KSRTC ಬಸ್ಗಳಿಗೆ ಬಯೋ ಟಾಯ್ಲೆಟ್ ಭಾಗ್ಯ..!-ದೇಶದ ನಂಬರ್ ವನ್ ಸಾರಿಗೆ ಸಂಸ್ಥೆಯಿಂದ ಹೊಸ ಪ್ರಯೋಗ
ಟೀಮ್ ವೈ.ಎಸ್. ಕನ್ನಡ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದೇಶದಲ್ಲೇ ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿದೆ. ವಿಭಿನ್ನ ಬಸ್ಗಳು ಮತ್ತು ಪ್ರಯಾಣಿಕ ಸ್ನೇಹಿ ವಾತಾವರಣ ಕೆಎಸ್ಆರ್ಟಿಸಿಯನ್ನು ದೇಶದಲ್ಲೇ ನಂಬರ್ ವನ್ ಮಾಡಿದೆ. ಈ ಮಧ್ಯೆ ಕೆಎಸ್ಆರ್ಟಿಸಿ ಮತ್ತೊಂದು ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ. ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗಾಗಿ ಬಸ್ನಲ್ಲೇ ಬಯೋ ಟಾಯ್ಲೆಟ್ನ್ನು ನಿರ್ಮಾಣ ಮಾಡಿಕೊಡಲು ನಿರ್ಧರಿಸಿದೆ. ಕೆಎಸ್ಆರ್ಟಿಸಿ ಬಸ್ನಲ್ಲೇ ಬಯೋ ಟಾಯ್ಲೆಟ್ನ ವ್ಯವಸ್ಥೆ ಮಾಡಿದ್ದೇ ಆದಲ್ಲಿ, ಬಸ್ ಪ್ರಯಾಣದ ಅವಧಿ ಕಡಿಮೆ ಆಗಲಿದೆ. ಜೊತೆಗೆ ಡಯಾಬಿಟಿಸ್ ಪೇಷಂಟ್ಗಳು ಕೂಡ ದೂರದ ಊರಿಗೆ ಆರಾಮವಾಗಿ ಪ್ರಯಾಣ ಬೆಳೆಸುವಂತಾಗುತ್ತದೆ. ಡಯಾಟಿಕ್ ಪೇಷಂಟ್ಗಳು ಸಾಮಾನ್ಯವಾಗಿ ಹೆಚ್ಚು ಟಾಯ್ಲೆಟ್ಗಳನ್ನು ಉಪಯೋಗಿಸುತ್ತಾರೆ. ಈಗ ಕೆಎಸ್ಆರ್ಟಿಸಿ ಬಸ್ಗಳಲ್ಲೇ ಟಾಯ್ಲೆಟ್ ವ್ಯವಸ್ಥೆ ಮಾಡಿದ್ರೆ, ಅವರಿಗೆ ಹೆಚ್ಚು ಅನುಕೂಲವಾಗಲಿದೆ.
ಈಗಾಗಲೇ ಬೆಂಗಳೂರು- ಮೈಸೂರು ನಡುವೆ ಚಲಿಸುವ 5 ಬಸ್ಗಳಲ್ಲಿ ಟಾಯ್ಲೆಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಆದ್ರೆ ಬಸ್ಗಳಲ್ಲಿ ಟಾಯ್ಲೆಟ್ಗಳನ್ನು ಮ್ಯಾನೇಜ್ ಮಾಡುವುದು ಅತೀ ಕಷ್ಟಕರವಾಗಿದೆ. ಕ್ಲೀನಿಂಗ್ ಮತ್ತು ಮೈಂಟೇನೆನ್ಸ್ ಖರ್ಚು ಸಾರಿಗೆ ಸಂಸ್ಥೆಗೆ ದೊಡ್ಡ ತಲೆನೋವಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಬಯೋ ಟಾಯ್ಲೆಟ್ಗಳನ್ನು ಬಸ್ಗಳಲ್ಲಿ ಅಳವಡಿಸಲು ಪ್ಲಾನ್ ಮಾಡಲಾಗಿದೆ. ಬಯೋ ಟಾಯ್ಲೆಟ್ನಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಗೊಬ್ಬರವಾಗಿ ಪರಿವರ್ತಿಸಿ, ಅದನ್ನು ಅಗತ್ಯವಿದ್ದವರಿಗೆ ಮಾರಾಟ ಮಾಡುವುದೇ ಬಯೋ ಟಾಯ್ಲೆಟ್ನ ಕಾನ್ಸೆಪ್ಟ್ ಆಗಿರಲಿದೆ.
“ ನಾವು ಈಗಾಗಲೇ ಬಸ್ಗಳನ್ನು ತಯಾರಿಸುವ ಕಂಪನಿಗಳಾದ ಸ್ಕ್ಯಾನಿಯಾ, ವೋಲ್ವೋ ಮತ್ತು ಮರ್ಸಿಡೆಝ್ಗಳಿಗೆ ಬಸ್ನಲ್ಲೇ ಟಾಯ್ಲೆಟ್ಗಳನ್ನು ನಿರ್ಮಿಸಿಕೊಡುವಂತೆ ಸೂಚಿಸಿದ್ದೇವೆ. ನಾವು ಯಾವ ಯಾವ ರೂಟ್ಗಳಲ್ಲಿ ಸಂಚರಿಸುವ ಬಸ್ಗಳಲ್ಲಿ ಟಾಯ್ಲೆಟ್ನ ಅವಶ್ಯಕತೆ ಇದೆ ಅನ್ನೋದನ್ನು ತಿಳಿದುಕೊಳ್ಳುತ್ತೇವೆ. ಅದರಂತೆ ಬಸ್ನಲ್ಲಿ ಬಯೋ ಟಾಯ್ಲೆಟ್ನ ವ್ಯವಸ್ಥೆ ಮಾಡಿಕೊಡುತ್ತೇವೆ. ”
- ರಾಜೇಂದ್ರ ಕುಮಾರ್ ಕಠಾರಿಯಾ, ಎಂ.ಡಿ. ಕೆ.ಎಸ್. ಆರ್.ಟಿ.ಸಿ
ಕೇಂದ್ರ ಸರಕಾರ ಈಗಾಗಲೇ ಭಾರತವನ್ನು ಬಯಲು ಶೌಚ ಮುಕ್ತ ದೇಶ ಅಂತ ಘೋಷಿಸಲು ಪ್ಲಾನ್ಗಳನ್ನು ಹಾಕೊಕೊಂಡಿದೆ. ಈ ಮಧ್ಯೆ ಭಾರತೀಯ ರೈಲ್ವೇ ಕೂಡ ಬಯೋ ಟಾಯ್ಲೆಟ್ನ್ನು ರೈಲುಗಳಿಗೆ ಅಳವಡಿಸಿ, ಓಪನ್ ಪ್ಲೇಸ್ಗಳಲ್ಲಿ ಮಲವಿಸರ್ಜನೆ ಮಾಡುವುದರ ವಿರುದ್ಧ ಜಾಗೃತಿ ಮೂಡಿಸುತ್ತಿದೆ. ಬಯೋ ಟಾಯ್ಲೆಟ್ ಮೂಲಕ ಸಂಗ್ರಹವಾಗುವ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಅದರಿಂದಲೂ ಉದ್ಯಮ ನಡೆಸುವುದು ಮತ್ತೊಂದು ಆಯಾಮವಾಗಿದೆ. ಈ ಮಧ್ಯೆ ಕೆ.ಎಸ್.ಆರ್.ಟಿ.ಸಿ ರೈಲ್ವೇ ಅಧಿಕಾರಿಗಳನ್ನು ಭೇಟಿಯಾಗಿ ಬಯೋ ಟಾಯ್ಲೆಟ್ ವ್ಯವಸ್ಥೆ ಮತ್ತು ಅದರಿಂದ ಸಿಗುವ ತ್ಯಾಜ್ಯ ಮತ್ತು ಗೊಬ್ಬರಗಳನ್ನು ಮಾರಾಟ ಮಾಡುವ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಿದೆ. ಒಟ್ಟಿನಲ್ಲಿ ಕೆ.ಎಸ್.ಆರ್.ಟಿ. ಸಿ ಇಟ್ಟಿರುವ ಹೆಜ್ಜೆ ದೇಶದ ಬಸ್ ಸಾರಿಗೆ ವ್ಯವಸ್ಥೆಯನ್ನೇ ಬದಲಿಸಬಹುದು ಅನ್ನುವುದು ತಜ್ಞರ ಅಭಿಮತ.
1. ಜಾಹೀರಾತು ಲೋಕದ ದಿಗ್ಗಜೆ- ಮಾಡೆಲಿಂಗ್ ಅಂದ್ರೆ ನೀವಂದುಕೊಂಡೆ ಏನೂ ಇಲ್ಲ: ಅನಿಲಾ ಆನಂದ್
2. ಮೈಸೂರಿನಿಂದ ಮುಂಬೈವರೆಗೆ- ಸ್ಯಾಂಡಲ್ವುಡ್ಗಿಂತಲೂ ಬಾಲಿವುಡ್ನಲ್ಲಿ ಡಿಮ್ಯಾಂಡ್