ಬುಡಕಟ್ಟು ಜನಾಂಗದವರಿಗೆ ಉತ್ತಮ ಆರೋಗ್ಯ ನೀಡುವ ಸಲುವಾಗಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಜೊತೆ ಕೈಜೋಡಿಸಿದ ಪಿರಮಾಲ್ ಫೌಂಡೇಶನ್

2020 ರ ಆರಂಭದಲ್ಲಿ ಪ್ರಾರಂಭವಾಗಲಿರುವ ಬುಡಕಟ್ಟು ಆರೋಗ್ಯ ಸಹಯೋಗವು ಯುನಿವರ್ಸಲ್ ಹೆಲ್ತ್ ಕವರೇಜ್ ಸಾಧಿಸುವ ಪ್ರಯತ್ನಗಳಿಗೆ ಭಾರತ ಸರ್ಕಾರದೊಂದಿಗೆ ಕೆಲಸ ಮಾಡಲಿದೆ.

ಬುಡಕಟ್ಟು ಜನಾಂಗದವರಿಗೆ ಉತ್ತಮ ಆರೋಗ್ಯ ನೀಡುವ ಸಲುವಾಗಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಜೊತೆ ಕೈಜೋಡಿಸಿದ ಪಿರಮಾಲ್ ಫೌಂಡೇಶನ್

Friday November 29, 2019,

2 min Read

ಪಿರಮಾಲ್ ಫೌಂಡೇಶನ್ ಭಾರತದ ಬುಡಕಟ್ಟು ಪ್ರದೇಶದಲ್ಲಿ ಆರೋಗ್ಯದ ಸಮಸ್ಯೆಗಳನ್ನು ನಿಭಾಯಿಸಲು ಬುಡಕಟ್ಟು ಆರೋಗ್ಯ ಸಹಯೋಗವನ್ನು ಸ್ಥಾಪಿಸಿದೆ. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಈ ಸಹಯೋಗದಲ್ಲಿ ಪ್ರತಿಷ್ಠಾನದ ಮೊದಲ ಪಾಲುದಾರರಲ್ಲಿ ಒಬ್ಬರಾಗಲಿದ್ದು, ಮಹತ್ವಾಕಾಂಕ್ಷೆಯುಳ್ಳ ಜಿಲ್ಲೆಗಳು ಸೇರಿದಂತೆ ಬುಡಕಟ್ಟು ಜಿಲ್ಲೆಗಳಲ್ಲಿ ಆರೋಗ್ಯ ಮತ್ತು ಪೌಷ್ಠಿಕಾಂಶದ ಸಮಸ್ಯೆಗಳನ್ನು ಸುಧಾರಿಸುವತ್ತ ಗಮನ ಹರಿಸಲಿದೆ.


2020 ರ ಆರಂಭದಲ್ಲಿ ಪ್ರಾರಂಭವಾಗಲಿರುವ ಈ ಸಹಯೋಗವು 2030 ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) 3 ಅನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಭಾರತ ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಎಸ್‌ಡಿಜಿ 3 ಆರೋಗ್ಯಕರ ಜೀವನವನ್ನು ನಡೆಸಲು ಮತ್ತು ಎಲ್ಲರಿಗೂ ಆರೋಗ್ಯವಾಗಿರಲು ಸಹಾಯಮಾಡುತ್ತದೆ.


ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಕೋ ಚೇರ್ಮನ್ ಬಿಲ್ ಗೇಟ್ಸ್ ಅವರೊಂದಿಗೆ ಪಿರಮಾಲ್ ಫೌಂಡೇಶನ್ ಸ್ಥಾಪಕ ಅಜಯ್ ಪಿರಮಾಲ್


ಪಿರಮಾಲ್ ಫೌಂಡೇಶನ್‌ನ ಸಂಸ್ಥಾಪಕ ಅಜಯ್ ಪಿರಮಾಲ್, “2030 ರ ವೇಳೆಗೆ ಎಸ್‌ಡಿಜಿ 3 ಗುರಿಗಳನ್ನು ಸಾಧಿಸುವ ಭಾರತದ ಯೋಜನೆಗೆ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ. ಸಮಾಜದಲ್ಲಿ ಅಳಿವಿನಂಚಿನಲ್ಲಿರುವ ವರ್ಗಗಳ ಜನರ ಜೀವನವನ್ನು ವೇಗವಾಗಿ ಬದಲಾಯಿಸುವತ್ತ ಇದು ಹೆಚ್ಚಿನ ಗಮನವನ್ನು ನೀಡುತ್ತದೆ, ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮವನ್ನು ನೀಡಲು ಸಹಾಯ ಮಾಡುತ್ತದೆ” ಎಂದು ಹೇಳಿದರು.


ಬುಡಕಟ್ಟು ಆರೋಗ್ಯ ಸಹಯೋಗವು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು ಸಾಧಿಸುವ ಪ್ರಯತ್ನಗಳಿಗೆ ಪೂರಕವಾಗಿ ಭಾರತ ಸರ್ಕಾರದೊಂದಿಗೆ ಕಾರ್ಯನಿರ್ವಹಿಸುತ್ತದೆ.


ಮಧ್ಯ, ಪೂರ್ವ ಮತ್ತು ಉತ್ತರದ ಕೆಲ ಜಿಲ್ಲೆಗಳು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ 150 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡ ಸಮಾಜದಲ್ಲಿ ಅಳಿವಿನಂಚಿನಲ್ಲಿರುವ ವರ್ಗಗಳ ಅದರಲ್ಲೂ ವಿಶೇಷವಾಗಿ ಬುಡಕಟ್ಟು ಸಮುದಾಯಗಳ ಅಗತ್ಯತೆಗಳನ್ನು ಪರಿಹರಿಸಲು ಉನ್ನತ ಮಟ್ಟದ, ಸುಸ್ಥಿರ ಆರೋಗ್ಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.


ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷ ಬಿಲ್ ಗೇಟ್ಸ್, “ಭಾರತವು ಆರೋಗ್ಯ ಮತ್ತು ಪೋಷಣೆಯತ್ತ ಗಮನ ಹರಿಸುವುದು, ಅದರಲ್ಲೂ ವಿಶೇಷವಾಗಿ ಅದರ ಅತ್ಯಂತ ದುರ್ಬಲರನ್ನು ಕೇಂದ್ರೀಕರಿಸಿರುವುದು ದೇಶಕ್ಕೆ ನಿರ್ಣಾಯಕವಾಗಿದೆ ಮತ್ತು ಎಸ್‌ಡಿಜಿ 3 ಅನ್ನು ಪೂರೈಸುವ ವಿಶ್ವದ ಪ್ರಯತ್ನಗಳಿಗೆ ಸಹಾಯವಾಗಿದೆ. ವಿಶ್ವದ ಬಡವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಉದ್ದೇಶದಿಂದ ಸರ್ಕಾರದೊಂದಿಗಿನ ನಮ್ಮ ಸಹಭಾಗಿತ್ವವನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದರು.


ಈ ಸಹಯೋಗವು ಎರಡು ಪ್ರಮುಖ ವಿಧದಲ್ಲಿ ಕೆಲಸ ಮಾಡುತ್ತದೆ. ಸರ್ಕಾರದೊಂದಿಗೆ ಕೆಲಸ ಮಾಡುವುದು, ಮತ್ತು ಬುಡಕಟ್ಟು ಸಮುದಾಯಗಳಿಗೆ ಸಹ-ವಿನ್ಯಾಸ ಮತ್ತು ಸಹ-ಕಾರ್ಯಗತಗೊಳಿಸುವಲ್ಲಿ ಮಧ್ಯಸ್ಥಿಕೆ ಮಾಡುತ್ತದೆ.


ವೇದಿಕೆಯ ನಾಲ್ಕು ಪ್ರಮುಖ ಕಾರ್ಯಗಳು:


  • ಎಲ್ಲಾ ಹಂತದ ಸರ್ಕಾರಿ ಕಾರ್ಯಕರ್ತರ ಸಹಭಾಗಿತ್ವದಲ್ಲಿ ಪ್ರಮುಖ ಸಾರ್ವಜನಿಕ ಆರೋಗ್ಯ ಸೌಕರ್ಯಗಳನ್ನು ಅನುಷ್ಠಾನಕ್ಕೆ ಅನುಕೂಲ ಕಲ್ಪಿಸುವುದು.
  • ಜಿಲ್ಲಾಡಳಿತದೊಂದಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ ಜಿಲ್ಲೆಗಳಲ್ಲಿ ಜನರಿಗೆ ತಿಳುವಳಿಕೆಯನ್ನು ನೀಡುವುದು ಮತ್ತು ಶಕ್ತಗೊಳಿಸುವುದು.
  • ಸುಧಾರಿತ ಆರೋಗ್ಯ ಸೇವೆಗಳಿಗಾಗಿ ಜಿಲ್ಲಾ ಮಟ್ಟದಲ್ಲಿ ಹಣವನ್ನು ಸಂಗ್ರಹಿಸುವುದು.
  • ಉತ್ತಮ ಆಡಳಿತ ಮತ್ತು ಹೊಣೆಗಾರಿಕೆಯನ್ನು ನಿರ್ಧರಿಸಲು ತಂತ್ರಜ್ಞಾನವನ್ನು ನಿಯಂತ್ರಿಸುವುದು ಮತ್ತು ಎಲ್ಲರಿಗೂ ಕೈಗೆಟುಕುವ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ತಲುಪಿಸಲು ಸಮಗ್ರ ಫಲಾನುಭವಿ-ಕೇಂದ್ರಿತ ಆರೋಗ್ಯ ತಂತ್ರಜ್ಞಾನ ವೇದಿಕೆಯನ್ನು ರಚಿಸುವುದು.


ಸಮಸ್ಯೆಯ ಸಂಕೀರ್ಣತೆ ಮತ್ತು ಪ್ರಮಾಣವನ್ನು ಗಮನಿಸಿದರೆ, ಸರ್ಕಾರದ ಪ್ರಯತ್ನಗಳಿಗೆ ಸಹಾಯ ಮಾಡುವ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಂತಹ ಸಮಾನ ಮನಸ್ಕ, ಮೌಲ್ಯ-ಆಧಾರಿತ ಸಂಸ್ಥೆಗಳೊಂದಿಗೆ ಸಹಭಾಗಿತ್ವಗೊಳ್ಳುವುದು ಹೆಚ್ಚು ಅಗತ್ಯವಿದೆ ಎಂಬುದನ್ನು ನಾವು ನಂಬುತ್ತೇವೆ” ಎಂದು ಅಜಯ್ ಹೇಳಿದರು.


ಪಿರಮಾಲ್ ಫೌಂಡೇಶನ್ 25 ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಒಳಗೊಂಡಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಆರೋಗ್ಯ ರಕ್ಷಣೆಯನ್ನು ಸುಲಭಗೊಳಿಸಲು ಒಂದು ಚೌಕಟ್ಟನ್ನು ರಚಿಸುವ ಮೂಲಕ ಸರ್ಕಾರ, ಸಂಸ್ಥೆಗಳು ಮತ್ತು ಲೋಕೋಪಕಾರಿಗಳ ಮಧ್ಯಸ್ಥಿಕೆಗಳನ್ನು “ವಾಯ್ಸ್ ಆಫ್ ಕಮ್ಯುನಿಟಿ” ಎಂಬ ಯೋಜನೆಯೊಂದಿಗೆ ಸಮನ್ವಯಗೊಳಿಸುವ ಉದ್ದೇಶವಿದೆ.


ಭಾರತದ ಬುಡಕಟ್ಟು ಜನಸಂಖ್ಯೆಯನ್ನು ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ ಅವರಲ್ಲಿ ಒಳ್ಳೆಯ ಆರೋಗ್ಯದ ಸ್ಥಿತಿ ಕಂಡುಬರುವುದಿಲ್ಲ. ಭಾರತದಲ್ಲಿ ಸರಾಸರಿ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ತಾಯಿಯ ಮರಣ ಪ್ರಮಾಣ 100,000 ಜನನಕ್ಕೆ 130 ಸಾವುಗಳಾದರೆ, ಆದರೆ ಬುಡಕಟ್ಟು ಸಮುದಾಯದಲ್ಲಿ 100,000 ಜನನಗಳಿಗೆ ಸರಾಸರಿ 230 ಸಾವುಗಳು ಸಂಭವಿಸುತ್ತವೆ.


ಅಂತೆಯೇ, ಇತರ ಆರೋಗ್ಯ ತೊಂದರೆಗಳಾದ ಶಿಶು ಮರಣ, ಮಕ್ಕಳ ಅಪೌಷ್ಟಿಕತೆ ಮತ್ತು ಮಲೇರಿಯಾ ಮತ್ತು ಕ್ಷಯರೋಗವು ಬುಡಕಟ್ಟು ಸಮುದಾಯಗಳಲ್ಲಿ ಸಾಮಾನ್ಯ ಜನರಿಗಿಂತ ಹೆಚ್ಚು.