ನಾಸಾ ಉಪಗ್ರಹದ ರಿಯಲ್ ಟೈಂ ದತ್ತಾಂಶವು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಹಾಯವಾಗಬಲ್ಲದು

ನಾಸಾ ನಡೆಸಿದ ಅಧ್ಯಯನದ ಪ್ರಕಾರ, ತುರ್ತು ಸಂಧರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವವರು ಪ್ರವಾಹ ದುರಂತದ ನಂತರ ಇತರ ನಿರ್ಧಾರ ತೆಗೆದುಕೊಳ್ಳುವ ಸಂಧರ್ಭದಲ್ಲಿ ನೈಜ-ಸಮಯದ ಉಪಗ್ರಹ ದತ್ತಾಂಶವನ್ನು ಬಳಸುವುದರ ಮೂಲಕ ಕಾರ್ಯಾಚರಣೆಗೆ ತಗಲುವ ವೆಚ್ಚವನ್ನು ಕಡಿತಗೊಳಿಸಬಹುದು ಮತ್ತು ಸಮಯವನ್ನು ಉಳಿಸಬಹುದು.

ನಾಸಾ ಉಪಗ್ರಹದ ರಿಯಲ್ ಟೈಂ ದತ್ತಾಂಶವು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಹಾಯವಾಗಬಲ್ಲದು

Tuesday November 26, 2019,

2 min Read

ಫ್ರಂಟಿಯರ್ಸ್ ಇನ್ ಎನ್ವಿರಾನ್ಮೆಂಟಲ್ ಸೈನ್ಸ್ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನವು ವಿಪತ್ತು ಸನ್ನಿವೇಶಗಳಲ್ಲಿ ಉಪಗ್ರಹ ದತ್ತಾಂಶವನ್ನು ಬಳಸುವ ಮೌಲ್ಯವನ್ನು ಅಂದಾಜು ಮಾಡಿದೆ.


2011 ರ ಆಗ್ನೇಯ ಏಷ್ಯಾದ ಪ್ರವಾಹವನ್ನು ಕೇಸ್ ಸ್ಟಡಿ ಆಗಿ ಬಳಸಿಕೊಂಡು ಆಂಬುಲೆನ್ಸ್ ಚಾಲಕರು ಮತ್ತು ಇತರ ತುರ್ತು ಪ್ರತಿಕ್ರಿಯೆ ನೀಡುವವರು ಪ್ರವಾಹಕ್ಕೆ ಸಿಲುಕಿದ ರಸ್ತೆಗಳ ಬಗ್ಗೆ ನೈಜ-ಸಮಯದ ಮಾಹಿತಿಯನ್ನು ಪಡೆದುಕೊಂಡು ಹೇಗೆ ತಮ್ಮ ಸಮಯವನ್ನು ಮತ್ತು ವೆಚ್ಚವನ್ನು ಕಡಿತಗೊಳಿಸಿಕೊಳ್ಳಬಹುದು ಎಂಬುದನ್ನು ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ ಸಂಶೋಧಕರು ಅಧ್ಯಯನ ವಿಷಯವಾಗಿ ಬಳಸಿಕೊಂಡಿದ್ದಾರೆ.


ಸಾಂಕೇತಿಕ ಚಿತ್ರ


ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರು ಉಪಗ್ರಹ ಆಧಾರಿತ ನಕ್ಷೆಗಳನ್ನು ಹೊಂದಿದ್ದರೆ ಅದು ಪ್ರವಾಹದಿಂದ ಮುಳುಗಿರುವ ರಸ್ತೆಗಳನ್ನು ನಿಖರವಾಗಿ ತೋರಿಸಿದರೆ ಎಷ್ಟು ಸಮಯವನ್ನು ಉಳಿಸಬಹುದೆಂದು ಅಂದಾಜು ಮಾಡುವ ಮೂಲಕ ಪ್ರವಾಹಕ್ಕೆ ಒಳಗಾದ ರಸ್ತೆಮಾರ್ಗಗಳ ನೈಜ-ಸಮಯದ ಮಾಹಿತಿಯ ಮೌಲ್ಯವನ್ನು ಅವರು ತನಿಖೆ ಮಾಡಿದರು.


ಆಗ್ನೇಯ ಏಷ್ಯಾದ ಮೆಕಾಂಗ್ ನದಿ ಜಲಾನಯನ ಪ್ರದೇಶದ 2011 ರ ಪ್ರವಾಹದ ನಂತರ ಲಕ್ಷಾಂತರ ಎಕರೆ ಬೆಳೆಗಳನ್ನು ಮುಳುಗಿಸಿ ನಾಶಪಡಿಸಿತು, ಲಕ್ಷಾಂತರ ಜನರನ್ನು ಸ್ಥಳಾಂತರಿಸಿತು ಮತ್ತು ನೂರಾರು ಜನರನ್ನು ಬಲಿತೆಗೆದುಕೊಂಡಿತು. ಈ ದತ್ತಾಂಶವನ್ನೇ ತಮ್ಮ ಕೇಸ್ ಸ್ಟಡಿಗೆ ಸಂಶೋಧಕರು ಬಳಸಿಕೊಂಡರು.


ಹಿಂದಿನ ಅಧ್ಯಯನಗಳಲ್ಲಿ, ಬಾಹ್ಯಾಕಾಶ ಆಧಾರಿತ ಅವಲೋಕನಗಳಿಂದ ಪ್ರವಾಹದ ಆಳವನ್ನು ಅಂದಾಜು ಮಾಡಲು ಸಂಶೋಧಕರು ಅಲ್ಗಾರಿದಮ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಸ್ಥಳೀಯ ಮೂಲಸೌಕರ್ಯ, ಜನಸಂಖ್ಯೆ ಮತ್ತು ಭೂ ಕವಚದ ಮಾಹಿತಿಯೊಂದಿಗೆ ಈ ಡೇಟಾವನ್ನು ಸಂಯೋಜಿಸಿದ್ದಾರೆ.


ಅಲ್ಗಾರಿದಮ್ ಬಳಸಿ, ಅವರು ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿರುವ ಮೆಕಾಂಗ್ ನದಿ ಜಲಾನಯನ ಪ್ರದೇಶದ ವಿಪತ್ತು ಅಪಾಯವನ್ನು ಲೆಕ್ಕಹಾಕಬಹುದು.


ಪ್ರಸ್ತುತ ಅಧ್ಯಯನದಲ್ಲಿ, ಸಂಶೋಧಕರು ನಾಸಾದ ಮಧ್ಯಮ ರೆಸಲ್ಯೂಶನ್ ಇಮೇಜಿಂಗ್ ಸ್ಪೆಕ್ಟ್ರೋರೇಡಿಯೋಮೀಟರ್ (MODIS) ನ ಡೇಟಾವನ್ನು ಬಳಸಿಕೊಂಡು ಪ್ರವಾಹದ ನೀರಿನ ಆಳವನ್ನು ಅಂದಾಜು ಮಾಡಿದ್ದಾರೆ ಮತ್ತು ನಾಸಾ-ಯುಎಸ್ ಜಿಎಸ್ ಲ್ಯಾಂಡ್‌ಸ್ಯಾಟ್ ಉಪಗ್ರಹಗಳಿಂದ ಭೂ ಕವಚವನ್ನು ಅಂದಾಜಿಸಿದ್ದಾರೆ.


ಪ್ರದೇಶದ ಮೂಲಸೌಕರ್ಯ, ರಸ್ತೆ ಮತ್ತು ಜನಸಂಖ್ಯೆಯನ್ನು ಅಳೆಯಲು ಅವರು ನಾಸಾದ ಸಾಮಾಜಿಕ ಆರ್ಥಿಕ ದತ್ತಾಂಶ ಮತ್ತು ಅನ್ವಯಗಳ ಕೇಂದ್ರ (SEDAC) ಮತ್ತು ಓಪನ್-ಸ್ಟ್ರೀಟ್ಮ್ಯಾಪ್ - ಮುಕ್ತ-ಪ್ರವೇಶ ಭೌಗೋಳಿಕ ದತ್ತಾಂಶ ಮೂಲದಿಂದ ದತ್ತಾಂಶವನ್ನು ಬಳಸಿದ್ದಾರೆ.


"ವಿಕೋಪದ ಒಂದೆರಡು ಗಂಟೆಗಳಲ್ಲಿ ನಮಗೆ ತಿಳಿದಿರುವುದನ್ನು ಪ್ರತಿನಿಧಿಸುವ ಡೇಟಾವನ್ನು ನಾವು ಆರಿಸಿದ್ದೇವೆ" ಎಂದು ಗೊಡ್ಡಾರ್ಡ್‌ನ ಸಹಾಯಕ ವಿಜ್ಞಾನಿ ಪೆರ್ರಿ ಒಡ್ಡೊ ಹೇಳಿದರು.


ಡೇಟಾವನ್ನು ಬಳಸಿಕೊಂಡು, ಸಂಶೋಧಕರು ತುರ್ತು ರವಾನೆ ತಾಣಗಳು ಮತ್ತು ಅಗತ್ಯವಿರುವ ಪ್ರದೇಶಗಳ ನಡುವೆ ನೇರವಾದ ಮಾರ್ಗಗಳನ್ನು ಪಟ್ಟಿಮಾಡಿದ್ದಾರೆ.


ನಂತರ ಅವರು ರಿಯಲ್ ಟೈಂ ಪ್ರವಾಹದ ಮಾಹಿತಿಯನ್ನು ಸೇರಿಸುವ ಮೂಲಕ ಹೆಚ್ಚು ಹೆಚ್ಚು ಪ್ರವಾಹಕ್ಕೆ ಒಳಗಾದ ಪ್ರದೇಶಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಹೊಸ ಮಾರ್ಗಗಳನ್ನು ರಚಿಸಿದ್ದಾರೆ. 16 ಕಿಲೋಮೀಟರ್ ಪ್ರವಾಹ ಪೀಡಿತ ರಸ್ತೆಮಾರ್ಗಗಳು ತಮ್ಮ ಶಿಫಾರಸುಗಳಲ್ಲಿವೆ ಎಂದು ಅಧ್ಯಯನವು ತಿಳಿಸಿದೆ.


ಆದಾಗ್ಯೂ, ಪ್ರವಾಹ ಮಾಹಿತಿಯನ್ನು ಒಳಗೊಂಡ ಮಾರ್ಗಗಳು ಹೆಚ್ಚು ದೂರವನ್ನು ಹೊಂದಿದ್ದವು. ಆದರೆ ಈ ಮಾರ್ಗಗಳು ಪ್ರವಾಹ ಪೀಡಿತ ರಸ್ತೆಗಳನ್ನು ಹೊರತುಪಡಿಸಿ ರಚಿಸಿದವಾಗಿದ್ದವು. ಆದ್ದರಿಂದ ಇಲ್ಲಿನ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚು ಸಮಯ ಮತ್ತು ಸಂಪನ್ಮೂಲಗಳನ್ನು ವ್ಯಯಿಸಬೇಕಾಯಿತು.


ರಿಯಲ್ ಟೈಮ್ ಮಾಹಿತಿಯನ್ನಾಧರಿಸಿದ ಈ ಮಾರ್ಗಗಳು ಕೇವಲ ಎಂಟು ಕಿಲೋಮೀಟರ್ ಪ್ರವಾಹಪೀಡಿತ ರಸ್ತೆಮಾರ್ಗಗಳನ್ನು ಒಳಗೊಂಡಿವೆ ಎಂದು ಸಂಶೋಧಕರು ಹೇಳಿದ್ದಾರೆ.


ಸಂಶೋಧಕರ ಪ್ರಕಾರ, ಈ ಹೊಸ ಮಾರ್ಗಗಳು ಪ್ರವಾಹಕ್ಕೆ ಸಿಲುಕಿದ ಪ್ರದೇಶಗಳಲಿಗೆ ತಲುಪಲು ಇರುವ ಇತರ ಮಾರ್ಗಗಳಿಗೆ ಹೋಲಿಸಿದರೆ ಸರಾಸರಿ ಒಂಬತ್ತು ನಿಮಿಷ ವೇಗವಾಗಿದ್ದವು.


ದಕ್ಷಿಣ ಪೂರ್ವ ಏಷಿಯಾದಲ್ಲಿ ಮಾಡಿದ ಹಳೆಯ ಅಧ್ಯಯನದ ಪ್ರಕಾರ, ತುರ್ತು ವಾಹನದ ಚಾಲನಾ ಸಮಯವನ್ನು ಪ್ರತಿ ಟ್ರಿಪ್‌ ಗೆ ಒಂದು ನಿಮಿಷದಂತೆ ಒಂದು ವರ್ಷದವರೆಗೆ ಕಡಿಮೆಗೊಳಿಸಿದರೆ, ೫೦ ಮಿಲಿಯನ್‌ ಯು ಎಸ್‌ ಡಾಲರ್‌ ಗಳಷ್ಟು ನಷ್ಟವನ್ನು ತಡೆಯಬಹುದು.