ಸರ್ಕಾರಿ ಶಾಲೆಗಳ ಸುಧಾರಣೆಗೆ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಬೇಕೆಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಸುಧಾರಿಸಲು ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರಿತ ಪರಿಹಾರವನ್ನು ಕಂಡುಹಿಡಿಯಲು ಟೆಲಿಕಾಂ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಶನಿವಾರ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಹೇಳಿದ್ದಾರೆ.

ಸರ್ಕಾರಿ ಶಾಲೆಗಳ ಸುಧಾರಣೆಗೆ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಬೇಕೆಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

Monday January 20, 2020,

2 min Read

ನಿಗದಿತ ಮಾನದಂಡಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ಟಾರ್ಟಪ್‌ಗಳಿಗೆ ಕೇಂದ್ರ ಮತ್ತು ರಾಜ್ಯಗಳು ಅವಕಾಶ ನೀಡಬೇಕೆಂದು ಸಚಿವರು ಹೇಳಿದರು.


"ಪ್ರಾಥಮಿಕ ಶಿಕ್ಷಣದಲ್ಲಿ ನಾವು ಬ್ಲಾಕ್‌ಚೈನ್‌ ಅನ್ನು ಹೇಗೆ ಹತೋಟಿಗೆ ತರಬಹುದು ಎಂದು ತಿಳಿಯಲು ನಾನು ತುಂಬಾ ಉತ್ಸುಕನಾಗಿದ್ದೇನೆ. ವಾಸ್ತವವಾಗಿ ಇಂದು ನಾನು ನಿಮಗೆ ಅಂದರೆ ಎನ್‌ಐಸಿ ತಂಡಕ್ಕೆ ಒಂದು ಕೆಲಸ ನೀಡಲಿದ್ದೇನೆ. ದೇಶಾದ್ಯಂತದ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಸುಧಾರಿಸಲು ಬ್ಲಾಕ್‌ಚೈನ್ ತಂತ್ರಜ್ಞಾನದ ಉತ್ತಮ ಅನ್ವಯದ ಬಗ್ಗೆ ನೀವು ಯೋಚಿಸಬಹುದೇ? ಸಾರ್ವಜನಿಕ ಶಾಲೆಗಳು ಉತ್ತಮವಾಗಿವೆ, ಖಾಸಗಿ ಶಾಲೆಗಳು ಉತ್ತಮವಾಗಿವೆ ಆದರೆ ಪರಿವರ್ತನೆಯ ಸಮಯದಲ್ಲಿ ನಾವು ತಂತ್ರಜ್ಞಾನದಿಂದ ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂಬುದು ನನ್ನ ಅಭಿಪ್ರಾಯ,” ಎಂದು ಪ್ರಸಾದ್ ಹೇಳಿದರು.
q


ಬ್ಲಾಕ್‌ಚೈನ್‌ನ್ನು ಸೇವೆಯಾಗಿ ಒದಗಿಸುವ ಸಲುವಾಗಿ ಬೆಂಗಳೂರಿನಲ್ಲಿ ಎನ್‌ಐಸಿ ಸ್ಥಾಪಿಸಿದ ಬ್ಲಾಕ್‌ಚೈನ್‌ ತಂತ್ರಜ್ಞಾನದ ಕೇಂದ್ರದ (ಸಿಒಇ) ಉದ್ಘಾಟನಾ ಸಂದರ್ಭದಲ್ಲಿ ಸಚಿವರು ಮಾತನಾಡುತ್ತ ಹೇಳಿದರು.


ಬ್ಲಾಕ್‌ಚೈನ್‌ ಮುಂದುವರಿದ ತಂತ್ರಜ್ಞಾನವಾಗಿದೆ. ಇದನ್ನು ಆರೋಗ್ಯ, ಹಣಕಾಸು, ಕೃಷಿ ಮತ್ತು ಇತರ ಹಲವಾರು ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳುವುದರಿಂದ ಸರ್ಕಾರಕ್ಕೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಹಾಯ ಮಾಡುತ್ತದೆ ಮತ್ತು ವಿಶ್ವಾಸ ಮತ್ತು ಅಸ್ಥಿರತೆಯನ್ನು ಒದಗಿಸುತ್ತದೆ ಎಂದರು.


ತನ್ನ ತಂತ್ರಜ್ಞಾನದಲ್ಲಿ ಸ್ಟಾರ್ಟಪ್‌ಗಳನ್ನು ಸೇರಿಸಿಕೊಳ್ಳುವ ಬಗ್ಗೆ ಅಲೋಚಿಸುವಂತೆ ಸಚಿವರು ಎನ್ಐಸಿಗೆ ಹೇಳಿದರು.


"ಭಾರತವು ಸುಮಾರು 26,000 ಸ್ಟಾರ್ಟಪ್‌ಗಳ ನೆಲೆಯಾಗಿದೆ. ಅದರಲ್ಲಿ 9,000, ತಂತ್ರಜ್ಞಾನ ಸಂಬಂಧಿತ ಸ್ಟಾರ್ಟಪ್ ಆಗವೆ. ಎನ್ಐಸಿಯು ಸ್ಟಾರ್ಟಪ್ ಚಳವಳಿಯ ದೊಡ್ಡ ಪೋಷಕವಾಗಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಸ್ಟಾರ್ಟಪ್ ಅನ್ನು ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಕೆಲ ಮಾನದಂಡಗಳು ಮತ್ತು ಷರತ್ತುಗಳ ಅಡಿಯಲ್ಲಿ ಪ್ರಾರಂಭಿಸಲು ಸಹಾಯ ಮಾಡಬೇಕು ಎಂದು ನಾನು ಯಾವಾಗಲೂ ಸಲಹೆ ನೀಡುತ್ತೇನೆ," ಎಂದು ಪ್ರಸಾದ್ ಹೇಳಿದರು.


ಬ್ಲಾಕ್‌ಚೇನ್ ತಂತ್ರಜ್ಞಾನವು ಆಡಳಿತ, ಖಜಾನೆ ನಿರ್ವಹಣೆ, ಅಬಕಾರಿ ಕಾರ್ಯಾಚರಣೆ ಇತ್ಯಾದಿಗಳಲ್ಲಿ ಹೊಸ ಪುಟವನ್ನು ತೆರೆಯುತ್ತದೆ ಮತ್ತು ಕೃಷಿ, ಆರೋಗ್ಯ, ಪ್ರಾಥಮಿಕ ಶಿಕ್ಷಣ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಇದರ ಬಳಕೆಯನ್ನು ನೋಡಲು ಬಯಸುತ್ತೇನೆ ಎಂದು ಹೇಳಿದರು.


ಈ ಉದಯೋನ್ಮುಖ ತಂತ್ರಜ್ಞಾನದ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಆಯ್ದ ಸರ್ಕಾರಿ ಯೋಜನೆಗಳಿಗಾಗಿ ಸಿ ಓ ಇ ಬ್ಲಾಕ್‌ಚೈನ್ ಆಧಾರಿತ ಪ್ರೂಫ್ ಆಫ್ ಕಾನ್ಸೆಪ್ಟ್ಸ್ (ಪಿಒಸಿ) ಗಳನ್ನು ಅಭಿವೃದ್ಧಿಪಡಿಸಿದೆ.


ಎನ್ಐಸಿ ಪ್ರಕಾರ, ಸರ್ಕಾರದಲ್ಲಿ ಬ್ಲಾಕ್‌ಚೈನ್‌ ಹೊಸ ಮತ್ತು ಅನಿರೀಕ್ಷಿತ ಬದಲಾವಣೆಗಳನ್ನು ಹಾಗೂ ಇ-ಆಡಳಿತ ವ್ಯವಸ್ಥೆಗಳಲ್ಲಿ ಪಾರದರ್ಶಕತೆ, ವಿಶ್ವಾಸವನ್ನು ಹೆಚ್ಚಿಸುವ ನಿರೀಕ್ಷೆಯಿದೆ.


ಬ್ಲಾಕ್‌ಚೈನ್‌ನಲ್ಲಿನ ಸಿ ಓ ಇ ಆಡಳಿತದ ವಿವಿಧ ಆಯಾಮಗಳಲ್ಲಿ ಬ್ಲಾಕ್‌ಚೇನ್ ತಂತ್ರಜ್ಞಾನದ ಬಳಕೆಗಾಗಿ ಯೋಜನೆಗಳ ಪುರಾವೆಗಳನ್ನು ನಿರ್ಮಿಸುವಲ್ಲಿ ಸರ್ಕಾರಿ ಇಲಾಖೆಗಳಿಗೆ ಅನುಕೂಲವಾಗಲಿದೆ ಎಂದು ಎನ್‌ಐಸಿ ಹೇಳಿಕೆ ನೀಡಿದೆ.