ಉಷ್ಣವಲಯದ ಪರ್ವತದ ಮೇಲ್ಭಾಗದ ಹಿಮನದಿಗಳು ಮುಂದಿನ ದಶಕದ ವೇಳೆಗೆ ಅಥವಾ ಅದಕ್ಕಿಂತ ಮೊದಲೇ ಕರಗಬಹುದು

ಭೂಮಿಯ ಉಷ್ಣವಲಯದಲ್ಲಿ ಉಳಿದಿರುವ ಕೊನೆಯ ಹಿಮನದಿಗಳು - ಉತ್ತರದ ಹಿಮಾಲಯ ಮತ್ತು ದಕ್ಷಿಣದ ಆಂಡಿಸ್ - ಹವಾಮಾನ ವೈಪರೀತ್ಯದ ಕಾರಣದಿಂದ ಮುಂದಿನ ಹತ್ತು ವರ್ಷಗಳಲ್ಲಿ ಅಥವಾ ಅದಕ್ಕೂ ಮೊದಲೇ ಕಣ್ಮರೆಯಾಗಬಹುದು ಎಂದು ಅಧ್ಯನವೊಂದು ವರದಿ ಮಾಡಿದೆ.

ಉಷ್ಣವಲಯದ ಪರ್ವತದ ಮೇಲ್ಭಾಗದ ಹಿಮನದಿಗಳು ಮುಂದಿನ ದಶಕದ ವೇಳೆಗೆ ಅಥವಾ ಅದಕ್ಕಿಂತ ಮೊದಲೇ ಕರಗಬಹುದು

Wednesday December 11, 2019,

3 min Read

ಯುಎಸ್ ನ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು, ಇಂಡೋನೇಷ್ಯಾದ ಪಪುವಾದಲ್ಲಿ ಮೊದಲು ಹಿಮನದಿಗಳು ಕರಗಬಹುದು, ಇದನ್ನು ಅವರು ಪ್ರಪಂಚದಾದ್ಯಂತದ ಇತರ ಪರ್ವತ ಹಿಮನದಿಗಳಿಗೆ "ಎಚ್ಚರಿಕೆಯ ಘಂಟೆಯಾಗಬಹುದು" ಎಂದು ಕರೆದಿದ್ದಾರೆ.


ಪಿಎನ್‌ಎಎಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು, ನ್ಯೂ ಗ್ಯೂನಿಯಾ ಪಶ್ಚಿಮ ಭಾಗದಲ್ಲಿ ಪರ್ವತಶ್ರೇಣಿಯ ಹಿಮನದಿಗಳ ಕರಗುವಿಕೆಯ ವೇಗವು 2015-2016ರ ಬಲವಾದ ಎಲ್ ನಿನೊ ಕಾರಣದಿಂದಾಗಿ ಹೆಚ್ಚಾಗಿದೆ ಎಂದು ಗಮನಿಸಿದ್ದಾರೆ.


ಎಲ್ ನಿನೊ - ಉಷ್ಣವಲಯದ ಸಮುದ್ರದ ನೀರು ಮತ್ತು ವಾತಾವರಣದ ಉಷ್ಣತೆಯು ಹೆಚ್ಚಾಗಲು ಕಾರಣವಾಗುವ ಒಂದು ವಿದ್ಯಮಾನವು ನೈಸರ್ಗಿಕ ಹವಾಮಾನ ಪ್ರಕ್ರಿಯೆಯಾಗಿದೆ ಎಂದು ಸಂಶೋಧಕರು ವಿವರಿಸಿದರು, ಆದರೆ ಜಾಗತಿಕ ತಾಪಮಾನ ಏರಿಕೆಯಿಂದ ಇದು ಇನ್ನಷ್ಟು ಹೆಚ್ಚಾಗಬಹುದು.


ಸಂಶೋಧಕರ ಪ್ರಕಾರ, ಮುಂದಿನ 10 ವರ್ಷಗಳಲ್ಲಿ ಗ್ಯೂನಿಯಾ ಪರ್ವತದ ಹಿಮನದಿಗಳು ಕಣ್ಮರೆಯಾಗುತ್ತವೆ - ಹೆಚ್ಚಾಗಿ ಮುಂದಿನ ಬಲವಾದ ಎಲ್ ನಿನೊ ಸಂದರ್ಭದಲ್ಲಿ ಎಂದಿದ್ದಾರೆ.


ಅಧ್ಯಯನದ ಸಹ-ಲೇಖಕ ಲೋನಿ ಥಾಂಪ್ಸನ್ ಇತರ ಉಷ್ಣವಲಯದ ಹಿಮನದಿಗಳಾದ ಟಾಂಜಾನಿಯಾದ ಕಿಲಿಮಂಜಾರೊ ಮತ್ತು ಪೆರುವಿನ ಕ್ವೆಲ್ಕಾಯಾ ಮುಂದೆ ಇದಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂದು ಹೇಳಿದರು.


ಸಾಂಕೇತಿಕ ಚಿತ್ರ


"ಪಪುವಾ, ಇಂಡೋನೇಷ್ಯಾ, ಹಿಮನದಿಗಳು ಪ್ರಪಂಚದಾದ್ಯಂತ ಏನಾಗಲಿದೆ ಎಂಬುದರ ಸೂಚಕಗಳಾಗಿವೆ ಎಂದು ನಾನು ಭಾವಿಸುತ್ತೇನೆ" ಎಂದು ಥಾಂಪ್ಸನ್ ಹೇಳಿದರು.


ಇತಿಹಾಸದುದ್ದಕ್ಕೂ ಹಿಮನದಿಯ ಸುತ್ತಲಿನ ವಾತಾವರಣದ ಸಂಯೋಜನೆ ಮತ್ತು ತಾಪಮಾನವನ್ನು ನಿರ್ಧರಿಸಲು ಐಸ್ ಕೋರ್‌ ಗಳನ್ನು ಕೊರೆದು ಸಂಶೋಧಕರು 2010 ರಿಂದ ಹಿಮನದಿಯ ಮೇಲೆ ನಿಗಾ ವಹಿಸುತ್ತಿದ್ದಾರೆ.


ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಪೈಪ್ಗಳನ್ನು ನೇರವಾಗಿ ಒಂದುಗುಡಿಸಿ, ಅದನ್ನು ಹಗ್ಗದಿಂದ ಇಳಿಬಿಟ್ಟು, ಹಿಮ ಕರಗಿದಂತೆ ಹಗ್ಗದ ಭಾಗಗಳನ್ನು ನಿಯತಕಾಲಿಕವಾಗಿ ಅಳೆಯುವ ಮೂಲಕ ಎಷ್ಟು ಮಂಜುಗಡ್ಡೆ ಕಳೆದುಹೋಗಿದೆ ಎಂಬುದನ್ನು ಅಳೆಯಲು ಅಳವಡಿಸಿದರು.


ತಮ್ಮ ಅಧ್ಯಯನದ ಆಧಾರದ ಮೇಲೆ, ಕರಗುವಿಕೆಯು ಕನಿಷ್ಠ 150 ವರ್ಷಗಳ ಹಿಂದೆ ಪ್ರಾರಂಭವಾಯಿತು, ಆದರೆ ಕಳೆದ ದಶಕದಲ್ಲಿ ಅದು ವೇಗವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.


ಥಾಂಪ್ಸನ್ ಮತ್ತು ಅವರ ತಂಡವು ಹಿಮನದಿಯ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಕರಗುವ ಲಕ್ಷಣಗಳನ್ನು ಕಂಡುಕೊಂಡಿತು.


ಸಂಶೋಧಕರು ಸುಮಾರು ಐದು ಮೀಟರ್ ಹಗ್ಗವನ್ನು ನೋಡಿದರು, ಅಂದರೆ ಹಿಮನದಿಯ ಮೇಲ್ಮೈ ವರ್ಷಕ್ಕೆ ಸುಮಾರು ಒಂದು ಮೀಟರ್ ದರದಲ್ಲಿ ಕರಗುತ್ತಿದೆ ಎಂದು ನವೆಂಬರ್ 2015 ರಲ್ಲಿ, ಸಂಶೋಧಕರು ಹೇಳಿದರು.


ಅವರು ಮೇ 2016 ರಲ್ಲಿ ಹಿಂತಿರುಗಿದಾಗ, ಅವರು ಹೆಚ್ಚುವರಿಯಾಗಿ 4.26 ಮೀಟರ್ ಹಗ್ಗವನ್ನು ನೋಡಿದರು - ಇದು ಕೇವಲ ಆರು ತಿಂಗಳಲ್ಲಿ ವೇಗವಾಗಿ ಕರಗುವುದನ್ನು ಸೂಚಿಸುತ್ತದೆ.


ಹಿಮನದಿಯ ಕರಗುವಿಕೆಯ ವಿಸ್ತೀರ್ಣವನ್ನು ಅವರು ಅದರ ಮೇಲ್ಮೈ ವಿಸ್ತೀರ್ಣವನ್ನು ಅಳೆಯುವ ಮೂಲಕ ನಿರ್ಣಯಿಸಿದರು ಮತ್ತು ಇದು 2010 ರಿಂದ 2018 ರವರೆಗೆ ಶೇಕಡಾ 75 ರಷ್ಟು ಕುಗ್ಗಿದೆ ಎಂದು ಅವರು ಕಂಡುಕೊಂಡರು.


ಅಧ್ಯಯನದ ಪ್ರಕಾರ, ಹಿಮದ ಕ್ಷೇತ್ರವು ಎಷ್ಟು ಕುಗ್ಗಿದೆ ಎಂದರೆ 2016 ರ ಹೊತ್ತಿಗೆ ಅದು ಎರಡು ಸಣ್ಣ ಹಿಮನದಿಗಳಾಗಿ ವಿಭಜನೆಯಾಯಿತು.


ಆಗಸ್ಟ್ 2019 ರಲ್ಲಿ, ಸಂಶೋಧಕರು ಹೇಳುವಂತೆ, ಶಿಖರವನ್ನು ಅಳೆಯುವ ಪರ್ವತಾರೋಹಿ ಹಿಮನದಿಯ ಫೋಟೋ ತೆಗೆದಿದ್ದು, ಅದರ ಅಳಿವಿನಂಚಿನಲ್ಲಿದೆ ಎಂಬುದನ್ನು ತೋರಿಸುತ್ತಿದೆ.


"ಹಿಮನದಿಯ ಕರಗುವಿಕೆಯ ಪ್ರಮಾಣವು ಗಣನೀಯವಾಗಿ ಹೆಚ್ಚುತ್ತಿದೆ. ಇದು ಟರ್ಮಿನಲ್ ಕ್ಯಾನ್ಸರ್ ರೋಗಿಯನ್ನು ಭೇಟಿ ಮಾಡುವುದು ಮತ್ತು ಅವರ ದೇಹದಲ್ಲಿನ ಬದಲಾವಣೆಯನ್ನು ವೀಕ್ಷಿಸುವದನ್ನು ಹೋಲುತ್ತದೆ, ಇಲ್ಲಿಯೂ ಸಹ ಕ್ಯಾನ್ಸರ್ ರೋಗಿಯ ಹಾಗೆ ಎಲ್ಲಿಯೂ ಸಹ ನಮಗೆ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ" ಎಂದು ಥಾಂಪ್ಸನ್ ಹೇಳಿದರು.


ಜಾಗತಿಕವಾಗಿ ಹಿಮನದಿ ಕರಗುವಿಕೆಯು ಸಮುದ್ರ ಮಟ್ಟ ಏರಿಕೆಗೆ ಸಂಬಂಧಿಸಿದೆ ಎಂದು ಅಧ್ಯಯನವು ಎಚ್ಚರಿಸಿದೆ, ಇದು ಸಮುದ್ರದ ನೀರನ್ನು ಬೆಚ್ಚಗಾಗಿಸುವುದರ ಜೊತೆಗೆ ಹೆಚ್ಚು ಪುನರಾವರ್ತನೆಯಾಗುವ ಮತ್ತು ಹೆಚ್ಚು ತೀವ್ರವಾದ ಬಿರುಗಾಳಿಗಳಿಗೆ ಕಾರಣವಾಗಬಹುದು.


ಪ್ರಪಂಚದಾದ್ಯಂತದ ಪರ್ವತ ಮೇಲ್ಭಾಗದ ಹಿಮನದಿಗಳು ಭೂಮಿಯ ಸಾಗರಗಳಲ್ಲಿ ವಾರ್ಷಿಕ ಸಮುದ್ರ ಮಟ್ಟ ಏರಿಕೆಯ ಮೂರನೇ ಅರ್ಧದಷ್ಟು ಕೊಡುಗೆ ನೀಡುತ್ತವೆ ಎಂದು ಥಾಂಪ್ಸನ್ ಹೇಳಿದ್ದಾರೆ.


"ಅವು ಹೆಚ್ಚುತ್ತಿರುವ ತಾಪಮಾನಕ್ಕೆ ಗುರಿಯಾಗುತ್ತವೆ ಏಕೆಂದರೆ ಅವು ಚಿಕ್ಕದಾಗಿರುತ್ತವೆ ಮತ್ತು ಅವು ಬೆಚ್ಚಗಿರುತ್ತವೆ - ಅವು ಕರಗುವ ಮಿತಿಗೆ ಹತ್ತಿರದಲ್ಲಿವೆ. ಐಸ್ ಕೇವಲ ಒಂದು ಮಿತಿಗೊಳಿಸುವ ವ್ಯವಸ್ಥೆ. ಘನೀಕರಿಸುವ ತಾಪಮಾನದಲ್ಲಿ ಅಥವಾ ಕೆಳಗೆ ಇದು ಸಂಪೂರ್ಣವಾಗಿ ಚೆನ್ನಾಗಿರುತ್ತದೆ, ಆದರೆ 32 ಡಿಗ್ರಿ ಫ್ಯಾರನ್ಹೀಟ್ ಆದಾಗ ಎಲ್ಲವೂ ಬದಲಾಗುತ್ತದೆ ಎಂದು" ಅವರು ಹೇಳಿದರು.


ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮನದಿಯ ಸುತ್ತಲಿನ ಗಾಳಿಯು ಬಿಸಿಯಾಗಿರುತ್ತದೆ, ಇದು ಮಳೆ ಹಿಮಕ್ಕೆ ತಿರುಗುವ ಎತ್ತರವನ್ನು ಸಹ ಬದಲಾಯಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.


ಹಿಮಪಾತದ ಮೇಲೆ ಹಿಮವು ಒಮ್ಮೆ ಬಿದ್ದ ಸ್ಥಳಗಳಲ್ಲಿ ಮಳೆ ಬೀಳಲು ಇದು ಕಾರಣವಾಗಿದೆ, ಇದು ವರ್ಷದಿಂದ ವರ್ಷಕ್ಕೆ ಅದರ ಹಿಮವನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.


ಆ ಮಳೆಯು ಹಿಮನದಿಯ ಸಾವಿನ ಮುತ್ತು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.


ಹಿಮಕ್ಕಿಂತ ನೀರು ಸೂರ್ಯನಿಂದ ಹೆಚ್ಚಿನ ಶಾಖವನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ಹಿಮನದಿಯ ಮೇಲಿರುವ ನೀರನ್ನು ಹೆಚ್ಚಿಸುವುದರಿಂದ ಅದು ಇನ್ನಷ್ಟು ಬೆಚ್ಚಗಾಗುತ್ತದೆ, ಉಳಿದ ಮಂಜುಗಡ್ಡೆಯ ಕರಗುವಿಕೆಯನ್ನು ವೇಗಗೊಳಿಸುತ್ತದೆ ಎಂದು ಅವರು ಹೇಳಿದರು.


"ನೀವು ಹಿಮನದಿಯೊಂದನ್ನು ಕೊಲ್ಲಲು ಬಯಸಿದರೆ, ಅದರ ಮೇಲೆ ನೀರನ್ನು ಹಾಕಿ. ನೀರು ಮೂಲತಃ ಬಿಸಿನೀರಿನ ಡ್ರಿಲ್ನಂತೆ ಆಗುತ್ತದೆ. ಇದು ಮಂಜುಗಡ್ಡೆಯ ಮೂಲಕ ತಳಪಾಯಕ್ಕೆ ಹೋಗುತ್ತದೆ" ಎಂದು ಥಾಂಪ್ಸನ್ ಹೇಳಿದರು.


"ಆದ್ದರಿಂದ, ಹಿಮನದಿಯ ಮೇಲ್ಭಾಗದಲ್ಲಿ ನೀರು ಸಂಗ್ರಹಗೊಳ್ಳಲು ಪ್ರಾರಂಭಿಸಿದಾಗ, ಹಿಮಪಾತವು ಪ್ರಸ್ತುತ ಮಾದರಿಗಳು ಹೇಳುವದಕ್ಕಿಂತ ವೇಗವಾಗಿ ಕರಗಲು ಪ್ರಾರಂಭಿಸುತ್ತದೆ, ಏಕೆಂದರೆ ಪ್ರಸ್ತುತ ಮಾದರಿಗಳು ತಾಪಮಾನ ಬದಲಾವಣೆಗಳನ್ನಷ್ಟೇ ಗಣನೆಗೆ ತೆಗೆದುಕೊಳ್ಳುತ್ತವೆ. ಆದರೆ ಹಿಮನದಿಯ ಮೇಲ್ಮೈಯಲ್ಲಿ ನೀರು ಸಂಗ್ರಹವಾಗುವುದರ ಪರಿಣಾಮವನ್ನು ಪರಿಗಣಿಸುವದಿಲ್ಲ," ಎಂದು ಅವರು ವಿವರಿಸಿದರು.


ಥಾಂಪ್ಸನ್ ಮತ್ತು ಅವರ ತಂಡದ ಪ್ರಕಾರ, ಈ ರೀತಿಯ ಕರಗುವಿಕೆಯು ವಿಜ್ಞಾನಿಗಳು ಕೋರ್‌ ಗಳಿಂದ ಕಲಿಯಲು ಸಾಧ್ಯವಾಗುವ ಮಾಹಿತಿಯ ಮೇಲೆ ಪರಿಣಾಮ ಬೀರಬಹುದು, ಇದು ಸಾಮಾನ್ಯವಾಗಿ ಹಿಮನದಿಯ ಸುತ್ತಲಿನ ಹವಾಮಾನದ ವರ್ಷದಿಂದ ವರ್ಷಕ್ಕೆ ದತ್ತಾಂಶ ದಾಖಲೆಗಳನ್ನು ಒದಗಿಸುತ್ತದೆ.


ಹಿಮನದಿಗಳು ಕರಗುತ್ತಿದ್ದಂತೆ, ವರ್ಷದಿಂದ ವರ್ಷಕ್ಕೆ ಆ ದಾಖಲೆಗಳು ನಿರುಪಯುಕ್ತವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.


ಆದಾಗ್ಯೂ, ನ್ಯೂ ಗ್ಯೂನಿಯಾ ಪ್ರಕರಣದಲ್ಲಿ, ಕೋರ್‌ ಗಳು ಐಸ್ ಕೋರ್‌ ಗಳ ಇತಿಹಾಸದುದ್ದಕ್ಕೂ ಎಲ್ ನಿನೊ ಘಟನೆಗಳ ಪುರಾವೆಗಳನ್ನು ತೋರಿಸಿದೆ ಎಂದು ಅವರು ಹೇಳಿದರು.


ಹಿಮನದಿಯ ಹೆಚ್ಚಿನ ಭಾಗ ಕರಗಿದ ಕಾರಣ, ಸಂಶೋಧಕರು ಹೇಳುವಂತೆ, ಈ ಹಿಮನದಿಗಳು ಕಳೆದ 5,000 ವರ್ಷಗಳಿಂದ ಪರ್ವತದ ಮೇಲ್ಭಾಗಗಳನ್ನು ಆಕ್ರಮಿಸಿಕೊಂಡಿದ್ದರೂ ಸಹ ಕೋರ್‌ ಗಳು ಕಳೆದ 50 ವರ್ಷಗಳ ದತ್ತಾಂಶವನ್ನು ಮಾತ್ರ ಹೊಂದಿವೆ.