ಥಾಮಸ್ ಅಲ್ವಾ ಎಡಿಸನ್ ಗಿಂತಲೂ ಹೆಚ್ಚಿನ 'ಅಮೆರಿಕನ್ ಪೇಟೆಂಟ್ ಗಳ' ಒಡೆಯ ಭಾರತೀಯ ಮೂಲದ ವಿಜ್ಞಾನಿ ಗುರುತೇಜ್ ಸಂಧು

ನಾವು ಇಂದು ಹೇಳ ಹೊರಟಿರುವುದು ಭಾರತೀಯ ಮೂಲದವರಾದ, ದೆಹಲಿ ಐಐಟಿ ಯ ಪ್ರಾಕ್ತನ ವಿಧ್ಯಾರ್ಥಿ, ಪ್ರಸ್ತುತ ಇಡಹೋ ನ ನಿವಾಸಿಯಾಗಿರುವ ಪ್ರಪಂಚದ ಶ್ರೇಷ್ಠ ವಿಜ್ಞಾನಿ ಥಾಮಸ್ ಅಲ್ವಾ ಎಡಿಸಿನ್ ಗಿಂತಲೂ ಹೆಚ್ಚಿನ ಪೇಟೆಂಟ್ ಗಳಿಗೆ ಒಡೆಯರಾಗಿರುವ ಗುರುತೇಜ್ ಸಂಧು ಅವರ ಬಗ್ಗೆ.

ಥಾಮಸ್ ಅಲ್ವಾ ಎಡಿಸನ್ ಗಿಂತಲೂ ಹೆಚ್ಚಿನ 'ಅಮೆರಿಕನ್ ಪೇಟೆಂಟ್ ಗಳ' ಒಡೆಯ ಭಾರತೀಯ ಮೂಲದ ವಿಜ್ಞಾನಿ ಗುರುತೇಜ್ ಸಂಧು

Monday September 02, 2019,

2 min Read

ಇತಿಹಾಸ ಕೇವಲ ಯುದ್ಧ, ಜಯಪಜಯಗಳ ಸುತ್ತ ಮಾತ್ರ ಸುತ್ತುವುದಿಲ್ಲ, ನಮ್ಮ ಜೀವನ ವಿಧಾನವನ್ನು, ಕಾರ್ಯವ್ಯಾಪ್ತಿಯನ್ನು ಒಟ್ಟಾರೆ ನಮ್ಮ ಬದುಕಿನ ರೂಪು ರೇಷೆಗಳನ್ನು ಹೊಸ ಅನ್ವೇಷಣೆಗಳ ಮೂಲಕ ಬದಲಿಸುತ್ತಾ ಬಂದ ಹಲವಾರು ವಿಜ್ಞಾನಿಗಳ, ಅನ್ವೇಷಕರ ಕೊಡುಗೆಗಳ ಸುತ್ತಲೂ ಪರಿಭ್ರಮಿಸುತ್ತದೆ. ಉದಾಹರಣೆಗೆ ನಿಕೋಲಾ ಟೆಸ್ಲಾ ಅವರ ವಿದ್ಯುತ್ಕಾಂತೀಯತೆ, ಡಿಎನ್‌ಎ ಅನುಕ್ರಮಕ್ಕೆ ರೊಸಾಲಿಂಡ್ ಫ್ರಾಂಕ್ಲಿನ್ ಅವರ ಕೊಡುಗೆಗಳು ಹಾಗೂ ಅಲನ್ ಟ್ಯೂರಿಂಗ್ರರವರ ಕೃತಕ ಬುದ್ಧಿಮತ್ತೆ, ಹೀಗೆ ವಿಶ್ವದ ಅತ್ಯುತ್ತಮ ಅನ್ವೇಷಕ ಮನಸ್ಸುಗಳು ಮಾನವಕುಲವನ್ನು ಮರುರೂಪಿಸಿದ ಕೆಲವು ನಿರ್ಣಾಯಕ ಆವಿಷ್ಕಾರಗಳು ಸಾಕಷ್ಟಿವೆ.


ಈ ಹಿನ್ನೆಲೆಯಲ್ಲಿ ಭಾರತದ ಕೊಡುಗೆಯೇನು ಕಡಿಮೆಯಿಲ್ಲ. ನಮ್ಮದೇಶಕ್ಕೆ ತನ್ನದೇ ಆದ ಆವಿಷ್ಕಾರಗಳನ್ನು ಜಗತ್ತಿಗೆ ನೀಡಿದ ಹೆಗ್ಗಳಿಕೆ ಇದೆ. ಉದಾಹರಣೆಗೆ ಐಐಟಿ ದೆಹಲಿಯ ವಿದ್ಯಾರ್ಥಿ ಆಗಿದ್ದ ಭಾರತೀಯ ಮೂಲದವರಾದ ಪ್ರಸ್ತುತ ಇಡಹೋ ನ ನಿವಾಸಿ 'ಗುರಿತೇಜ್ ಸಂಧು', ಕಳೆದ 29 ವರ್ಷಗಳಲ್ಲಿ 1299 ಪೇಟೆಂಟ್ (ಭೌದ್ಧಿಕ ಹಕ್ಕುಪತ್ರ) ಗಳ ಒಡೆಯರಾಗಿದ್ದು, ವಾಸ್ತವದಲ್ಲಿ ಇವರು 1,093 ಪೇಟೆಂಟ್ಗಳನ್ನು ಹೊಂದಿದ್ದ ಖ್ಯಾತ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್ ಅವರಿಗಿಂತಲೂ ಹೆಚ್ಚಿನ ಪೇಟೆಂಟ್ಗಳನ್ನು ಹೊಂದಿದ ವಿಜ್ಞಾನಿ ಎಂಬ ಶ್ರೇಯಸ್ಸಿಗೆ ಭಾಜನರಾಗಿದ್ದಾರೆ.


ಗುರುತೇಜ್ ಸಂಧು (ಚಿತ್ರ ಕೃಪೆ:‌ ಇದಾಹೊ ಸ್ಟೆಟ್ಸ್‌ ಮ್ಯಾನ್)

ಸ್ಕೂಪ್‌ ಹೂಪ್ ನ ವರದಿಯ ಪ್ರಕಾರ, ಗುರ್ತೆಜ್ ಪ್ರಸ್ತುತ ಮೈಕ್ರಾನ್ ಟೆಕ್ನಾಲಜಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ತಮ್ಮ ಆಸಕ್ತಿಯ ಕ್ಷೇತ್ರವಾದ ಸಂಶೋಧನೆಯಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ವಿಜ್ಞಾನ ದಲ್ಲಿ ಆಸಕ್ತಿ ಹುಟ್ಟಿದ ಬಗೆ


ಲಂಡನ್‌ ನಲ್ಲಿನ ಭಾರತೀಯ ಮೂಲದ ದಂಪತಿಗಳಿಗೆ ಜನಿಸಿದ ಗುರುತೇಜ್ ಐಐಟಿ ದೆಹಲಿಯಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪದವಿಪಡೆದು, ಅಮೆರಿಕದ ಚಾಪೆಲ್ ಹಿಲ್ ನ 'ನೋರ್ತ್ ಕರೊಲಿನ ವಿಶ್ವವಿದ್ಯಾಲಯದಲ್ಲಿ' ಭೌತಶಾಸ್ತ್ರ ವಿಭಾಗದಲ್ಲಿ ಸಂಶೋಧನ ವಿದ್ಯಾರ್ಥಿ ಆಗಿ ತೆರಳಿದರು.


ತಮ್ಮ ಸಂಶೋಧನಾ ಅವಧಿಯಲ್ಲೇ, ಗುರುತೇಜ್ ಅವರು ಇಂಟಿಗ್ರೇಟೆಡ್ ಸರ್ಕ್ಯೂಟ್ಸ್ ವಿಷಯದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರು. ಈ ಆಸಕ್ತಿಯೇ ಅವರಿಗೆ ಜಪಾನ್ ಮತ್ತು ಇತರ ದೇಶಗಳು ಸರ್ಕಾರದ ಸಬ್ಸಿಡಿ ಸೌಲಭ್ಯದಿಂದ ಪ್ರೇರಿತವಾದ ಮೆಮೋರಿಚಿಪ್ ತಯಾರಕರ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದ ಸಮಯದಲ್ಲೇ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಹಾಗೂ ಮೈಕ್ರೋನ್ ಟೆಕ್ನಾಲಜಿ ಅಲ್ಲಿ ಉದ್ಯೋಗ ಅವಕಾಶವನ್ನು ಕಲ್ಪಿಸಿತ್ತು.


ಈ ಎರಡು ಆಯ್ಕೆಗಳಲ್ಲಿ ಗುರುತೇಜ್ ಅವರು ಆಯ್ದುಕೊಂಡಿದ್ದು ಬೋಇಸ್ ನ ಮೈಕ್ರೋನ್. ಅವರು "ಮೂರೆಸ್ ಲಾ"ದ ಮೇಲೆ ಕೆಲಸ ಮಾಡಿ ಜೊತೆಗೆ ಹೆಚ್ಚಿನ ಮೆಮೊರಿಯನ್ನು ತಡೆದುಕೊಳ್ಳಬಲ್ಲ ಚಿಪ್ ಗಳ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದೇ ಇವರಿಗೆ ಸಂಶೋಧಕನ ಸ್ಥಾನವನ್ನು ತಂದುಕೊಟ್ಟಿದ್ದಲ್ಲದೇ ಪೇಟೆಂಟಗಳ ಸೃಷ್ಟಿಗೆ ಕಾರಣವಾಯಿತು.


ಗುರುತೇಜ್ ಸಂಧು (ಚಿತ್ರ ಕೃಪೆ: ಇದಾಹೊ ಸ್ಟೆಟ್ಸ್‌ ಮ್ಯಾನ್)


ಮೈಕ್ರೋನ್ ಅಲ್ಲಿ ಉದ್ಯೋಗಿಯಾಗಿ ಕೆಲಸಮಾಡುತ್ತಿದ್ದಾಗ ಗುರುತೇಜ್ ಅವರ ಪೇಟೆಂಟಗಳು ಕಂಪನಿಯ ಸ್ವಾಮ್ಯಕ್ಕೆ ಒಳಪಟ್ಟಿತ್ತು. ಸಂಶೋಧಕರಾದ ಗುರುತೇಜ್ ಹಾಗೂ ಅವರ ಸಹದ್ಯೋಗಿಗಳಿಗೆ ಕಂಪನಿ ಬೋನಸ್ ನೀಡುತ್ತಿತ್ತು.


ಕಳೆದ 15 ವರ್ಷಗಳಿಂದ ಗುರುತೇಜ್ ಅವರು ಬೋಇಸ್ ಸ್ಟೇಟ್ ಯೂನಿವರ್ಸಿಟಿ ಯ ಅಧ್ಯಾಪಕರಿಗೆ ಮಾರ್ಗದರ್ಶಕರಾಗಿ ಸೇವೆಸಲ್ಲಿಸುತ್ತಿದ್ದು ಇದು ಮೈಕ್ರೋನ್ ಜೊತೆಗೆ ನಿಕಟ ಸಂಬಂಧ ಬೆಳೆಸುವಲ್ಲಿ ಕಾರಣವಾಯಿತು.


ವಿಶ್ವವಿದ್ಯಾಲಯದ 'ಮೈಕ್ರಾನ್ ಸ್ಕೂಲ್ ಆಫ್ ಮೆಟೀರಿಯಲ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನ' ನಿರ್ದೇಶಕ 'ವಿಲ್ ಹ್ಯೂಸ್', ಗುರುತೇಜ್ ಅವರ ಮಾರ್ಗದರ್ಶನ ಕುರಿತು ಇದಾಹೊ ಸ್ಟೆಟ್ಸ್‌ ಮ್ಯಾನ್ರೊಂದಿಗೆ ಮಾತನಾಡುತ್ತಾ, ಹೀಗೆ ಹೇಳುತ್ತಾರೆ,


"ಗುರುತೇಜ್ ರಿಗೆ ತನ್ನ ಕೆಲಸದ ಬಗ್ಗೆ ಇರುವ ಅಪಾರ ಶೃದ್ಧೆ ಅವರ ಕೆಲಸಗಳು ಬೀರಿದ ಪ್ರಭಾವನ್ನು ನೋಡಿಯೇ ಹೇಳಬಹುದು. ಜಾಗತಿಕಮಟ್ಟದಲ್ಲಿ ಇದೀಗ ರೂಪುಗೊಳ್ಳುತ್ತಿರುವ ಉದಯೋನ್ಮುಖ ತಂತ್ರಜ್ಞಾನ ಹಾಗೂ ಸ್ಮರಣೆಯ ನಾಡಿಮಿಡಿತವನ್ನು ಅವರು ಬಹಳ ಚೆನ್ನಾಗಿ ಅರಿಯಬಲ್ಲರು."


ಗುರುತೇಜ್ ತಮ್ಮ ಆವಿಷ್ಕಾರಗಳಿಗೆ ಪೇಟೆಂಟ್‌ಗಳನ್ನು ಪಡೆದಿರುವುದು ಮಾತ್ರವಲ್ಲದೆ, ಕೊರಿಯಾದಲ್ಲಿ ಮೈಕ್ರೋನ್ ನ ಪ್ರತಿಸ್ಪರ್ಧಿ ಸ್ಯಾಮ್‌ಸಂಗ್ ಮತ್ತು ಎಸ್‌ಕೆ ಹೈನಿಕ್ಸ್‌ನಂತಹ ಕಂಪನಿಗಳ ಎದುರು ಸ್ಪರ್ದಿಸಿ ಜಾಗತಿಕ ಡಿ ಆರ್‌ ಎ ಎಮ್ ಮಾರುಕಟ್ಟೆಯಲ್ಲಿ 95% ಪ್ರತಿಶತದಷ್ಟು ಪಾಲನ್ನು ಪಡೆಯುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.