ಆವೃತ್ತಿಗಳು
Kannada

ತಂತ್ರಜ್ಞಾನದ ಮೇಲೆ ಹೂಡಿಕೆ - ಟೈರ್​2, ಟೈರ್​3 ಸಿಟಿಗಳಿಗೆ ಕರ್ನಾಟಕ ಸರ್ಕಾರದ ಉತ್ತೇಜನ

ಟೀಮ್ ವೈ. ಎಸ್. ಕನ್ನಡ

YourStory Kannada
8th Feb 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಭಾರತದ ಟೈರ್​2 ಮತ್ತು ಟೈರ್​ 3 ನಗರಗಳು ಉದ್ಯಮವನ್ನು ಮುನ್ನಡೆಸಲು ಸಾಂಪ್ರದಾಯಿಕ ಅಸ್ತ್ರಗಳನ್ನು ಅವಲಂಬಿಸಿಲ್ಲ. ಸಣ್ಣ ಸಣ್ಣ ಪಟ್ಟಣ ಹಾಗೂ ನಗರಗಳಲ್ಲಿ ಕೂಡ ತಂತ್ರಜ್ಞಾನ ಮುಂದುವರಿದಿದೆ. ವ್ಯಾಪಾರದ ಸಾಂಪ್ರದಾಯಿಕ ರೀತಿಯ ಮಧ್ಯಪ್ರವೇಶಿಸಿದೆ. ನೌಫ್ಲೋಟ್​ ಮತ್ತು ಜಿನ್ನೋವ್​ ವರದಿಯ ಪ್ರಕಾರ, ಭಾರತದಲ್ಲಿ ಶೇ.90ರಷ್ಟು ಸಣ್ಣ ಉದ್ಯಮಗಳು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ.

image


ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಹೆಚ್ಚಿನ ಕೊಡುಗೆ ಐಟಿ ವಲಯದ್ದು. 2006-07ರಲ್ಲಿ 11.6 ಬಿಲಿಯನ್​ ಡಾಲರ್​ ಸಾಫ್ಟ್​ವೇರ್​ ರಫ್ತಿನ ಮೂಲಕ ಕರ್ನಾಟಕ ಭಾರತದಲ್ಲೇ ಮೊದಲ ಸ್ಥಾನದಲ್ಲಿದೆ. ಇದರಲ್ಲಿ ಬೆಂಗಳೂರು ಮಾತ್ರವಲ್ಲ, ಮೈಸೂರು , ಮಂಗಳೂರು ಮತ್ತು ಹುಬ್ಬಳ್ಳಿ ನಗರಗಳ ಕೊಡುಗೆ ಕೂಡ ಇದೆ. ನ್ಯಾಸ್ಕಾಮ್​ ವರದಿಯ ಪ್ರಕಾರ 2015ರಲ್ಲಿ ಐಟಿ ವಲಯದ ಆದಾಯ ಸುಮಾರು 147 ಬಿಲಿಯನ್​ ಡಾಲರ್​.

ಇನ್ವೆಸ್ಟ್ ಕರ್ನಾಟಕ 2016 ಸಮಾವೇಶದಲ್ಲಿ ಮಾತನಾಡಿದ ಇನ್ಫೋಸಿಸ್​ ಸಿಇಓ ಕ್ರಿಸ್​ ಗೋಪಾಲಕೃಷ್ಣನ್​, ''ನಾವು ಸಾಂಪ್ರದಾಯಿಕ ಉದ್ಯಮ ಪ್ರಕ್ರಿಯೆಯನ್ನು ಮೀರಿ ಮರು ಕಲ್ಪನೆ ಮಾಡಿಕೊಳ್ಳಬೇಕು, ಸಣ್ಣ ಉದ್ಯಮಗಳಿಗೆ ಕೂಡ ತಂತ್ರಜ್ಞಾನ ಬಳಕೆಗೆ ಅನುಕೂಲ ಮಾಡಿಕೊಡಬೇಕು '' ಎಂದು ಅಭಿಪ್ರಾಯಪಟ್ಟಿದ್ದಾರೆ. ಕ್ರಿಸ್ ಗೋಪಾಲಕೃಷ್ಣನ್​, ಟೈರ್​ ​ 1 ಮತ್ತು ಟೈರ್​ 3 ಸಿಟಿಗಳಲ್ಲಿ ತಂತ್ರಜ್ಞಾನ ಎಂಬ ವಿಷಯದ ಮೇಲೆ ನಡೆದ ಚರ್ಚೆಯ ಅಧ್ಯಕ್ಷತೆ ವಹಿಸಿದ್ದರು.

20 ವರ್ಷಗಳ ಹಿಂದೆ ಬೆಂಗಳೂರು ಹೇಗಿತ್ತೋ ಈಗ ಮೈಸೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿ ಹಾಗೆಯೇ ಇವೆ...

ಥೊಲೋನ್ಸ್​ ಕ್ಯಾಪಿಟಲ್​ನ ಅಧ್ಯಕ್ಷ ಅವಿನಾಶ್​ ವಸಿಷ್ಠ ಮಾತನಾಡಿ, '' 20 ವರ್ಷಗಳ ಹಿಂದೆ ಬೆಂಗಳೂರು R&D ಸ್ಥಳವಾಗಿತ್ತು, ಪ್ರತಿಭೆಗಳ ಸಾಗರದಂತಿದ್ದ ಬೆಂಗಳೂರು, ಭಾರತದ 110 ಪ್ರಮುಖ ನಗರಗಳಲ್ಲೊಂದಾಗಿತ್ತು. ಅದೇ ರೀತಿ ಈಗ ಟೈರ್​ 2 ಮತ್ತು ಟೈರ್​ 3 ನಗರಗಳಲ್ಲೂ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು. ಮೂಲಸೌಕರ್ಯ ಕಲ್ಪಿಸಬೇಕು, ಕೈಗಾರಿಕೆಗಳ ಸ್ಥಾಪನೆಗೆ ಅನುವು ಮಾಡಿಕೊಡಬೇಕು. ಮಕ್ಕಳಿಗೆ ಅಂತರಾಷ್ಟ್ರೀಯ ಮಟ್ಟದ ಶಾಲೆಗಳ ಕೊರತೆ ಇರುವುದರಿಂದ ಸಣ್ಣ ನಗರಗಳಲ್ಲಿ ಮಧ್ಯಮ ಮಟ್ಟದ ನಿರ್ವಹಣೆಯನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಪ್ರಬಲವಾದ ಪರಿಸರವನ್ನು ಹೊಂದುವುದು ಕೂಡ ಅತ್ಯವಶ್ಯ'' ಎಂದ್ರು.

ಸದ್ಯ ಮೈಸೂರು, ಮಂಗಳೂರಲ್ಲೂ ಇನ್ಫೋಸಿಸ್​ ಕಾರ್ಯನಿರ್ವಹಣೆ - ಶೀಘ್ರದಲ್ಲೇ ಹುಬ್ಬಳ್ಳಿಗೆ ಎಂಟ್ರಿ

''ಜಾಗತಿಕ ಸಂಸ್ಕೃತಿಯಿಂದಾಗಿ ಬೆಂಗಳೂರಿನಲ್ಲಿ ಹಲವು ಉದ್ಯಮಗಳು ತಲೆಯೆತ್ತಿವೆ, ಈ ಪ್ರಕ್ರಿಯೆ ಇನ್ಫೋಸಿಸ್​ ಸ್ಥಾಪನೆಯೊಂದಿಗೆ ಆರಂಭವಾಗಿತ್ತು. ಮಂಗಳೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕೇಂದ್ರವನ್ನು ನಾವು ಹೊಂದಿದ್ದೇವೆ, ಅಲ್ಲಿ ಯುವ ಉದ್ಯೋಗಿಗಳ ದಂಡೇ ಇದೆ. ಆದ್ರೆ ಟೈರ್​ 2 ನಗರಗಳಲ್ಲಿ ಸರಿಯಾದ ಸಂಪರ್ಕ ವ್ಯವಸ್ಥೆಯಿಲ್ಲ. ಜನರು ಹುಟ್ಟೂರನ್ನು ತ್ಯಜಿಸದಂತೆ ತಡೆಯಬೇಕೆಂದ್ರೆ ಪಟ್ಟಣಗಳಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆ ಒದಗಿಸಬೇಕು'' ಅಂತಾ ಇನ್ಫೋಸಿಸ್​ನ ಇಂಡಿಯಾ ಬ್ಯುಸಿನೆಸ್​ ಹೆಡ್​ ರಘು ಕವಲೆ ಅಭಿಪ್ರಾಯಪಟ್ರು.

ಇದಕ್ಕೆ ಸಮ್ಮತಿಸಿದ ಕ್ರಿಸ್​ ಗೋಪಾಲಕೃಷ್ಣನ್​, 1994ರಲ್ಲಿ ಎಲೆಕ್ಟ್ರಾನಿಕ್​ ಸಿಟಿಗೆ ಬಂದ ಮೊದಲ ಕಂಪನಿ ಇನ್ಫೋಸಿಸ್​. ಮೊದಲು ಸಿಲ್ಕ್​ ಬೋರ್ಡ್​ನಿಂದ ಎಲೆಕ್ಟ್ರಾನಿಕ್​ ಸಿಟಿಗೆ ಬರಲು 2 ಗಂಟೆ ಬೇಕಾಗುತ್ತಿತ್ತು. ಇನ್ಫೋಸಿಸ್​ ಆಗಮನದ ನಂತರ ಇಲ್ಲಿ ಹೆದ್ದಾರಿ ನಿರ್ಮಾಣವಾಗಿದೆ. ಈಗ ಕೇವಲ 12 ನಿಮಿಷಗಳಲ್ಲಿ ತಲುಪಬಹುದು ಎಂದ್ರು.

ಟೆಕ್ನಿಕೊಲರ್​ ಇಂಡಿಯಾದ ಕಂಟ್ರಿ ಹೆಡ್​ ಬಿರೆನ್​ ಘೋಸ್​ ಅವರಿಗೆ ಸವಾಲೆಸೆದ ಗೋಪಾಲಕೃಷ್ಣನ್​, ಬೆಂಗಳೂರಿನಲ್ಲಿ ನೀವು ಕಂಪನಿ ಆರಂಭಿಸಲು ಕಾರಣವೇನು? ಟೈರ್​2, ಟೈರ್​3 ಸಿಟಿಗಳು ಇದರಿಂದೇನು ಕಲಿಯಬಹುದು ಅಂತಾ ಪ್ರಶ್ನಿಸಿದ್ರು. ಇದಕ್ಕೆ ಉತ್ತರಿಸಿದ ಬಿರೆನ್​ '' ಟೆಕ್ನಿಕೊಲರ್​ ಪಾಲಿಗೆ ಬೆಂಗಳೂರು ಕಳೆದ 6 ವರ್ಷಗಳಿಂದ ಭಾರತದ ಅಂಗಸಂಸ್ಥೆ. ಬೆಂಗಳೂರು ಜ್ಞಾನ ಮತ್ತು ವಿಜ್ಞಾನದ ಫಲವತ್ತಾದ ಭೂಮಿ. ಐಟಿ ಉದ್ಯಮಗಳಿಗೆ ಇದು ಕಾವೇರಿಸಿದೆ. ನಮ್ಮ ಸಂಸ್ಥೆ ಕೂಡ ಬೆಂಗಳೂರು ಮತ್ತು ಕರ್ನಾಟಕದ ಉಳಿದ ಸ್ಥಳಗಳ ಫಲವತ್ತತೆಯನ್ನು ಬಳಸಿಕೊಳ್ಳುತ್ತಿದೆ. ತುಮಕೂರು, ಧಾರವಾಡ, ದಾವಣಗೆರೆ, ಹುಬ್ಬಳ್ಳಿ ಮತ್ತು ಗುಲ್ಬರ್ಗಾದಿಂದ ಬರುವ ದೊಡ್ಡ ಪರಿಕಲ್ಪನೆಗಳ ಕಡೆಗೂ ನಾವು ಗಮನ ನೀಡುತ್ತೇವೆ. ತಂತ್ರಜ್ಞಾನವನ್ನು ಬಳಸಿಕೊಂಡು ಕೇವಲ ಹೂಡಿಕೆ ಮಾತ್ರವಲ್ಲ, ಮಾರುಕಟ್ಟೆ ಮತ್ತು ವಿತರಣೆ ಮೂಲಕ ಜನರನ್ನು ತಲುಪುತ್ತೇವೆ'' ಅಂತಾ ಹೇಳಿದ್ರು.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories