರ ಸಹೋದರ ವಿಷ್ಣುವಿಗೆ ವಿದ್ಯಾಭ್ಯಾಸ ಕೊಡಿಸಿದರು. ಬಾಲ್ಯದಲ್ಲಿ ಎಲ್ಲ ಮಕ್ಕಳಿಗೆ ಇರುವ ಆಸೆಯಂತೆ ಉದಯ್ ಅವರಿಗೂ ಗೊಂಬೆಗಳ ಜೊತೆ ಆಟವಾಡುವ ಮತ್ತು ಚಾಕೋಲೇಟ್ ತಿನ್ನು ಆಸೆ ಇತ್ತು. ಆದರೆ ಅವರ ಬಳಿ ಹಣಕ್ಕೆ ಕೊರತೆ ಇತ್ತು. ಸ್ವಲ್ಪ ಹೆಚ್ಚು ಖರ್ಚದ್ರೂ ನಾಳಿನ ಗತಿ ಏನಪ್ಪಾ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು. ಅದಕ್ಕಾಗಿ ಮನಸ್ಸಿನಲ್ಲೇ ಬೊಂಬೆಗಳ ಜೊತೆ ಆಟವಾಡಿದಂತೆ ಮತ್ತು ಚಾಕೋಲೇಟ್ ತಿಂದಂತೆ ಕಲ್ಪನೆ ಮಾಡಿಕೊಂಡು ಸಂತಸ ಪಡುತ್ತಿದ್ದರು.

ಜೀವನ ನಿರ್ವಹಣೆಗೆ ಕಷ್ಟವೆನಿಸುವಂತಹ ಬಡತನ ಇವರಿಗಿದ್ದ ಪರಿಣಾಮ ಉದಯ್ ಅವರ ಸಂಬಂಧಿಕರು ಅವರ ಕುಟುಂಬವನ್ನು ದೂರ ಇಟ್ಟಿದ್ದರು. ಹತ್ತಿರದವರೆನಿಸಿಕೊಂಡವರು ಕೂಡ, ಯಾರೂ ಇವರಿಗೆ ಗೌರವವನ್ನು ನೀಡುತ್ತಿರಲಿಲ್ಲ. ಸ್ಕೂಲ್ ಮತ್ತು ಕಾಲೇಜಿನಲ್ಲಿ ಓದುತ್ತಿದ್ದಾಗ ಎಲ್ಲಾ ಸಂಬಂಧಿಕರು ನಮ್ಮ ಕುಟುಂಬವನ್ನು ಗೌರವಿಸವುಂತೆ ಮಾಡಬೇಕು ಎಂಬ ಕನಸನ್ನು ಕಂಡಿದ್ದರು. ಅದು ನಾನು ದೊಡ್ಡ ಉದ್ಯಮಿಯಾದರೆ ಮಾತ್ರ ಸಾಧ್ಯ ಎನ್ನುವುದನ್ನು ಮನಗಂಡ ಉದಯ್ ಕಷ್ಟಪಟ್ಟು ಓದಿ ಚೆನ್ನೈನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು.

image


ಉದಯ್ ಅವರ ಕಷ್ಟಕ್ಕೆ ಪ್ರತಿಫಲವೆಂಬಂತೆ ಎಂಜಿನಿಯರಿಂಗ್ ಮುಗಿದ ಕೂಡಲೇ ಅವರಿಗೆ ಚೆನ್ನೈನ ಐಟಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತು, ಆದರೆ ಆ ಕಂಪನಿ ಮೂರೇ ತಿಂಗಳಲ್ಲಿ ಮುಚ್ಚಿ ಹೋಯಿತು.

ಕಷ್ಟಕಾಲದಲ್ಲಿ ಸ್ನೇಹಿತ ಉದಯ್​ ಜೊತೆ ಕೈ ಜೋಡಿಸಿಬಿಟ್ರು. ಅವರ ಸ್ನೇಹಿತರೊಂದಿಗೆ ಚರ್ಚಿಸಿ ಮೈ ಪ್ರೋಮೊ ಎಂಬ ಒಂದು ಅನಿಮೇಶನ್ ಕಂಪನಿ ಪ್ರಾರಂಭ ಮಾಡಿದರು. ಆ ಮೂಲಕ ನಿಧಾನವಾಗಿ ಆರಂಭವಾದ ಅವರ ಅನಿಮೇಶನ್ ಕಂಪನಿ ಇಂದು ಬರೋಬ್ಬರಿ 20 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದೆ.

ಬಾಟಲಿಯಲ್ಲಿ ಹಾಲು ಸರಬರಾಜು

image


ಅದೊಂದು ಕಾಲವಿತ್ತು, ಬಾಟಲಿಯಲ್ಲಿ ಪ್ರತಿ ದಿನ ಮನೆ ಮನೆಗೆ ಡೈರಿಯಿಂದ ಹಾಲು ಸರಬರಾಜಾಗುತ್ತಿತ್ತು. ಆದರೆ ಯಾವಾಗ ಪ್ಲಾಸ್ಟಿಕ್ ಎಂಬ ಮಹಾಮಾರಿ ಕಾಲಿಟ್ಟಿತೋ ಹಾಲು ಸಹ ಪ್ಯಾಕೇಟ್ ರೂಪದಲ್ಲಿ ಮನೆ ಬಾಗಿಲಿಗೆ ಬರಲು ಆರಂಭಿಸಿತು. ಬಾಟಲಿ ಹಾಲು ಸರಬರಾಜು ಪದ್ಧತಿಯನ್ನು ಪುನಃ ಪ್ರಾರಂಭಿಸಬಾರದೇಕೆ ಎಂಬ ಐಡಿಯಾ ಉದಯ್ ಅವರಿಗೆ ಹೊಳೆಯಿತು. ತಕ್ಷಣ ಅವರು ಹಿಂದೆ ಮುಂದೆ ಯೋಚಿಸದೆ ಸ್ನೇಹಿತರೊಟ್ಟಿಗೆ ತಮ್ಮ ಸ್ವಂತ ಊರಿನಲ್ಲಿ ಒಂದು ಡೈರಿಯನ್ನು ಪ್ರಾರಂಭ ಮಾಡಿಯೇ ಬಿಟ್ಟರು. ಸುಮಾರು 20 ಕ್ಕೂ ಹೆಚ್ಚು ಹಸುಗಳಿಂದ ಇಲ್ಲಿ ಹಾಲು ಉತ್ಪಾದನೆಯಾಗುತ್ತದೆ. ಅದನ್ನು ಯಾರು ಆರ್ಡರ್​ ನೀಡಿರುತ್ತಾರೋ ಅವರಿಗೆ ಪ್ರತಿ ದಿನ ಬಾಟಲಿಯಲ್ಲಿ ಸರಬರಾಜು ಮಾಡುತ್ತಿದ್ದಾರೆ. ಈ ಡೈರಿ ಉದ್ಯಮವೂ ಉದಯ್ ಅವರನ್ನು ಕೈಹಿಡಿದಿದ್ದು, ಸಾಕಷ್ಟು ಹಣವನ್ನು ಗಳಿಸುತ್ತಿದೆ.

ಒಂದು ಕಾಲದಲ್ಲಿ ಕಡು ಬಡತನದಲ್ಲಿದ್ದ ಉದಯ್ ಇಂದು ಒಬ್ಬ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಇದಕ್ಕೆಲ್ಲಾ ಅವರ ಪರಿಶ್ರಮವೇ ಕಾರಣ. ಚಾಕೊಲೇಟ್ ತಿಂದಂತೆ ಕಲ್ಪಿಸಿಕೊಂಡು ಜೀವನ ನಡೆಸುತ್ತಿದ್ದ ಉದಯ್ ಇಂದು ಮನಸ್ಸಿಗೆ ಬೇಸರವಾದಾಗ ಅದೇ ಚಾಕೋಲೆಟ್ ತಂದು ತಿನ್ನುತ್ತಾರೆ. ಬಾಲ್ಯದ ಜೀವನ ಮುಳ್ಳಿನ ಹಾಸಿಗೆಯಾಗಿತ್ತು. ಹಾಗಾಗಿಯೇ ಒತ್ತರಿಸಿ ಬರುವ ಕಹಿ ನೆನಪುಗಳನ್ನು ಮರೆಯಲು ಚಾಕೊಲೆಟ್ ಮತ್ತು ಆಟಿಕೆಗಳನ್ನು ಕೊಳ್ಳುತ್ತಾರೆ. ಉದಯ್ ಅವರ ಡೈರಿ ಫಾರಂ ಮತ್ತು ಅನಿಮೇಶನ್ ಕಂಪನಿಯ ಬಗ್ಗೆ ಹೆಚ್ಚಿನ ವಿವರಗಳಿಗೆ, www.paal.com, www.mypromovideos.com ಲಾಗ್ ಇನ್ ಆಗಿರಿ

 • Facebook Icon
 • Twitter Icon
 • LinkedIn Icon
 • WhatsApp Icon
 • Facebook Icon
 • Twitter Icon
 • LinkedIn Icon
 • WhatsApp Icon
 • Share on
  close
  Report an issue
  Authors

  Related Tags