ಲುಧಿಯಾನಾದ ಈ ಸಂಚಾರಿ ಕಾನ್‌ಸ್ಟೇಬಲ್‌ ರಸ್ತೆ ಗುಂಡಿ ಮುಚ್ಚುವ ಮೂಲಕ ಸುರಕ್ಷಿತ ಪ್ರಯಾಣಕ್ಕೆ ನೆರವಾಗುತ್ತಿದ್ದಾರೆ

ಸಂಚಾರಿ ಕಾನ್‌ಸ್ಟೇಬಲ್‌ ಗುರ್ಬಕ್ಷ್‌ ಸಿಂಗ್‌ರವರು ಇದುವರೆಗೆ ಭಾಗು ರಸ್ತೆ, ಲಿಬರ್ಟಿ ಚೌಕ, ದಾನಾ ಮಂಡಿ ಮತ್ತು ಪಂಜಾಬಿನಲ್ಲಿರುವ ತಮ್ಮ ಹಳ್ಳಿ ಬುಲಧೇವಾಲಾಗೆ ಹೋಗುವ ಹೆದ್ದಾರಿಗಳ ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ.

ಲುಧಿಯಾನಾದ ಈ ಸಂಚಾರಿ ಕಾನ್‌ಸ್ಟೇಬಲ್‌ ರಸ್ತೆ ಗುಂಡಿ ಮುಚ್ಚುವ ಮೂಲಕ ಸುರಕ್ಷಿತ ಪ್ರಯಾಣಕ್ಕೆ ನೆರವಾಗುತ್ತಿದ್ದಾರೆ

Monday October 14, 2019,

2 min Read

ಭಾರತದಲ್ಲಿ ಇಂದಿಗೂ ಇರುವ ಅನೇಕ ಸಮಸ್ಯೆಗಳ ಪೈಕಿ, ಗುಂಡಿಗಳಿಂದ ತುಂಬಿದ ರಸ್ತೆಗಳು ದೇಶಾದ್ಯಂತ ಗಂಭೀರ ಕಾಳಜಿಯ ವಿಷಯವಾಗಿದೆ. ಹಳ್ಳಿಗಳು, ಜಿಲ್ಲೆಗಳು ಮತ್ತು ರಾಜ್ಯಗಳನ್ನು ಸಂಪರ್ಕಿಸುವ ರಸ್ತೆಗಳು ಯಾವಾಗಲೂ ಗುಂಡಿಗಳಿಂದ ಕೂಡಿದ್ದು, ಸಾವು ಸೇರಿ ಪ್ರಯಾಣಿಕರಿಗೆ ಭೀಕರ ಅಪಘಾತಗಳನ್ನು ಉಂಟುಮಾಡುತ್ತವೆ.


ಕಾಲಕ್ಕನುಗುಣವಾಗಿ ಅನೇಕ ನಾಗರಿಕರು ಈ ಕುರಿತು ಕಾಳಜಿವಹಿಸಿ ಕೆಲಸ ಮಾಡುತ್ತಿದ್ದಾರೆ. ಸಂಚಾರಿ ಕಾನ್‌ಸ್ಟೇಬಲ್ ಗುರ್ಬಕ್ಷ್ ಸಿಂಗ್ ಅವರಲ್ಲಿ ಒಬ್ಬರು, ಅವರು ಪಂಜಾಬ್‌ನ ಭಟಿಂಡಾ ರಸ್ತೆಗಳಲ್ಲಿ ಮತ್ತು ಕೆಲವೊಮ್ಮೆ ಸಹವರ್ತಿ ಕಾನ್‌ಸ್ಟೇಬಲ್‌ಗಳ ಸಹಾಯದಿಂದ ಗುಂಡಿಗಳನ್ನು ಒಂಟಿಯಾಗಿ ತುಂಬುತ್ತಿದ್ದಾರೆ.


ರಸ್ತೆ ಗುಂಡಿ ಮುಚ್ಚುತ್ತಿರುವ ಗುರ್ಬಕ್ಷ್‌ ಸಿಂಗ್‌ರವರು (ಚಿತ್ರ ಕೃಪೆ: ಟ್ರಿಬ್ಯೂನ್‌ ಇಂಡಿಯಾ)


ಈ ಸಂಚಾರಿ ಕಾನ್‌ಸ್ಟೇಬಲ್‌ರವರು ಇದುವರೆಗೆ ಭಾಗು ರೋಡ್‌, ಲಿಬರ್ಟಿ ಚೌಕ, ದಾನಾ ಮಂಡಿ ಮತ್ತು ಪಂಜಾಬಿನಲ್ಲಿರುವ ತಮ್ಮ ಹಳ್ಳಿ ಬುಲಧೇವಾಲಾಗೆ ಹೋಗುವ ಹೆದ್ದಾರಿಗಳ ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ.


ಟ್ರಿಬ್ಯೂನ್‌ ಇಂಡಿಯಾದೊಂದಿಗೆ ಮಾತನಾಡುತ್ತಾ ಗುರ್ಬಕ್ಷ್‌ ಸಿಂಗ್‌ರವರು ಹೀಗೆ ಹೇಳುತ್ತಾರೆ.


“ರಸ್ತೆ ಗುಂಡಿಯಿಂದ ಯಾರಾದರೂ ಸಾವನ್ನಪ್ಪಿದರೆ ಅದು ತುಂಬಾ ದುರದೃಷ್ಟಕರ. ಅಧಿಕಾರಿಗಳು ಜವಾಬ್ದಾರಿಯುತ ನಾಗರಿಕರಾಗಿ ಸಾಕಷ್ಟು ಕೆಲಸ ಮಾಡದಿದ್ದರೆ, ನಾವು ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಮತ್ತು ಈ ಗುಂಡಿಗಳ ದುರಸ್ತಿ ಪ್ರಾರಂಭಿಸಬೇಕು. ಇದು ಸಣ್ಣ ಅಥವಾ ದೊಡ್ಡ ಕೊಡುಗೆ ಎಂದು ನಾನು ಭಾವಿಸುವುದಿಲ್ಲ, ನನ್ನ ಕೈಲಾದಷ್ಟನ್ನು ಮಾಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಲು ನಾನು ಬಯಸುತ್ತೇನೆ.”


ಗುರ್ಬಕ್ಷ್‌ರವರು ತಮ್ಮ ಕಾರಿನ ಹಿಂಬಾಗದಲ್ಲಿ ನಗರದ ವಿವಿಧ ಭಾಗಗಳಿಂದ ಮಣ್ಣು, ಇಟ್ಟಿಗೆ ಮತ್ತು ಇಂಟರ್ಲಾಕರ್‌ಗಳನ್ನು ಸಂಗ್ರಹಿಸಿ ರಸ್ತೆಗುಂಡಿಗಳಿರುವ ಸ್ಥಳಕ್ಕೆ ಹೋಗಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚುವ ಕಾರ್ಯದ ಜತೆ ಗಾಜಿನ ಚೂರುಗಳನ್ನು ಸಹ ತೆರವುಗೊಳಿಸುವ ಮೂಲಕ ಸಂಭವನೀಯ ಅಪಘಾತ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಗುರುಬಕ್ಷ್‌ರವರು.


ಅವರ ಸಮಾಜ ಸೇವೆಗಾಗಿ, ಅವರಿಗೆ 1,000 ರೂ ನಗದು ನೀಡಿ ಗೌರವಿಸಲಾಗಿದೆ, ಮತ್ತು ಅವರ ಹೆಸರನ್ನು ಪ್ರಚಾರಕ್ಕಾಗಿ ಶಿಫಾರಸ್ಸು ಮಾಡಲಾಗಿದೆ.


ರಸ್ತೆಗುಂಡಿಯಿಂದಾಗಿ ಬೈಕ್‌ ಸವಾರ ಮತ್ತು ಹಿಂಬದಿಯಲ್ಲಿ ಕುಳಿತಿರುವ ಸವಾರರು ಅಪಘಾತಕ್ಕೆ ಒಳಗಾಗಿರುವುದನ್ನು ಪ್ರತ್ಯಕ್ಷವಾಗಿ ನೋಡಿದ ಗುರುಬಕ್ಷ್‌ರವರಿಗೆ ರಸ್ತೆ ಗುಂಡಿ ಮುಚ್ಚುವ ಯೋಚನೆ ಹೊಳೆಯಿತು. ಅದೃಷ್ಟವಶಾತ್ ಬೈಕ್‌ ಸವಾರರು ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದರು.


ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ನಗರದ ಡಿಎಸ್ಪಿ ಗುರ್ಜಿತ್ ಸಿಂಗ್ ರೊಮಾನಾರವರು ಹೀಗೆ ಹೇಳಿದ್ದಾರೆ,


“ಉತ್ತಮ ಜವಾನರನ್ನು ಆಯ್ಕೆ ಮಾಡಿ ಸಂಚಾರಿ ಪ್ರದೇಶಗಳಿಗೆ ನಾವು ವರ್ಗಾವಣೆ ಮಾಡುತ್ತೇವೆ, ಅವರು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳುತ್ತಾರೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ನಮ್ಮ ಕರ್ತವ್ಯವೇ ಹೊರತು ಚಲನ್‌ ಮೂಲಕ ಜನರಿಗೆ ಕಿರುಕುಳ ನೀಡುವುದಲ್ಲ. ಅವರು ಚಲನ್‌ ನೀಡುವ ಬದಲು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಮತ್ತು ಜನರಿಗೆ ಸಹಾಯ ಮಾಡಬೇಕು.”


ರಾಜ್ಯ ಪೊಲೀಸ್‌ ಇಲಾಖೆಯಷ್ಟೇ ಅಲ್ಲದೇ, ಪ್ರಯಾಣಿಕರು ತಮ್ಮ ಸುರಕ್ಷಿತ ಪ್ರಯಾಣಕ್ಕಾಗಿ ಪೊಲೀಸರು ಮಾಡುತ್ತಿರುವ ಪ್ರಯತ್ನವನ್ನು ಶ್ಲಾಘಿಸುತ್ತಿದ್ದಾರೆ. ಒಬ್ಬ ಪ್ರಯಾಣಿಕನು ಹೇಳಿದಂತೆ, ಗುರ್ಬಕ್ಷ್‌ರವರು ಒಬ್ಬ ವ್ಯಕ್ತಿಯ ಸಂಬಳದಲ್ಲಿ ಇಬ್ಬರ ಕೆಲಸ ಮಾಡುತ್ತಿದ್ದಾರೆ.


ಈಗ, ಗುರ್ಬಕ್ಷ್‌ರವರು ಗುಂಡಿಗಳಿಂದ ಕೂಡಿರುವ ಹೊಸ ಸ್ಥಳಗಳಾದ ಅಮ್ರಿಕ್ ಸಿಂಗ್ ರಸ್ತೆ ಮತ್ತು ಘೋಡಾ ಚೌಕ್ ಬಳಿಯಿರುವ ರಸ್ತೆಗಳನ್ನು ಸರಿಪಡಿಸಲು ಯೋಜಿಸಿದ್ದಾರೆ.