ನೀರಿನಿಂದ ನೆಲಕ್ಕೆ ಸಸ್ಯಗಳು ಹೇಗೆ ವಿಕಸನಗೊಂಡವು ಎಂದು ಕಂಡುಕೊಂಡ ಸಂಶೋಧಕರು

ನೀರಿನೊಳಗಿನ ಬ್ಯಾಕ್ಟೀರಿಯಾಗಳಿಂದ ಪಡೆದುಕೊಂಡ ಜೀನ್ಸ್‌ಗಳ ಕಾರಣದಿಂದಾಗಿಯೇ ನೀರೊಳಗೆ ಬೆಳೆಯುತ್ತಿದ್ದ ಸಸ್ಯಗಳು, ನೆಲವನ್ನು ಅರಸಿದ್ದು ಎಂದು, ಜೀವಿಗಳು ನೆಲದ ಮೇಲೆ ವಾಸಿಸಲು ಇಟ್ಟ ಮೊದಲ ಹೆಜ್ಜೆಯನ್ನು ಅರಸಿಹೋದ ಸಂಶೋಧನೆಯೊಂದು ವರದಿ ನೀಡಿದೆ.

ನೀರಿನಿಂದ ನೆಲಕ್ಕೆ ಸಸ್ಯಗಳು ಹೇಗೆ ವಿಕಸನಗೊಂಡವು ಎಂದು ಕಂಡುಕೊಂಡ ಸಂಶೋಧಕರು

Monday November 18, 2019,

2 min Read

ಕೆನಡಾದ ಆಲ್ಬರ್ಟಾ ವಿಶ್ವವಿದ್ಯಾಲಯದ ಗೇನ್ ಕಾ-ಶು ವಾಂಗ್ ಸೇರಿದಂತೆ ಸಂಶೋಧಕರು ಹೇಳಿರುವಂತೆ, ‌ಸಸ್ಯಗಳ ವಾಸಸ್ಥಾನ ಜಲದಿಂದ ನೆಲಕ್ಕೆ ಬದಲಾಗಲು, ಮಣ್ಣಿನೊಳಗಿನ ಜೀನ್‌ಗಳು ಆಲ್ಗೆಗೆ ವರ್ಗವಾದದ್ದೇ ಕಾರಣವಾಗಿದೆ.


ಜರ್ನಲ್‌ ಸೆಲ್‌ ನಲ್ಲಿ ನಮೂದಿಸಿದ ಅಧ್ಯಯನದ ಪ್ರಕಾರ ಸಸ್ಯಗಳು ಬಾಕ್ಟೀರಿಯಾಗಳಿಂದ ಹಾರಿಜಾಂಟಲ್‌ ಜೀನ್‌ ಟ್ರಾನ್ಸ್ಪರ್‌ ಎಂಬ ವಿಧಾನದಿಂದ ಜೀನ್‌ ಗಳನ್ನು ಪಡೆದಿವೆ, ಇದರಲ್ಲಿ ಡಿ ಎನ್ ಎ ಯು ಗುಂಪುಗಳ ನಡುವೆ ವರ್ಗಾವಣೆಯಾಗುತ್ತದೆ. ಇದು ವರ್ಟಿಕಲ್‌ ಜೀನ್‌ ಟ್ರಾನ್ಸ್ಪರ್‌ ಗೆ ವಿರುದ್ಧ ಪ್ರಕ್ರಿಯೆಯಾಗಿದೆ, ಇಲ್ಲಿ ಹೆತ್ತವರಿಂದ ಮಕ್ಕಳಿಗೆ ಜೀನ್‌ ನ ವರ್ಗಾವಣೆಯಾಗುತ್ತವೆ.


ಭೂಮಂಡಲೀಕರಣವೆಂದು ಕರೆಯಲ್ಪಡುವ ಜಲದಿಂದ ನೆಲಕ್ಕೆ ಜೀವಿಗಳ ಚಲನೆಯ ಪ್ರಕ್ರಿಯೆಯು, ಮೊದಲು ಗಿಡ, ಬಳ್ಳಿಗಳಿಂದ ಶುರುವಾಗಿ, ಪ್ರಾಣಿಗಳು ಹಾಗೂ ಕೊನೆಯಲ್ಲಿ ಮಾನವರಿಂದ ಮುಂದುವರೆದಿತ್ತು. ಹಾಗೂ ಈ ಅಧ್ಯಯನ ಜೀವಿಗಳ ಉಗಮದ ಮೊದಲ ಹೆಜ್ಜೆಗಳನ್ನು ವಿವರಿಸುತ್ತದೆ” ಎಂದು ವಾಂಗ್ ಹೇಳಿದ್ದಾರೆ.


ಸಂಶೋಧಕರ ಪ್ರಕಾರ, ಇದು ಅಂತಾರಾಷ್ಟ್ರೀಯ ಯೋಜನೆಯ ಒಂದು ಭಾಗವಾಗಿದ್ದು, ಇದರಲ್ಲಿ 10,000 ಗಿಡಗಳ ಜೀನೋಮ್‌ಗಳನ್ನು ಅನುಕ್ರಮವಾಗಿಡಲು ಅಧ್ಯಯನ ನಡೆಸಲಾಗಿದೆ.


"ನಾವು ಬಳಸಿದ ವಿಧಾನವೇನಿದೆ, ಫೈಲೋಜೆನೊಮಿಕ್ಸ್, ಅದು ವಿಕಸನೀಯ ನವೀನತೆಯ ಆಧಾರವಾಗಿರುವ ಆಣ್ವಿಕ ಕಾರ್ಯವಿಧಾನವನ್ನು ಗುರುತಿಸಲು ಒಂದು ಪ್ರಬಲ ವಿಧಾನವಾಗಿದೆ" ಎಂದು ಚೀನೀ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್‌ನ ಲೇಖಕ ಶಿಫೆಂಗ್ ಚೆಂಗ್ ಅವರು ಹೇಳಿದ್ದಾರೆ.


ಎರಡು ನಿರ್ದಿಷ್ಟ ಪಾಚಿಗಳ ಜೀನೋಮ್‌ಗಳನ್ನು ಅನುಕ್ರಮಗೊಳಿಸುವಾಗ ಈ ಆವಿಷ್ಕಾರವನ್ನು ಮಾಡಲಾಗಿದೆ ಎಂದು ಅಧ್ಯಯನವು ಗಮನಿಸಿದೆ - ಅವುಗಳಲ್ಲಿ ಒಂದು ಹೊಸ ಪ್ರಭೇದ ಸ್ಪೈರೊಗ್ಲೋಯಾ ಮಸ್ಕಿಕೋಲಾವನ್ನು ಕಂಡುಕೊಳ್ಳಲಾಗಿದೆ.


"ನೂರಾರು ಮಿಲಿಯನ್ ವರ್ಷಗಳ ಕಾಲ ಹಸಿರು ಪಾಚಿಯು, ಶುಭ್ರ ಜಲವಿರುವ ಸ್ಥಳದಲ್ಲಿ ವಾಸಿಸುತ್ತಿತ್ತು. ಆದರೆ ಕ್ರಮೇಣ ಆ ಜಾಗಗಳೆಲ್ಲ ಒಣಗುತ್ತ, ಕೊಳಚೆಗುಂಡಿಗಳು, ನದಿ ಪಾತ್ರ, ಜಿನುಗುವ ಕಲ್ಲುಬಂಡೆಗಳಾದವು" ಎನ್ನುತ್ತಾರೆ, ಮೈಕೆಲ್ ಮೆಲ್ಕೋನಿಯನ್, ಜರ್ಮನಿಯ ಡುಯಿಸ್ಬರ್ಗ್-ಎಸೆನ್ ವಿಶ್ವವಿದ್ಯಾಲಯದ ಸಹ-ಲೇಖಕರು.


"ಈ ಪಾಚಿಗಳು ಮಣ್ಣಿನ ಬ್ಯಾಕ್ಟೀರಿಯಾದಿಂದ ಪ್ರಮುಖ ವಂಶವಾಹಿಗಳೊಂದಿಗೆ ಬೆರೆತು ಮುಖ್ಯ ಜೀನ್‌ಗಳನ್ನು ಸ್ವೀಕರಿಸಿದವು ಮತ್ತು ಅವು ಅವುಗಳ ಮತ್ತು ತಮ್ಮ ವಂಶವರ್ಗಕ್ಕೆ ಕಠಿಣವಾದ ಭೂಮಿಯ ಪರಿಸರವನ್ನು ನಿಭಾಯಿಸಲು ಸಹಾಯ ಮಾಡಿತು ಮತ್ತು ಅಂತಿಮವಾಗಿ ಇಂದು ನಾವು ನೋಡುವ ಭೂ ಸಸ್ಯ ಸಸ್ಯಗಳಾಗಿ ಅವು ವಿಕಸನಗೊಂಡಿವೆ" ಎಂದು ಮೆಲ್ಕೋನಿಯನ್ ಹೇಳಿದರು.