ಸಾಮಾಜಿಕ ಉದ್ಯಮದಲ್ಲಿ ಈ 20 ಟ್ವಿಟರ್ ಖಾತೆಗಳನ್ನು ಫಾಲೋ ಮಾಡಿ

ಟೀಮ್​​ ವೈ.ಎಸ್​. ಕನ್ನಡ

ಸಾಮಾಜಿಕ ಉದ್ಯಮದಲ್ಲಿ ಈ 20 ಟ್ವಿಟರ್ ಖಾತೆಗಳನ್ನು ಫಾಲೋ ಮಾಡಿ

Wednesday December 02, 2015,

2 min Read

ನಮ್ಮ ಸುತ್ತಮುತ್ತಲಿನ ಘಟನೆಗಳನ್ನು ಸರಳ, ಸಂಕೀರ್ಣ ಹಾಗೂ ಹೆಚ್ಚು ಪ್ರಯತ್ನವಿಲ್ಲದೇ ತಿಳಿಯಲು ಟ್ವಿಟರ್ ಅತ್ಯುತ್ತಮ ಮಾರ್ಗ.ಹೆಚ್ಚಿನ ಸಾಮಾಜಿಕ ಉದ್ಯಮಿಗಳು, ಉದ್ಯಮಗಳು ಇವರನ್ನು ಬೆಂಬಲಿಸೋ ಸಂಸ್ಥೆಗಳು, ಚಿಂತಕರ ಚಾವಡಿಗಳು ಟ್ವಿಟರ್‍ನಲ್ಲಿ ಇದೆ. ಸೋಷಿಯಲ್ ಸ್ಟೋರಿಯಲ್ಲಿ ನಾವು ಮೇಲ್ಪಂಕ್ತಿಯ ಟ್ವಿಟರ್ ಅಕೌಂಟ್‍ಗಳ್ನು ಪಟ್ಟಿ ಮಾಡಿದ್ದೇವೆ. ಇದರಿಂದ ಸಾಮಾಜಿಕ ಉದ್ಯಮ ಪ್ರಪಂಚದಲ್ಲಿ ಇತ್ತೀಚಿನ ಯಾವುದೇ ಬೆಳವಣಿಗೆಯನ್ನು ನೀವು ಕಳೆದುಕೊಳ್ಳಲಾರಿರಿ. ಒಂದು ವೇಳೆ ನಿಮಗನ್ನಿಸಿಂತೆ ಯಾವುದಾದರೂ ಪ್ರಮುಖ ಅಕೌಂಟ್‍ಗಳನ್ನು ಬಿಟ್ಟಿದ್ದರೆ ಕಾಮೆಂಟ್ ಸೆಕ್ಷನ್‍ನಲ್ಲಿ ಒಂದು ನೋಟ್ ಹಾಕಿ ಮುಂದಿನ ಪಟ್ಟಿಯಲ್ಲಿ ಅದನ್ನು ಸೇರಿಸುತ್ತೇವೆ.

image


1) ಅಲರ್ಟ್ ನೆಟ್: ದಿ ಥಾಮ್ಸನ್ ರಾಯ್‍ಟರ್ಸ್ ಫೌಂಡೇಷನ್‍ನ ಲೋಕೋಪಕಾರಿ ವಾರ್ತಾ ಸೇವೆ ಯುದ್ಧ, ಹೋರಾಟ, ನೈಸರ್ಗಿಕ ವಿಕೋಪ, ಆಹಾರ ಮತ್ತು ಆರೋಗ್ಯ ಸಂಬಂಧ ಸುದ್ಧಿಗಳನ್ನು ಬಿತ್ತರಿಸುತ್ತದೆ.

ಹಿಂಬಾಲಿಸಿ:@AlertNet

2) ಅಶೋಕಾ ಚೇಂಜ್‍ಮೇಕರ್ಸ್: ಇತ್ತೀಚೆಗಿನ ಸಂಶೋಧನೆ, ಸಾಮಾಜಿಕ ಉದ್ಯಮಗಳು ಮತ್ತು ನೀವು ಹೇಗೆ ಬದಲಾವಣೆ ಮಾಡಬಲ್ಲಿರಿ ಎಂಬುದನ್ನು ತಿಳಿಯಲು ಇವರನ್ನು ಹಿಂಬಾಲಿಸಿ. ಎಲ್ಲರೂ ಬದಲಾವಣೆ ಮಾಡಬಲ್ಲರು.

ಹಿಂಬಾಲಿಸಿ: @changemakers

3) ಅನ್‍ರೀಸನಬಲ್ ಟೀಂ: ಇವರು ಉದ್ಯಮಿಗಳಿಗೆ ಮಾರ್ಗದರ್ಶನ, ಬಂಡವಾಳಕ್ಕೆ ದಾರಿಮಾಡಿಕೊಡುತ್ತಾರೆ ಹಾಗೂ ಅತಿ ದೊಡ್ಡ ಸವಾಲುಗಳಿಗೆ ಪರಿಹಾರ ಸೂಚಿಸುವ ಜಾಗತಿಕ ನೆಟ್‍ವರ್ಕ್ ಕೊಡುತ್ತಾರೆ.

ಹಿಂಬಾಲಿಸಿ: @BeUnreasonable

4) ಆಕ್ಯುಮೆನ್: ಕಂಪನಿಗಳು, ನಾಯಕರು ಹಾಗೂ ಯೋಚನೆಗಳ ಮೇಲೆ ಹೂಡಿಕೆ ಮಾಡುವುದ ಮುಖಾಂತರ ವಿಶ್ವದ ಬಡತನ ಹೋಗಲಾಡಿಸೋ ಪ್ರಯತ್ನ ಇವರ ಗುರಿ.

ಹಿಂಬಾಲಿಸಿ: @Acumen

5) ಸ್ಕೋಲ್ ವರ್ಲ್ಸ್​​​ ಫೋರಂ: ಮುಖ್ಯವಾದ ಸಾಮಾಜಿಕ ವಿಷಯಗಳಿಗೆ ಹೊಸತನದ ಪರಿಹಾರ ಕೊಡುವುದರ ಜತೆ, ಉದ್ಯಮಶೀಲ ವಿಧಾನವನ್ನು ಹೆಚ್ಚಿಸುವ ಸಂಬಂಧ ಸುದ್ಧಿ ಮತ್ತು ಒಳನೋಟಗಳನ್ನು ಹಾಗೂ ಅವಕಾಶಗಳನ್ನು ಇದು ಕೊಡುತ್ತದೆ.

ಹಿಂಬಾಲಿಸಿ: @SkollWorldForum

6) ಸ್ಕೋಲ್ ಫೌಂಡೇಷನ್: ದೊಡ್ಡ ಹೂಡಿಕೆ ಬದಲಾವಣೆ ಮಾಡುವ ಹಾಗೂ ಸಂಶೋಧನಾಕಾರರು ವಿಶ್ವದ ಪ್ರಮುಖ ಸಮಸ್ಯೆಗಳ್ನು ಬಗೆಹರಿಸುವುದಕ್ಕೆ ತಮ್ಮನ್ನು ಮೀಸಲಿರಿಸಿಕೊಂಡಿದ್ದಾರೆ.

ಹಿಂಬಾಲಿಸಿ: @SkollFoundation

7) ನೆಕ್ಟ್ಸ್ ಬಿಲಿಯನ್: ಬ್ಲಾಗ್ ಮತ್ತು ವಿಶ್ಲೇಷಣೆಗಳ ಮೂಲಕ ಅಭಿವೃದ್ಧಿ ಮತ್ತು ಉದ್ಯಮದಲ್ಲಿನ ಸಂಪರ್ಕದ ಅನ್ವೇಷಣೆ.

ಹಿಂಬಾಲಿಸಿ: @NextBillion

8) ಕಿವಾ: 25ಡಾಲರ್‍ಗಳ ಸಾಲ ಕೊಡೋ ಮೂಲಕ ಬಡತನವನ್ನು ನಿರ್ಮೂಲನೆಗೆ ಹೋರಾಟ.

ಹಿಂಬಾಲಿಸಿ: @Kiva

9) ಪೆರ್ರಿ ಓಮಿಡ್ಯಾರ್: ನೀವು ನೀವಾಗಿರಿ, ಶಾಂತವಾಗಿರಿ. ಇಬೇ, ಓಮಿಡ್ಯಾರ್ ನೆಟ್‍ವರ್ಕ್, ಪೀರ್ ನ್ಯೂಸ್/ ಸಿವಿಲ್ ಬೀಟ್.

ಹಿಂಬಾಲಿಸಿ: @pierre

10) ರಾಕೆಫೆಲ್ಲರ್ ಫೌಂಡೇಷನ್: ವಿಶ್ವದಾದ್ಯಂತ ಮಾನವತಾವಾದವನ್ನು ಸಾರುವುದು.

ಹಿಂಬಾಲಿಸಿ: @RockefellerFdn

11) ಎಕೋಯಿಂಗ್ ಗ್ರೀನ್: ವಿಶ್ವದ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಮ್ಮ ಪ್ರತಿಭೆಯ ಅನಾವರಣ.

ಹಿಂಬಾಲಿಸಿ: @echoinggreen

12) ಅನ್‍ಲಿಮಿಟೆಡ್: ತಾವು ವಾಸಮಾಡ್ತಿರೋ ವಿಶ್ವವನ್ನು ತಮ್ಮದೇ ಶಕ್ತಿಗಳಿಂದ ಬದಲಾಯಿಸುವ ಜನರನ್ನು ತಲುಪುವುದು ಇದರ ಗುರಿ. ಇವರನ್ನು ನಾವು ಉದ್ಯಮಿಗಳು ಎಂದು ಕರೆಯಬಹುದು.

ಹಿಂಬಾಲಿಸಿ:@UnLtd

13) ರಿಚರ್ಡ್ ಬ್ರಾಸನ್: ವರ್ಜಿನ್ ಗ್ರೂಪ್‍ನ ಸಂಸ್ಥಾಪಕ ಮತ್ತು ಸಿಇಒ. ಟೈ ಮೇಲೆ ಜಿಗುಪ್ಸೆ ತಾಳಿ ಸಾಹಸ ಮತ್ತು ರೋಮಾಂಚನವನ್ನು ಹುಡುಕಿಕೊಂಡು ಹೊರಟವ. ಆಲೋಚನೆಯನ್ನು ವಾಸ್ತವಿಕತೆಗೆ ಬದಲಾಯಿಸುವಲ್ಲಿ ನಂಬಿಕೆ ಇಟ್ಟುಕೊಂಡಿರುವವ.

ಹಿಂಬಾಲಿಸಿ:@richardbranson

14) ಬಿಲ್ ಗೇಟ್ಸ್: ನನ್ನ ಫೌಂಡೇಷನ್ ಮತ್ತು ಇತರೆ ಇಷ್ಟದ ವಿಷಯಗಳಿಂದ ಕಲಿಯುತ್ತಿರುವುದನ್ನು ಅತಿಥಿ ಸಂಪಾದಕನಾಗಿ ಹಂಚುತ್ತೀನಿ.

ಹಿಂಬಾಲಿಸಿ: @BillGates

15) ಟಾಮ್ಸ್: ಟಾಮ್ಸ್ ಶೂಸ್ ಮತ್ತು ಟಾಮ್ಸ್ ಕನ್ನಡಕಗಳು. ಪ್ರತಿಯೊಬ್ಬರಿಗೂ ಒಂದು.

ಹಿಂಬಾಲಿಸಿ: @TOMS

16) ಮೊಹಮ್ಮದ್ ಯೂನಸ್: ಬಡತನ ರಹಿತ ವಿಶ್ವವನ್ನು ಕಟ್ಟಲು ಶ್ರಮಿಸುತ್ತಿರೋ 2006ರ ನೊಬೆಲ್ ಶಾಂತಿ ಪ್ರಶಸ್ತಿಯ ಪಡೆದಿರೋ ಪ್ರೊಫೆಸರ್ ಮೊಹಮ್ಮದ್ ಯೂನಸ್‍ರನ್ನು ಸೇರುತ್ತೀರಾ?

ಹಿಂಬಾಲಿಸಿ: @Yunus_Centre

17) ಸ್ಟಾನ್‍ಫೋರ್ಡ್ ಸಾಮಾಜಿಕ ಬದಲಾವಣೆಯ ವಿಮರ್ಶೆ: ಸಾಮಾಜಿಕ ಬದಲಾವಣೆಯ ನಾಯಕರಿಗೆ ಮಾಹಿತಿ ಮತ್ತು ಸ್ಫೂರ್ತಿ.

ಹಿಂಬಾಲಿಸಿ: @SSIReview

18) ಕೇಸ್ ಫೌಂಡೇಷನ್: ಸಾಮಾಜಿಕ ಬದಲಾವಣೆಯ ನಾಯಕರಿಗೆ ಮಾಹಿತಿ ಮತ್ತು ಸ್ಫೂರ್ತಿ.

ಹಿಂಬಾಲಿಸಿ: @CaseFoundation

19) ವಿಶ್ವ ಆರ್ಥಿಕ ವೇದಿಕೆ: ವಿಶ್ವ ಆರ್ಥಿಕ ವೇದಿಕೆಯ ಅಧಿಕೃತ ಟ್ವೀಟ್ ಅಕೌಂಟ್ ಆಗಿದ್ದು, ತಜ್ಞರ ತಂಡ ಮತ್ತು ಸಂವಾದದ ಪ್ರಮುಖ ಅಂಶಗಳನ್ನು ಅದೇ ಕ್ಷಣದಲ್ಲಿ ಟ್ವೀಟ್ ಮಾಡಲಾಗುತ್ತೆ.

ಹಿಂಬಾಲಿಸಿ: @wef

20) ಗುಡ್:ವೈಯಕ್ತಿಕ ಮತ್ತು ಸಾಮೂಹಿಕ ಅಭಿವೃದ್ಧಿಗಾಗಿ ಒಂದುವಿಶ್ವ ಸಮುದಾಯ ಮತ್ತು ಗುಡ್‍ನಿಂದ ಕಲಿಯಲುಯಾವುದು ಒಳ್ಳೆಯದು ಎಂದು ಸದಸ್ಯರಿಂದ ಮಾಹಿತಿ ವಿನಿಮಯ.

ಹಿಂಬಾಲಿಸಿ: @GOOD

ಇದರ ಜತೆ ಇನ್ನೂ ಹೆಚ್ಚಿನ ಮಾಹಿತಿ ಹಾಗೂ ವಿಶ್ವದ ಸಾಮಾಜಿಕ ಉದ್ಯಮಗಳ ಬೆಳವಣಿಗೆಗಾಗಿ @YourStorydotIn ಮತ್ತು @_SocialStoryಗಳನ್ನು ಹಿಂಬಾಲಿಸಿ.

ಲೇಖಕರು: ನೆಲ್ಸನ್​ ವಿನೋದ್​​ ಮೊಸೆಸ್​​

ಅನುವಾದಕರು: ಆರ್​​.ಪಿ.