ಭಾರತದ ಎಫ್ಎಂಸಿಜಿ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಖಾತ್ರಿಪಡಿಸಲು ಕ್ರಾಫ್ಟ್ ಫುಡ್ಸ್ ನಂತಹ ಜಾಗತಿಕ ಎಮ್.ಎನ್.ಸಿ ಗಳೊಂದಿಗೆ ಸ್ಪರ್ಧಿಸುತ್ತಿದೆ ಈ ಸಾಮಾಜಿಕ ಸ್ಟಾರ್ಟ್ ಅಪ್

ನಿಮ್ಮ ಮೂಲದೆಡೆಗೆ ನಿಮ್ಮನ್ನು ಕರೆದೊಯ್ಯುವ ಗುರಿಹೊಂದಿರುವ ಬೆಂಗಳೂರು ಆಧರಿತ ಗೋ ದೇಸಿ ಫುಡ್ಸ್, ಗ್ರಾಮೀಣ ಭಾಗದ ಸಣ್ಣ ಉದ್ಯಮದ ಮೂಲಕ 6 ಉತ್ಪನ್ನಗಳನ್ನು ಪರಿಚಯಿಸಿದೆ.

ಭಾರತದ ಎಫ್ಎಂಸಿಜಿ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಖಾತ್ರಿಪಡಿಸಲು ಕ್ರಾಫ್ಟ್ ಫುಡ್ಸ್ ನಂತಹ ಜಾಗತಿಕ ಎಮ್.ಎನ್.ಸಿ ಗಳೊಂದಿಗೆ ಸ್ಪರ್ಧಿಸುತ್ತಿದೆ ಈ ಸಾಮಾಜಿಕ ಸ್ಟಾರ್ಟ್ ಅಪ್

Monday July 29, 2019,

5 min Read

ನೀವು ಅಂಗಡಿಗಳಲ್ಲಿ ಕೊಳ್ಳುವ ಚಿಪ್ಸ್ ಗಳು ಅವಕ್ಕೆ ಬೇಕಾದ ಆಲೂಗಡ್ಡೆ ಬೆಳೆಯುವ ರೈತನಿಂದಲೇ ತಯಾರಾಗಿದ್ದಿದ್ದರೆ ಹೇಗಿರುತ್ತಿತ್ತು? ಆಥವಾ ನೀವು ಕಿರಾಣಿ ಅಂಗಡಿಗಳಲ್ಲಿ ಕೊಳ್ಳುವ ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಅದು ತಯಾರಾದ ಅಜ್ಜಿಯ ಕೈಯಿಂದಲೇ ಪ್ಯಾಕ್ ಆಗಿ ಮಾರಟಗೊಂಡರೆ ಹೇಗಿರುತ್ತದೆ, ಒಮ್ಮೆ ಕಲ್ಪಿಸಿಕೊಂಡು ನೋಡಿ‌.


ಈ ಆಲೋಚನೆಗಳು ಹೊಳೆದದ್ದು ಸಿಂಬೈಯೋಸಿಸ್ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಅಂಡ್ ಹ್ಯೂಮನ್ ರಿಸೋರ್ಸ್ ಡೆವಲಪ್‌ಮೆಂಟ್‌ನ ಎಂಬಿಎ ಪದವೀಧರರಾದ ವಿನಯ್ ಕೊಠಾರಿಯವರಿಗೆ. ಈ ಆಲೋಚನೆಯೇ ಅವರಿಗೆ ತಮ್ಮ ಸ್ವಂತ ಸಾಮಾಜಿಕ ಉದ್ಯಮ ಗೋ ದೇಸಿ ಫುಡ್ಸ್ ಅನ್ನು ಪ್ರಾರಂಭಿಸಲು ಪ್ರೇರಿಪಿಸಿದ್ದು. ಇಲ್ಲಿ ಅವರು ಗ್ರಾಮೀಣ ಸೊಗಡಿನ ರುಚಿ ಹಾಗೂ ರೂಪವುಳ್ಳ ಅಡುಗೆಯನ್ನು ತಯಾರಿಸಿ ಪ್ಯಾಕ್ ಮಾಡಿ ಮಾರುತ್ತಾರೆ, ಈ ತಿನಿಸು ಹಳ್ಳಿಯ ಅಡುಗೆ ಮನೆಯಿಂದಲೇ ತಯಾರಾಗಿರುತ್ತದೆ.


"ಅನ್ಯ ಎಫ್ಎಂಸಿಜಿ ಕಂಪೆನಿಗಳಿಗಿಂತ ಭಿನ್ನವಾಗಿ ನಮ್ಮ ಕಂಪೆನಿ ಕಾರ್ಯನಿರ್ವಹಿಸುತ್ತದೆ. ನಮ್ಮ ಎಲ್ಲಾ ಉತ್ಪನ್ನಗಳು ಉದಯೋನ್ಮುಖ ನವ ಉದ್ಯಮಿಗಳಿಂದ, ರೈತ ಸಹಕಾರಿ ಸಂಘಗಳಿಂದ, ಸ್ವಸಹಾಯ ಸಂಘಗಳಿಂದ ತಯಾರಗಿರುವವು. ಸುಸ್ಥಿರ ಉದ್ಯೋಗ ಸೃಷ್ಟಿಗೆಂದೇ ಈ ಉತ್ಪನ್ನಗಳ ಸಣ್ಣ ಘಟಕಗಳನ್ನ ಗ್ರಾಮೀಣ ಹಾಗೂ ಉಪನಗರಗಳಲ್ಲಿ ಸ್ಥಾಪಿಸಿದ್ದೇವೆ," ಎನ್ನುತ್ತಾರೆ ವಿನಯ್.


ಕ

ಇಮ್ಲೀ ಪಾಪ್(ಜಿಗಳೆ) ಗಳನ್ನು ತಯಾರಿಸುವ ಸಣ್ಣ ಉದ್ಯಮಿ ಸುಮಿತ್ರಾ.

ಇಮಿಲಿ ಪಾಪ್ ಹುಣಸೆಹಣ್ಣು, ಬೆಲ್ಲ, ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳಿಂದ ತಯಾರಾದ ಹುಳಿ ಮಿಶ್ರಿತ ಖಾರವಾದ ತಿನಿಸು. ಇದು ಕ್ಯೂ ಟ್ರೋವ್ ಹಾಗೂ ಅಮೇಜಾನ್ ನಂತಹ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಗಳಲ್ಲಿ ವೈರಲ್ ಆಗಿದೆ. ‌ಬೆಂಗಳೂರು ಮತ್ತು ಹೈದರಾಬಾದ್ ಗಳಲ್ಲಿ 500 ಮಳಿಗೆಗಳನ್ನು ಹೊಂದಿರುವ ಗೋದೇಸಿ ಫುಡ್ಸ್ ತಿಂಗಳಿಗೆ ಎರಡು ಲಕ್ಷ ಇಮ್ಲಿ ಪಾಪ್ ಗಳನ್ನು ಮಾರುವುದಾಗಿ ಹೇಳಿಕೊಂಡಿದೆ.


"ಅವುಗಳನ್ನು ನಾವು ಲಾಲಿಪಾಪ್ ಗಳಂತೆಯೇ ತಯಾರಿಸಿರುತ್ತೇವೆ. ಮೊದಲೆಲ್ಲ ಬೇಡಿಕೆ ಕಡಿಮೆ ಇದ್ದಿದ್ದರಿಂದ ನಾವು ಕೈಗಳಿಂದಲೇ ತಯಾರಿಸುತ್ತಿದ್ದೆವು. ಬೇಡಿಕೆ ಹೆಚ್ಚಿದ್ದರಿಂದ ನಾವು ಯಂತ್ರಗಳನ್ನು ಅಳವಡಿಸಿಕೊಂಡೆವು. ಬರುವ ದಿನಗಳಲ್ಲಿ ಇಮಿಲಿ ಪಾಪ್ ನ ಕಾರ್ಖಾನೆಯನ್ನು ಸ್ಥಾಪಿಸುವ ಭರವಸೆಯೂ ಇದೆ,” - ಸುಮಿತ್ರಾ, ಸ್ಥಳೀಯ ನವ ಉದ್ಯಮಿ, ಉತ್ತರ ಕರ್ನಾಟಕ.


ಬೆಂಗಳೂರು ಮೂಲದ ಈ ಉದ್ಯಮ ಉತ್ತರ ಕರ್ನಾಟಕದಲ್ಲಿ ಎಂಟು ತಯಾರಕರನ್ನು ಹೊಂದಿದೆ. ಸಣ್ಣ ಉದ್ಯಮಗಳನ್ನು ಬೆಂಬಲಿಸುವ ಮೂಲಕ 60 ಮಹಿಳೆಯರಿಗೆ ಉದ್ಯೋಗವನ್ನು ನೀಡಿದೆ. ಗೋದೇಸಿ ಫುಡ್ಸ್ ಆಂಧ್ರ, ಕೇರಳ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿನ ತನ್ನ ವಿತರಕರಿಗೆ ಮಾರುತ್ತದೆ. ಕಂಪನಿಯು ಅಮೇಜಾನ್ ಕ್ಯೂ ಟ್ರೋವ್ ಹಾಗೂ ತನ್ನದೇ ಜಾಲತಾಣದಿಂದಲೂ ಮಾರಾಟ ಮಾಡುತ್ತದೆ.



ಪ್ರಾರಂಭ


ಕ

ವಿನಯ್ ಕೊಠಾರಿ, ಗೋ ದೇಸಿ ಸಂಸ್ಥಾಪಕ.


ಇದೆಲ್ಲವೂ ಶುರುವಾದದ್ದು ಪಶ್ಚಿಮಘಟ್ಟದಲ್ಲಿನ ಒಂದು ಚಾರಣದ ನಂತರ. ವಿನಯ್ ಅವರಿಗೆ ಆವತ್ತು ಊಟದ್ದೇ ಚಿಂತೆಯಾಗಿತ್ತು. ದಣಿವು, ಹಸಿವಿನಿಂದ ಅವರು ಒಂದು ಚಿಕ್ಕ ಗುಡಿಸಲಿನಿಂದಾದ ಅಂಗಡಿಯ ಹತ್ತಿರ ನಿಂತು ಅವರು ಕೊಟ್ಟಿದ್ದನ್ನೆಲ್ಲ ತಿಂದರು.


"ಹಲಸಿನ ಬಾರ್ ಗಳು ಹಾಗೂ ಇಮ್ಲಿ ಪಾಪ್ ಗಳ ರುಚಿ ಲೋಕವನ್ನೇ ಮರೆಸುವಂತಿತ್ತು. ಅದರಲ್ಲಿ ಯಾವುದೇ ಸಂರಕ್ಷಕಗಳನ್ನು, ಬಣ್ಣಗಳನ್ನು ಮತ್ತು ಕೃತಕ ಸಕ್ಕರೆಯನ್ನು ಬೆರೆಸಿರಲಿಲ್ಲ." ಅವರು ನೆನಪಿಸಿಕೊಳ್ಳುತ್ತಾರೆ.


ಹತ್ತು ವರ್ಷಗಳ ಕಾಲ ಎಫ್‌ಎಂಸಿಜಿ ವಲಯದಲ್ಲಿ ಕೆಲಸ ಮಾಡಿದ ವಿನಯ್ ಅವರು ಒಂದು ಅವಕಾಶವನ್ನು ಗಮಣಿಸಿದ್ದರು. ಹಿಂದಿರುಗುವಾಗ, ಅವರು 30 ಕೆಜಿ ವಿವಿಧ ಸ್ಥಳೀಯ ತಿಂಡಿಗಳು ಮತ್ತು ಮಿಠಾಯಿಗಳನ್ನು ತಂದರು. ಮುಂದಿನ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆಯುವ ಅಲ್ಪ ಬೆಲೆಯ ಮಾರುಕಟ್ಟೆ ನಡೆಯುತ್ತಿರುವುದನ್ನು ಅರಿತ ವಿನಯ್ ಮೂರು ದಿನಗಳಿಗಾಗಿ ಒಂದು ಮಳಿಗೆಯನ್ನು ಕಾಯ್ದಿರಿಸಿದರು.


“ನಾವು ಯಾವುದೇ ಪ್ಯಾಕಿಂಗ್ ಇಲ್ಲದೆ, ಬ್ರ್ಯಾಂಡ್ ಲೇಬಲ್ ಇಲ್ಲದೆ ರುಚಿ ನೋಡಲಿಕ್ಕೆ ಅಂತ ಮಾದರಿಯನ್ನಷ್ಟೇ ಇಟ್ಟಿದ್ದೆವು. ಅವುಗಳಲ್ಲಿ ಅರ್ಧದಷ್ಟು ಮೊದಲ ದಿನವೇ ಖಾಲಿಯಾಯಿತು! ಅದೇ ಹುರುಪು ನಮ್ಮ ದೇಸಿ ಹಾದಿಗೆ ಕಾರಣವಾಗಿದ್ದು,” ಎಂದು ಹೇಳಿದರು


ವಿನಯ್ ಐಟಿಸಿಯಲ್ಲಿ ತಮ್ನ ಕೆಲಸ ತ್ಯಜಿಸಿ, ಲಿಜ್ಜಾತ್ ಪಾಪಾಡ್ ಮತ್ತು ಅಮುಲ್ ನ ಕಥೆಗಳಿಂದ ಪ್ರೇರಿತರಾಗಿ 2018 ರಲ್ಲಿ ತಮ್ಮ ಕಂಪೆನಿ ಗೋದೇಸಿ ಫುಡ್ಸ್ ಅನ್ನು ಸ್ಥಾಪಿಸಿದರು.


ಕ

ತಂಡ


ತ್ವರಿತ ಆಹಾರ ಮತ್ತು ಮಿಠಾಯಿ ವಸ್ತುಗಳು ಮುಖ್ಯವಾಗಿ ಪಾಶ್ಚಿಮಾತ್ಯ ಸ್ವರೂಪಗಳಿಂದ ಬಹಳವೇ ಪ್ರಾಬಲ್ಯ ಹೊಂದಿವೆ. ಸ್ಥಳೀಯ ಮತ್ತು ಪ್ರಾದೇಶಿಕ ಉತ್ಪನ್ನಗಳು "ದೊಡ್ಡ ಗಳಿಕೆ ತಂದುಕೊಡುವವಾದರೂ, ಮಾರುಕಟ್ಟೆಯಲ್ಲಿ ಯಾವುದೇ ಒಂದು ಬ್ರಾಂಡ್ ಇಲ್ಲ" ಎಂದು ವಿನಯ್ ವಿವರಿಸುತ್ತಾರೆ.


ಮುಂದುವರಿದು, ಇದು, ನಾವು ಲಾಭ ಗಳಿಸಲು ಇರುವ ಖಾಲಿ ಜಾಗ. ಎನ್ನುತ್ತಾರೆ ವಿನಯ್.


ಗೋದೇಸಿ ಫುಡ್ಸ್ ಒಂದು ಕ್ರಾಂತಿಯ ಭಾಗವಾಗಲು ತನ್ನ ಪಾಲು ನೀಡುತ್ತಿದೆ. ಆಹಾರ ಸಂಸ್ಕರಣೆ, ಶೇಖರಣೆಯನ್ನು ರೈತರ ಜಮೀನುಗಳಿಗೆ ಹತ್ತಿರಗೊಳಿಸುವುದು ಇದರ ಉದ್ದೇಶ .ಇದು ಬೆಳೆ ವ್ಯರ್ಥವಾಗುವುದನ್ನು ಕಡಿಮೆ ಮಾಡಿ, ಕೃಷಿಯನ್ನು ಸುಸ್ಥಿರಗೊಳಿಸುತ್ತದೆ ಹಾಗೂ ಸುಸ್ಥಿರ ಉದ್ಯೋಗಗಳನ್ನು ಸೃಷ್ಟಿಸಿ ಗ್ರಾಮೀಣ ಆರ್ಥಿಕತೆಯನ್ನು ಪ್ರಬಲಗೊಳಿಸುತ್ತದೆ.



ಸಣ್ಣ ಘಟಕಗಳನ್ನು ಸ್ಥಾಪಿಸುವುದು


ಭಾರತದಲ್ಲಿ, ಒಟ್ಟು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕೇವಲ 3-5 ಪ್ರತಿಶತದಷ್ಟನ್ನು ಮಾತ್ರ ಹಾಗೂ ಜಾಗತಿಕವಾಗಿ 30-35 ಪ್ರತಿಶತದಷ್ಟು ಸಂಸ್ಕರಿಸಲಾಗುತ್ತದೆ. ರೈತರ ಹೊಲದಿಂದಲೇ ಆಹಾರವನ್ನು ಸಂಸ್ಕರಿಸುವ ಪರಿಕಲ್ಪನೆಯು ಭಾರತದಲ್ಲಿ ತುಲನಾತ್ಮಕವಾಗಿ ಹೊಸದಾಗಿರುವುದರಿಂದ, ರೈತರು ತಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡಲು ಒತ್ತಾಯಿಸಲಾಗುತ್ತದೆ. ಗ್ರಾಹಕರಿಗೆ ಆಹಾರದ ಮೂಲದ ಬಗ್ಗೆ ತಿಳಿದಿಲ್ಲದ ಕಾರಣ ವ್ಯವಸ್ಥೆಯಲ್ಲಿ ಪತ್ತೆಹಚ್ಚುವಿಕೆಯ ಕೊರತೆಯೂ ಇದೆ.


ಕ

ಗೋ ದೇಸಿ ಕೇವಲ ಮಹಿಳೆಯರಿಗೆ ಉದ್ಯೋಗ ನೀಡುತ್ತದೆ.


ಹಳ್ಳಿ ಮನೆಗಳಿಂದ ತಯಾರಿಗೊಳ್ಳುವ ಉತ್ಪನ್ನಗಳಿಗೆ ಈ ಸವಾಲುಗಳು ಅದ್ಭುತ ಅವಕಾಶವೇ, ಏಕೆಂದರೆ ಇದು ಕೊನೆಯ ಗ್ರಾಹಕನಿಗೂ ಇದರ ಮೂಲದ ಖಾತರಿಯನ್ನು ಒದಗಿಸುತ್ತದೆ.


"ನಾವು ಉತ್ಪಾದಿಸಿ ಮಾರುತ್ತಿರುವ ಈ ಉತ್ಪನ್ನಗಳು ದಶಕಗಳಿಂದಲೂ ಬಳಕೆಯಲ್ಲಿವೆ. ಅವುಗಳು ಹುಟ್ಟಿಕೊಂಡದ್ದು ಹಣ್ಣುಗಳನ್ನು ಸಂರಕ್ಷಣೆ, ಮಕ್ಕಳಿಗೆ ನೈಸರ್ಗಿಕ ಕ್ಯಾಂಡಿಗಳ ರೀತಿಯಲ್ಲಿ. ಸಾವಯವ ಹಾಗೂ ಸಂರಕ್ಷಕಗಳು ಎಂಬ ಶಬ್ದಗಳು ಹುಟ್ಟುವ ಮೊದಲಿನಿಂದಿಲೂ ಈ ತಿನಿಸುಗಳಿವೆ" ಹೀಗೆ ಅವರು ವಿವರಿಸುತ್ತಾರೆ.


ಸ್ಥಳೀಯವಾಗಿ ಸಣ್ಣ ತಯಾರಿಸುವ ಘಟಕಗಳನ್ನು ಸ್ಥಾಪಿಸುವ ಸಲುವಾಗಿ ವಿನಯ್ ಹಳ್ಳಿಗರನ್ನು, ಸ್ವಸಹಾಯ ಸಂಘಗಳನ್ನು, ಸರ್ಕಾರೇತರ ಸಂಘಟನೆಗಳನ್ನು ಕೇಳಿಕೊಂಡಾಗ ಅವರೆಲ್ಲ ಸಂದೇಹದಿಂದ ಮತ್ತು ಅಪನಂಬಿಕೆಯಿಂದ ವಿನಯ್ ರನ್ನು ನೋಡಿದ್ದರು‌.


ಕ

ಸಣ್ಣ ಘಟಕವೊಂದರ ಒಳನೋಟ


"ಸಣ್ಣ ಘಟಕಗಳನ್ನು ಸ್ಥಾಪಿಸುವುದಕ್ಕೆ ಬಹಳ ಅಡೆತಡೆಗಳಿದ್ದವು. ಕಾರ್ಮಿಕರ ಕೊರತೆ, ಮೂಲಸೌಕರ್ಯದ ಕೊರತೆಯೂ‌‌ ನಾವು ಅನುಭವಿಸಿದ್ದರಲ್ಲಿ ಕೆಲವು. ಕಡಿಮೆ ಕೂಲಿಯ ಕಾರ್ಮಿಕರು, ಸಣ್ಣ ಬೆಲೆಗೆ ದೊರಕಿದ ಜಾಗಗಳಂತಹ ಪ್ರಯೋಜನಗಳಿದ್ದರೂ ಅಸಂಘಟಿತರನ್ನು ಸಂಘಟಿಸುವುದು ಒಂದು ರೀತಿ ಸವಾಲಿನ ಹಾಗೂ ರೋಚಕವಾದ ಅನುಭವ" ವಿನಯ್ ನೆನಪಿಸಿಕೊಳ್ಳುತ್ತಾರೆ.


15 ಜನರ ತಂಡವು ಹುಬ್ಬಳ್ಳಿ ಮೂಲದ ದೇಶಪಾಂಡೆ ಫೌಂಡೇಶನ್ ಹಾಗೂ ತುಮಕೂರಿನ ಶಿರಾ ಹೊರವಲಯದಲ್ಲಿರುವ ತರಬೇತಿ, ಆರೋಗ್ಯ, ಶಿಕ್ಷಣ ಮತ್ತು ಪುನರ್ವಸತಿಗಾಗಿ ಇರುವ ವಿವಿಧೋದ್ದೇಶ ಸಂಸ್ಥೆ (ಮದರ್ ಎನ್.ಜಿ.ಓ.) ಜೊತೆ ಸೇರಿಕೊಂಡಿತು. ಇವುಗಳು ಹಳ್ಳಿಗಳಲ್ಲಿ ಜನರಿಗೆ ಪರ್ಯಾಯ ಜೀವನೋಪಾಯವನ್ನು ಅಭಿವೃದ್ಧಿಗೊಳಿಸುವಡೆಗೆ ತಮ್ಮನ್ನು ಕೇಂದ್ರೀಕರಿಸುತ್ತವೆ‌. ಇದು ಗೋದೇಸಿ ಸಂಸ್ಥೆಯನ್ನು ಮಹಿಳೆಯರಿಗೆ ಹತ್ತಿರವಾಗಿಸಿ ಅವರಿಗೆ ಆಹಾರ ಉತ್ಪನ್ನಗಳನ್ನ ತಯಾರಿಸುವ ತರಬೇತಿ ಹಾಗೂ ಹಳೆಯ ಕಾಲದ ಶತಮಾನಗಳಿಂದ ತಲೆಮಾರುಗಳಿಗೆ ಬಂದಿರುವ ಉತ್ಪನ್ನಗಳನ್ನೇ ಹೊಸತಾಗಿ ಮಾಡಲು ಪ್ರೋತ್ಸಾಹ ನೀಡುತ್ತದೆ.


ಕ

ಲೆಮನ್ ಚಾಟ್ ತಯಾರಿಸುವ ಶಶಿಕಲಾ

ಗ್ರಾಮೀಣ ಸಣ್ಣ ಉದ್ಯಮಿಯಾದ ಶಶಿಕಲಾ ಒಣಗಿದ ನಿಂಬೆ ಹಣ್ಣು, ಖಾರ, ಉಪ್ಪು ಬಳಸಿ ಲೆಮನ್ ಚಾಟ್ ತಯಾರಿಸುತ್ತಾರೆ. ಇದನ್ನು ಅವರು ಮೊದಲೆಲ್ಲ ಮಕ್ಕಳಿಗಾಗಿ ಮಾಡುತ್ತಿದ್ದೆ ಎನ್ನುತ್ತಾ,


"ನಮಗೆ ಅದನ್ನು ಪ್ರಚಾರ ಮಾಡುವ ವಿಧಾನ ಗೊತ್ತಿರಲಿಲ್ಲ. ಒಮ್ಮೆ ಕಾರವಾರದಲ್ಲಿ ನಡೆದ ಕೈಗಾರಿಕಾ ತರಬೇತಿಯನ್ನು ಪಡೆದ ನಂತರ ಇವುಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಕಲೆ ತಿಳಿಯಿತು ಹಾಗೂ ಗೋ ದೇಸಿಯೊಂದಿಗೆ ಸೇರಿ ಕೆಲಸ ಮಾಡಿದ ನಂತರ ನಮಗೆ 25 ಪ್ರತಿಶತ ಬೇಡಿಕೆ ಹೆಚ್ಚಾಗಿದೆ. ಇದು ಇನ್ನೂ ಹೆಚ್ಚಾಗುತ್ತದೆ ಎಂಬ ಭರವಸೆಯಿದೆ."


ಎದುರಿಸಿದ ಸವಾಲುಗಳು


ಸ್ಥಳೀಯವಾಗಿ ಪ್ರಮುಖ ಸಾಂಸ್ಕೃತಿಕ ಆಹಾರ ಉತ್ಪನ್ನಗಳ ಸಂಸ್ಥೆಯಾಗಿ ಹೊರಹೊಮ್ಮುವ ದೂರದೃಷ್ಟಿಯಿಂದ ಗೋ ದೇಸಿ, ತನ್ನೆಲ್ಲಾ ಉತ್ಪನ್ನಗಳನ್ನು ಹಳ್ಳಿಗಳಲ್ಲಿ ಆ ಉತ್ಪನ್ನ ಮಾಡುವ ನುರಿತ ಕೈಗಳಿಂದಲೇ ಅಲ್ಲಿಯ ಪದಾರ್ಥಗಳನ್ನು ಬಳಸಿ ತಯಾರಿಸುತ್ತಾರೆ. ಈ ಪದಾರ್ಥಗಳು ನೋಡುವುದಕ್ಕೆ ಒಂದೇ ತೆರೆನಾಗಿರುವುದಿಲ್ಲ ಮತ್ತು ಅವು ಹಳ್ಳಿಗಾಡಿನ ತಿನಿಸೆಂದು ಗೊತ್ತಾಗುತ್ತದೆ. ಕೆಲವು ಸೂಪರ್ ಮಾರ್ಕೆಟ್ ಗಳು ಸಿಟಿಗಳಲ್ಲಿ ಮಾರುವುದಕ್ಕೆ ಬೇಕಾದ ಪ್ಯಾಕಿಂಗ್ ವ್ಯವಸ್ಥೆ ಇಲ್ಲ ಎಂಬ ದೂರುಗಳನ್ನು ನೀಡಿದ್ದರು.


ವಿನಯ್ ಸೊಲೋಪ್ಪಿಕೊಳ್ಳದೆ, ಈ ಉತ್ಪನ್ನಗಳನ್ನು ಪ್ರಚಾರಗೊಳಿಸಿ, ಪ್ಯಾಕಿಂಗ್ ಮಾಡಿ ನೇರವಾಗಿ ಜಮೀನಿನಿಂದಲೇ ಅಥವಾ ಮನೆಗಳಿಂದಲೇ ಕಟ್ಟಕಡೆಯ ಗ್ರಾಹಕನಿಗೂ ತಲುಪಿಸಬೇಕೆಂದುಕೊಂಡರು.


ಕ

ಉತ್ಪನ್ನಗಳು

ಜಮೀನಿನಿಂದಲೇ ಉತ್ಪನ್ನಗಳನ್ನು ತಯಾರಿಸುತ್ತಿದ್ದರಿಂದ ಸುತ್ತಲ ಪ್ರದೇಶದ ಬೆಳೆಗಳನ್ನೇ ಬಳಸಿಕೊಳ್ಳಲಾಯಿತು. ಆ ಪದಾರ್ಥಗಳ ರುಚಿಯನ್ನು ಬೆಳೆದ ನೆಲದ ಮೇಲೆ ನಿರ್ಧರಿಸಬಹುದಿತ್ತು.


"ಸಾವಯುವ ನೈಸರ್ಗಿಕ ಪದಾರ್ಥಗಳು ಯಾವತ್ತಿಗೂ ಒಂದೆ ರೀತಿ ಕಾಣುವುದಿಲ್ಲ ಯಾಕೆಂದರೆ ಅದರ ಪ್ರಕೃತಿಯೇ ಆ ತರಹದ್ದು. ಗೋ ದೇಸಿ ಫುಡ್ಸ್ ಒಂದು ಕ್ರಾಂತಿಯ ಭಾಗವಾಗಲು ತನ್ನ ಪಾಲು ನೀಡುತ್ತಿದೆ. ಆಹಾರ ಸಂಸ್ಕರಣೆ, ಶೇಖರಣೆಯನ್ನು ರೈತರ ಹೊಲಗಳಿಗೆ ಹತ್ತಿರಗೊಳಿಸುವುದು ಇದರ ಉದ್ದೇಶ. ಇದು ಬೆಳೆ ವ್ಯರ್ಥವಾಗುವುದನ್ನು ಕಡಿಮೆ ಮಾಡಿ, ಕೃಷಿಯನ್ನು ಸುಸ್ಥಿರಗೊಳಿಸಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ” ಎನ್ನುತ್ತಾರೆ ಈ 33 ವಯಸ್ಸಿನ ಮನುಷ್ಯ.


ಮುಂದಿನ ಹಾದಿ


ಐಐಎಂ ಬೆಂಗಳೂರು, ವಾಧ್ವಾನಿ ಸಂಸ್ಥೆ ಎಫ್‌ಎಂಸಿಜಿ ಆಕ್ಸೆಲೆರೇಟರ್, ಸಿಂಗಾಪುರ್ ರಾಷ್ಟ್ರೀಯ ಸಂಸ್ಥೆ ಯ ಯುವ ಸಾಮಾಜಿಕ ಉದ್ಯಮಿಗಳ ಸಮೂಹ, ಮತ್ತು ಉಪಾಯ ಕೃಷಿ ವ್ಯವಹಾರ ಸಮೂಹಗಳ ಬೆಂಬಲದಿಂದ ಗೋ ದೇಸಿ, ಕಳೆದ ಆರು ತಿಂಗಳಲ್ಲಿ ನಾಲ್ಕು ಪಟ್ಟು ಹಿರಿದಾಗಿ ಬೆಳೆದಿದೆ. ಬೆಂಗಳೂರು ಮೂಲದ ಗೋ ದೇಸಿ ಅಂತರಾಷ್ಟ್ರೀಯ ಕಂಪನಿಗಳಾದ ಪರ್ಫೆಟ್ಟಿ ವ್ಯಾನ್ ಮೆಲ್ಲೆ ಹಾಗೂ ಕ್ರಾಫ್ಟ್ ಫುಡ್ಸ್ ನೊಂದಿಗೆ ಪೈಪೋಟಿಯಲ್ಲಿದೆ. ಆದಾಗ್ಯೂ ನಮ್ಮ ಉತ್ಪನ್ನಗಳು ಹಳ್ಳಿಸೊಗಡಿನವಾದ್ದರಿಂದ ನಾವು ಬೇರೆಯದೇ ರೀತಿಯಲ್ಲಿ ಗುರುತಿಸಿಕೊಳ್ಳುತ್ತೇವೆ ಎನ್ನುತ್ತಾರೆ ವಿನಯ್.




“ನಮ್ಮ ಉದ್ದೇಶ ಜಮೀನಿನ ಹತ್ತಿರದಲ್ಲೇ ಆಹಾರ ಸಂಸ್ಕರಣೆಯಾಗಬೇಕೆಂಬುದು” ಹೀಗೆ ಹೇಳಿ ತಮ್ಮ ಮಾತನ್ನು ಮುಗಿಸುತ್ತಾರೆ.


ಮುಂದಿನ ದಿನಗಳಲ್ಲಿ ಗೋ ದೇಸಿ 3,000 ಮಳಿಗೆಗಳನ್ನು ಸ್ಥಾಪಿಸುವ ಹಾಗೂ 100 ಮಹಿಳೆಯರಿಗೆ ಉದ್ಯೋಗ ನೀಡುವ ಭರವಸೆಯ ಗುರಿಯನ್ನು ಹೊಂದಿದೆ.