ಯುವತಿಯರಿಗೆ ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ಸ್ಪರ್ಧೆಗಳಿಗೆ ತರಬೇತಿ ನೀಡುತ್ತಿದೆ ದೆಹಲಿಯ ಈ ದಂಪತಿಗಳು ನಡೆಸುತ್ತಿರುವ ಸ್ಪೋರ್ಟ್ಸ್ ಕ್ಲಬ್

ನೈರುತ್ಯ ದೆಹಲಿಯಲ್ಲಿ ನೀಲಂ ಮತ್ತು ಅಜಯ್ ಸಾಹು ನಡೆಸುತ್ತಿರುವ ಪಾಲಂ ಸ್ಪೋರ್ಟ್ಸ್ ಕ್ಲಬ್ 14 ಅಂತರರಾಷ್ಟ್ರೀಯ ಕಬಡ್ಡಿ ಆಟಗಾರರನ್ನು ಸಿದ್ಧಗೊಳಿಸಿದೆ.

ಯುವತಿಯರಿಗೆ ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ಸ್ಪರ್ಧೆಗಳಿಗೆ ತರಬೇತಿ ನೀಡುತ್ತಿದೆ ದೆಹಲಿಯ ಈ ದಂಪತಿಗಳು ನಡೆಸುತ್ತಿರುವ ಸ್ಪೋರ್ಟ್ಸ್ ಕ್ಲಬ್

Friday February 14, 2020,

2 min Read

ಭಾರತದಲ್ಲಿ ಅತಿ ಹೆಚ್ಚು ಪ್ರಿಯವಾದ ಆಟ ಕ್ರಿಕೆಟ್ ಆಟವಾಗಿದೆ ಮತ್ತು ಕ್ರೀಡೆಯನ್ನು ದೊಡ್ಡ ರೀತಿಯಲ್ಲಿ ತೆಗೆದುಕೊಳ್ಳಲು ಬಯಸುವವರಿಗೆ ಕ್ರಿಕೆಟ್ ಅಚ್ಚುಮೆಚ್ಚಿನ ಆಟವಾಗಿದೆ. ಅದರಂತೆ ಕಬಡ್ಡಿಯಂತಹ ಕೆಲವು ಸಾಂಪ್ರದಾಯಿಕ ಕ್ರೀಡೆಗಳು ಸಹ ಬೆಳಕಿಗೆ ಬರುತ್ತಿವೆ.


ಸಾಂಪ್ರದಾಯಿಕ ಕ್ರೀಡೆಯ ಬಗ್ಗೆ ಉತ್ಸಾಹ ಇದ್ದರೂ ಸರಿಯಾದ ಮೂಲಸೌಕರ್ಯ ಮತ್ತು ಸೌಲಭ್ಯಗಳ ಕೊರತೆಯು ಇದೆ.


ಈ ಕ್ರೀಡಾ ಉತ್ಸಾಹಿ ದಂಪತಿಗಳು ನಡೆಸುತ್ತಿರುವ ದೆಹಲಿಯ ಕ್ಲಬ್, ಕಬಡ್ಡಿ ಕ್ರೀಡೆಯಲ್ಲಿ ಯುವ ಪ್ರತಿಭಾವಂತ ಹುಡುಗಿಯರನ್ನು ಪೋಷಿಸುತ್ತಿದೆ. ಈ ಕ್ಲಬ್ ಇಲ್ಲಿಯವರೆಗೆ 13 - 14 ಅಂತರರಾಷ್ಟ್ರೀಯ ಕಬಡ್ಡಿ ಆಟಗಾರರನ್ನು ಹುಟ್ಟುಹಾಕಿದೆ. 50 ವರ್ಷದ ನೀಲಂ ಸಾಹು ಬಾಲಕಿಯರಿಗೆ ತರಬೇತಿ ನೀಡುತ್ತಾರೆ ಮತ್ತು ಅವರ ಪತಿ ಅಜಯ್ ಸಾಹು ಕ್ಲಬ್‌ನ ಕಾರ್ಯದರ್ಶಿಯಾಗಿ ಅಲ್ಲಿಯ ವ್ಯವಸ್ಥಾಪಕ ಅಂಶಗಳು ಸೇರಿದಂತೆ ಕಾರ್ಯಗಳೆಲ್ಲವನ್ನು ನಿರ್ವಹಿಸುತ್ತಾರೆ.


ನೀಲಂ ಮತ್ತು ಅಜಯ್ (ಚಿತ್ರಕೃಪೆ: ಎಡೆಕ್ಸ್ ಲೈವ್)

ಎಡೆಕ್ಸ್ ಲೈವ್ ಜೊತೆ ಮಾತನಾಡಿದ ಅಜಯ್,


"ಅನೇಕ ಆಟಗಾರರು ದೂರದ ಪ್ರದೇಶಗಳಿಂದ ಬರುವವರೆ ಮತ್ತು ಹೆಚ್ಚಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದವರು. ಸಾರ್ವಜನಿಕ ಸಾರಿಗೆಯನ್ನು ಬಳಸಲು ಸಾಧ್ಯವಾಗದ ಪರಿಸ್ಥಿತಿ ಇರುವ ಕಾರಣ ಅವರು 7-10 ಕಿ.ಮೀ ಯಿಂದ ನಡೆದುಕೊಂಡೆ ಬರಬೇಕಾಗುತ್ತೆ. ಇಂತಹ ಕಷ್ಟಗಳನ್ನು ಮೀರಿ ಅವರು ಉತ್ತಮ ಪ್ರದರ್ಶನ ನೀಡಮಾಡಿದ್ದೇವೆ,ದ್ದರಿಂದ ನಾವು ನಮ್ಮ ಮನೆಯಲ್ಲಿ ಒಂದು ಕೋಣೆಯನ್ನು ಖಾಲಿ ಮಾಡಿದ್ದೇವೆ. ಅಲ್ಲಿ ಆಟಗಾರರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ" ಎಂದರು.


ನೀಲಂ ಕಳೆದ 23 ವರ್ಷಗಳಿಂದ ಕಬಡ್ಡಿ ಕ್ಷೇತ್ರದಲ್ಲಿ ಯುವತಿಯರಿಗೆ ತರಬೇತಿ ನೀಡುತ್ತಿದ್ದಾರೆ. ಕ್ಲಬ್‌ನಿಂದ 12 ಬಾಲಕಿಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.


ತಮ್ಮ ವಿದ್ಯಾರ್ಥಿಗಳೊಂದಿಗೆ ಅಜಯ್ (ಚಿತ್ರಕೃಪೆ: ಎಡೆಕ್ಸ್ ಲೈವ್)

ಆದರೆ ಯಶಸ್ಸಿನ ಹಾದಿ ಯಾವಾಗಲೂ ಸುಗಮವಾಗಿರುವುದಿಲ್ಲ. ನೀಲಂ ಮತ್ತು ಅಜಯ್ ಅವರು ಕ್ಲಬ್ ಅನ್ನು ಬಾಡಿಗೆ ಆವರಣದಲ್ಲಿ ನಡೆಸುತ್ತಿದ್ದರಿಂದ ಸಂಕಷ್ಟಗಳನ್ನು ಎದುರಿಸಬೇಕಾಯಿತು. "ಹೆಚ್ಚು ನೀರನ್ನು ಬಳಸುವುದರಿಂದ ಅವರನ್ನು ಆಟಗಾರರನ್ನು ಇಟ್ಟುಕೊಳ್ಳಲು ಭೂ ಮಾಲೀಕರು ಹಿಂಜರಿಯುತ್ತಾರೆ. ಇದರಿಂದ ನಾನು ಆಟಗಾರರಿಗೆ ಕಡಿಮೆ ನೀರನ್ನು ಬಳಸಿ ಎಂದು ಹೇಳಬೇಕಾಯಿತು. ಏಕೆಂದರೆ ನಮ್ಮನ್ನು ಅಲ್ಲಿಂದ ಹೊರಗೆ ಹಾಕಿದರೆ ಮಕ್ಕಳನ್ನು ಇರಿಸಲು ಬೇರೆ ಜಾಗವಿರಲ್ಲಿಲ್ಲ," ಎಂದು ನೀಲಂ ಹೇಳಿದರು, ವರದಿ ದಿ ಲಾಜಿಕಲ್ ಇಂಡಿಯನ್.


ಇಂತಹ ತೊಂದರೆಗಳ ಹೊರತಾಗಿಯೂ ಈ ದಂಪತಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶವನ್ನು ಎಂದಿಗೂ ಕೈ ಬಿಡಲಿಲ್ಲ. ವಿದ್ಯಾರ್ಥಿಗಳ ಯಶಸ್ಸಿಗೆ ಸಾಕ್ಷಿಯಾಗಿ, ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಹರಿಯಾಣದ ಜನರು ಕೂಡ ಕ್ಲಬ್ ಅನ್ನು ಸಂಪರ್ಕಿಸಲು ಪ್ರಾರಂಭಿಸಿದರು. ದಂಪತಿಗಳು ಈಗ ಪಾಲಂ ಶಾಲೆಯ ಬಳಿ ಒಂದು ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ. ಅಲ್ಲಿ ಆಟಗಾರರು ತಮ್ಮ ತರಬೇತಿ ಜೊತೆಗೆ ವಿಶ್ರಾಂತಿಯನ್ನು ಪಡೆಯಬಹುದು.