ಉದ್ಯಮಿಗಳಿಗೆ ಹೂಡಿಕೆ ತಜ್ಞರ ಕಿವಿಮಾತು- ಶೈಲೇಂದ್ರ ಸಿಂಗ್ ಜೊತೆ ನೇರ ಮಾತು

ಟೀಮ್​​ ವೈ.ಎಸ್​​.

ಉದ್ಯಮಿಗಳಿಗೆ ಹೂಡಿಕೆ ತಜ್ಞರ ಕಿವಿಮಾತು- ಶೈಲೇಂದ್ರ ಸಿಂಗ್ ಜೊತೆ ನೇರ ಮಾತು

Saturday October 31, 2015,

3 min Read

ಇನ್ನೇನು ಚಳಿಗಾಲ ಬಂದೇ ಬಿಡ್ತು. ಆದ್ರೆ ಮಾಗಿಯ ಚಳಿ ಶುಭ ಸುದ್ದಿಯನ್ನು ಹೊತ್ತು ತರುವ ಲಕ್ಷಣಗಳೇನೂ ಕಾಣ್ತಿಲ್ಲ. ಸಧ್ಯ ಮನೆ ಮನೆಗೆ ಆರ್ಡರ್ ಮಾಡಿದ ತಿನಿಸುಗಳನ್ನು ವಿತರಿಸುವ ಉದ್ಯಮ ಮಂಚೂಣಿಯಲ್ಲಿದೆ. ಆದ್ರೆ ಹೂಡಿಕೆ ಜಗತ್ತು ಪುಟಿದೇಳುವ ಮುನ್ಸೂಚನೆ ಕಾಣಿಸ್ತಿಲ್ಲ. ಹಾಗಿದ್ರೆ ಉದ್ದಿಮೆ ಹೂಡಿಕೆದಾರರ ಆಲೋಚನೆ ಯಾವ ದಿಕ್ಕಿನಲ್ಲಿ ಸಾಗ್ತಿದೆ ಅನ್ನೋದು ಸಧ್ಯದ ಕುತೂಹಲ. ಹೂಡಿಕೆಯ ವಿವಿಧ ದೃಷ್ಟಿಕೋನಗಳ ಬಗ್ಗೆ `ಸಿಕ್ವೆಯಾ ಕ್ಯಾಪಿಟಲ್'ನ ಮ್ಯಾನೇಜಿಂಗ್ ಡೈರೆಕ್ಟರ್ ಶೈಲೇಂದ್ರ ಸಿಂಗ್ ವಿವರಿಸ್ತಾರೆ. ಶುಭ ಶುಕ್ರವಾರವೊಂದರ ಇಳಿ ಸಂಜೆ ಹೊತ್ತಲ್ಲಿ ಶೈಲೇಂದ್ರ ಜೊತೆ ಮಾತಿಗೆ ಕುಳಿತಾಗ ಅವರು, ಕುಸಿತವನ್ನು ಎದುರಿಸಲು ಸನ್ನದ್ಧರಾಗಿರ್ಬೇಕು ಅನ್ನೋ ಅತ್ಯಮೂಲ್ಯ ಸಲಹೆ ಕೊಟ್ರು. ಆಗಸದಲ್ಲಿ ಮೋಡಗಳು ಸಾಲುಗಟ್ಟಿವೆ, ಆದ್ರೆ ಆ ಮೋಡಗಳು ಕೇವಲ ತುಂತುರು ಮಳೆಯನ್ನು ಹನಿಸುತ್ತವೆಯೋ ಅಥವಾ ಚಂಡಮಾರುತವನ್ನೇ ಹೊತ್ತು ಬಂದಿವೆಯೋ ಗೊತ್ತಿಲ್ಲ, ಬುದ್ಧಿವಂತಿಕೆ ಅಂದ್ರೆ ಛತ್ರಿಯನ್ನು ಜೊತೆಗೆ ಇಟ್ಟುಕೊಂಡಿರುವುದು ಅಂತಾ ಶೈಲೇಂದ್ರ ಮಾರ್ಮಿಕವಾಗಿ ನುಡಿದಿದ್ದಾರೆ.

ಯುವರ್​​ಸ್ಟೋರಿ.ಕಾಂನ ಸಂಸ್ಥಾಪಕಿ ಶ್ರದ್ಧಾಶರ್ಮಾ ಮತ್ತು  ಸಿಕ್ವೇಯ​​ ಕ್ಯಾಪಿಟಲ್​​ನ ಎಂ.ಡಿ. ಶೈಲೇಂದ್ರ ಸಿಂಗ್​​

ಯುವರ್​​ಸ್ಟೋರಿ.ಕಾಂನ ಸಂಸ್ಥಾಪಕಿ ಶ್ರದ್ಧಾಶರ್ಮಾ ಮತ್ತು ಸಿಕ್ವೇಯ​​ ಕ್ಯಾಪಿಟಲ್​​ನ ಎಂ.ಡಿ. ಶೈಲೇಂದ್ರ ಸಿಂಗ್​​


ನಿಧಿ ಸಂಗ್ರಹಕ್ಕೆ ಒಳ್ಳೆಯ ವಿಧಾನ ಯಾವುದು ಅನ್ನೋದಕ್ಕೂ ಶೈಲೇಂದ್ರ ಸಿಂಗ್ ಅವರ ಬಳಿ ಉತ್ತರವಿದೆ. ಅದಕ್ಕೊಂದು ಮಾನದಂಡ ಇಟ್ಟುಕೊಳ್ಳೋದು ತಪ್ಪು. ಜನರ ಆಸಕ್ತಿಯ ಪ್ರಕಾರ ನಿರ್ಧಿಷ್ಟ ಸಮಯದಲ್ಲಿ ಅನುಕೂಲ ಮಾಡಿಕೊಡಲಾಗುತ್ತದೆ. ಗ್ರಾಹಕರ ಅಗತ್ಯತೆಗಳಲ್ಲೂ ವಿಕಾಸ ಇರಬೇಕು. ಹಾಗಾದಲ್ಲಿ ಸಂಸ್ಥೆ ಅದನ್ನು ಈಡೇರಿಸಲು ಪ್ರಯೋಗಾತ್ಮಕ ಪ್ರಯತ್ನ ಮಾಡುತ್ತದೆ ಎನ್ನುತ್ತಾರೆ ಅವರು. ಉದ್ಯಮದಲ್ಲಿ ಹೂಡಿಕೆ ಮಾಡಲು ಶೈಲೇಂದ್ರ ಅವರನ್ನು ಪ್ರೇರೇಪಿಸುವುದು ಅದರ ಸಂಸ್ಥಾಪಕರು. ತುಂಬಾ ಚಿಕ್ಕ ವಯಸ್ಸಿನಲ್ಲೇ ಶೈಲೇಂದ್ರ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟವರು. ಯುವಜನತೆ ತಮ್ಮ ಚಿಂತನ-ಮಂಥನದ ಆಧಾರದ ಮೇಲೆ ಸಂಸ್ಥೆಯನ್ನು ಮುನ್ನಡೆಸ್ತಾರೆ ಅನ್ನೋದು ಶೈಲೇಂದ್ರ ಅವರ ಅನುಭವದ ಮಾತು. ಜೀವನದಲ್ಲಿ ಒಳ್ಳೆಯ ಸಂಗತಿಗಳನ್ನು ಅಳೆಯಲು ಸಾಧ್ಯವಿಲ್ಲ. ಹಾಗೆಯೇ ಉದ್ಯಮವನ್ನೂ ಛಂದಶಾಸ್ತ್ರದ ಮೂಲಕ ಅಳೆಯಬೇಡಿ ಅನ್ನೋದು ಅವರ ಸಲಹೆ.

ಹೂಡಿಕೆದಾರರ ತಂಡದ ಉತ್ಸಾಹ, ಸ್ಪಷ್ಟತೆ, ಕೆಮೆಸ್ಟ್ರಿ ಮತ್ತು ಪ್ರೇರಣೆ ಶೈಲೇಂದ್ರ ಅವರ ಪಾಲಿಗೆ ವರ್ಕೌಟ್ ಆಗಿದೆ. ಸಂಸ್ಥೆಯೊಂದನ್ನು ಕಟ್ಟಿ ಬೆಳೆಸುವ ಸಂದರ್ಭದಲ್ಲಿ ಬಹುತೇಕ ಮಂದಿ ಅಲ್ಲಿ ಪಟ್ಟ ಪರಿಶ್ರಮವನ್ನು ಶ್ಲಾಘಿಸಲು ಮರೆಯುತ್ತಾರೆ ಅನ್ನೋದು ಶೈಲೇಂದ್ರ ಸಿಂಗ್‍ರ ಅಭಿಪ್ರಾಯ. ಅವರು `ಸಿಕ್ವೆಯಾ ಕ್ಯಾಪಿಟಲ್' ಅನ್ನು ಆರಂಭಿಸಿ ದಶಕವೇ ಕಳೆದಿದೆ. ಒಬ್ಬ ಯಶಸ್ವಿ ಹೂಡಿಕೆದಾರ ಆಗಬೇಕೆಂದ್ರೆ ಸಂಸ್ಥಾಪಕನ ಮೇಲೆ ವಿಶ್ವಾಸವಿಡುವುದು ಅತ್ಯಗತ್ಯ ಎನ್ನುತ್ತಾರೆ ಶೈಲೇಂದ್ರ ಸಿಂಗ್.

ಐಐಟಿ & ಐಐಎಮ್‍ನಲ್ಲಿ ಹೂಡಿಕೆ...

ಖ್ಯಾತ ಉದ್ಯಮಿ ಆಗ್ಬೇಕಂದ್ರೆ ಐಐಟಿ, ಐಐಎಮ್ ಹಿನ್ನೆಲೆ ಇರಬೇಕೆಂದೇನೂ ಇಲ್ಲ ಎನ್ನುತ್ತಾರೆ ಶೈಲೇಂದ್ರ. ಫ್ರೀಚಾರ್ಜ್ ಕಂಪನಿಯ ಕುಣಾಲ್ ಶಾ ತತ್ವಶಾಸ್ತ್ರದಲ್ಲಿ ಪದವಿ ಪಡೆದವರು, ಪ್ರ್ಯಾಕ್ಟೋದ ಶಶಾಂಕ್ ಎನ್‍ಐಟಿ - ಕೆ ಪದವೀಧರರು, ಹೆಲ್ಪ್‍ಚಾಟ್‍ನ ಅಂಕುರ್ ಸಿಂಗ್ಲಾ ಒಬ್ಬ ವಕೀರಲು, ಓಯೋ ರೂಮ್ಸ್‍ನ ರಿತೇಶ್ ಕಾಲೇಜಿಗೇ ಹೋದವರಲ್ಲ. ಹಾಗಿದ್ರೆ ಅವರೆಲ್ಲ ಯಶಸ್ವಿಯಾಗಿದ್ದು ಹೇಗೆ ಅನ್ನೋದು ಶೈಲೇಂದ್ರ ಅವರ ಪ್ರಶ್ನೆ. ಸಂಸ್ಥಾಪಕರ ಪಾಲಿಗೆ ಉದ್ಯಮ ಅನ್ನೋದು ರೇಸ್ ಮೈದಾನವಿದ್ದಂತೆ. ದೊಡ್ಡ ಯಶಸ್ಸನ್ನು ಚೇಸ್ ಮಾಡುವ ಹುಮ್ಮಸ್ಸು ಅವರಿಗಿರಬೇಕು ಅನ್ನೋದು ಶೈಲೇಂದ್ರ ಅವರ ಅತ್ಯಮೂಲ್ಯ ಸಲಹೆ.

ಹಾಟ್ ಕ್ಷೇತ್ರಗಳು...

ಸಂಸ್ಥಾಪಕರಿಗೆ ಯಾವ ಕ್ಷೇತ್ರಗಳು ಹಾಟ್ ಎನಿಸುವುದಿಲ್ವೋ ಅವು ನಿಜಕ್ಕೂ ಹಾಟ್ ಅಲ್ಲ ಎನ್ನುತ್ತಾರೆ ಶೈಲೇಂದ್ರ ಸಿಂಗ್. 2007ರಲ್ಲಿ ಫ್ಯಾಷನ್ ಕ್ಷೇತ್ರ ಮುಂಚೂಣಿಯಲ್ಲಿತ್ತು. ಆದ್ರೀಗ ಕಾಲ ಬದಲಾಗಿದೆ. ತಾವೇನಾದ್ರೂ ಹೂಡಿಕೆ ಮಾಡುವುದಿದ್ರೆ ಸದ್ಯ ಮೊಬೈಲ್ ದುನಿಯಾದಲ್ಲಿ ಎನ್ನುತ್ತಾರೆ ಅವರು. ಭಾರತ ಭಿನ್ನಜಾತಿಯ ಮಾರುಕಟ್ಟೆಯ ತವರು. ಕೆಲ ಉದ್ಯಮಗಳ ಬಗ್ಗೆ ಇರುವ ಕಲ್ಪನೆಯೇ ಬೇರೆ, ಆದ್ರೆ ವಾಸ್ತವವೇ ಬೇರೆ ಅನ್ನೋದು ಶೈಲೇಂದ್ರ ಅವರ ವಿಶ್ಲೇಷಣೆ. ಉದ್ಯಮ ಹೂಡಿಕೆದಾರರು ಸಂಸ್ಥೆಯಲ್ಲಿ ಹೆಚ್ಚಿನ ಹಣ ತೊಡಗಿಸಲು ಪ್ರೇರಪಣೆಯಾಗ್ತಾರಾ ಅನ್ನೋ ಪ್ರಶ್ನೆಯೊಂದು ಪ್ರೇಕ್ಷಕರ ಗ್ಯಾಲರಿಯಿಂದ ನುಗ್ಗಿ ಬಂದಿತ್ತು. ಬಹುತೇಕ ಸಂದರ್ಭಗಳಲ್ಲಿ ಉದ್ಯಮ ಹೂಡಿಕೆದಾರರು ಸಂಸ್ಥೆಗೆ ಹಣ ತೊಡಗಿಸಲು ಪ್ರೇರಣೆಯಾಗ್ತಾರೆ. ಆದ್ರೆ ಕಂಪನಿ ಸಧ್ಯ ಯಾವ ಪರಿಸ್ಥಿತಿಯಲ್ಲಿದೆ? ಭವಿಷ್ಯದ ಯೋಜನೆಗಳೇನು ಅನ್ನೋದ್ರ ಮೇಲೆ ಅದು ನಿರ್ಧಾರಿತವಾಗಿರುತ್ತದೆ ಅನ್ನೋದು ಶೈಲೇಂದ್ರ ಸಿಂಗ್‍ರ ಸ್ಪಷ್ಟ ಉತ್ತರ.

ವಿಶೇಷವಾಗಿ ನೀವು ಕಾರ್ಯಸಾಧನೆಯ ವಿಭಾಗದಲ್ಲಿದ್ದೀರಾ ಅಂತಾದ್ರೆ, ಬಂಡವಾಳ ಹೆಚ್ಚಿಸಲು ವಿಫಲರಾದ್ರೆ ಹಿನ್ನಡೆ ಖಚಿತ ಅಂತಾ ಶೈಲೇಂದ್ರ ಭವಿಷ್ಯ ನುಡಿಯುತ್ತಾರೆ. ಫ್ರೀಚಾರ್ಜ್, ಝೂಮ್ ಕಾರ್, ಹೆಲ್ಪ್ ಚಾಟ್, ಜಸ್ಟ್ ಡಯಲ್, ಪ್ರಾಕ್ಟೋ , ಮುಸಿಗ್ಮಾ, ಪೆಪ್ಪರ್ ಟ್ಯಾಪ್‍ನಂತಹ ಕಂಪನಿಗಳ ಜನಪ್ರಿಯತೆಯನ್ನು ಶೈಲೇಂದ್ರ ಉದಾಹರಿಸುತ್ತಾರೆ. ಉದ್ಯಮ ಕ್ಷೇತ್ರದಲ್ಲಿ ಮುನ್ನಡೆಯ ಕನಸು ಕಾಣ್ತಾ ಇರುವವರು ಶೈಲೇಂದ್ರ ಸಿಂಗ್ ಅವರ ಸಲಹೆಗಳನ್ನು ಗಮನಿಸಲೇಬೇಕು.