ಎ ಐ ತಂತ್ರಜ್ಞಾನ ಆಧರಿಸಿರುವ ಬೆಂಗಳೂರು ಮೂಲದ ಈ ಸ್ಟಾರ್ಟಪ್ ನ ಕಡಿಮೆ ವೆಚ್ಚದ ಸಾಧನವು ಗ್ರಾಮೀಣ ಭಾಗದ ಗರ್ಭಕಂಠದ ಕ್ಯಾನ್ಸರ್ ಪತ್ತೆ ಮಾಡುವಲ್ಲಿ ಸಹಕಾರಿ.

2012 ರಲ್ಲಿ ಶುರುವಾದ ಐಂದ್ರ, ಸೆರ್ವಾಸ್ಟ್ರಾ ಎಂಬ ಪಾಯಿಂಟ್ ಆಪ್ ಕೇರ್ ಸಾಧನವನ್ನು ಅಭಿವೃಧ್ದಿಪಡಿಸಿದೆ. ಈ ಸಾಧನವು ಅತೀ ಕಡಿಮೆ ಸಮಯದಲ್ಲಿ ಮಾನವನ ಅತೀ ಕಡಿಮೆ ಹಸ್ತಕ್ಷೇಪದೊಂದಿಗೆ ಕ್ಯಾನ್ಸರ್ ಸೆಲ್ ಗಳನ್ನು ಪತ್ತೆ ಹಚ್ಚುತ್ತದೆ.

ಎ ಐ ತಂತ್ರಜ್ಞಾನ ಆಧರಿಸಿರುವ ಬೆಂಗಳೂರು ಮೂಲದ ಈ ಸ್ಟಾರ್ಟಪ್ ನ ಕಡಿಮೆ ವೆಚ್ಚದ ಸಾಧನವು ಗ್ರಾಮೀಣ ಭಾಗದ ಗರ್ಭಕಂಠದ ಕ್ಯಾನ್ಸರ್ ಪತ್ತೆ ಮಾಡುವಲ್ಲಿ ಸಹಕಾರಿ.

Saturday July 13, 2019,

5 min Read

ಭಾರತದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ 43 ಕೋಟಿ ಮಹಿಳೆಯರು ಗರ್ಭಕಂಠದ ಕ್ಯಾನ್ಸರನಿಂದಾಗುವ ಅಪಾಯಕ್ಕೆ ನಿರಂತರವಾಗಿ ಒಡ್ಡಿಕೊಳ್ಳುತ್ತಿದ್ದಾರೆ. 


ಪ್ರತಿ ವರ್ಷ, ಸುಮಾರು 1.2 ಲಕ್ಷ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಆದರೆ, ಅವರಲ್ಲಿ ಕೇವಲ 45% ಜನರು ಮಾತ್ರ ಬದುಕುಳಿಯುವ ಸಾಧ್ಯತೆ ಇರುತ್ತದೆ. 

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಪ್ರಿವೆನ್ಷನ್ ಅಂಡ್ ರಿಸರ್ಚ್ (ಎನ್‌ಐಸಿಪಿಆರ್) ಅವರ ಪ್ರಕಾರ, ಪ್ರತಿ ಎಂಟು ನಿಮಿಷಕ್ಕೊಮ್ಮೆ ಈ ಕಾಯಿಲೆಯಿಂದಾಗಿ ಒಬ್ಬ ಮಹಿಳೆ ಸಾವನ್ನಪ್ಪುತ್ತಿದ್ದಾರೆ.


ತಡವಾಗಿ ರೋಗ ಪತ್ತೆ ಮಾಡುವುದು, ಅದಕ್ಕೆ ತಗಲುವ ದುಬಾರಿ ಶುಲ್ಕ ಮತ್ತು ರೋಗದ ಬಗ್ಗೆ ಸಾಮಾನ್ಯ ತಿಳುವಳಿಕೆಯಿಲ್ಲದಿರುವುದು ಈ ರೋಗಪೀಡಿತರು ಬದುಕುವ ಸಾಧ್ಯತೆಯನ್ನು ತೀರಾ ಕಡಿಮೆ ಮಾಡುವುದರಲ್ಲಿ ಮುಖ್ಯ ಕಾರಣಗಳಾಗಿವೆ.


ಏನಿದು ಗರ್ಭಕಂಠ ಕ್ಯಾನ್ಸರ್: ಗರ್ಭಕಂಠದ ಕ್ಯಾನ್ಸರ್‌ ಗರ್ಭಕಂಠದ ದ್ವಾರ ಅಥವಾ ಅದರ ಸುತ್ತ ಮುತ್ತ ಕಂಡು ಬರುವ ತೀವ್ರ ಸ್ವರೂಪದ ಗೆಡ್ಡೆಯಾಗಿದೆ. ಇದು ಯೋನಿ ಸ್ರಾವದಲ್ಲಿ ಕಂಡು ಬಂದರೂ ರೋಗಲಕ್ಷಣಗಳು ಮಾತ್ರ ಕ್ಯಾನ್ಸರ್‌ನ ಮುಂದುವರೆದ ಹಂತಗಳಲ್ಲಿ ಮಾತ್ರ ಕಂಡು ಬರಬಹುದಾಗಿದೆ. ಈ ರೋಗದ ಆರಂಭಿಕ ಹಂತದ ಚಿಕಿತ್ಸೆಯು ಶಸ್ತ್ರಚಿಕಿತ್ಸೆಯನ್ನೂ ಹಾಗೂ ಮುಂದುವರೆದ ಹಂತಗಳಲ್ಲಿ ಕೆಮೊತೆರಪಿ ಹಾಗೂ ರೇಡಿಯೊತೆರಪಿ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ. ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಎಂಬ ಸೋಂಕು ಎಲ್ಲ ಗರ್ಭಕಂಠದ‌ ಕ್ಯಾನ್ಸರ್‌ ಪ್ರಕರಣಗಳಿಗೆ ಪ್ರಮುಖ ಕಾರಣವಾಗಿದೆ.


Adarsh Natarajan

ಆದರ್ಶ ನಾಟರಾಜನ್, ಐಂದ್ರಾ ಸಂಸ್ಥಾಪಕ.

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಆಗಿರುವ ಐಂದ್ರ (Aindra) ಈಗ ಸೆರ್ವಾಸ್ಟ್ರಾ ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ AI) ಚಾಲಿತ ಸಾಧನದ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ಈ ನವೀನ ಸಾಧನ ಪ್ಯಾಪ್ ಸ್ಮೀಯರ್ ಪರೀಕ್ಷೆಯಿಂದ ಗರ್ಭಕಂಠದ ಕ್ಯಾನ್ಸರ್ ಅನ್ನು ಕಡಿಮೆ ವೆಚ್ಚದಲ್ಲಿ ಗುರುತಿಸಲು ನಿಯೋಜಿಸಬಹುದಾದ ಪಾಯಿಂಟ್-ಆಫ್-ಕೇರ್ ಉಪಕರಣವಾಗಿ ಇದು ಕಾರ್ಯ ನಿರ್ವಹಿಸುತ್ತದೆ.


2012 ರಲ್ಲಿ ಆದರ್ಶ ನಟರಾಜನ್ (40) ಅವರು ಸ್ಥಾಪಿಸಿದ ಈ ಸ್ಟಾರ್ಟ್ಅಪ್ ರೋಗನಿರ್ಣಯ ಕೇಂದ್ರ ಮತ್ತು ಪ್ರಯೋಗಾಲಯದಲ್ಲಿ ಈ ಸಾಧನವನ್ನು ಅಳವಡಿಸುವ ಮೂಲಕ 700ಕ್ಕೂ ಹೆಚ್ಚು ಮಹಿಳೆಯರು ಇದನ್ನು ಬಳಸುವಂತಾಗಿದೆ.


ಸೆರ್ವಾಸ್ಟ್ರಾ ಬಗ್ಗೆ ಆದರ್ಶ “ಯುವರ್ ಸ್ಟೋರಿ” ಯೊಂದಿಗೆ ಮಾತನಾಡುತ್ತಾ ಹೀಗೆ‌ ಹೇಳುತ್ತಾರೆ: 


“ಗರ್ಭಕಂಠದ ಕ್ಯಾನ್ಸರ್ ವಿಷಯಕ್ಕೆ ಬಂದಾಗ ಭಾರತವು ಅನೇಕ ಕ್ಷೇತ್ರಗಳಲ್ಲಿ ಕೊರತೆಯನ್ನು ಎದುರಿಸುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ರೋಗಶಾಸ್ತ್ರಜ್ಞರು ಮತ್ತು ವೈದ್ಯಕೀಯ ವೃತ್ತಿಪರತೆಯ ಕೊರತೆಯಿಂದ ಹಾಗೂ ಇತರೆ ವ್ಯವಸ್ಥಿತ ನಿರ್ಬಂಧಗಳಿಂದಾಗಿ ನಾವು, ಐಂದ್ರದಲ್ಲಿ ಇದಕ್ಕೆ ಪರಿಹಾರವನ್ನು ತರಲು ತಂತ್ರಜ್ಞಾನವನ್ನು ಬಳಸಿದ್ದೇವೆ. ನಮ್ಮ ಸಾಧನವಾದ ಸೆರ್ವಾಸ್ಟ್ರಾ, ಕ್ಯಾನ್ಸರ್ ಕೋಶಗಳ ಸಮರ್ಥವಾದ ಗುರುತಿಸುವಿಕೆಯನ್ನು ಶಕ್ತಗೊಳಿಸುತ್ತದೆ.”

ಸೆರ್ವಾಸ್ಟ್ರಾ-ಸಾಧನ


ಭಾರತದ ಗ್ರಾಮೀಣ ಭಾಗದಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ತಪಾಸಣೆ ಮಾಡುವುದು ಮತ್ತು ಪತ್ತೆ ಮಾಡುವುದು ಅತ್ಯಂತ ದುಬಾರಿಯಾಗಿದೆ. ಸ್ಥಳೀಯ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುವುದರಿಂದ, ರೋಗನಿರ್ಣಯ ಕೇಂದ್ರಕ್ಕೆ ಪರೀಕ್ಷಾ ಮಾದರಿಗಳನ್ನು ನೀಡುವುದು ಮತ್ತು ಫಲಿತಾಂಶಗಳಿಗಾಗಿ ಕಾಯುವುದು, ಈ ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಳ್ಳಲು ಆರರಿಂದ ಎಂಟು ವಾರಗಳನ್ನು ತೆಗೆದುಕೊಳ್ಳುತ್ತದೆ ಜೊತೆಗೆ ಸುಮಾರು 2,000 ರೂ ವೆಚ್ಚ ತಗಲುತ್ತದೆ.


ಸೆರ್ವಾಸ್ಟ್ರಾ ಸಾಧನವು ಈ ಸಂಪೂರ್ಣ ಕಾರ್ಯ ವಿಧಾನವನ್ನು ಎರಡು ಘಟಕಗಳನ್ನು ಬಳಸುವ ಮೂಲಕ ಸರಳಗೊಳಿಸುತ್ತದೆ. ಅವು ಆಟೋಸ್ಟೈನರ್ ಮತ್ತು ವಿಷನ್ಎಕ್ಸ್ ಎಂಬ ಇಮೇಜ್ ವರ್ಧಕ. ಈ ಕ್ರಮಾವಳಿಗಳ ಗುಂಪಿನಿಂದ ನಡೆಸಲ್ಪಡುವ AI- ಆಧಾರಿತ ಕಂಪ್ಯೂಟೇಶನಲ್ ಪ್ಯಾಥಾಲಜಿ ವ್ಯವಸ್ಥೆಯನ್ನು ಬಳಸಿಕೊಂಡು ಇವುಗಳನ್ನು ನಿರ್ಮಿಸಲಾಗಿದೆ.


“ಈ ಎರಡೂ ಘಟಕಗಳು ಸಾಕಷ್ಟು ಚಿಕ್ಕದಾಗಿರುವುದರಿಂದ, ಅವುಗಳನ್ನು ಸ್ತ್ರೀರೋಗತಜ್ಞರ ಚಿಕಿತ್ಸಾಲಯದಲ್ಲಿ ಸುಲಭವಾಗಿ ಸ್ಥಾಪಿಸಬಹುದು. ಆದ್ದರಿಂದ, ಗರ್ಭಕಂಠದ ಕ್ಯಾನ್ಸರ್‌ ಪರೀಕ್ಷಿಸಲು ಬಯಸುವವರ್ಯಾರು ರೋಗನಿರ್ಣಯದ ಕೇಂದ್ರಕ್ಕೆ ಹೋಗಬೇಕಾಗಿಲ್ಲ. ಅವರು ತಮ್ಮ ಪರೀಕ್ಷಾ ಮಾದರಿಗಳನ್ನು ಕ್ಲಿನಿಕ್‌ನಲ್ಲಿಯೇ ಸಲ್ಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಆಟೋಸ್ಟೈನರ್ ಮಾದರಿಯನ್ನು ವರ್ಣ ಮಾಡುವಾಗ, ವಿಷನ್ಎಕ್ಸ್ ಅದೇ ರೀತಿ ಸ್ಕ್ಯಾನ್ ಮಾಡುತ್ತದೆ ಮತ್ತು ಅದನ್ನು ಪರಿವರ್ತಿಸುತ್ತದೆ. ಜೀವಕೋಶಗಳು ಸಾಮಾನ್ಯವಾಗಿವೆಯೇ ಅಥವಾ ಕ್ಯಾನ್ಸರ್ ಅಂಶಗಳು ಸೇರಿಕೊಂಡಿವೆಯೆ ಎಂದು ನಿರ್ಧರಿಸಲು ಕ್ರಮಾವಳಿಗಳನ್ನು ಬಳಸಿಕೊಂಡು ಸೂಕ್ಷ್ಮ ಚಿತ್ರವನ್ನು ವಿಶ್ಲೇಷಿಸಲಾಗುತ್ತದೆ.” ಎಂದು ಆದರ್ಶ್ ವಿವರಿಸುತ್ತಾರೆ.


CervAistra Device

ಸೆರ್ವಾಸ್ಟ್ರಾ ಗರ್ಭಕಂಠದ ಕ್ಯಾನ್ಸರ್ ಅನ್ನು ಪತ್ತೆಹಚ್ಚುವ ಕಡಿಮೆ-ವೆಚ್ಚದ ಪಾಯಿಂಟ್-ಆಫ್-ಕೇರ್ ಸಾಧನವಾಗಿದೆ.


ಐಂದ್ರದ ಸಾಧನವನ್ನು ಬಳಸುವ ಮೂಲಕ, ಈ ಕಾರ್ಯಾಚರಣೆಯಲ್ಲಿ ಸಮಯ ಮತ್ತು ಲಾಜಿಸ್ಟಿಕ್ಸ್ ವೆಚ್ಚ ಎರಡನ್ನು ಕಡಿಮೆಗೊಳಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು, ಕೇವಲ ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಮಾರುಕಟ್ಟೆಯ ಅರ್ಧದಷ್ಟು ದರ ಮಾತ್ರ ಖರ್ಚಾಗುತ್ತದೆ.


ಐಂದ್ರಾ ಪ್ರಕಾರ, ಸಂಶೋಧನೆ ಮತ್ತು ತಂತ್ರಜ್ಞಾನದ ಪ್ರಮಾಣವನ್ನು ಪರಿಗಣಿಸಿ ತಂಡವು ಮೊದಲಿನಿಂದಲೂ ಸೆರ್ವಾಸ್ಟ್ರಾವನ್ನು ವಿನ್ಯಾಸಗೊಳಿಸಲು ಸುಮಾರು ಮೂರು ವರ್ಷಗಳ ಕಾಲಾವಧಿ ಬೇಕಾಯಿತು. ಅದರಲ್ಲಿ ಒಳಗೊಂಡಿರುವ ಸಂಶೋಧನೆ ಮತ್ತು ತಾಂತ್ರಿಕ ಪರಿಣಿತಿಯನ್ನು ಪರಿಗಣಿಸಿ, ಸಾಧನದ ಕೆಲವು ಘಟಕಗಳನ್ನು ಕೊಂಡು ಮತ್ತು ಇತರವುಗಳನ್ನು ಬಾಹ್ಯ ಉತ್ಪಾದಕರಿಂದ ಉತ್ಪಾದಿಸಿ ಜೋಡಿಸಲಾಯಿತು.


“ಈ ಸಾಧನಕ್ಕಾಗಿ ನಾವು ಈಗಾಗಲೇ ಐಎಸ್ಒ (ISO) ಪ್ರಮಾಣೀಕರಣವನ್ನು ಸ್ವೀಕರಿಸಿದ್ದೇವೆ ಮತ್ತು ಪ್ರಸ್ತುತ ಅದನ್ನು ಮೌಲ್ಯೀಕರಿಸುವಂತಹ ಅಂತಿಮ ಹಂತದಲ್ಲಿದ್ದೇವೆ. ಕರ್ನಾಟಕದಾದ್ಯಂತ ರೋಗಶಾಸ್ತ್ರ ಪ್ರಯೋಗಾಲಯಗಳು ಮತ್ತು ಆಂಕೊಲಾಜಿ ಕೇಂದ್ರಗಳು ಸೇರಿದಂತೆ ಸಂಭಾವ್ಯ ಗ್ರಾಹಕರೊಂದಿಗೆ ಐಂದ್ರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ಸಾಧನವನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಮತ್ತು ನಾವು 3,000 ರಿಂದ 5,000 ಯುನಿಟ್‌ಗಳನ್ನು ಮಾರಾಟ ಮಾಡುವ ನಿರೀಕ್ಷೆಯಲ್ಲಿದ್ದೇವೆ” ಎಂದು ಆದರ್ಶ್ ವಿವರಿಸುತ್ತಾರೆ.


ಜೀವ ಉಳಿಸುತ್ತಿರುವ ಐಂದ್ರ: 


ಕ್ಯಾನ್ಸರ್, ಇದುವರೆಗಿನ ಅತ್ಯಂತ ದೀರ್ಘಕಾಲದ ಮತ್ತು ಮಾರಕ ಕಾಯಿಲೆಗಳಲ್ಲಿ ಒಂದಾಗಿದ್ದು, ಇದು ವಿಶ್ವದಾದ್ಯಂತ ಸಾವಿನ ಸಂಖ್ಯೆಗೆ ಪ್ರಮುಖ ಕಾರಣವಾಗಿದೆ. ಆರಂಭಿಕ ರೋಗನಿರ್ಣಯದ ಯಶಸ್ವಿ ಚಿಕಿತ್ಸೆಯ ಮೂಲಕ ಬದುಕುಳಿಯುವ ಸಾಧ್ಯತೆಯು ಹೆಚ್ಚಿದೆ. ಅದಾಗ್ಯೂ, ಕಡಿಮೆ ಸಂಪನ್ಮೂಲ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ, ಸಾಧನಗಳ ಕೊರತೆ ಮತ್ತು ಅದಕ್ಕೆ ತಗಲುವ ವೆಚ್ಚದ ಕಾರಣದಿಂದ ಸ್ಕ್ರೀನಿಂಗ್‌ನಲ್ಲಿ ವಿಳಂಬವಾಗುತ್ತದೆ.


ಗರ್ಭಕಂಠದ ಕ್ಯಾನ್ಸರ್ ಅನ್ನು ತ್ವರಿತವಾಗಿ ಮತ್ತು ಅಗ್ಗವಾಗಿ ಕಂಡುಹಿಡಿಯಲು ಐಂದ್ರದ ಸಾಧನವು ಪಾಯಿಂಟ್-ಆಫ್-ಕೇರ್ ವ್ಯವಸ್ಥೆಯನ್ನು ನೀಡುತ್ತದೆ.


Cervical cancer logo

ಚಿತ್ರ ಕೃಪೆ: shutterstock

“ಸೆರ್ವಾಸ್ಟ್ರಾ ಸಾಧನವು ಬಳಸಲು ಬಹು ಸುಲಭವಾಗಿದೆ ಮತ್ತು ಸಮಯೋಚಿತವಾಗಿ ಫಲಿತಾಂಶಗಳನ್ನು ನೀಡುತ್ತದೆ. ಪ್ರಸ್ತುತ ನುರಿತ ಲ್ಯಾಬ್ ಸಹಾಯಕರು ಮತ್ತು ರೋಗಶಾಸ್ತ್ರಜ್ಞರು ವಿರಳವಾಗಿರುವ ಭಾರತದಲ್ಲಿ ಮಾನವನ ಹಸ್ತಕ್ಷೇಪವನ್ನು ಕಡಿಮೆ ಮಾಡುವುದು ಈ ಸಾಧನದ ದೊಡ್ಡ ಲಾಭವಾಗಿದೆ. ಈ ಸಾಧನವು ಜೈವಿಕ ಮಾದರಿಗಳನ್ನು ವಿಶ್ಲೇಷಿಸುತ್ತದೆ ಮತ್ತು ಎಲ್ಲಾ ಅಸಹಜತೆಗಳನ್ನು ತಕ್ಷಣವೇ ತೋರಿಸುವುದರಿಂದ ಯಾವುದೇ ತೊಂದರೆಯಿಲ್ಲದೆ ಆರಂಭಿಕ ರೋಗನಿರ್ಣಯವನ್ನು ಸಾಧ್ಯವಾಗಿಸುತ್ತದೆ. ಮೂರು ಅಥವಾ ನಾಲ್ಕನೇ ಹಂತದ ಗರ್ಭಕಂಠದ ಕ್ಯಾನ್ಸರ್‌ ಇರುವ ಹಲವಾರು ಮಹಿಳೆಯರು ನನ್ನ ಬಳಿಗೆ ಬರುವುದನ್ನು ನಾನು ನೋಡಿದ್ದೇನೆ. ಐಂದ್ರದ ಸಾಧನವನ್ನು ಬಳಸುವುದರಿಂದ, ಈ ರೀತಿಯ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಯಿದೆ" ಎಂದು ಆರ್‌ವಿ ಮೆಟ್ರೊ ಪೊಲಿಸ್ ಡಯಾಗ್ನೋಸ್ಟಿ ಲ್ಯಾಬ್‌ನ ಮುಖ್ಯಸ್ಥ ಡಾ. ವಾಣಿ ರವಿಕುಮಾರ್ ಹೇಳುತ್ತಾರೆ.


ಐಂದ್ರದ ಮೂಲಕ ಕರ್ನಾಟಕದ ಗ್ರಾಮೀಣ ಮತ್ತು ನಗರ ಪ್ರದೇಶಗಳಾದ ತುಮಕೂರು, ಚಿಕ್ಕಬಳ್ಳಾಪುರ, ಮತ್ತು ಬೆಂಗಳೂರುಗಳಲ್ಲಿ 700 ಕ್ಕೂ ಹೆಚ್ಚು ಮಹಿಳೆಯರನ್ನು ಗರ್ಭಕಂಠದ ಕ್ಯಾನ್ಸರ್ ಗಾಗಿ ಈಗಾಗಲೇ ಪರೀಕ್ಷಿಸಲಾಗಿದೆ.


ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್ ನಿಂದ ಪ್ರತಿವರ್ಷ ಸಾವಿರಾರು ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಸೆರ್ವಾಸ್ಟ್ರಾ ಕ್ಯಾನ್ಸರ್ ಕೋಶಗಳನ್ನು ನಿಖರ ಮತ್ತು ತ್ವರಿತ ರೀತಿಯಲ್ಲಿ ಗುರುತಿಸಬಲ್ಲದು. ಜೀವಗಳನ್ನು ಉಳಿಸುವಂತಹ ಸಾಮರ್ಥ್ಯವನ್ನು ಇದು ಹೊಂದಿದೆ” ಎಂದು ಆದರ್ಶ ತಿಳಿಸುತ್ತಾರೆ.


ಐಂದ್ರ ಪ್ರಾರಂಭವಾಗಿದ್ದು ಹೀಗೆ


ಬೆಂಗಳೂರಿನ ಭಾರತೀಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಹೆಚ್ಚಿನ ಅಧ್ಯಯನ ನಡೆಸುವ ಮೊದಲು ಆದರ್ಶ ರವರು ಒಂದು ದಶಕಕ್ಕೂ ಹೆಚ್ಚು ಕಾಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಶಿಕ್ಷಣದ ಅವಧಿಯಲ್ಲಿ, ಭಾರತ ಸರ್ಕಾರದ ಸಾರ್ವಜನಿಕ ನೀತಿ ಕೇಂದ್ರದೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು.


ಹಣಕಾಸಿನ ವಂಚನೆ ಪತ್ತೆ ಮತ್ತು ಅಪಾಯವನ್ನು ತಗ್ಗಿಸುವ ಕ್ಷೇತ್ರಗಳಲ್ಲಿ ಎಐ (AI)-ಆಧಾರಿತ ಮಾದರಿಗಳನ್ನು ಅಭಿವೃದ್ಧಿಪಡಿಸಲು ಅವರು ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು (ಪಿಪಿಪಿ) 2012 ರಲ್ಲಿ ಸೇರಿದರು. 


“ನಾನು ಕೆಲಸ ಪ್ರಾರಂಭಿಸಿದಾಗ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಮೆಷಿನ್ ಲರ್ನಿಂಗ್ (ಎಂಎಲ್) ನಂತಹ ಆಳವಾದ ತಂತ್ರಜ್ಞಾನದ ಅಪಾರ ಶಕ್ತಿ ಮತ್ತು ಸಾಮರ್ಥ್ಯವನ್ನು ಅರಿತುಕೊಂಡೆ. ಈ ಪರಿಕಲ್ಪನೆಗಳು ಜಾರಿಗೆ ಬಂದರೆ, ಭಾರತೀಯ ಆರೋಗ್ಯ ರಂಗವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಒಂದು ದಿನ, ನಾನು ಅಂಕಿ ಅಂಶಗಳನ್ನು ನೋಡುತ್ತಿದ್ದೆ ಮತ್ತು ಭಾರತದಲ್ಲಿ ವರದಿಯಾದ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿರಾಶಾದಾಯಕ ಸಂಖ್ಯೆಯನ್ನು ನೋಡಿದೆ. ಅದರಲ್ಲಿ ತ್ವರಿತ ವ್ಯತ್ಯಾಸವನ್ನುಂಟು ಮಾಡಲು ಏನಾದರೂ ಮಾಡಲು ನಿರ್ಧರಿಸಿದೆ” ಎಂದು ಆದರ್ಶ ನೆನಪಿಸಿಕೊಳ್ಳುತ್ತಾರೆ.



Team Aindra

ಐಂದ್ರದ ತಂಡ


2015 ರಲ್ಲಿ, ಐಂದ್ರವನ್ನು ಐಂದ್ರಾ ಸಿಸ್ಟಮ್ಸ್ ಮತ್ತು ಐಂದ್ರಾ ಲ್ಯಾಬ್ಸ್ ಎಂದು ಎರಡು ಭಾಗವಾಗಿ ವಿಭಾಗಿಸಲಾಯಿತು. ಐಂದ್ರ ಲ್ಯಾಬ್ಸ್ ಅಡಿಯಲ್ಲಿ ಆರ್ಥಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದನ್ನು ಮತ್ತು ಮುಂದುವರಿಸುವುದು ಮತ್ತು ಮೆಡಿಕಾಗೆ AI ಮಾದರಿಗಳು ಮತ್ತು ಸಾಧನಗಳನ್ನು ವಿನ್ಯಾಸಗೊಳಿಸಲು ಪ್ರಾರಂಭಿಸುವುದು ಆದರ್ಶ ಅವರ ಯೋಜನೆಯಾಗಿತ್ತು.

ಯುಎಸ್ ಸಹಯೋಗದೊಂದಿಗೆ ಭಾರತ ಸರ್ಕಾರವು ಸ್ಥಾಪಿಸಿದ ಅಂತರ್ಗತ ವೇದಿಕೆಯಾದ ಮಿಲೇನಿಯಮ್ ಅಲೈಯನ್ಸ್‌ನಿಂದ ಐಂದ್ರ ಒಂದು ಸುತ್ತಿನ ಅನುದಾನವನ್ನು ಪಡೆದಿದ್ದಾರೆ. ಹಾಗೆಯೇ ಲಾಭೋದ್ದೇಶವಿಲ್ಲದ ಸಾರ್ವಜನಿಕ ವಲಯದ ಉದ್ಯಮವಾದ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (ಬಿ ಐ ಆರ್ ಎ ಸಿ) ಅನುದಾನ ಪಡೆಯಲಾಗಿದೆ. ಭಾರತೀಯ ಮತ್ತು ಯುಎಸ್ ಸರ್ಕಾರಗಳು ಜಂಟಿಯಾಗಿ ರಚಿಸಿದ ಸ್ವಾಯತ್ತ ದ್ವಿಪಕ್ಷೀಯ ಸಂಘಟನೆಯಾದ ಇಂಡೋ-ಯುಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆ (ಐಯುಎಸ್ಎಸ್ ಟಿಎಫ್) ಸಹ ಅನುದಾನ ನೀಡಿವೆ.


ಈ ಸ್ಟಾರ್ಟ್ಅಪ್ ಕರ್ನಾಟಕ ಸರ್ಕಾರ ಪ್ರಾರಂಭಿಸಿದ ಐಡಿಯಾ 2 ಪಿಓಸಿ ಭಾಗವಾಗಿ ಹಣವನ್ನು ಗಳಿಸಿದೆ. 2015 ರಲ್ಲಿ, ಐಂದ್ರಾಗೆ ಸಾಮಾಜಿಕ ಉದ್ಯಮ ಇನ್ಕ್ಯುಬೇಟರ್ ವಿಲ್ಗ್ರೋ ಅವರು ಸರಿಯಾದ ಮಾರ್ಗದರ್ಶನ ನೀಡಿದರು.


ಇಂದು, ಐಂದ್ರಾ ಲ್ಯಾಬ್ಸ್ ಭಾರತದಲ್ಲಿ ಸ್ಥಾಪಿಸಲಾದ ಆರೋಗ್ಯ ರಕ್ಷಣೆಗಾಗಿ ಎಐ (AI) ಆಧಾರಿತ ಸಾಧನಗಳನ್ನು ಅಭಿವೃದ್ಧಿ ಪಡಿಸುವತ್ತ ಒಂಬತ್ತು ಪೂರ್ಣಾವಧಿ ಉದ್ಯೋಗಿಗಳನ್ನು ಇದು ಒಳಗೊಂಡಿದೆ.