ಬೆಂಗಳೂರಿನಿಂದಾಚೆಗಿನ ಉದ್ಯಮ ಲೋಕ...

ಟೀಮ್ ವೈ.ಎಸ್.ಕನ್ನಡ

5th Feb 2016
  • +0
Share on
close
  • +0
Share on
close
Share on
close

ಉದ್ಯಮ ಅಂದ್ರೆ ಬೆಂಗಳೂರು, ಕಂಪನಿಗಳಂದ್ರೆ ಬೆಂಗಳೂರು ಅನ್ನೋ ಮಾತಿತ್ತು. ಆದ್ರೀಗ ಕಾಲ ಬದಲಾಗಿದೆ. ಕರ್ನಾಟಕದ ಇತರ ನಗರಗಳಿಗೂ ಉದ್ಯಮಗಳು ವ್ಯಾಪಿಸಿವೆ. ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಾತನಾಡಿದ ಐಐಎಂಬಿ ನಿರ್ದೇಶಕ ರಿಷಿಕೇಶ್ ಕೃಷ್ಣನ್, ``ಉದ್ಯಮಶೀಲತೆ ಮತ್ತು ಉದ್ಯಮಗಳಿಗೆ ಬೆಂಗಳೂರು ಸಮಾನಾರ್ಥಕ, ಪ್ರತಿಭೆ ಮತ್ತು ಸಂಪನ್ಮೂಲದ ಜೊತೆಗೆ ಸರ್ಕಾರದ ಬೆಂಬಲವನ್ನೂ ಸಿಕ್ಕಿರುವುದು ಸಂತೋಷದ ವಿಚಾರ ಅಂತಾ ಹೇಳಿದ್ದಾರೆ. ನವ್ಯಾ ಬಯೋಟೆಕ್ನಾಲಜಿಸ್ ಹುಬ್ಬಳ್ಳಿಯಲ್ಲಿ ನೆಲೆಯೂರಿದ್ರೆ, ಸೆನ್ಸ್ಗಿಝ್ ಧಾರವಾಡದಲ್ಲಿದೆ, ಇಂಪ್ಲನಂಟೇರ್ ಮೈಸೂರಿನಲ್ಲಿದೆ. ಬೆಂಗಳೂರಿನಲ್ಲಿರುವ ಟೀಮ್ ಇಂಡಸ್ ಕೂಡ ಇನ್ವೆಸ್ಟ್ ಕರ್ನಾಟಕ-2016 ಸಮಾವೇಶದಲ್ಲಿ ಪಾಲ್ಗೊಂಡಿತ್ತು. ಕೇವಲ ಬೆಂಗಳೂರು ಮಾತ್ರವಲ್ಲ, ಉಳಿದೆಡೆ ಇರುವ ಉದ್ಯಮಗಳ ಪ್ರಗತಿಗಾಗಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

image


ಕರ್ನಾಟಕದಾದ್ಯಂತ ಇರುವ ಉದ್ಯಮಗಳು

40,000 ಚದರ ಅಡಿ ಜಾಗದಲ್ಲಿ ಗೋದಾಮುಗಳು, ಇನ್ಕ್ಯುಬೇಶನ್, ಮೊಬೈಲ್ ಇನ್ಕ್ಯುಬೇಶನ್, IoT ಲ್ಯಾಬ್ಗಳು, ಜೈವಿಕ ನಾವೀನ್ಯತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಅಂತಾ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ರು. ಕೇವಲ ಡಿಜಿಟಲ್ ಬೆಳವಣಿಗೆ ಮಾತ್ರವಲ್ಲ, ಉತ್ಪಾದನಾ ಉದ್ಯಮಗಳನ್ನೂ ಪ್ರೋತ್ಸಾಹಿಸುವ ದಿಸೆಯಲ್ಲಿ ಕರ್ನಾಟಕ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದ್ರು. ಷೇರು ಬಂಡವಾಳ ಸಂಸ್ಥೆಗಳು ಮತ್ತು ಸಾಹಸೋದ್ಯಮ ನಿಧಿ ಒದಗಿಸುವ ಕಂಪನಿಗಳು ಟೈರ್-2 ನಗರಗಳಲ್ಲಿ ಕಾರ್ಯನಿರ್ವಹಿಸಲು ಮುಂದಾಗಿರುವುದಾಗಿ ಇಂಪ್ಲನಂಟೇರ್ ಕಂಪನಿಯ ಸಿಇಓ ಯೋಗೇಶ್ ದುಬೆ ತಿಳಿಸಿದ್ದಾರೆ. ಈ ಸಂಸ್ಥೆಗಳಿಗೆ ಸರ್ಕಾರ ನೆರವಾಗದೇ ಇದ್ದಿದ್ದರೆ, ಬೆಂಬಲ ಸೂಚಿಸದೇ ಇದ್ದಿದ್ದರೆ ಆರಂಭದಲ್ಲಿ ಹಣಕಾಸಿನ ಸಹಾಯವೂ ದೊರೆಯುತ್ತಿರಲಿಲ್ಲ ಅಂತಾ ಸೆನ್ಸ್ಗಿಝ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಓ ಅಭಿಷೇಕ್ ಲತ್ತೆ ಅಭಿಪ್ರಾಯಪಟ್ಟಿದ್ದಾರೆ.

``ಟೈರ್-2 ಸಿಟಿಗಳಲ್ಲಿ ಕೂಡ ವಿಶ್ವದರ್ಜೆಯ ಪರಿಸರವನ್ನು ನಿರ್ಮಾಣ ಮಾಡುವುದು ನಮ್ಮ ಗುರಿ. ಉದ್ಯಮಗಳಿಗೆ ನಿಧಿ ಸಂಗ್ರಹಕ್ಕೆ ಇದೊಂದು ಉತ್ತಮ ಮಾರ್ಗವೂ ಹೌದು ಎನ್ನುತ್ತಾರೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿ.ಮಂಜುಳಾ. ನಾವೀನ್ಯತೆ ಮತ್ತು ಸಾಮಾಜಿಕ ಪರಿಣಾಮಗಳನ್ನುಂಟುಮಾಡುವ ಗುರಿ ಸರ್ಕಾರಕ್ಕಿದೆ ಅಂತಾ ಅವರು ತಿಳಿಸಿದ್ದಾರೆ.

ಉದ್ಯಮಗಳಿಗೆ ಇದುವೇ ಸಕಾಲ

ಭಾರತ ಸರ್ಕಾರದ ಉದ್ಯಮ ನೀತಿ ಮತ್ತು ಇನ್ಕ್ಯುಬೇಶನ್ ಕೇಂದ್ರಗಳ ಮೂಲಕ ಎಸ್ಎಂಇಗಳಿಗೆ ಹೆಚ್ಚು ಸಹಾಯ ಮಾಡುವತ್ತ ಗಮನಹರಿಸಲಾಗುತ್ತಿದೆ. ಭಾರತದಲ್ಲಿ ಈಗ ಉದ್ಯಮಗಳ ಬೆಳವಣಿಗೆ ಮತ್ತು ನಾವೀನ್ಯತೆ ಉತ್ತುಂಗದಲ್ಲಿದೆ. ``ಒಂದ್ಕಡೆ ಬೆಂಗಳೂರಿನಲ್ಲಿ ದಿನೇ ದಿನೇ ಉದ್ಯಮಗಳ ಸಂಖ್ಯೆ ಹೆಚ್ಚುತ್ತಿದ್ರೆ, ಇನ್ನೊಂದ್ಕಡೆ ಕೆಲ ಕಂಪನಿಗಳು ನಷ್ಟದ ಸುಳಿಗೆ ಸಿಲುಕಿ ಮುಚ್ಚಿ ಹೋಗುತ್ತಿರುವುದು ದುರದೃಷ್ಟಕರ ವಿಚಾರ'' ಎನ್ನುತ್ತಾರೆ ಸಾಗಾ ಫಂಡ್ಸ್ನ ಸಂಸ್ಥಾಪಕಿ ಅಂಕಿತಾ ವಸಿಷ್ಠ.

ಉದ್ಯಮಗಳ ಪ್ರಗತಿಯ ಬಗ್ಗೆ ಹೆಚ್ಚು ಗಮನ ಹರಿಸಿರುವ ಸರ್ಕಾರ ಶೇ.10ರಷ್ಟು ನಿಧಿಯನ್ನು ಮಹಿಳಾ ಉದ್ಯಮಿಗಳಿಗಾಗಿ ಮೀಸಲಿಟ್ಟಿದೆ. ಸರ್ಕಾರದ ಪ್ರೋತ್ಸಾಹದಿಂದಾಗಿ ಇನ್ನಷ್ಟು ಮಹಿಳಾ ಉದ್ಯಮಿಗಳ ಉದಯವಾಗಲಿದೆ ಎಂಬ ವಿಶ್ವಾಸ ಅಂಕಿತಾ ವಸಿಷ್ಠ ಅವರದ್ದು. ಸದ್ಯ ಉದ್ಯಮ ನೀತಿ ಬಗ್ಗೆ ಹೆಚ್ಚು ನಿರೀಕ್ಷೆಯಿದ್ದು, ಬೆಳವಣಿಗೆಗೆ ಪೂರಕವೆಂಬಂತೆ ಗೋಚರಿಸುತ್ತಿದೆ. ಉದ್ಯಮ ಪರಿಸರದ ಅಭಿವೃದ್ಧಿಯಾಗಬೇಕೆಂದಲ್ಲಿ ಉತ್ಪನ್ನ ಮತ್ತು ಹೊಸತನದ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಸರ್ಕಾರದ ಉದ್ಯಮ ನೀತಿ, ಔದ್ಯಮಿಕ ಪರಿಸರಕ್ಕೆ ನೀಡುತ್ತಿರುವ ಬೆಂಬಲ, ಟೈರ್-2 ಸಿಟಿಗಳಿಗೂ ನೀಡುತ್ತಿರುವ ಆದ್ಯತೆಯನ್ನೆಲ್ಲ ಗಮನಸಿದ್ರೆ ನಾವೀನ್ಯತೆ ಸಹಜ ಮತ್ತು ಸುಲಭ ಎಂದೆನಿಸುತ್ತಿದೆ. ಉದ್ಯಮಿಗಳ ನಿರೀಕ್ಷೆಗೆ ತಕ್ಕಂತೆ ಸರ್ಕಾರ ಕಾರ್ಯನಿರ್ವಹಿಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

  • +0
Share on
close
  • +0
Share on
close
Share on
close
Report an issue
Authors

Related Tags

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India