ಒಂದು ದಿನದ ಮಟ್ಟಿಗೆ ಅನಂತಪುರದ ಜಿಲ್ಲಾಧಿಕಾರಿಯಾದ 12 ನೇ ತರಗತಿ ವಿದ್ಯಾರ್ಥಿನಿ

ಅನಂತಪುರದಲ್ಲಿರುವ ಕಸ್ತುರಬಾ ಗಾಂಧಿ ಶಾಲೆಯಲ್ಲಿ 12 ನೇ ತರಗತಿ ಓದುತ್ತಿರುವ ಎಮ್‌ ಶ್ರವಣಿ ಜಿಲ್ಲಾ ಆಡಳಿತ ಮಂಡಳಿ ಆಯೋಜಿಸಿದ್ದ ಬಾಲಿಕೆ ಭವಿಷ್ಯತ್ತು ಎಂಬ ಯೋಜನೆಯಡಿ ಒಂದು ದಿನದ ಮಟ್ಟಿಗೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಕಾರ್ಯನಿರ್ವಹಿಸಿದರು.

ಒಂದು ದಿನದ ಮಟ್ಟಿಗೆ ಅನಂತಪುರದ ಜಿಲ್ಲಾಧಿಕಾರಿಯಾದ 12 ನೇ ತರಗತಿ ವಿದ್ಯಾರ್ಥಿನಿ

Tuesday October 13, 2020,

1 min Read

ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಅಕ್ಟೋಬರ್‌ 11 2020 ರಂದು ಆಚರಿಸಲಾಯಿತು ಮತ್ತು ಇದು ಎಮ್‌ ಶ್ರವಣಿಯ ಬದುಕಿನಲ್ಲೆ ಮರೆಯಲಾಗದ ವಿಶಿಷ್ಟವಾದ ದಿನವಾಗಿ ಉಳಿದುಬಿಟ್ಟಿದೆ.


ಆಂಧ್ರಪ್ರದೇಶದ ಅನಂತಪುರದಲ್ಲಿರುವ ಕಸ್ತುರಬಾ ಗಾಂಧಿ ಶಾಲೆಯಲ್ಲಿ 12 ನೇ ತರಗತಿ ಓದುತ್ತಿರುವ ಎಮ್‌ ಶ್ರವಣಿ ಜಿಲ್ಲಾ ಆಡಳಿತ ಮಂಡಳಿ ಆಯೋಜಿಸಿದ್ದ ಬಾಲಿಕೆ ಭವಿಷ್ಯತ್ತು ಎಂಬ ಯೋಜನೆಯಡಿ ಒಂದು ದಿನದ ಮಟ್ಟಿಗೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಕಾರ್ಯನಿರ್ವಹಿಸಿದರು. ಈ ವಿಶೇಷವಾದ ಯೋಜನೆಯನ್ನು ಜಿಲ್ಲಾಧಿಕಾರಿ ಗಂಧಮ ಚಂದ್ರುಡು ಆಯೋಜಿಸಿದ್ದಾರೆ.

ಅನಂತಪುರದ ಜಿಲ್ಲಾಧಿಕಾರಿಯಾಗಿ ಎಮ್‌ ಶ್ರವಣಿ ಕಾರ್ಯನಿರ್ವಹಿಸುತ್ತಿರುವುದು. (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)


ಶ್ರವಣಿಗೆ ಆ ದಿನ ಎರಡು ಮುಖ್ಯ ಕಡತಗಳನ್ನು ಪರಿಶೀಲಿಸುವ ಅವಕಾಶ ಒದಗಿದೆ- ಒಂದು ಲೈಂಗಿನ ದೌರ್ಜನ್ಯಕ್ಕೊಳಗಾದವರಿಗೆ 25,000 ರೂ. ಪರಿಹಾರ ಧನ ನೀಡುವುದು, ಇನ್ನೊಂದು ರಾತ್ರಿ 8 ರಿಂದ ಬೆಳಿಗ್ಗೆ 8 ರ ವರೆಗೆ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ಯಾವುದೇ ಕೆಲಸ ನೀಡದಿರುವುದು ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌.


ಲಾಟರಿ ಮೂಲಕ ಶ್ರವಣಿಯವರನ್ನು ಜಿಲ್ಲಾಧಿಕಾರಿಯಾಗಲು ಆಯ್ಕೆ ಮಾಡಲಾಗಿತ್ತು. ಅವರ ತಂದೆ ರೈತರಾಗಿದ್ದಾರೆ ಮತ್ತು ತಾಯಿ ದಿನಗೂಲಿ ಕಾರ್ಮಿಕರಾಗಿ ಕೆಲಸಮಾಡುತ್ತಾರೆ.


ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವಾಗ ಶ್ರವಣಿ ಅನಂತಪುರ ಟೌನ್‌ ಫಸ್ಟ್‌ ರೋಡ್‌ಗೆ ಭೇಟಿ ನೀಡಿ ಅಲ್ಲಿನ ಸತ್ಯಾಸತ್ಯತೆಗಳನ್ನು ಅರಿತರು. ನಂತರ ಮಂತ್ರಾಲಯ ರಾಘವೇಂದ್ರ ಸ್ವಾಮಿ ದೇವಸ್ಥಾನದ ಸಮೀಪದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು(ನೀರಿನ ಸಮಸ್ಯೆ) ಅರಿತು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿದರು.


ಇದರ ಜತೆಗೆ ಶ್ರವಣಿ ಮುನ್ಸಿಪಲ್‌ ಹೆಣ್ಣು ಮಕ್ಕಳ ಪ್ರೌಢ ಶಾಲೆಗೆ ನೀಡಿ ಜಗನನ್ನ ವಿದ್ಯಾ ಮತ್ತು ನಾದು ನೇನು ಉಪಕ್ರಮಗಳ ಬಗ್ಗೆ ವಿವಿರಗಳನ್ನು ಕಲೆಹಾಕಿದರು.


ಗಂಧಮ ಚಂದ್ರಡು ನ್ಯೂಸ್‌ 18 ಜತೆಗೆ ಮಾತನಾಡುತ್ತಾ, “ವಿದ್ಯಾರ್ಥಿಗಳು ಅಧಿಕಾರಿಗಳ ಕರ್ತವ್ಯ, ಜವಾಬ್ದಾರಿಗಳನ್ನು ಅನುಭವಿಸಿ ತಮ್ಮ ಜೀವನದಲ್ಲಿ ಮುಂದೆನುಮಾಡಬೇಕೆಂದು ಆಯ್ಕೆ ಮಾಡಿಕೊಳ್ಳುವಂತೆ ನೆರವಾಗಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಮಹಿಳೆಯರು ಅಧಿಕಾರಕ್ಕೆ ಬಂದರೆ ಎಲ್ಲರಿಗೂ ನ್ಯಾಯ ಸರಿಯಾಗ ಸಿಗಲಿದೆ,” ಎಂದರು.


ರಸ್ತೆ ಸುರಕ್ಷತೆ ಮತ್ತು ಮಕ್ಕಳ ಕಲ್ಯಾಣದೆಡೆಗೆ ಕೆಲಸಸ ಮಾಡುತ್ತೇನೆ ಎಂದರು ಶ್ರವಣಿ. ಅಲ್ಲದೆ ಸ್ವಚ್ಛತೆಯನ್ನು ಸುಧಾರಿಸಲು ಅಧಿಕಾರಿಗಳು ಬೇಕಾಗಿದ್ದಾರೆ ಮತ್ತು ರೈತರ ಬೇಕು ಬೇಡಗಳನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.