2ndಹ್ಯಾಂಡ್​​​ ಕಾರು ಮಾರುಕಟ್ಟೆಯ ಸಮಸ್ಯೆಗೆ ಉಕ್ರೇನ್ ಉದ್ಯಮಿಯಿಂದ ಪರಿಹಾರ

ಟೀಮ್​​ ವೈ.ಎಸ್​​.

11th Nov 2015
 • +0
Share on
close
 • +0
Share on
close
Share on
close

ಕಾರ್..ಕಾರ್..ಎಲ್ಲಿ ನೋಡಿದ್ರೂ ಕಾರಿಂದೇ ಕಾರುಬಾರು. ಭಾರತದಲ್ಲೂ ಕಾರಿನ ಹಾವಳಿ ಜೋರಾಗೇ ಇದೆ. ಮನೆಗೊಂದು ಕಾರು ಕಾಮನ್ ಆಗಿಬಿಟ್ಟಿದೆ. ಕಾರಿನ ಕನಸು ಕಾಣುವ ಜನಕ್ಕೆ ದುಬಾರಿ ಹಣ ನೀಡಿ ಹೊಸ ಕಾರು ಖರೀದಿಸುವ ಶಕ್ತಿ ಇಲ್ಲ. ಕಾರು ಓಡಿಸಲು ಬರದವರೂ ಸಾಕಷ್ಟು ಮಂದಿ. ಹೊಸ ಕಾರಿನ ಜೊತೆ ಸರ್ಕಸ್ ಮಾಡುವ ಬದಲು ಮೊದಲೊಂದು ಹಳೆ ಕಾರು ಖರೀದಿಸಿ, ಪ್ರಾಕ್ಟೀಸ್ ಆದ ನಂತರ ಹೊಸ ಕಾರು ಖರೀದಿಸೋಣ ಎನ್ನುವವರು ಹೆಚ್ಚು.

image


ಮೊದಲೆಲ್ಲ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಸುಲಭವಾಗಿರಲಿಲ್ಲ. ಆದರೆ ಇದು ಆನ್​ಲೈನ್ ಯುಗ. ಇಲ್ಲಿ ಎಲ್ಲವೂ ಸರಳ,ಸುಲಭ. ಹಾಗಾಗೇ ಹೊಸ ಕಾರುಗಳಿಗಿಂತ ಉಪಯೋಗಿಸಿದ ಕಾರು ಮಾರಾಟ ಉದ್ಯಮ ಭಾರತದಲ್ಲಿ ದೊಡ್ಡದಾಗಿದೆ. ಅಂದಾಜಿನ ಪ್ರಕಾರ 2013ರಲ್ಲಿ 2.5 ಮಿಲಿಯನ್ ಹೊಸ ಕಾರುಗಳು ಮಾರಾಟವಾಗಿದ್ದರೆ, ಸೆಕೆಂಡ್​​ಹ್ಯಾಂಡ್ ಕಾರುಗಳ ಮಾರಾಟ ಸುಮಾರು ಮೂರು ದಶಲಕ್ಷದಷ್ಟಿತ್ತು.

ಸಿಎಆರ್ ಜಿ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ಈ ವಲಯದಲ್ಲಿ ಶೇಕಡಾ 20ರಷ್ಟು ಬೆಳವಣಿಗೆಗಳಾಗುವ ಸಾಧ್ಯತೆ ಇದೆ. ಸಂಘಟಿತ ವಲಯ ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. CRISIL ವರದಿ ಪ್ರಕಾರ 2006-2007ರಲ್ಲಿ ಅಸಂಘಟಿತರ ಪಾತ್ರ ಜಾಸ್ತಿ ಇತ್ತು. ಮಾರುಕಟ್ಟೆಯ ಶೇಕಡಾ 96ರಷ್ಟು ಪಾಲು C2Cದಿತ್ತು. ( ಗ್ರಾಹಕರಿಂದ ಗ್ರಾಹಕರಿಗೆ). 2006-2007ರಲ್ಲಿ ಸಂಘಟಿತ ವಲಯದ ಪಾತ್ರ ಶೇಕಡ 4ರಷ್ಟಿತ್ತು. 20111-2012ರಲ್ಲಿ ಇದು ಶೇಕಡಾ 12ರಷ್ಟು ಹೆಚ್ಚಾಗಿದೆ. ಈ ಸಂಘಟಿತ ವಲಯ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆದು ಇಡೀ ಉಪಯೋಗಿಸಿದ ಕಾರು ಮಾರಾಟ ಉದ್ಯಮವನ್ನು ಆವರಿಸಿಕೊಳ್ಳುವ ನಿರೀಕ್ಚೆ ಇದೆ.

ಭಾರತದಲ್ಲಿ ಉಪಯೋಗಿಸಿದ ಕಾರು ಉದ್ಯಮದಲ್ಲಾಗುತ್ತಿರುವ ಬೆಳವಣಿಗೆಯನ್ನು ಉಕ್ರೇನ್ ಆಂಟನ್ Rublevskyy ಗಮನಿಸಿದರು ಅಲ್ಲಿ ವರ್ಗೀಕರಿಸಿದ ಜಾಹೀರಾತು ಪೋರ್ಟಲ್ ನಡೆಸುತ್ತಿದ್ದ ಆಂಟನ್ ಭಾರತದ ಮಾರುಕಟ್ಟೆ ಪ್ರವೇಶಿಸಲು ನಿರ್ಧರಿಸಿದರು. ಭಾರತದಲ್ಲಿ ಅಟೋಪೋರ್ಟಲ್ ಪ್ರಾರಂಭಿಸಿದರು. ಗುರಗಾವ್ ನಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಆದಷ್ಟು ಉಚಿತವಾಗಿ ಕಾರು ಮಾರಾಟಗಾರರು ಹಾಗೂ ಗ್ರಾಹಕರಿಗೆ ಅವಶ್ಯವಿರುವ ಎಲ್ಲ ಸಂಗತಿಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ಇವರ ಉದ್ದೇಶವಾಗಿದೆ.

ಪರಿಹಾರ

ಈಗಾಗಲೇ ನೆಲೆಯೂರಿರುವ ಕಂಪನಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವುದು ಅವರ ಗುರಿಯಾಗಿದೆ. ಈ ಅಟೋಪೋರ್ಟಲ್, ಉಪಯೋಗಿಸಿದ ವಾಹನ ಉದ್ಯಮದ ಎರಡು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿತರಕರು ವಾಹನವನ್ನು ಅತಿ ಬೇಗ ಮಾರಾಟ ಮಾಡಲು ಮತ್ತು ಗ್ರಾಹಕರಿಗೆ ಪಾರದರ್ಶಕ ಬೆಲೆ, ವ್ಯಕ್ತಿಗತ ಸಮಾಲೋಚನೆ ಮತ್ತು ಜಗಳ ಮುಕ್ತವಾಗಿ ವಾಹನ ಖರೀದಿಗೆ ಅವಕಾಶ ನೀಡಲು ಇದು ನೆರವಾಗುತ್ತಿದೆ. ಕಂಪನಿ ಇ-ಕಾಮರ್ಸ್ ಕೆಲಸಗಾರರ ಜೊತೆ ಕೈ ಜೋಡಿಸಿದ್ದು, ಪ್ರಮುಖ ಬ್ರ್ಯಾಂಡ್ ಮತ್ತು ಪ್ರಮುಖ ಸ್ಥಳಗಳನ್ನು ಗಮನದಲ್ಲಿಟ್ಟುಕೊಂಡಿದೆ..

ಬೆಳವಣಿಗೆ ಅವಲೋಕನ

ಆಂಟನ್ ಪ್ರಕಾರ, ಅವರ ಈ ಉದ್ಯಮದಲ್ಲಿ ಉತ್ತಮ ಬೆಳವಣಿಗೆ ಕಂಡು ಬಂದಿದೆ. ಕಳೆದ ಒಂದುವರೆ ವರ್ಷದಲ್ಲಿ ಐದು ಮಿಲಿಯನ್ ಬಳಕೆದಾರರು ಮತ್ತು 300 ಕಾರು ಮಾರಾಟಕ್ಕೆ ಇದು ವೇದಿಕೆ ಒದಗಿಸಿಕೊಟ್ಟಿದೆ.

ಉದ್ಯಮದಲ್ಲಿ ಛಾಪು ಮೂಡಿಸಲು ಹಾಗೂ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಆಂಟನಿ ವಿಡಿಯೋವನ್ನು ಯುಟ್ಯೂಬ್ ನಲ್ಲಿ ಹರಿ ಬಿಟ್ಟಿದ್ದಾರೆ. ತಿಂಗಳಿಗೆ ನೂರಾರು ಕಾರುಗಳನ್ನು ಮಾರಾಟಮಾಡುವ ಸಾಮರ್ಥ್ಯ ಇವರಲ್ಲಿದೆ. ವಿತರಕರ ಜೊತೆ ಸದಾ ಸಂಪರ್ಕದಲ್ಲಿದ್ದು, ಮಾರಾಟವಾಗುವವರೆಗಿನ ಸಂಪೂರ್ಣ ಜವಾಬ್ದಾರಿಯನ್ನು ಹಿಂದೆ ನಿಂತು ನಿರ್ವಹಿಸುತ್ತದೆ. ವಿತರಕರ ಜೊತೆ ಅಟೋಪೋರ್ಟಲ್ ಗೂ ಒಂದೇ ಬಾರಿ ಎಲ್ಲ ಮಾಹಿತಿ ಬರುತ್ತದೆ.

ಆರಂಭದಲ್ಲಿ ಬಿ ಸ್ಟ್ರಾಟೆಜಿಕ್ ಇನ್ವೆಸ್ಟಮೆಂಟ್ ಗ್ರೂಪ್ ಬಂಡವಾಳ ಒದಗಿಸಿತ್ತು. ಸದ್ಯ ಅನೇಕ ವಿಸಿ ಫರ್ಮ್ ಸಂಸ್ಥೆಗಳ ಜೊತೆ ಹಣ ಸಂಗ್ರಹದ ಬಗ್ಗೆ ಮಾತುಕತೆ ನಡೆಯುತ್ತಿದೆ.

ಸ್ಫರ್ಧೆ

ಪೂರ್ವ ಸ್ವಾಮ್ಯದ ಕಾರು ಮಾರುಕಟ್ಟೆಯಲ್ಲಿ ಅನೇಕ ಆನ್​ಲೈನ್ ಪೋರ್ಟಲ್ ಗಳಿವೆ. ಕಾರ್ನೇಷನ್, Cardekho, CarTrade, ZigWheels ಮತ್ತು Droom ಪ್ರಮುಖ ಪಾತ್ರ ವಹಿಸುತ್ತಿವೆ. OLX ಮತ್ತು Quikr ಬಹು ವರ್ಗದ ಜಾಹೀರಾತುಗಳನ್ನು ನೀಡ್ತಾ ಇದ್ದು, ಇವುಗಳನ್ನು ಸಹ ಸ್ಪರ್ಧೆಯಲ್ಲಿ ಪರಿಗಣಿಸಬಹುದು.

ಕಳೆದ ಕೆಲವು ವರ್ಷಗಳಲ್ಲಿ ಪೋರ್ಟೆಲ್ ಗಳು ಧನಸಹಾಯವನ್ನು ಹೆಚ್ಚಿಸಿಕೊಂಡಿವೆ. Cardekho ಜನವರಿಯಲ್ಲಿ ಚೈನೀಸ್ ನ ಹಿಲ್ ಹೌಸ್ ಕ್ಯಾಪಿಟಲ್ ಹಾಗೂ ಟಾಯ್​ಬೊನೆ ಕ್ಯಾಪಿಟಲ್ ನೇತೃತ್ವದಲ್ಲಿ $50 ಮಿಲಿಯನ್ ಹಣವನ್ನು ಸಂಗ್ರಹಿಸಿದೆ. ಅಕ್ಟೋಬರ್ 2014 ರಲ್ಲಿ, Cartrade, ವಾರ್ಬರ್ಗ್ ಪಿನ್ಸಸ್, ಟೈಗರ್ ಗ್ಲೊಬಲ್ ಮತ್ತು ಕಾನಾನ್ ಪಾರ್ಟ್​ನರ್ಸ್ ನಿಂದ $ 30 ಮಿಲಿಯನ್​​ನಷ್ಟು ಹಣ ಸಂಗ್ರಹಿಸಿದೆ. ಜುಲೈ 2015 ರಲ್ಲಿ ಲೈಟ್​​ಬಾಕ್ಸನ್​ನಿಂದ Droom $ 16 ಮಿಲಿಯನ್ ಧನಸಹಾಯವನ್ನು ಪಡೆದಿದೆ.

ಈ ಉದ್ಯಮದಲ್ಲಿ ಅನೇಕ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದರೂ, ಮಾರುಕಟ್ಟೆ ಈಗಲೂ ಛಿದ್ರಗೊಂಡಿದೆ.ವಾಹನ ವಹಿವಾಟು ಪ್ರಕ್ರಿಯೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎನ್ನುತ್ತಾರೆ ಆಂಟನಿ.

 • Facebook Icon
 • Twitter Icon
 • LinkedIn Icon
 • WhatsApp Icon
 • Facebook Icon
 • Twitter Icon
 • LinkedIn Icon
 • WhatsApp Icon
 • Share on
  close
  Report an issue
  Authors

  Related Tags