ಪರಿಸರ ಸ್ನೇಹಿ ಸ್ವಾತಂತ್ರ್ಯೋತ್ಸವ ಆಚರಿಸಲು ಬೀಜ ಧ್ವಜವನ್ನು ತಯಾರಿಸಿದ ಸಂಸ್ಥೆ

ಬೆಂಗಳೂರು ಮೂಲದ ಸೀಡ್ ಪೇಪರ್ ಇಂಡಿಯಾ 72 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸುತ್ತಿದ್ದು, ತುಳಸಿ ಬೀಜವನ್ನು ಒಳಗೊಂಡ ಸೀಡ್ ಪೇಪರ್‌ಗಳಿಂದ ನೆಡಬಹುದಾದ ಧ್ವಜವನ್ನು ಬಳಸುತ್ತಿದೆ.

ಪರಿಸರ ಸ್ನೇಹಿ ಸ್ವಾತಂತ್ರ್ಯೋತ್ಸವ ಆಚರಿಸಲು ಬೀಜ ಧ್ವಜವನ್ನು ತಯಾರಿಸಿದ ಸಂಸ್ಥೆ

Thursday August 15, 2019,

2 min Read

ಸ್ವಾತಂತ್ರ್ಯ ದಿನಾಚರಣೆ ನಮಗೆ ಅತ್ಯಂತ ಮುಖ್ಯವಾದದ್ದು. ನಾವು ಅಂಗಡಿಗಳಲ್ಲಿ ಅಥವಾ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಧ್ವಜ ಕೊಳ್ಳುವವರನ್ನು ನೋಡುತ್ತೇವೆ. ಇದರಲ್ಲಿ ಹೆಚ್ಚಿನವು ಪ್ಲಾಸ್ಟಿಕ್‌ನಿಂದ ತಯಾರಿಸಿದವಾಗಿರುತ್ತವೆ.


ಆದರೆ ನಮ್ಮೆಲ್ಲರಿಗೂ ತಿಳಿದಿರುವಂತೆ, ಪ್ಲಾಸ್ಟಿಕ್ ಪರಿಸರಕ್ಕೆ ಬಹಳಷ್ಟು ಹಾನಿ ಮಾಡುತ್ತಿದೆ. ಬಹಳಷ್ಟು ಜನರು ಪ್ಲಾಸ್ಟಿಕ್‌ಗೆ ಪರ್ಯಾಯವಾದ ಪರಿಸರ ಸ್ನೇಹಿ ವಸ್ತುಗಳನ್ನು ತಂದಿದ್ದರೂ, ಅವುಗಳು ದುಬಾರಿ ಬೆಲೆಯವಾದ್ದರಿಂದ ಅವುಗಳಿಗೆ ಆದ್ಯತೆ ನೀಡುವುದು ಕಷ್ಟವಾಗುತ್ತದೆ.


ಆದರೆ ಈ ಸ್ವಾತಂತ್ರ್ಯ ದಿನಾಚರಣೆಗೆ ಬದಲಾವಣೆಯ ಮೆರುಗು ತಂದಿರುವುದು ಬೆಂಗಳೂರು ಮೂಲದ, ಹಸಿರು ಮಾರ್ಗವನ್ನು ಅನುಸರಿಸಿ ಸೀಡ್ ಪೇಪರ್‌ಗಳಿಂದ, ನೆಡಬಹುದಾದ ಧ್ವಜವನ್ನು ತಯಾರಿಸಿದ ಸೀಡ್ ಪೇಪರ್ ಇಂಡಿಯಾ ಎಂಬ ನವ್ಯ ಉದ್ಯಮ.


ವ

ನೆಡಬಹುದಾದ ಧ್ವಜ (ಎನ್‌ಡಿಟಿವಿ)


ಈ ಉಪಕ್ರಮದ ಬಗ್ಗೆ ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ, ಸೀಡ್ ಪೇಪರ್ ಇಂಡಿಯಾದ ಸ್ಥಾಪಕ, ರೋಶನ್ ರಾಯ್,


"ಪ್ರತಿಯೊಂದು ಕಾರ್ಯಕ್ರಮವು ಹಾಗೂ ಆಚರಣೆಯು ಲಾರಿಗಟ್ಟಲೆ ತ್ಯಾಜ್ಯವನ್ನು ಸೃಷ್ಟಿಸುತ್ತದೆ. ಉದಾಹರಣೆಗೆ, ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿವಸ ಸಿಗ್ನಲ್‌ಗಳಲ್ಲಿ ಮಕ್ಕಳು ಧ್ವಜಗಳನ್ನು ಮಾರುವುದನ್ನು ನೀವು ನೋಡಿರುತ್ತೀರಿ. ಆದರೆ ಸ್ವಾತಂತ್ರ್ಯ ದಿನಾಚರಣೆಯ ನಂತರದಲ್ಲಿ ಅವೇ ಧ್ವಜಗಳು ಗಮನವಂಚಿತರಾಗಿ ರಸ್ತೆಗಳಲ್ಲಿ ಬಿದ್ದಿರುವುದನ್ನು ಕಾಣುತ್ತೀರಿ. 2017 ರಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣದ ಬಗ್ಗೆ ಆಲೋಚಿಸಿದ ನಾನು ಸುಮ್ಮನೆ ಕಸವಾಗುವ ವಸ್ತುವನ್ನು ಗಿಡಗಳಿಂದ ಬದಲಿಸಲು ನಿರ್ಧರಿಸಿದೆ," ಎಂದರು.


ಈ ಬೀಜ ಧ್ವಜವನ್ನು ಕೈಯಿಂದ ಮಾಡಿದ ಹಾಳೆಯಿಂದ ತಯಾರಿಸಲಾಗಿದೆ, ಇದು ತಿರಸ್ಕರಿಸಿದ ಹತ್ತಿಯ ನಾರುಗಳನ್ನು ಒಳಗೊಂಡಿದೆ ಅಲ್ಲದೆ ಅದರಲ್ಲಿ ತುಳಸಿಯ ಬೀಜವನ್ನು ಹುದುಗಿಸಲಾಗಿದೆ.


ಅನಂತರ ಅದಕ್ಕೆ ಸಾವಯುವ ಶಾಯಿಯಿಂದ ಬಣ್ಣ ಬಳಿಯಲಾಗುತ್ತದೆ. ಅರಿಶಿಣ ಪುಡಿಯೊಂದಿಗೆ ಆಹಾರ ಬಣ್ಣವನ್ನು ಬಳಸಿ ಕೇಸರಿಯ ಬಣ್ಣವನ್ನು, ಪಾಲಕವನ್ನು ಉಪಯೋಗಿಸಿ ಹಸಿರು ಬಣ್ಣವನ್ನು ಹಾಗೂ ನೀಲಿಬೆರಿ ಹಣ್ಣುಗಳನ್ನು ಅಶೋಕ ಚಕ್ರಕ್ಕೆ ಬಳಿಯಲು ಬಳಸಲಾಗುತ್ತದೆ.


ಈ ಧ್ವಜಗಳು 5 ರೂಪಾಯಿಯಿಂದ 12 ರೂಪಾಯಿಯ ಬೆಲೆಯಲ್ಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ, ಅಂದರೆ ಕಂಪನಿ ಚಿನ್ಹೆಯನ್ನು ಬರೆಯುವುದು ಹಾಗೂ ಧ್ವಜದ ಗುಣಮಟ್ಟದ ಮೇಲೆ ಅವಲಂಬಿಸಿದೆ.


"ಧ್ವಜಗಳ ಉತ್ಪಾದನೆಯು ಐದು-ಹಂತದ ಪ್ರಕ್ರಿಯೆಯಾಗಿದ್ದು, ಇದರಲ್ಲಿ ತ್ಯಾಜ್ಯ ಬಟ್ಟೆಗಳನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಚಿಂದಿ ಕತ್ತರಿಸುವ ಯಂತ್ರದ ಮೂಲಕ ಸೂಕ್ತ ಆಕಾರ ಮತ್ತು ಗಾತ್ರಗಳಾಗಿ ಕತ್ತರಿಸುವುದು, ಅಲ್ಲದೆ, ಈ ತುಣುಕುಗಳನ್ನು ತೊಳೆದು, ಯಂತ್ರವನ್ನು ಬಳಸಿ ಉತ್ತಮ ತಿರುಳಿಗೆ ಬರುವಂತೆ ಮಾಡಲಾಗುತ್ತದೆ.




ತಿರುಳು ಸಿದ್ಧವಾದ ನಂತರ, ಅದನ್ನು ಟ್ಯಾಂಕ್‌ಗೆ ಸುರಿಯಲಾಗುತ್ತದೆ, ಅಲ್ಲಿ ತಿರುಳು ಚೆನ್ನಾಗಿ ಬೆರೆತಾಗ, ತುಳಸಿ ಬೀಜಗಳನ್ನು ಸೇರಿಸುವ ವ್ಯಾಟ್‌ಗೆ ಅದನ್ನು ಸುರಿಯಲಾಗುತ್ತದೆ. ಇದಾದ ನಂತರ, ಬೀಜದ ಕಾಗದಗಳನ್ನು, ನೈಸರ್ಗಿಕ ಬಣ್ಣಕ್ಕೆ ತಿರುಗುಲೆಂದೆ ಐದರಿಂದ ಏಳು ದಿನಗಳವರೆಗೆ ನೈಸರ್ಗಿಕವಾಗಿ ಒಣಗಿಸಲಾಗುತ್ತದೆ. ನಂತರದಲ್ಲಿ ಅದನ್ನು ಬೇಡಿಕೆಗೆ ಅನುಗುಣವಾಗಿ ನಿರ್ಧಿಷ್ಟ ಗಾತ್ರದಲ್ಲಿ ಕತ್ತರಿಸಲಾಗುತ್ತದೆ.


ಆದಾಗ್ಯೂ, ಈ ಸಂಸ್ಥೆಯು ಪರಿಸರ ಸ್ನೇಹಿ ಉಪಕ್ರಮವನ್ನು ಪ್ರಾರಂಭಿಸಿರುವುದು ಇದೇ ಮೊದಲೇನಲ್ಲ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌‌ ನ ಪ್ರಕಾರ, ಈ ವರ್ಷದ ಗಣರಾಜ್ಯೋತ್ಸವದಂದು ಸಂಸ್ಥೆಯು ಸತ್ಯ ಸಾಯಿ ಅನಾಥಾಲಯದೊಂದಿಗೆ ಸೇರಿ ಬೀಜ ಧ್ವಜ ಹಾಗೂ ಬೀಜದುಂಡೆ ಮಾಡುವ ಎರಡು ಕಾರ್ಯಕ್ರಮಗಳನ್ನು ಆರಂಭಿಸಿತು. ಇದನ್ನು ಕೇರಳ ಸರಕಾರದ ಸಹಯೋಗದೊಂದಿಗೆ ನಡೆಸಲಾಗಿತ್ತು.


ಧ್ವಜಗಳು ಮೇಲೆ ತಿಳಿಸಿದ ಕ್ರಮದಲ್ಲಿಯೇ ತಯಾರಿಸಲಾಗಿದ್ದರೆ, ಬೀಜದುಂಡೆಗಳನ್ನು ತೇಗ, ಬೇವು, ಚೆಂಡುಹೂ, ಸೂರ್ಯಕಾಂತಿ ಹಾಗೂ ತುಳಸಿಯ ಬೀಜಗಳಿಂದ ಮಾಡಲಾಗಿತ್ತು.