ತಪ್ಪುಮಾಹಿತಿಯನ್ನು ಕಂಡುಹಿಡಿಯಲು ಸಹಾಯವಾಗುವಂತಹ ಏಳು ರೀತಿಯ ನಕಲಿ ಸುದ್ದಿಗಳನ್ನು ಗುರುತಿಸಲಾಗಿದೆ

ಸಂಶೋಧಕರು ಏಳು ಬಗೆಯ ನಕಲಿ ಸುದ್ದಿಗಳನ್ನು ಗುರುತಿಸಿದ್ದಾರೆ, ಇದು ತಪ್ಪು ಮಾಹಿತಿಯನ್ನು ಉತ್ತಮವಾಗಿ ಗುರುತಿಸಲು ಸಹಾಯ ಮಾಡುತ್ತದೆ ಮತ್ತು ತಪ್ಪುದಾರಿಗೆಳೆಯುವ ವಿಷಯವನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುವ ತಂತ್ರಜ್ಞಾನವನ್ನು ರಚಿಸಲು ಅನುವು ಮಾಡಿಕೊಡುತ್ತದೆ.

ತಪ್ಪುಮಾಹಿತಿಯನ್ನು ಕಂಡುಹಿಡಿಯಲು ಸಹಾಯವಾಗುವಂತಹ ಏಳು ರೀತಿಯ ನಕಲಿ ಸುದ್ದಿಗಳನ್ನು ಗುರುತಿಸಲಾಗಿದೆ

Tuesday November 19, 2019,

3 min Read

ವಾಶಿಂಗ್ಟನ್: ಯು ಎಸ್ ನ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ಸುಳ್ಳು ಸುದ್ದಿಗಳ ಉದಾಹರಣೆಗಳನ್ನು 7 ಮೂಲ ವಿಭಾಗಗಳಾಗಿ ವರ್ಗೀಕರಿಸಿದ್ದಾರೆ, ಅವುಗಳೆಂದರೆ ಸುಳ್ಳು ಸುದ್ದಿ, ಧ್ರುವೀಕರಿಸಿದ ವಿಷಯ, ವಿಡಂಬನೆ, ತಪ್ಪಾಗಿ ವರದಿ ಮಾಡುವುದು, ವ್ಯಾಖ್ಯಾನ, ಮನವೊಲಿಸುವ ಮಾಹಿತಿ ಮತ್ತು ನಾಗರಿಕ ಪತ್ರಿಕೋದ್ಯಮ.


ಅಮೇರಿಕನ್ ಬಿಹೇವಿಯರಲ್ ಸೈಂಟಿಸ್ಟ್ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನವು ತಪ್ಪು ಮಾಹಿತಿಯು ನೈಜ ಸುದ್ದಿಗಳಿಗಿಂತ ವ್ಯತಿರಿಕ್ತವಾಗಿರುತ್ತವೆ ಎಂದು ತಿಳಿಸಿದೆ.


“ಸಾಂಸ್ಕೃತಿಕವಾಗಿ “ನಕಲಿ ಸುದ್ದಿ”ಯನ್ನು ವ್ಯಾಖ್ಯಾನಿಸಲು ಮತ್ತು ಅರ್ಥಮಾಡಿಕೊಳ್ಳಲು ಅನೇಕ ಬಿಕ್ಕಟ್ಟುಗಳಿವೆ. ಏಕೆಂದರೆ ಹಲವಾರು ವಿದ್ವಾಂಸರು ಈ ಶಬ್ದದಿಂದಲೆ ದೂರ ಉಳಿಯುತ್ತಾರೆ, ಅವರ ಪ್ರಕಾರ ಇದು ಒಂದು ಪ್ರೇರಿತ ಅಥವಾ ಹೊಲಸು ಪದ,” ಎಂದು ಪೆನ್ಸಿಲ್ವೇನಿಯಾ ರಾಜ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಎಸ್ ಶ್ಯಾಮ್ ಸುಂದರ್ ಹೇಳಿದರು.


ನೈಜ ಸುದ್ದಿಗಳು ಸಂದೇಶ ಗುಣಲಕ್ಷಣಗಳನ್ನು ಹೊಂದಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ಅದು ಪತ್ರಿಕೋದ್ಯಮ ಶೈಲಿಗೆ ಹೊಂದಿಕೊಂಡಿರುತ್ತವೆ ಮತ್ತು ನಕಲಿ ಸುದ್ದಿಗಳ ನಿರೂಪಣೆ ಶೈಲಿಗಿಂತ ಭಿನ್ನವಾಗಿರುತ್ತವೆ.


ಸುಳ್ಳು ಸುದ್ದಿಗಳಲ್ಲಿ ವ್ಯಾಕರಣ ಸರಿಯಾಗಿರುವುದಿಲ್ಲ ಮತ್ತು ಕಡಿಮೆ ವಾಸ್ತವಿಕತೆಯನ್ನು ಹೊಂದಿರುತ್ತವೆ, ಭಾವನಾತ್ಮಕವಾಗಿ ಆವೇಶದ ಸಾಲುಗಳು, ದಾರಿತಪ್ಪಿಸುವ ಮುಖ್ಯಾಂಶಗಳು ಮುಂತಾದವುಗಳ ಮೇಲೆ ಹೆಚ್ಚಿನ ಅವಲಂಬನೆ ಇರುತ್ತದೆ.


ಅವರು ಯಾವ ರೀತಿಯ ಮೂಲಗಳನ್ನು ಬಳಸುತ್ತಾರೆ ಮತ್ತು ಅವುಗಳನ್ನು ಹೇಗೆ ಬಳಸುತ್ತಾರೆ ಎಂಬುದರ ಮೇಲೆ ಅದು ಒಂದು ಸುದ್ದಿಯಿಂದ ಇನ್ನೊಂದಕ್ಕೆ ಭಿನ್ನವಾಗುತ್ತದೆ.


ಇಂಥ ನಕಲಿ ಸುದ್ದಿಗಳಲ್ಲಿ "ನಮ್ಮನ್ನು ಸಂಪರ್ಕಿಸಿ" ಎಂಬ ವಿಭಾಗದಲ್ಲಿ ಪ್ರಮಾಣಿತವಲ್ಲದ ವೆಬ್ ವಿಳಾಸಗಳು ಮತ್ತು ವೈಯಕ್ತಿಕ ಇ-ಮೇಲ್ ಗಳ ಬಳಕೆ, ಸೈಟ್‌ನ ರಚನೆಯಲ್ಲಿನ ವ್ಯತ್ಯಾಸಗಳನ್ನು ಈ ಅಧ್ಯಯನವು ಗಮನಿಸಿದೆ.

ಬಳಸುವ ಜಾಲಗಳ ಆಯ್ಕೆಯಲ್ಲಿನ ವ್ಯತ್ಯಾಸಗಳನ್ನು ಇಂಥಹ ಸುದ್ದಿಗಳನ್ನು ಪ್ರತ್ಯೇಕಿಸಲು ಬಳಸಬಹುದಾಗಿದೆ, ಕಲ್ಪಿತ ಸುದ್ದಿಗಳು ಪ್ರಾಥಮಿಕವಾಗಿ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಸಾರವಾಗುತ್ತವೆ ನಂತರ ವಿರಳವಾಗಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿಯೂ ಬಿತ್ತರಗೊಳ್ಳುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.


ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಡಾಕ್ಟರೇಟ್ ಅಭ್ಯರ್ಥಿ ಮಾರಿಯಾ ಮೊಲಿನಾ ಅವರ ಪ್ರಕಾರ, ನಕಲಿ ಸುದ್ದಿಗಳನ್ನು ಗುರುತಿಸಲು ಜನರಿಗೆ ಸಹಾಯವಾಗಲು ವಿವಿಧ ರೀತಿಯ ಆನ್‌ಲೈನ್ ಸುದ್ದಿಗಳ ವಿವಿಧ ಸಂದೇಶ, ಮೂಲ, ರಚನಾತ್ಮಕ ಮತ್ತು ನೆಟ್‌ವರ್ಕ್ ವೈಶಿಷ್ಟ್ಯಗಳನ್ನು ಗುರುತಿಸುವುದು ಅವಶ್ಯಕವಾಗಿದೆ.


ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸುತ್ತಿರುವ ವಿಜ್ಞಾನಿಗಳಿಗೆ ಇದು ಒಂದು ದಿನ ಸ್ವಯಂಚಾಲಿತವಾಗಿ ಜನರನ್ನು ತಪ್ಪು ಮಾಹಿತಿ ಬಂದೋಡನೆ ಎಚ್ಚರಿಸುವಂತಹ ವ್ಯವಸ್ಥೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಮೋಲಿನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


"ನಮ್ಮ ಮಾಧ್ಯಮಗಳ ಪರಿಸರದ ನಡುವೆ ನಾವು ಅನೇಕ ವಿಧವಾದ ಸುದ್ದಿಗಳನ್ನು ನೋಡುತ್ತಿರುತ್ತೇವೆ, ಆದರೆ ಅವೆಲ್ಲವನ್ನು ಪ್ರಕಟಿಸಿ ಜನರಿಗೆ ತಿಳಿಸಬೇಕಾಗಿರುವುದಿಲ್ಲ. ಈ ನಕಲಿ ಸುದ್ದಿಗಳು ಸಾಮಾನ್ಯವಾಗಿ ಇತರ ನೈಜಸುದ್ದಿಗಳ ಶೈಲಿಯಲ್ಲೇ ಬಿತ್ತರಗೊಳ್ಳುವುದರಿಂದ ಜನರು ಬೇಗ ನಂಬುತ್ತಾರೆ, ಮತ್ತು ಯಾವುದು ನೈಜ ಸುದ್ದಿ ಯಾವುದು ನಕಲಿ ಎಂದು ಗುರುತಿಸಲು ಗೊಂದಲಕ್ಕೆ ಒಳಗಾಗುತ್ತಾರೆ" ಎಂದು ಮೋಲಿನಾ ಹೇಳುತ್ತಾರೆ.

ನಕಲಿ ಸುದ್ದಿಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಲು, ಜನರು ಮೊದಲು ನಕಲಿ ಸುದ್ದಿ ಯಾವುದು ಮತ್ತು ಅದು ಹೇಗೆ ಭಿನ್ನವಾಗಿದೆ ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳಬೇಕು, ಹೀಗೆ ಮಾಡಿದ್ದಲ್ಲಿ ಅವರು ಒಂದು ವಿಷಯವನ್ನು ಮತ್ತೊಂದು ವಿಷಯಕ್ಕೆ ಹೋಲಿಸಿ ನಕಲಿ ಎಂದು ವರ್ಗೀಕರಿಸಬಹುದು ಎಂಬುವುದು ಮೋಲಿನಾ ಅವರ ಅಭಿಪ್ರಾಯ.


ಸಂಶೋಧಕರು ಈ ಅಧ್ಯಯನವನ್ನು ಕೈಗೊಳ್ಳಲು ಕಾನ್ಸೆಪ್ಟ್ ಎಕ್ಸ್‌ಪ್ಲಿಕೇಶನ್ ಎಂಬ ಸಂಶೋಧನಾ ತಂತ್ರವನ್ನು ಬಳಸಿದರು.


ಈ ಪ್ರಕ್ರಿಯೆಯಲ್ಲಿ ಸಂಶೋಧಕರಿಗೆ ನಕಲಿ ಸುದ್ದಿಗಳ ಕುರಿತು ಜನಪ್ರಿಯ ಮಾಧ್ಯಮಗಳಲ್ಲಿ ಹಾಗೂ ಇತರ ಮಾಧ್ಯಮಗಳಲ್ಲಿ ಸಮಗ್ರ ಹುಡುಕಾಟಗಳನ್ನು ನಡೆಸುವ ಅಗತ್ಯವಿದೆ,


ನಂತರ ಸಂಶೋಧಕರು ನಕಲಿ ಸುದ್ದಿಗಳನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಮತ್ತು ಅದನ್ನು ಹೇಗೆ ಅಳೆಯಲಾಗುತ್ತದೆ ಎಂಬುದರ ಕುರಿತು ಸಂಶೋಧನೆ ಕೈಗೊಂಡರು.


ಆನ್‌ಲೈನ್ ನಲ್ಲಿ ಬರುವ ಸುದ್ದಿಗಳು ಸಾಂಪ್ರದಾಯಿಕ ಮಾಧ್ಯಮಗಳು ಬಳಸುವ ರಚನಾತ್ಮಕ ಸ್ವರೂಪಗಳನ್ನು ಹೊಂದಿರುವುದು ತೀರಾ ಕಡಿಮೆ, ಇದು ಜನರಿಗೆ ವಿಭಿನ್ನ ಪ್ರಕಾರದ ವಿಷಯಗಳ ನಡುವೆ ಉತ್ತಮ ವ್ಯತ್ಯಾಸವನ್ನು ಗುರುತಿಸಲು ಗೊಂದಲಕ್ಕೀಡುಮಾಡಿದೆ.


ಉದಾಹರಣೆಗೆ, ವೃತ್ತ ಪತ್ರಿಕೆಗಲ್ಲಿ ಸಂಪಾದಕೀಯ ವಿಭಾಗದಲ್ಲಿ ಪ್ರಕಟವಾದ ಬರಹಗಳು, ಆ ಲೇಖನವನ್ನು ಅಭಿಪ್ರಾಯ ಎಂಬುದಾಗಿ ಸಂಕೇತಿಸುತ್ತದೆ.


ಜಾಹೀರಾತುಗಳನ್ನು ಸುದ್ದಿ ವಿಷಯದಿಂದ ಬೇರ್ಪಡಿಸಲು ಬಾಕ್ಸ್‌ನಲ್ಲಿ ಹೊಂದಿಸಿರಬಹುದು ಎಂದು ಸುಂದರ್ ಅಭಿಪ್ರಾಯಪಡುತ್ತಾರೆ.


ವಿವಿಧ ರೀತಿಯ ನಕಲಿ ಮತ್ತು ನೈಜ ಸುದ್ದಿಗಳ ಬಗ್ಗೆ ಉತ್ತಮವಾದ ತಿಳುವಳಿಕೆಯು ವಿಷಯದ ಸುಧಾರಿತ ಲೇಬಲಿಂಗ್‌ಗೆ ಕಾರಣವಾಗಬಹುದು ಎಂದು ಸಂಶೋಧಕರು ಸೂಚಿಸುತ್ತಾರೆ, ಇದು ಕೆಲವು ಸುದ್ದಿ ವಿಭಾಗಗಳನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ.


ವಿಷಯವನ್ನು ಸರಿಯಾಗಿ ಲೇಬಲ್ ಮಾಡಿದ್ದರೆ, ಆನ್‌ಲೈನ್ ಸುದ್ದಿ ಗ್ರಾಹಕರು ವಿಭಿನ್ನ ಪ್ರಕಾರದ ಸುದ್ದಿ ಮತ್ತು ಮಾಹಿತಿಗಳಿಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ಹೊಂದಬಹುದು ಎಂದು ಸುಂದರ್ ಹೇಳಿದ್ದಾರೆ.