ನೆಲಮಾಳಿಗೆಯಲ್ಲಿ ಬ್ಯುಸಿನೆಸ್ ಆರಂಭಿಸಿ ಈಗ 3 ಕೋಟಿ ಆದಾಯದತ್ತ ಕೊಂಡೊಯ್ದ ಬೆಂಗಳೂರಿನ ಈ ಯುವ ಸಂಸ್ಥಾಪಕರು

ಮಯೂರ್ ಟೆಕ್ವಾನಿ ಮತ್ತು ಲ್ಯಾನ್ವಿನ್ ಪೈಸ್ ಅವರು 2015 ರಲ್ಲಿ ಮನೆಯೊಂದರ ನೆಲಮಾಳಿಗೆಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಉತ್ಪಾದನಾ ಸಂಸ್ಥೆಯಾದ ಥಿಂಕ್ ಟ್ರೀ ಮೀಡಿಯಾ ಎಂಬ ವ್ಯವಹಾರವನ್ನು ಆರಂಭಿಸಿದರು, ಈಗ 50 ಕ್ಕೂ ಹೆಚ್ಚು ಕ್ಲೈಂಟ್‌ಗಳನ್ನು ಮತ್ತು 27 ಉದ್ಯೋಗಿಗಳನ್ನು ಆ ಕಂಪನಿ ಹೊಂದಿದೆ.

ನೆಲಮಾಳಿಗೆಯಲ್ಲಿ ಬ್ಯುಸಿನೆಸ್ ಆರಂಭಿಸಿ ಈಗ 3 ಕೋಟಿ ಆದಾಯದತ್ತ ಕೊಂಡೊಯ್ದ ಬೆಂಗಳೂರಿನ ಈ ಯುವ ಸಂಸ್ಥಾಪಕರು

Tuesday October 22, 2019,

5 min Read

2015 ರಲ್ಲಿ ಇಬ್ಬರು ಸ್ನೇಹಿತರು ಬೆಂಗಳೂರಿನ ಮನೆಯೊಂದರಲ್ಲಿನ ಸಣ್ಣ ನೆಲಮಾಳಿಗೆಯಲ್ಲಿ ವ್ಯವಹಾರವನ್ನು ಆರಂಭಿಸಿದರು. ಆ ನೆಲಮಾಳಿಗೆಯಲ್ಲಿ ಕೆಲವು ಲ್ಯಾಪ್‌ಟಾಪ್‌ಗಳು, ಕುರ್ಚಿಗಳು, ಟೇಬಲ್ ಮತ್ತು ಒಂದು ಸೊಳ್ಳೆ ಬ್ಯಾಟ್ ಮಾತ್ರ ಇದ್ದವು.


"ಲ್ಯಾನ್ವಿನ್ ಪೈಸ್ ಮತ್ತು ನಾನು ಕಾಲೇಜು ದಿನಗಳಲ್ಲಿ ಎಫ್ & ಬಿ ಕ್ಲೈಂಟ್‌ಗಳಿಗೆ ಕಾರ್ಯಕ್ರಮವನ್ನು ಸಂಘಟಿಸುವ ಸಮಯದಲ್ಲಿ ತುಂಬಾ ಉತ್ಸಾಹದಿಂದ ಪ್ರಾರಂಭಿಸಿದೆವು. ನಂತರ ಎಫ್ & ಬಿ ಉದ್ಯಮದೊಳಗೆ ನಮ್ಮ ವಿಶ್ವಾಸಾರ್ಹ ಸಂಪರ್ಕಗಳ ಜಾಲವನ್ನು ವೃದ್ಧಿಸಿಕೊಳ್ಳಲು ಮತ್ತು ವ್ಯವಹಾರವನ್ನು ಪ್ರಾರಂಭಿಸಲು ನಾವು ನಿರ್ಧರಿಸಿದೆವು. ನನ್ನ ಮನೆಯ ನೆಲಮಾಳಿಗೆಯೆ ನಮ್ಮ ಮೊದಲ ಕಚೇರಿಯಾಗಿತ್ತು” ಎಂದು ಮಯೂರ್ ತೆಕ್ವಾನಿ ಹೇಳುತ್ತಾರೆ.


ಮಯೂರ್ ಮತ್ತು ಅವರ ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನ ಸ್ನೇಹಿತ ಲ್ಯಾನ್ವಿನ್ ಮೊದಲು ಕ್ರಮವಾಗಿ ಕುಟುಂಬದ ಜವಳಿ ವ್ಯವಹಾರ ಮತ್ತು ಅಮೆಜಾನ್ ನಲ್ಲಿ ಪೂರ್ಣ ಸಮಯದ ಕೆಲಸ ಮಾಡಿದರು. ನಂತರ ಅವರು ಈ ವ್ಯವಹಾರವನ್ನು ಪ್ರಾರಂಭಿಸುವ ಸಲುವಾಗಿ ತಮ್ಮ ತಮ್ಮ ಕೆಲಸಗಳನ್ನು ಬಿಡುವ ನಿರ್ಧಾರವನ್ನು ತೆಗೆದುಕೊಂಡರು.


ಮಯೂರ್ ಅವರು 22 ವರ್ಷದವರಾಗಿದ್ದಾಗಲೇ ಥಿಂಕ್ ಟ್ರೀ ಮೀಡಿಯಾದ ಸಹ-ಸಂಸ್ಥಾಪಕರಾದರು. ಆದರೆ ಲ್ಯಾನ್ವಿನ್ ಮಯೂರ್‌ ಅವರಿಗಿಂತ ಮೊದಲು ಬೆಂಗಳೂರು ರೆಸ್ಟೋರೆಂಟ್‌ಗಳಿಗೆ ಮತ್ತು ಪಬ್‌ಗಳಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.


ಹಾಗೆಯೇ, ಮಯೂರ್ ಅವರು ಲ್ಯಾನ್ವಿನ್‌ರ ಕಾರ್ಯಕ್ರಮಗಳನ್ನು ಹೆಚ್ಚಿನಸಲ ಆಯೋಜಿಸಿದಾಗ, ಇಬ್ಬರು ಪಬ್ ಕ್ರಾಲ್, ಸ್ಕ್ರೀನಿಂಗ್, ಬ್ರಂಚ್ ಇತ್ಯಾದಿಗಳಲ್ಲಿ ಕಾರ್ಯಕ್ರಮಗಳನ್ನು ಒಟ್ಟಿಗೆ ಆಯೋಜಿಸುವ ಕುರಿತು ಚರ್ಚಿಸಿದರು.


ಥಿಂಕ್ ಟ್ರೀ ಮೀಡಿಯಾ ಸಹ-ಸಂಸ್ಥಾಪಕರಾದ ಮಯೂರ್ ಟೆಕ್ವಾನಿ (ಎಡ), ಲ್ಯಾನ್ವಿನ್ ಪೈಸ್ (ಮಧ್ಯ) ಮತ್ತು ಹಗ್ ಲೊರೆನ್ (ಬಲ)

“ನಂತರ, ನಮ್ಮ ಸ್ನೇಹಿತರೊಬ್ಬರು ನಮ್ಮನ್ನು ಸಂಪರ್ಕಿಸಿ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ರೆಸ್ಟೋರೆಂಟ್ ಮತ್ತು ಪಬ್ ಅನ್ನು ಪ್ರಚಾರ ಮಾಡಲು ಸಹಾಯ ಬೇಕು ಎಂದು ಕೇಳಿದರು. ನಾವು ಇದನ್ನು ತಕ್ಷಣವೇ ಒಂದು ವ್ಯಾಪಾರದ ಅವಕಾಶವೆಂದು ಪರಿಗಣಿಸಿದೆವು ಮತ್ತು ಇಂತಹ ವ್ಯವಹಾರ ಮಾಡಲು ಇನ್ನೂ ಅನೇಕ ಎಫ್ & ಬಿ ಬ್ರಾಂಡ್‌ಗಳು ಇವೆ ಎಂದು ತಿಳಿದುಕೊಂಡೆವು” ಎಂದು ಮಯೂರ್ ಹೇಳುತ್ತಾರೆ.


ಲ್ಯಾನ್ವಿನ್ ಅವರ ವ್ಯಾಪಾರ ಅಭಿವೃದ್ಧಿಯಲ್ಲಿ ಗಮನಹರಿಸಿದರೆ ಮಯೂರ್ ಮಾರ್ಕೆಟಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಈ ಯುವ ಪದವೀಧರರು ತಾವು ಒಂದು ಗುಂಪಾಗಿ ಡಿಜಿಟಲ್ ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಮತ್ತು ಉತ್ಪಾದನೆಯಲ್ಲಿ ಪರಿಣತಿ ಹೊಂದಿರುವ ಮಾಧ್ಯಮ ಸಂಸ್ಥೆಯನ್ನು ಪ್ರಾರಂಭಿಸಬೇಕು ಎಂದು ಭಾವಿಸಿದ್ದರು.


ದೊಡ್ಡ ರೆಸ್ಟೋರೆಂಟ್ ಮತ್ತು ಪಬ್ ಗಳಿಗೆ ಪೂರೈಸಲು ಹಲವಾರು ವರ್ಷಗಳಿಂದ ಇರುವ ಸಾಂಪ್ರದಾಯಿಕ ಏಜೆನ್ಸಿಗಳು ಇದ್ದರೂ, ಸಣ್ಣ ಮತ್ತು ಮಧ್ಯಮ ಪ್ರಮಾಣದ ರೆಸ್ಟೋರೆಂಟ್ ವ್ಯವಹಾರಗಳಿಗೂ ಇದು ಅಗತ್ಯವೆಂದು ನಾವು ಕಂಡುಕೊಂಡಿದ್ದೇವೆ” ಎಂದು ಮಯೂರ್ ಹೇಳುತ್ತಾರೆ.


ಸ್ವತಂತ್ರ ವಿನ್ಯಾಸಕ ಹಗ್ ಲೊರೆನ್ ಅವರೊಂದಿಗೆ ಈ ಜೋಡಿ 2015 ರಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಪ್ರೊಡಕ್ಷನ್ ವ್ಯವಹಾರ ಥಿಂಕ್ ಟ್ರೀ ಮೀಡಿಯಾವನ್ನು ಪ್ರಾರಂಭಿಸಿದರು ಮತ್ತು ಕಾರ್ಯಕ್ರಮಗಳು, ಮಾರ್ಕೆಟಿಂಗ್ ಅಭಿಯಾನಗಳು, ಘಟನೆಗಳು, ಕಲಾವಿದರ ನಿರ್ವಹಣೆ ಮತ್ತು ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಾರಂಭಿಸಿದರು.

ಪ್ರಾರಂಭದ ದಿನಗಳು

ದೊಡ್ಡ ವ್ಯವಹಾರಗಳ ಹೊರತಾಗಿಯೂ, ಮಯೂರ್ ಮತ್ತು ಲ್ಯಾನ್ವಿನ್ ಸಣ್ಣದಾಗಿ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು. ಈ ಕಂಪನಿಯನ್ನು ಪ್ರಾರಂಭಿಸಲು ಅವರಿಗೆ ದೊಡ್ಡ ಹೂಡಿಕೆಯ ಅಗತ್ಯವಿರಲಿಲ್ಲ.


ತಾಂತ್ರಿಕವಾಗಿ, ನಾವು ಕಂಪನಿಯನ್ನು ಪ್ರಾರಂಭಿಸಿದಾಗ ನಮ್ಮ ಬಳಿ ಹೂಡಿಕೆ ಇರಲಿಲ್ಲ. ನಾವು ಮನೆಯ ನೆಲಮಾಳಿಗೆಯಿಂದ ಮತ್ತು ನಂತರ ಅಪಾರ್ಟ್ಮೆಂಟ್ನಿಂದ ಕೆಲಸ ಮಾಡಿದ್ದೇವೆ. ನಮಗೆ ಆಗ ಹಣ ಬೇಕಾಗಿದ್ದ ಕಾರಣವೆಂದರೆ ನಮ್ಮ ಮೊದಲ ನೌಕರರಿಗೆ ಸಂಬಳವನ್ನು ನೀಡುವುದಕ್ಕಾಗಿತ್ತು” ಎಂದು ಲ್ಯಾನ್ವಿನ್ ಹೇಳುತ್ತಾರೆ.


ಬೆಂಗಳೂರಿನ ಬೆನ್ಸನ್ ಟೌನ್‌ನಲ್ಲಿರುವ ಥಿಂಕ್ ಟ್ರೀ ಅವರ ಈಗಿನ ಕಚೇರಿಯ ಒಳಗೆ

ಸಹ-ಸಂಸ್ಥಾಪಕರು ತಾವು ಮಾಡಿದ ಕೆಲಸಕ್ಕೆ ಸಂಬಳವನ್ನು ತೆಗೆದುಕೊಳ್ಳಲಿಲ್ಲ ಎಂದು ಅವರು ಹೇಳುತ್ತಾರೆ.


ಆದಾಗ್ಯೂ, ಇದೆಲ್ಲವೂ ನಡೆದದ್ದು ಈ ವ್ಯವಹಾರಕ್ಕೆ ಅಧಿಕೃತವಾಗಿ ‘ಥಿಂಕ್ ಟ್ರೀ’ ಎಂದು ನಾಮಕರಣ ಮಾಡುವ ಮೊದಲು.


ಆ ಸಮಯದಲ್ಲಿ, ಮಯೂರ್ ಮತ್ತು ಲ್ಯಾನ್ವಿನ್ ವ್ಯವಹಾರ ಅಭಿವೃದ್ಧಿ ಮತ್ತು ಮಾರ್ಕೆಟಿಂಗ್ ವಿಷಯದಲ್ಲಿ ಅದ್ಭುತ ಪರಿಣಿತಿ ಹೊಂದಿದ್ದರು, ಆದರೆ ಅವರಿಗೆ ವಿನ್ಯಾಸಕ್ಕೆ ಸಂಬಂಧಿಸಿದಂತೆ ಕೊರತೆಯಿತ್ತು.


ಅವರು ಗೋವಾ ಪ್ರವಾಸದ ಸಮಯದಲ್ಲಿ ಮಯೂರ್ ಮತ್ತು ಲ್ಯಾನ್ವಿನ್‌ಗಿಂತ ನಾಲ್ಕು ವರ್ಷ ದೊಡ್ಡವರಾದ ಹಗ್ ಅವರನ್ನು ಭೇಟಿಯಾದರು. ಥಿಂಕ್ ಟ್ರೀಗೆ ಸೇರಿಕೊಂಡರೆ ಮತ್ತು ವಿನ್ಯಾಸಕ್ಕೆ ಸಂಬಂಧಿಸಿದಂತೆ ಕೆಲಸಗಳನ್ನು ನೋಡಿಕೊಂಡರೆ ಐದು ಪಟ್ಟು ಸಂಬಳವನ್ನು ಗಳಿಸಬಹುದು ಎಂದು ಲ್ಯಾನ್ವಿನ್ ಹಗ್‌ಗೆ ತಿಳಿಸಿದರು.


ಶೀಘ್ರದಲ್ಲೇ, ಹಗ್ ವ್ಯವಹಾರಕ್ಕೆ ಸೃಜನಾತ್ಮಕ ನಿರ್ದೇಶಕರಾಗಿ ಸೇರಿಕೊಂಡರು. ನಂತರ ಈ ಜೋಡಿ ಮೂವರಾಗಿ ಬದಲಾಯಿತು.


ನಂತರ ಸಂಸ್ಥಾಪಕರು ಹೆಚ್ಚಿನ ಸ್ಥಳಾವಕಾಶದ ಅನಿವಾರ್ಯತೆ ಎದುರಾದಾಗ ನೆಲಮಾಳಿಗೆಯಿಂದ ನಮ್ಮ ಕಂಪನಿಯನ್ನು ಫ್ರೇಜರ್ ಟೌನ್ನಲ್ಲಿರುವ ಅಪಾರ್ಟ್ಮೆಂಟ್ಗೆ ಸ್ಥಳಾಂತರಿಸಿದರು.


ಅಪಾರ್ಟ್ಮೆಂಟ್ ಹೆಸರು ರೈನ್ಟ್ರೀ ಎಂದಾಗಿತ್ತು. ಕಂಪನಿಗೆ ಹೆಸರಿಡುವ ಸಲುವಾಗಿ ಯೋಚಿಸುತ್ತಿರುವಾಗ, ರೈನ್‌ಟ್ರೀ ಎಂಬ ಹೆಸರು ಥಿಂಕ್ ಟ್ರೀ ಎಂಬ ಹೆಸರು ಬರಲು ನಮಗೆ ಪ್ರೇರಣೆ ನೀಡಿತು” ಎಂದು ಮಯೂರ್ ಹೇಳುತ್ತಾರೆ.


"ನಾವು ಥಿಂಕ್ ಟ್ರೀ ಅನ್ನು ಪ್ರಾರಂಭಿಸಿದಾಗ, ನಮ್ಮ ಕಾಲೇಜು ದಿನಗಳಲ್ಲಿನ ಗ್ರಾಹಕರನ್ನು ತಲುಪಲು ಪ್ರಾರಂಭಿಸಿದೆವು. ನಾವು ಮೊದಲ ವರ್ಷದಲ್ಲಿ 12 ಗ್ರಾಹಕರನ್ನು ಪಡೆದೆವು” ಎಂದು ಲ್ಯಾನ್ವಿನ್ ಹೇಳುತ್ತಾರೆ.

ವ್ಯವಹಾರವನ್ನು ವೃದ್ಧಿಸುವುದು ಮತ್ತು ಜಾಗತಿಕ ದೃಷ್ಟಿಕೋನ

ಥಿಂಕ್ ಟ್ರೀಗೆ ಸಿಇಒ ಇಲ್ಲ, ಮತ್ತು ಮೂವರ ಚುಕ್ಕಾಣಿಯಲ್ಲಿ, ವ್ಯವಹಾರವು 27 ಜನರ ತಂಡವಾಗಿ ಬೆಳೆಯಿತು ಮತ್ತು ಬೆನ್ಸನ್ ಟೌನ್ನಲ್ಲಿ 5,000 ಚದರ ಅಡಿ ಕಚೇರಿಗೆ ಸ್ಥಳಾಂತರಗೊಂಡಿತು.


"ನಾವು ಭಾರತದಾದ್ಯಂತ 50 ಕ್ಲೈಂಟ್‌ಗಳನ್ನು ಹೊಂದಿದ್ದೇವೆ. 2015 ರಿಂದ ನಾವು ಒಟ್ಟಾರೆಯಾಗಿ 10 ಕೋಟಿ ರೂ. ಆದಾಯಗಳಿಸಿದ್ದೇವೆ. ಆದರೆ 2019-20ರಲ್ಲಿ ನಾವು 3 ಕೋಟಿ ರೂ. ಆದಾಯವನ್ನು ಗಳಿಸುವ ಹಾದಿಯಲ್ಲಿದ್ದೇವೆ” ಎಂದು ಮಯೂರ್ ಹೇಳುತ್ತಾರೆ.


ಎಫ್ & ಬಿ ಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಉತ್ಪಾದನಾ ಸೇವೆಗಳಿಗೆ ಮಾತ್ರ ಥಿಂಕ್ ಟ್ರೀ ತನ್ನನ್ನು ಸೀಮಿತಗೊಳಿಸಿಕೊಂಡಿಲ್ಲ, ಇದು ಇತರ ಕ್ಷೇತ್ರಗಳಲ್ಲಿ ಕೂಡ ಗ್ರಾಹಕರನ್ನು ಹೊಂದಿದೆ ಎಂದು ಲ್ಯಾನ್ವಿನ್ ಹೇಳಿಕೊಂಡಿದ್ದಾರೆ.


ನಮ್ಮ ಪ್ರಮುಖ ಸಾಮರ್ಥ್ಯ ಎಫ್ & ಬಿ ಆಗಿ ಉಳಿದಿದೆ, ಮತ್ತು ನಮ್ಮ ಗ್ರಾಹಕರಲ್ಲಿ 60 ಪ್ರತಿಶತ ರೆಸ್ಟೋರೆಂಟ್‌ಗಳು, ಪಬ್‌ಗಳು ಅಥವಾ ಬ್ರೂವರೀಸ್‌ಗಳಾಗಿವೆ. ಆದರೆ ಉಳಿದ 40 ಪ್ರತಿಶತ ಆತಿಥ್ಯ, ಮನರಂಜನೆ ಮತ್ತು ಕ್ರೀಡಾ ಗ್ರಾಹಕರು” ಎಂದು ಅವರು ಹೇಳುತ್ತಾರೆ.


ಥಿಂಕ್ ಟ್ರೀ ಮೀಡಿಯಾ ತಂಡ

ಈ ವ್ಯವಹಾರವು ಆಸ್ಟ್ರೇಲಿಯಾದಲ್ಲಿ ಕೂಡ ಗ್ರಾಹಕರನ್ನು ಹೊಂದಿದೆ. ನವೆಂಬರ್ 2018 ರಲ್ಲಿ, ಥಿಂಕ್ ಟ್ರೀ ದೇಶದಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದೆ, ಬ್ರಿಸ್ಬೇನ್‌ನಲ್ಲಿ ಒಂದು ಕಚೇರಿಯನ್ನು ಸಹ ಪ್ರಾರಂಭಿಸಿತು ಮತ್ತು ಸ್ಥಳೀಯ ಪಾಲುದಾರರ ಸಹಾಯದ ಮೂಲಕ ದೇಶದಿಂದ ಹೊರಗುತ್ತಿಗೆಗಳನ್ನು ನೀಡಲು ಪ್ರಾರಂಭಿಸಿತು.


ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಕಂಪನಿಯು ಒಳ್ಳೆ ಅವಕಾಶವನ್ನು ಹೊಂದಿದೆ ಎಂದು ಸಂಸ್ಥಾಪಕರು ನಂಬಿದ್ದಾರೆ. ಅವರು ಪ್ರಸ್ತುತ ಆ ಮಾರುಕಟ್ಟೆಯಲ್ಲಿ ಹೊಸ ವಿಷಯವನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಮತ್ತು ಆ ಗ್ರಾಹಕರಿಗೆ ಸೇವೆ ಸಲ್ಲಿಸಲು ಹೆಚ್ಚಿನ ಉದ್ಯೋಗಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ.


ಲ್ಯಾನ್ವಿನ್ ಹೇಳುತ್ತಾರೆ, ಥಿಂಕ್ ಟ್ರೀ ಜಾಗತಿಕ ಮಟ್ಟಕ್ಕೆ ಹೋಗಲು ಮತ್ತು ವಿವಿಧ ದೇಶಗಳಲ್ಲಿನ ಮಾರುಕಟ್ಟೆಗಳನ್ನು ಬಯಸುತ್ತದೆ. ಆದರೆ ಕಂಪನಿಯು ಹೆಚ್ಚಿಸಲು ಹೊರಗಡೆ ಹಣವನ್ನು ಹುಡುಕುತ್ತಿಲ್ಲ. ಥಿಂಕ್ ಟ್ರೀ ಈ ಮೊದಲು ಸ್ನೇಹಿತರು ಮತ್ತು ಕುಟುಂಬದಿಂದ ಸ್ವಲ್ಪ ಹಣವನ್ನು ಸಂಗ್ರಹಿಸಿದೆ, ಆದರೆ ಸಂಸ್ಥಾಪಕರು ತಮ್ಮ ಪಾಲನ್ನು ದುರ್ಬಲಗೊಳಿಸಲು ಬಯಸುವುದಿಲ್ಲ.

ಸರಿಯಾದ ಸಮತೋಲನವನ್ನು ಕಂಡುಹಿಡಿಯುವುದು

“ಆರಂಭದಲ್ಲಿ, ಸಂಸ್ಥಾಪಕರಾದ ನಮ್ಮ ನಡುವೆ ಆದ್ಯತೆಗಳು ಮತ್ತು ಕಾರ್ಯ ವೈಖರಿಗಳ ಕುರಿತು ಸಾಕಷ್ಟು ವಾದಗಳು ನಡೆದಿವೆ. ಕೆಲಸದ ಹೊರೆಯನ್ನು ಸಮತೋಲನಗೊಳಿಸಲು ನಾವು ಹೆಚ್ಚಿನ ಜನರನ್ನು ನೇಮಿಸಿಕೊಳ್ಳಬೇಕಾಗಿತ್ತು. ಇದಲ್ಲದೆ, ನಮಗೆ ಎಲ್ಲ ಉದ್ಯೋಗಿಗಳನ್ನು ನಿರ್ವಹಿಸುವುದು ಕಠಿಣವಾಗಿತ್ತು,” ಎಂದು ಮಯೂರ್ ಅವರು ಮೊದಲಿನಿಂದಲೂ ಎದುರಿಸಿದ ಸವಾಲುಗಳ ಬಗ್ಗೆ ಹೇಳುತ್ತಾರೆ.


ಆದರೆ ಅವರು ಇನ್ನೂ ಸಂಕಷ್ಟದ ಪರಿಸ್ಥಿಯಲ್ಲೇ ಇದ್ದಾರೆ. ಗ್ರಾಹಕರಿಂದ ಸರಿಯಾದ ಸಮಯದಲ್ಲಿ ಪಾವತಿಗಳನ್ನು ಪಡೆಯುವುದು ಒಂದು ದೊಡ್ಡ ಕೆಲಸವಾಗಿದೆ. ಲ್ಯಾನ್ವಿನ್ ಪ್ರಕಾರ, ಕಂಪನಿಯ ಆದಾಯದ 20 ರಿಂದ 30 ಪ್ರತಿಶತ ಇನ್ನೂ ಮಾರುಕಟ್ಟೆಯಲ್ಲಿ ಸಿಲುಕಿಕೊಂಡಿದೆ. "ಕಳೆದ ಮೂರು ತಿಂಗಳುಗಳಲ್ಲಿ ನಮ್ಮ ಪಾವತಿಗಳನ್ನು ಸಮಯಕ್ಕೆ ಸರಿಯಾಗಿ ಪಡೆಯುವಲ್ಲಿ ಬಹಳ ಕಷ್ಟವಾಗಿದೆ. ಆದರೆ ನಮ್ಮ ಉದ್ಯೋಗಿಗಳಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡಿದ್ದೇವೆ ನಾವು ಖಚಿತಪಡಿಸುತ್ತೇವೆ,” ಎಂದು ಅವರು ಹೇಳುತ್ತಾರೆ.


ಬೆಂಗಳೂರಿನ ಲಾಫಿಂಗ್ ಲಾಮಾ ಗ್ಯಾಸ್ಟ್ರೊಬಬ್‌ನಲ್ಲಿ ಲ್ಯಾನ್ವಿನ್ ಮತ್ತು ಮಯೂರ್

ಮಯೂರ್ ಮತ್ತು ಲ್ಯಾನ್ವಿನ್ ತಮ್ಮ ಇನ್ನೆರಡು ಉದ್ಯಮಗಳಾದ ಮಂಗಳೂರಿನ ತ್ವರಿತ ಸೇವಾ ರೆಸ್ಟೋರೆಂಟ್ ಫೊನ್ಟೋ ಕಿಚನ್ ಮತ್ತು ಬೆಂಗಳೂರಿನ ಲಾಫಿಂಗ್ ಲಾಮಾ ಗ್ಯಾಸ್ಟ್ರೊಬಬ್ ನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ.


ಹಾಗೆಯೇ, ಥಿಂಕ್ ಟ್ರೀಗೆ ಹೋಲುವ ಇತರ ಕಂಪನಿಗಳು ಸಹ ಇವೆ, ಆದರೆ ಮಯೂರ್ ಮತ್ತು ಲ್ಯಾನ್ವಿನ್ ಉತ್ತಮ ಗುಣಮಟ್ಟದ ಕಾರ್ಯಕ್ಷಮತೆ ಮತ್ತು ಫಲಿತಾಂಶಗಳನ್ನು ನೀಡುವಲ್ಲಿ ತಮ್ಮ ಕಂಪನಿ ಬೇರೆ ಕಂಪೆನಿಗಳಿಕ್ಕಿಂತ ವಿಭಿನ್ನ ಎಂಬ ವಿಶ್ವಾಸದಲ್ಲಿದ್ದಾರೆ.


ನಾವು ಎಫ್ & ಬಿ ಸಂಬಂಧಿಸಿದ ವ್ಯವಹಾರಗಳನ್ನು ಮಾತ್ರ ಮಾಡುತ್ತೇವೆ. ಒಂದೇ ಮಳಿಗೆಗಳನ್ನು ಹೊಂದಿರುವ ರೆಸ್ಟೋರೆಂಟ್‌ಗಳೊಂದಿಗೆ ನಾವು ಕೆಲಸ ಮಾಡುವುದಿಲ್ಲ. ಇದಲ್ಲದೆ, ನಮಗಿಂತ ಉತ್ತಮವಾದ ಜನರನ್ನು ನಾವು ಕೆಲಸಕ್ಕೆ ನೇಮಿಸಿಕೊಳ್ಳುತ್ತೇವೆ, ಮತ್ತು ಒಳ್ಳೆಯ ಫಲಿತಾಂಶಗಳನ್ನು ನೀಡುವ ಮೂಲಕ, ನಮ್ಮ ಗ್ರಾಹಕರಿಂದ ನಾವು ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತೇವೆ ಮತ್ತು ಅವರು ನಮ್ಮ ಬಗ್ಗೆ ಇತರ ಎಫ್ & ಬಿ ಕಂಪೆನಿಗಳೊಂದಿಗೆ ಮಾತನಾಡುತ್ತಾರೆ, ಇದರಿಂದ ನಮಗೆ ಹೊಸ ಅವಕಾಶಗಳು ಸಿಗುತ್ತವೆ” ಎಂದು ಲ್ಯಾನ್ವಿನ್ ವಿವರಿಸುತ್ತಾರೆ.