ಕೋವಿಡ್‌-19 ಬಿಕ್ಕಟ್ಟಿನ ನಡುವೆ 800 ವಲಸಿಗರಿಗೆ ಉದ್ಯೋಗ ಕಲ್ಪಿಸಿದ ಐಎಎಸ್‌ ಅಧಿಕಾರಿ

ಕೋವಿಡ್‌-19 ಬಿಕ್ಕಟ್ಟಿನ ನಡುವೆ ವಲಸಿಗರು ಮತ್ತು ದಿನಗೂಲಿ ಕಾರ್ಮಿಕರಿಗೆ ಸಹಾಯವಾಗಲೆಂದು ಉತ್ತರ ಪ್ರದೇಶದ ಬರಬಂಕಿಯ ಜಿಲ್ಲಾಧಿಕಾರಿ ಆದರ್ಶ್‌ ಸಿಂಗ್‌ ನದಿ ಪುನಶ್ಚೇತನಗೊಳಿಸುವ ಯೋಜನೆಯ ಮೂಲಕ 800 ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ.

ಕೋವಿಡ್‌-19 ಬಿಕ್ಕಟ್ಟಿನ ನಡುವೆ 800 ವಲಸಿಗರಿಗೆ ಉದ್ಯೋಗ ಕಲ್ಪಿಸಿದ ಐಎಎಸ್‌ ಅಧಿಕಾರಿ

Thursday July 02, 2020,

1 min Read

ವಿವಿಧ ವಲಯಗಳಲ್ಲಾದ ಉದ್ಯೋಗ ಹಾನಿ ಕೋವಿಡ್‌-19 ನಿಂದುಂಟಾದ ತಕ್ಷಣದ ಪರಿಣಾಮಗಳಲ್ಲೊಂದು. ಸಿಎಮ್‌ಐಇ ಪ್ರಕಾರ ಏಪ್ರಿಲ್‌ ಮತ್ತು ಮೇ ತಿಂಗಳ ನಡುವೆ ಭಾರತದಲ್ಲಿ ನಿರೋದ್ಯಗದ ದರ ಶೇ.23 ರಷ್ಟಿದೆ.


ಮೂಲ ಬಂಡವಾಳದ ಕೊರತೆ ಮತ್ತು ಸ್ಥಗಿತಗೊಂಡಿರುವ ವ್ಯವಹಾರ ಕಾರ್ಯಕಲಾಪಗಳು ಸರಣಿ ಉದ್ಯೋಗ ಹಾನಿಗೆ ಕಾರಣವಾಗಿವೆ. ಈ ಬಿಕ್ಕಟ್ಟಿನ ನಡುವೆ ಮಾಡಲು ಕೆಲಸವಿಲ್ಲದೇ ಹೆಚ್ಚು ಕಷ್ಟಕ್ಕೆ ಗುರಿಯಾದವರು ದಿನಗೂಲಿಯನ್ನೆ ನಂಬಿಕೊಂಡ ವಲಸೆ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರು.


ಆದರ್ಶ್‌ ಸಿಂಗ್‌, ಬರಬಂಕಿ ಜಿಲ್ಲಾಧಿಕಾರಿ, ಉತ್ತರ ಪ್ರದೇಶ.


ಕೊರೊನಾ ಸೃಷ್ಟಿಸಿರುವ ನಿರಾಶೆಯ ಕತ್ತಲಿನ ನಡುವೆ, ಕೆಲವರು ಒಳ್ಳೆ ಕೆಲಸ ಮಾಡಲು ಮುಂದಾಗಿದ್ದಾರೆ.


ಅಂಥವರಲ್ಲಿ ಒಬ್ಬರು ಉತ್ತರ ಪ್ರದೇಶದ ಬರಬಂಕಿ ಜಿಲ್ಲೆಯ ಜಿಲ್ಲಾಧಿಕಾರಿ ಆದರ್ಶ್‌ ಸಿಂಗ್‌. ಇವರು ನದಿ ಪುನಶ್ಚೇತನ ಯೋಜನೆಯೊಂದನ್ನು ರೂಪಿಸಿ 800 ಜನ ಹಳ್ಳಿಗರಿಗೆ ಉದ್ಯೋಗ ಸಿಗುವಂತೆ ಮಾಡಿದ್ದಾರೆ ಎಂದು ದಿ ಕ್ವಿಂಟ್‌ ವರದಿ ಮಾಡಿದೆ.


ಕೆಲ ದಿನಗಳ ಹಿಂದೆ ಈ ಕೆಲಸದ ಸ್ಥಿತಿಗತಿಗಳ ಬಗ್ಗೆ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು.



ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ)ಯಡಿ ಬರುವ ಈ ಕಾಮಗಾರಿಯನ್ನು ಒಂದು ಕಾಲದಲ್ಲಿ ನೀರಾವರಿಯ ಮೂಲವಾಗಿದ್ದ ಕಲ್ಯಾಣಿ ನದಿಯನ್ನು ಪುನಶ್ಚೇತನಗೊಳಿಸಲು ಕೈಗೊಳ್ಳಲಾಗಿದೆ.


ನದಿ ಪುನಶ್ಚೇತನ ಕಾಮಗಾರಿ ಚಾಲ್ತಿಯಲ್ಲಿರುವುದು.


ನದಿ ಪುನಶ್ಚೇತನ ಯೋಜನೆಯ ಮೊದಲ ಹಂತದ ಒಟ್ಟು ವೆಚ್ಚ ರೂ. 59 ಲಕ್ಷವಾಗಿದ್ದು ಅದನ್ನು ಎರಡು ಹಂತದಲ್ಲಿ ವಿಭಜಿಸಲಾಗಿದೆ. ಬರಬಂಕಿ ಜಿಲ್ಲೆಯ ಮವೈಯಾದಲ್ಲಿ ಈಗಾಗಲೇ 2.6 ಕಿ.ಮೀ. ನಷ್ಟು ಪ್ರದೇಶದ ಪುನಶ್ಚೇತನ ಕಾರ್ಯ ಸಂಪೂರ್ಣಗೊಂಡಿದ್ದು, ಹೈದರ್ಗರ್‌ ಪ್ರದೇಶದ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದೆ.

“ಲಾಕ್‌ಡೌನ್‌ ಒಂದು ರೀತಿಯಲ್ಲಿ ನಮಗೆ ವರದಾನವಾಗಿತ್ತು. ಕೆಲವು ನಿರ್ಬಂಧಗಳಿಂದ ಫೆಬ್ರುವರಿಯಲ್ಲಿ ನಾವು ಕೆಲಸ ನಿಲ್ಲಿಸಬೇಕಾಯಿತು. ದಿನಗೂಲಿ ಕಾರ್ಮಿಕರ ಕಷ್ಟ, ಅವರಿಗೆ ಎದುರಾಗಿರುವ ಅಪಾಯದ ಬಗ್ಗೆ ತಿಳಿದಾಗ, ಅವರನ್ನು ಎರಡು ಸಮಸ್ಯೆಗಳನ್ನು ಬಗೆಹರಿಸಲು ನೇಮಿಸಿಕೊಳ್ಳಲು ನಾವು ಬಯಸಿದೆವು. ಕಷ್ಟದಲ್ಲಿದ್ದ ಹಲವರಿಗೆ ಈ ಯೋಜನೆ ಭರವಸೆಯ ಆಶಾಕಿರಣದಂತೆ ಮೂಡಿಬಂತು,” ಎಂದು ಆದರ್ಶ್‌ ಸಿಂಗ್‌ ದಿ ಬೆಟರ್‌ ಇಂಡಿಯಾ ಗೆ ಹೇಳಿದ್ದಾರೆ.