ಆವೃತ್ತಿಗಳು
Kannada

ಪ್ರಾರಂಭಿಕ ಸಂಸ್ಥೆಗಳಿಗೆ ಹೂಡಿಕೆಯಾಗದಿರಲು ಐದು ಮುಖ್ಯ ಕಾರಣಗಳು

ಟೀಮ್​ ವೈ.ಎಸ್​​. ಕನ್ನಡ

YourStory Kannada
25th Nov 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಇಲ್ಲೊಬ್ಬ ಉದ್ಯಮಿಯಾಗ ಹೊರಟವನಿದ್ದಾನೆ. ಈ ವ್ಯಕ್ತಿ ಹಿಂದೆ ಕೆಲವು ಕಂಪೆನಿಗಳಲ್ಲಿ 7 ಅಂಕಿಗಳ ದೊಡ್ಡ ಸಂಬಳ ಪಡೆಯುತ್ತಿದ್ದ. ಆದರೆ ತನ್ನದೇ ಸ್ವಂತ ಉದ್ಯಮ ಆರಂಭಿಸುವ ಮಹತ್ವಾಕಾಂಕ್ಷೆಯಿಂದ ಆ ಕಂಪೆನಿಯನ್ನು ತೊರೆದು ಸ್ಟಾರ್ಟ್ ಅಪ್ ಕಂಪೆನಿಯನ್ನು ಆರಂಭಿಸಿದ. ಅಲ್ಲಿಂದ ಇಲ್ಲಿಯವರೆಗೂ ಕಳೆದ 3 ವರ್ಷಗಳಿಂದ ಸಂಸ್ಥೆಯನ್ನು ಗಟ್ಟಿಗೊಳಿಸಲು ಕಷ್ಟಪಡುತ್ತಿದ್ದಾನೆ. ಪ್ರತೀ ಬಾರಿಯೂ ಹೂಡಿಕೆದಾರರ ಮನವೊಲಿಸುವಲ್ಲಿ ವಿಫಲನಾಗುತ್ತಿದ್ದಾನೆ. ಬ್ಯಾಂಕ್ ಲೋನ್ ಹಾಗೂ ಸ್ನೇಹಿತರಿಂದ ಹಾಗೂ ಕುಟುಂಬದಿಂದ ಆರ್ಥಿಕ ನೆರವು ಪಡೆದು ಸಂಸ್ಥೆಯನ್ನು ನಡೆಸುತ್ತಿದ್ದಾನೆ. ಈಗ ಅವನ ಮುಂದಿರುವ ಪ್ರಶ್ನೆ, ಸಂಸ್ಥೆಯನ್ನು ಮುಂದುವರೆಸಬೇಕೋ ಅಥವಾ ಪ್ರಯತ್ನ ನಿಲ್ಲಿಸಬೇಕೋ ಅನ್ನುವುದು.

image


ಇದೇ ಸ್ಥಿತಿಯಲ್ಲಿ ನೀವಿದ್ದೀರಾ? ನಿಮಗೂ ಹೂಡಿಕೆಯ ಕೊರತೆಯಿದೆಯಾ? ನಿಮ್ಮ ಸಂಸ್ಥೆ ಹೂಡಿಕೆ ಕಾಣದಿರಲು ಕಾರಣವೇನು? ನಿಮಗೂ ಇಂತಹ ತೊಡಕುಗಳಿದ್ದರೆ ಅದಕ್ಕೆ ಮುಖ್ಯವಾಗಿ ಐದು ಕಾರಣಗಳಿವೆ.

1. ನೀವು

2. ನಿಮ್ಮ ಸಂಸ್ಥೆ

3. ವೆಂಚರ್ ಕ್ಯಾಪಿಟಲ್

4. ಮಾರುಕಟ್ಟೆ

5. ನಿಮ್ಮ ಅದೃಷ್ಟ

ಇವುಗಳಲ್ಲಿ ಒಂದಾದ ನಂತರ ಒಂದನ್ನು ಕೂಲಂಕೂಷವಾಗಿ ವಿಮರ್ಷಿಸಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕಬಹುದು.

ಮೊದಲ ಕಾರಣ-ನೀವು:

ನಿಮ್ಮ ಸಂಸ್ಥೆಗೆ ಸರಿಯಾದ ಹೂಡಿಕೆ ಕಂಡುಬರದೇ ಇದ್ದರೇ ಅದಕ್ಕೆ ಕಾರಣ ನೀವೂ ಆಗಿರಬಹುದು.

1. ನೀವು ಅನುಭವಸ್ಥ ಉದ್ಯಮಿಯಾಗದೇ ಇರುವುದು:

ಪರಿಹಾರಗಳು:

ಇದೇ ಕ್ಷೇತ್ರದಲ್ಲಿ ಇನ್ನೊಂದು ಪ್ರಾರಂಭಿಕ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕೆಲವು ಕಾಲ ಕಾರ್ಯನಿರ್ವಹಿಸಿ, ಅಗತ್ಯವಿರುವ ಅನುಭವಗಳನ್ನು ಪಡೆದುಕೊಳ್ಳಿ.

2. ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದಾದರೂ ಪದವಿ ಪಡೆದುಕೊಳ್ಳಿ

ನೀವು ಪರಿಪೂರ್ಣತೆ ಗಳಿಸುವವರೆಗೂ ಕೆಲವು ವರ್ಷಗಳ ಕಾಲ ಅದೇ ಮಾದರಿಯ ಪ್ರಾರಂಭಿಕ ಸಂಸ್ಥೆಯ ಸಂಪೂರ್ಣ ಒಳಹೊರಗುಗಳನ್ನು ಅರಿತುಕೊಳ್ಳಿ.

3. ನಿಮ್ಮ ಪದವಿ ಹೂಡಿಕೆದಾರರಿಗೆ ಅತ್ಯುತ್ತಮ ಎನಿಸುತ್ತಿಲ್ಲ:

ನೀವು ಐಐಟಿ ಅಥವಾ ಐಐಎಂನಲ್ಲಿ ಕಲಿತಿಲ್ಲವಾದರೇ, ವ್ಯಾವಹಾರಿಕ ಜಗತ್ತಿನಲ್ಲಿ ನಿಮ್ಮ ಪದವಿಗಳಿಗೆ ಅಷ್ಟು ಮೌಲ್ಯವಿರುವುದಿಲ್ಲ. ಪ್ರತಿಷ್ಠಿತ ವಿದ್ಯಾಸಂಸ್ಥೆಯ ಪದವಿಗಳಿಗೆ ಪ್ರೋತ್ಸಾಹ, ಹೂಡಿಕೆ ಹಾಗೂ ನೆಟ್ವರ್ಕ್ ಲಭಿಸುತ್ತದೆ, ಆದರೆ ಉಳಿದ ಕೆಲವು ವಿಶ್ವವಿದ್ಯಾನಿಲಯಗಳಿಂದ ಗಳಿಸಿಕೊಳ್ಳುವ ಪದವಿಗಳ ಮೌಲ್ಯವೂ ಕಡಿಮೆಯಾಗಿರುತ್ತದೆ, ಮಹತ್ವವೂ ಕಡಿಮೆ ಇರುತ್ತದೆ. ಐಐಟಿ ಅಥವಾ ಐಐಎಂನಲ್ಲಿ ಕಲಿತವರಲ್ಲದ ಉದ್ಯಮಿಗಳು ಪ್ರಾರಂಭಿಸಿದ ಸಂಸ್ಥೆಗಳಿಗೆ ಹೂಡಿಕೆ ಕಾಣಿಸದ ನೂರಾರು ಉದಾಹರಣೆಗಳಿವೆ. ಅಷ್ಟೇ ಅಲ್ಲ ಇಲ್ಲಿ ಕಲಿತ ವಿದ್ಯಾರ್ಥಿಗಳ ಉದ್ಯಮಗಳಿಗೂ ಹೂಡಿಕೆಯಾಗದ ಉದಾಹರಣೆಗಳಿವೆ. ಆದರೆ ಹೂಡಿಕೆ ಮಾಡುವವರು ಮುಖ್ಯವಾದ ಪದವಿಗಳಿಗೆ ಮಾತ್ರ ಮನ್ನಣೆ ನೀಡುವ ಸಂದರ್ಭವಿದೆ.

3. ಸಮರ್ಪಕ ಕಾರಣಗಳಿಲ್ಲದೇ ನೀವು ಸಂಸ್ಥೆಯನ್ನು ಪ್ರಾರಂಭಿಸಿದ್ದೀರಾ!

ವೈಯಕ್ತಿಕ ಸಮಸ್ಯೆಗಳಿಂದ ದೂರವಾಗಲು ಸಂಸ್ಥೆ ಪ್ರಾರಂಭಿಸಿದ್ದೀರಾ?

• ನೀವು ಸಂಸ್ಥೆ ಪ್ರಾರಂಭಿಸುವುದು ಮಾತ್ರ ನಿಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರವಾ?

• ನೀವು ಕೇವಲ ಶ್ರೀಮಂತರಾಗಲು ಅಥವಾ ನಿಮ್ಮ ಉದ್ಯೋಗದಿಂದ ಮುಕ್ತರಾಗಲು ಸಂಸ್ಥೆ ಪ್ರಾರಂಭಿಸಿದ್ದೀರಾ?

ಇಂತಹ ಲಘುವಾದ ಕಾರಣಗಳಿಗೆ ನೀವು ಸಂಸ್ಥೆ ಆರಂಭಿಸಿದ್ದರೇ, ಕೂಡಲೆ ನಿಮ್ಮ ಸಂಸ್ಥೆಯನ್ನು ಈಗಲೇ ಮುಚ್ಚಿಬಿಡಿ. ಏಕೆಂದರೇ ನಿಮಗೆ ಇದರಿಂದ ಯಾವ ಸಾಧನೆಯೂ ಸಾಧ್ಯವಿಲ್ಲ ಹಾಗೂ ಯಾವ ಸ್ಪಷ್ಟತೆಯೂ ಸಿಗುವುದಿಲ್ಲ. ಹಾಗಾಗಿ ನಿಮ್ಮ ಸಂಸ್ಥೆಗೆ ಹೂಡಿಕೆಯೂ ಅಸಾಧ್ಯ. ನೀವು ವ್ಯರ್ಥವಾಗಿ ನಿಮ್ಮ ಸಮಯ ಹಾಗೂ ಎನರ್ಜಿಯನ್ನು ವೇಸ್ಟ್ ಮಾಡಿಕೊಳ್ಳುತ್ತೀರಷ್ಟೆ.

4. ನೀವು ನಿಮ್ಮ ಕಥೆಯನ್ನು ಸಮರ್ಪಕವಾಗಿ ಹೇಳುವಲ್ಲಿ ವಿಫಲರಾಗುತ್ತಿದ್ದೀರಿ.

ಪರಿಹಾರಗಳು:

ಮೊದಲು ನೀವು ಸಂಸ್ಥೆಯನ್ನು ಪ್ರಾರಂಭಿಸಿದ ಉದ್ದೇಶ ಹಾಗೂ ನೀವು ಅದಕ್ಕೆ ಸಮರ್ಥರೇ ಅನ್ನುವುದನ್ನು ದೃಢಪಡಿಸಿಕೊಳ್ಳಿ

• ಮೊದಲು ನಿಮ್ಮ ಸಂಸ್ಥೆಯ ಉದ್ದೇಶ ಹಾಗೂ ದೀರ್ಘಕಾಲಿಕ ಆಶಯಗಳನ್ನು ಗುರುತು ಮಾಡಿಕೊಳ್ಳಿ

• ಸತತವಾಗಿ ಅಭ್ಯಾಸ ನಿರ್ವಹಿಸಿ

ಎರಡನೇ ಕಾರಣ-ನಿಮ್ಮ ಸಂಸ್ಥೆ:

ಇದಕ್ಕಿರುವ ಸಾಧ್ಯತೆಗಳು-

1. ನಿಮ್ಮ ಸಂಸ್ಥೆ ಪ್ರಾರಂಭಿಕ ಸಂಸ್ಥೆಯ ಲಕ್ಷಣ ಹೊಂದಿಲ್ಲ ಇದಿನ್ನೂ ಆಲೋಚನೆಯ ಹಂತದಲ್ಲೇ ಇದೆ:

ನೀವು ಮಾರುಕಟ್ಟೆಯನ್ನು ಅರಿಯುವ ನಿಜವಾದ ಕೆಲಸ ಮಾಡಿದ್ದೀರೋ ಇಲ್ಲವೋ ಅನ್ನುವುದನ್ನು ಹೂಡಿಕೆದಾರರು ಗಮನಿಸುತ್ತಾರೆ. ನಿಮಗೆ ಅದರ ಆಧಾರ ಒದಗಿಸಬೇಕು.

2. ನಿಮ್ಮ ನಿಜವಾದ ಸಂಘರ್ಷವನ್ನು ಪರಿಹರಿಸಿಲ್ಲ

ನಿಮ್ಮ ಸಂಸ್ಥೆಯಲ್ಲಿನ ಸಂಘರ್ಷವನ್ನು ಪರಿಹರಿಸಲು ಸಾಧ್ಯವಿಲ್ಲದಿದ್ದರೇ ಬೇರೆ ವೆಂಚರ್ ಆರಂಭಿಸಿ. ಪರಿಹಾರಗಳು ಹೆಚ್ಚಾದಷ್ಟು ಸಮಸ್ಯೆಗಳು ಬೇಗನೆ ತಾರ್ಕಿಕ ಅಂತ್ಯ ಕಾಣುತ್ತವೆ. ನಿಮ್ಮ ವೈಯಕ್ತಿಕ ನೆಲೆಗಟ್ಟಿಗಿಂತ ಸಾಂಸ್ಥಿಕ ವ್ಯವಸ್ಥೆಯಲ್ಲಿ ನಿಂತು ಇದನ್ನು ಪರಿಹರಿಸುವದಷ್ಟೇ ಮುಖ್ಯ.

2. ನಿಮ್ಮ ತಂಡ ಪರಿಪೂರ್ಣವಲ್ಲ.

ನೀವು ಸಂಪೂರ್ಣವಾಗಿ ತಂತ್ರಜ್ಞಾನಾಧಾರಿತ ಸಂಸ್ಥೆಯೊಂದನ್ನು ಕಟ್ಟ ಹೊರಟರೇ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳ ಹೊರಗುತ್ತಿಗೆ ನೀಡಲು ಸಾಧ್ಯವಿಲ್ಲ. ಇದರ ಜೊತೆ ಸಂಸ್ಥೆಗೆ ಮೊದಲ ದಿನದಿಂದಲೂ ತಾಂತ್ರಿಕ ಕೌಶಲ್ಯಗಳನ್ನು ನಿರ್ವಹಿಸುವ ಸಮರ್ಥ ಮುಖ್ಯ ತಾಂತ್ರಿಕ ಅಧಿಕಾರಿಯ ಅಗತ್ಯವಿರುತ್ತದೆ.

ಅಪೂರ್ಣ ತಂಡವಾಗುವ ಇನ್ನೊಂದು ಸಾಧ್ಯತೆ ಎಂದರೆ, ಯಾವುದೋ ವ್ಯಾವಹಾರಿಕ ಕಾರ್ಯಾಗಾರದಲ್ಲಿ ಜೊತೆಯಾಗುವ ಸಂಸ್ಥಾಪಕರು ಪೂರ್ವ ನಿರ್ಧಾರಿತವಲ್ಲದೇ ಸಂಸ್ಥೆಯನ್ನು ಆರಂಭಿಸುವುದು. ಇಲ್ಲಿ ಅವರಿಗೆ ಯಾವುದೇ ಉದ್ಯಮದ ಹಿನ್ನೆಲೆಯೂ ಇರುವುದಿಲ್ಲ. ಆದರೆ ಅವರು ಸಂಸ್ಥೆಯನ್ನು ಆರಂಭಿಸುವುದು ಕೇವಲ ಯಾವುದೋ ಪ್ಯಾಷನ್ಗಾಗಿ ಅಥವಾ ಹೂಡಿಕೆ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಮಾತ್ರವಾಗಿರುತ್ತದೆ. ಇದರಿಂದ ಸಂಸ್ಥೆಯ ಪ್ರಗತಿ ಹಾಗೂ ಬೆಳವಣಿಗೆಯ ಮೇಲೆ ನಕರಾತ್ಮಕ ಪರಿಣಾಮ ಏರ್ಪಡುತ್ತದೆ. ಜೊತೆಗೆ ಇಂತಹ ಸಂಸ್ಥೆಗಳು ದೀರ್ಘಕಾಲ ಬದುಕುವುದಿಲ್ಲ.

4. ಪೂರ್ಣಕಾಲಿಕ ಉದ್ಯೋಗಿಗಳಿಲ್ಲದ ತಂಡ:

ನೀವಿನ್ನೂ ಅರೆಕಾಲಿಕವಾಗಿ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದೀರಿ ಅಥವಾ ನಿಮ್ಮ ತಂಡದಲ್ಲಿರುವವರು ಪೂರ್ತಿ ಶ್ರದ್ಧೆಯನ್ನು ಬೇರೆ ಕೆಲಸದಲ್ಲಿ ಹಾಗೂ ಅರೆ ಅವಧಿಯ ಕೆಲಸವನ್ನು ನಿಮ್ಮ ಸಂಸ್ಥೆಯಲ್ಲಿ ನಿರ್ವಹಿಸುತ್ತಿದ್ದಾರೆ ಎಂದರೆ ನಿಮ್ಮ ಸಂಸ್ಥೆ ಬೆಳವಣಿಗೆಯ ಸಂಪೂರ್ಣ ವಿಶ್ವಾಸ ಹೊಂದಿಲ್ಲ ಎಂದೇ ಅರ್ಥ. ಹೀಗಾದರೇ ಯಾವ ಹೂಡಿಕೆದಾರ ನಿಮ್ಮ ಸಂಸ್ಥೆಗೆ ಹೂಡಲು ಮುಂದೆ ಬರುತ್ತಾನೆ.

image


5. ನೀವು ನಿರ್ವಹಿಸುತ್ತಿರುವ ಸಂಸ್ಥೆಯನ್ನು ಮಾಪನ ಮಾಡಿಲ್ಲ

ಪ್ರಸ್ತುತ ಮಾರುಕಟ್ಟೆಯ ಅಗತ್ಯತೆಗಳಿಗೆ ಅನುಗುಣವಾಗಿ ನಿಮ್ಮಸಂಸ್ಥೆ ಅಥವಾ ಅದರ ಸೇವೆಗಳ ವ್ಯಾಪ್ತಿ ನಿರ್ಧರಿಸುವುದು ಅತಿ ಅಗತ್ಯ ಅಂಶ. ನೀವಿನ್ನೂ ನಿಮ್ಮ ಮಿತಿ ಹಾಗೂ ಮಾಪನಗಳನ್ನು ಅಂತಿಮಗೊಳಿಸಿಲ್ಲ ಎಂದರೆ ನಿಮ್ಮ ಪ್ರಾರಂಭಿಕ ಸಂಸ್ಥೆಯ ಮೂಲಭೂತ ಹಂತವನ್ನೇ ದಾಟಿಲ್ಲ ಎಂದರ್ಥ.

6. ನಿಮ್ಮ ಸಂಸ್ಥೆಯ ಆಸ್ತಿ ಮಾದರಿ:

ನಿಮ್ಮ ಸಂಸ್ಥೆಗೆ ತಕ್ಕ ಆಸ್ತಿ ಇರಬೇಕು ಅನ್ನುವುದು ಇದರ ಅರ್ಥವಲ್ಲ. ನಿಮ್ಮ ಸಂಸ್ಥೆಯೇ ನಿಮ್ಮ ಆಸ್ತಿಯಾಗಿರಬೇಕು. ಹೊರಗೆ ಮಾರುಕಟ್ಟೆಯಲ್ಲಿ ಗ್ರಾಹಕರು ನಿಮ್ಮ ಸಂಸ್ಥೆಯ ಬಗ್ಗೆ ಮೌಲ್ಯಯುತ ಮಾತುಗಳನ್ನಾಡುವಂತಿರಬೇಕು. ಆಗ ಮಾತ್ರ ವೆಂಚರ್ ಹೂಡಿಕೆ ನಿಮ್ಮ ಸಂಸ್ಥೆಯೆಡೆಗೆ ಹರಿದು ಬರುತ್ತದೆ.

7. ನಿಮ್ಮ ಸಂಸ್ಥೆಯ ಸೆಳೆತ ಅತ್ಯಂತ ನಗಣ್ಯವಾಗಿದೆ

ನಿಮ್ಮ ಉತ್ಪನ್ನ ಅಥವಾ ಸೇವೆಯ ಕುರಿತಾಗಿ ಗ್ರಾಹಕರಿಗೆ ಅರಿವಿಲ್ಲದಿದ್ದರೇ, ಮಾರುಕಟ್ಟೆಯಲ್ಲಿ ನಿಮ್ಮ ಸಂಸ್ಥೆ ಸೆಳೆತ ಹೊಂದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮುಂದಾದರೇ ಮಾತ್ರ ಹೂಡಿಕೆ ಗಳಿಸಬಹುದು.

8. ನೀವು ಎಲ್ಲರಿಗಾಗಿ ಎಲ್ಲವನ್ನೂ ಮಾಡಲು ಹೊರಟಿದ್ದೀರಾ

ನೆನಪಿಡಿ ನೀವು ಏನನ್ನು ಬೇಕಾದರೂ ಮಾಡಬಹುದು ಆದರೆ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ.

ಇದಕ್ಕಿರುವ ಪರಿಹಾರವೆಂದರೇ ನಿಮ್ಮ ಭೌಗೋಳಿಕ ಮಾರುಕಟ್ಟೆಯ ಅಗತ್ಯತೆಗಳಿಗೆ ಅನುಗುಣವಾಗಿ ಗ್ರಾಹಕರು ಬಯಸುವ ಸೇವೆಯನ್ನು ಮಾತ್ರ ಒದಗಿಸಿಕೊಡಿ.

ಮೂರನೆಯ ಕಾರಣ-ವೆಂಚರ್ ಕ್ಯಾಪಿಟಲ್:

ಈ ಮೇಲಿನ ಕೆಲವು ಕಾರಣಗಳಿಂದಾಗಿ ವೆಂಚರ್ ಕ್ಯಾಪಿಟಲ್ ಅಥವಾ ಸಾಂಸ್ಥಿಕ ಹೂಡಿಕೆ ನಿಮ್ಮ ಸಂಸ್ಥೆಗೆ ಲಭ್ಯವಾಗುವುದಿಲ್ಲ. ಆದರೆ ಇದರಿಂದ ನಿರಾಶರಾಗಿ ಹಿಂದೆ ಸರಿಯದೇ ಆರೋಗ್ಯಯುತವಾಗಿ ಸ್ಪರ್ಧಿಸಿದಾಗ ಮಾತ್ರ ಹೂಡಿಕೆ ಒದಗಿಬರಬಹುದಾದ ಸಾಧ್ಯತೆ ಇರುತ್ತದೆ.

1. ಸಮಯಾವಕಾಶದ ಸಾಂಸ್ಥಿಕ ಹೂಡಿಕೆ:

ಪ್ರತಿಯೊಂದು ಸಾಂಸ್ಥಿಕ ಹೂಡಿಕೆಯೂ ಅವಕಾಶದ ಅನುಗುಣವಾಗಿರುತ್ತದೆ. ಯುಎಸ್, ಚೀನಾದಲ್ಲಿ ಪ್ರಸಿದ್ಧವಾಗಿರುವ ವ್ಯಾವಹಾರಿಕ ಮಾದರಿಗೆ ಹರಿದು ಬರುವ ಹೂಡಿಕೆ ನಿಮ್ಮ ಸೃಜನಾತ್ಮಕ ಆಲೋಚನೆಗೆ ಲಭ್ಯವಾಗುವುದಿಲ್ಲ.

2. ನಿಮ್ಮ ಸಂಸ್ಥೆಯ ಯೋಜನೆ ಹಾಗೂ ಸಾಂಸ್ಥಿಕ ಹೂಡಿಕೆಯ ನಡುವಿನ ಹೊಂದಾಣಿಕೆಯ ಕೊರತೆ:

ಪ್ರಮುಖ ಶೇ.2ರಷ್ಟು ಸಾಂಸ್ಥಿಕ ಹೂಡಿಕೆ ಸಂಸ್ಥೆಗಳು ಶೇ. 98 ರಷ್ಟು ಬಂಡವಾಳ ಹೂಡುತ್ತಿವೆ. ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ದೀರ್ಘಕಾಲಿಕ 10 ಹಾಗೂ 20 ವರ್ಷಗಳ ಅವಧಿಗೆ ಬಂಡವಾಳ ಹೂಡಲು ಮುಂದಾಗುತ್ತವೆ. ನಿಮ್ಮ ವ್ಯವಹಾರ ಅದೆಷ್ಟೇ ಅದ್ಭುತವಾಗಿರಲಿ, ನೀವು ಕೇವಲ 3 ಅಥವಾ 4 ವರ್ಷದ ಕ್ಷಿಪ್ರ ಬೆಳವಣಿಗೆಯ ಉದ್ಯಮ ತೋರಿಸಿದರೆ, ನಿಮಗೆ ಇಂತಹ ಹೂಡಿಕೆಗಳು ಲಭಿಸುವುದಿಲ್ಲ. ಬಹುತೇಕ ಈ ರೀತಿಯ ಹೂಡಿಕೆಗಳು ದೀರ್ಘಕಾಲದ ಆದಾಯ ಬಯಸುತ್ತವೆ.

ನಿಮ್ಮ ಹಾಗೂ ನಿಮ್ಮ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಇಟ್ಟಿರುವ ವಿಶ್ವಾಸ ಕಳೆದುಕೊಳ್ಳದೇ, ಭವಿಷ್ಯದ ಉತ್ಪನ್ನಗಳತ್ತ ಗಮನ ಹರಿಸಿದಾಗ ಮಾತ್ರ ನಿಮಗೆ ಇಂತಹ ಹೂಡಿಕೆಗಳು ಲಭ್ಯವಾಗುತ್ತವೆ. ಸಮಯದ ಜೊತೆಗಿನ ನಿಮ್ಮ ಹೊಂದಾಣಿಕೆ ಹಾಗೂ ದೂರದೃಷ್ಟಿ ಕೆಲವು ಸಾಂಸ್ಥಿಕ ಹೂಡಿಕೆದಾರರನ್ನಾದರೂ ನಿಮ್ಮ ವ್ಯಾವಹಾರಿಕ ಭಾಗವನ್ನಾಗಿಸುತ್ತದೆ.

ನಾಲ್ಕನೇ ಕಾರಣ-ಮಾರುಕಟ್ಟೆ:

1. ನಿಧಾನಗತಿಯ ಮಾರುಕಟ್ಟೆ

ಮಾರುಕಟ್ಟೆ ನಿಧಾನಗತಿಯಲ್ಲಿದ್ದರೇ, ಯಾವುದೇ ಪ್ರಾರಂಭಿಕ ಸಂಸ್ಥೆಗೆ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬರುವುದಿಲ್ಲ. ಈ ವಾತಾವರಣದಲ್ಲಿ ನೀವೆಷ್ಟೇ ಸೈಕಲ್ ಹೊಡೆದರೂ ಸಾಂಸ್ಥಿಕ ಬಂಡವಾಳ ಹೂಡಿಕೆ ಸಾಧ್ಯವಾಗುವುದಿಲ್ಲ. ಇದಕ್ಕಿರುವ ಪರಿಹಾರವೆಂದರೆ, ಮಾರುಕಟ್ಟೆ ಸ್ಥಿತಿ ಬದಲಾಗುವುದನ್ನು ಕಾಯುವುದಷ್ಟೇ.

2. ಕಠಿಣ ಕ್ಷೇತ್ರ

ಹೂಡಿಕೆ ಮಾಡಬೇಕಾದ ಕ್ಷೇತ್ರಗಳು ಕಠಿಣವಾದರೂ ಹೂಡಿಕೆ ಲಭ್ಯವಾಗುವುದಿಲ್ಲ. ಮಾರುಕಟ್ಟೆ ಎಷ್ಟು ಕ್ರಿಯಾಶಿಲವಾಗಿದೆ ಅನ್ನುವಷ್ಟೇ ಮಾರುಕಟ್ಟೆಯಲ್ಲಿ ಯಾವ ಸೇವೆಗಳ ಹೂಡಿಕೆ ಕ್ಲಿಷ್ಟವಾಗುತ್ತದೆ ಅನ್ನುವುದೂ ಮುಖ್ಯವಾಗುತ್ತದೆ. ನಿಮ್ಮ ಯೋಜನೆಗಳು ಎಷ್ಟೇ ವಿಸ್ತಾರವಿದ್ದರೂ ಮಾರುಕಟ್ಟೆಯಲ್ಲಿ ಇದರ ವ್ಯತಿರಿಕ್ತ ಪರಿಸ್ಥಿತಿ ಇದ್ದರೇ ಹೂಡಿಕೆ ಕಷ್ಟ. ಉದಾಹರಣೆ ಅನುಭವಗಳೇ ಇಲ್ಲದ ಯುವ ಉದ್ಯಮಿ ತನಗೆ ಅಪರಿಚಿತವಾದ ಶೈಕ್ಷಣಿಕ ತಂತ್ರಜ್ಞಾನಗಳ ಕ್ಷೇತ್ರಕ್ಕೆ ಹೂಡಿಕೆ ಬಯಸಿದರೆ, ಖಂಡಿತವಾಗಿಯೂ ಸಾಂಸ್ಥಿಕ ಹೂಡಿಕೆದಾರ ನಿರಾಕರಿಸುತ್ತಾನೆ. ಯಾಕಂದರೇ, ಈ ಹೂಡಿಕೆಗಳು ಮರು ಆದಾಯದ ಹಾಗೂ ಹಾಕಿರುವ ಬಂಡವಾಳಕ್ಕೆ ಮರು ಪಡೆಯುವಿಕೆಯ ಸಾಮರ್ಥ್ಯವನ್ನು ಅಂದಾಜಿಸುತ್ತವೆ.

3. ಮಾರುಕಟ್ಟೆಯಲ್ಲಿರುವ ದೊಡ್ಡ ಪೈಪೋಟಿ

ನಿಮ್ಮ ಕ್ಷೇತ್ರದ ಸೇವೆ ಹಾಗೂ ಉತ್ಪನ್ನಗಳನ್ನು ನಿರ್ವಹಿಸುತ್ತಿರುವ ಇತರೆ ಸಂಸ್ಥೆಗಳು ಈಗಾಗಲೆ ಮಾರುಕಟ್ಟೆಯಲ್ಲಿದ್ದರೇ, ನೀವು ಅವರಿಗಿಂತ ಕಾರ್ಯಾಚರಣೆಯಲ್ಲಿ ಭಿನ್ನ ಎಂದು ತೋರಿಸಿಕೊಡದಿದ್ದರೇ, ನಿಮಗೆ ಸಾಂಸ್ಥಿಕ ಹೂಡಿಕೆ ಲಭಿಸುವುದಿಲ್ಲ.

image


ಐದನೇ ಕಾರಣ-ನಿಮ್ಮ ಅದೃಷ್ಟ:

ಈ ಮೇಲಿನ ಯಾವ ಅಂಶಗಳೂ ನಿಮ್ಮ ವೈಫಲ್ಯಕ್ಕೆಕಾರಣವಲ್ಲ, ಇದು ಕೇವಲ ನಿಮ್ಮ ದುರದೃಷ್ಟ ಎಂದು ನೀವು ಭಾವಿಸುವುದಾದರೇ, ನಿಮ್ಮ ಅದೃಷ್ಟವನ್ನು ನೀವೇ ಬದಲಾಯಿಸಿಕೊಳ್ಳಿ.

ಯಾವಾಗಲೂ ಅವಕಾಶವೊಂದು ಕಾದಿರುತ್ತದೆ. ಅದೃಷ್ಟಗಳನ್ನು ಬದಲಾಯಿಸಿಕೊಳ್ಳಲು ಕೆಲವೇ ಮಾರ್ಗಗಳಿವೆ.

1. ಸಾಮಾಜಿಕವಾಗಿ ಬೆರೆಯುವ ಗುಣ ಹೊಂದಿ:

ಮನಃಶಾಸ್ತ್ರಜ್ಞ ವೈಸ್ಮನ್ರ ಪ್ರಕಾರ ಯಾರು ಸಾಮಾಜಿಕವಾಗಿ ಬೆರೆಯುವ ಗುಣ ಹೊಂದಿರುತ್ತಾರೂ, ಯಾರೂ ಸುತ್ತಮುತ್ತಲಿನವರ ಜೊತೆ ಮುಕ್ತವಾಗಿ ಬೆರೆಯುತ್ತಾರೋ ಅಂತಹವರು ಯಾವಾಗಲೂ ಒಂದು ಅವಕಾಶವನ್ನು ಹೊಂದಿರುತ್ತಾರೆ.

2. ಮೂರ್ಖ ಪ್ರಯತ್ನಗಳನ್ನು ಮಾಡಿ:

ಹುಚ್ಚುತನದ್ದಾದರೂ ಪರವಾಗಿಲ್ಲ ಸದಾ ಪ್ರಯೋಗಗಳನ್ನು ಮಾಡುತ್ತಲೇ ಇರಿ. ಅವುಗಳಿಂದ ಸತತವಾಗಿ ವೈಫಲ್ಯ ಹೊಂದಿದರೂ ಪರವಾಗಿಲ್ಲ, ಅಂತಹ ಮೂರ್ಖ ಪ್ರಯತ್ನಗಳಿಂದ ನಿಮ್ಮ ತೊಡಕಿನ ಬಗ್ಗೆ ನಿಮಗೆ ಅರಿವಾಗುತ್ತದೆ.

3. ಅದೃಷ್ಟದ ಪರೀಕ್ಷೆ ನಡೆಸಿ:

ಮಾರ್ಕ್ ಮ್ಯಾನ್ಸನ್ ಹೇಳುವ ರಿಟರ್ನ್ ಆಫ್ ಲಕ್ ಎಂದರೇ, ಸಕಾರಾತ್ಮಕ ಅದೃಷ್ಟಗಳನ್ನು ಅಧಿಕಗೊಳಿಸುವುದು ಹಾಗೂ ನಕರಾತ್ಮಕ ಅದೃಷ್ಟಗಳ ಸಂಖ್ಯೆಯನ್ನು ಕಡಿಮೆ ಮಾಡುವುದು. ಇದೇ ಸೂತ್ರವನ್ನು ಅಳವಡಿಸಿಕೊಂಡ ಸಂಸ್ಥೆಗಳು ವ್ಯಾವಹಾರಿಕ ವಿಶ್ವದಲ್ಲಿ ಯಶಸ್ಸು ಗಳಿಸಿಕೊಂಡಿವೆ.

ನೀವು ಸದಾ ಪ್ರಯತ್ನಿಸುತ್ತಲೇ ಇದ್ದರೇ, ನಿಮ್ಮ ಸುತ್ತ ಅವಕಾಶಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿ ನಿಮ್ಮ ನಿರಂತರ ಪ್ರಯತ್ನಗಳ ಮೇಲೆ ನಿಮ್ಮ ಸಂಸ್ಥೆಯ ಹೂಡಿಕೆಯ ಸಾಧ್ಯತೆ ನಿಂತಿದೆ. ಹೂಡಿಕೆ ಮಾತ್ರ ನಿಮ್ಮ ಸಂಸ್ಥೆಯ ಸಮಸ್ಯೆ ಅಲ್ಲ. ಹೂಡಿಕೆಯಾದರೇ, ನಿಮ್ಮ ಸಮಸ್ಯೆ ಪರಿಹಾರವಾಯಿತು ಅನ್ನುವುದಲ್ಲ. ಸಮಸ್ಯೆಗಳು ಇದ್ದೇ ಇರುತ್ತವೆ, ಪ್ರಾರಂಭಿಕ ಹೂಡಿಕೆ ಅನ್ನುವುದು ಅಂತದ್ದೇ ಒಂದು ಸಮಸ್ಯೆಯಷ್ಟೆ.

ಅನುವಾದಕರು: ವಿಶ್ವಾಸ್​​

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags