ಆವೃತ್ತಿಗಳು
Kannada

ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಟೆನ್ಷನ್​ ಏಕೆ..? ಆ್ಯಪ್​​ಗಳ ಮೂಲಕ ಟ್ಯೂಷನ್​​​​​ ರೆಡಿಯಾಗಿದೆ..!

ಉಷಾ ಹರೀಶ್

usha harish
11th Nov 2015
Add to
Shares
5
Comments
Share This
Add to
Shares
5
Comments
Share
image


ಪ್ರತಿಯೊಬ್ಬರಿಗೂ ಉತ್ತಮ ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕೆಂಬ ಹಂಬಲವಿರುತ್ತದೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನು ಸಹ ಪಡೆಯುತ್ತಿರುತ್ತಾರೆ. ಕೆಪಿಎಸ್​​​ಸಿಯಂತಹ ಪರೀಕ್ಷೆಗಳಿಗಂತೂ ಎಲ್ಲಿ ನೋಡಿದರು ತರಬೇತಿ ಕೇಂದ್ರಗಳು ತಲೆ ಎತ್ತಿವೆ. ಇಂತಹ ಸಂದರ್ಭದಲ್ಲಿ ನಿಮ್ಮ ಅಂಗೈಯಲ್ಲೇ ಒಂದು ತರಬೇತಿ ಕೇಂದ್ರ ಸಿಗುವಂತೆ ಮಾಡಿದೆ ತಂತ್ರಜ್ಞಾನ. ಹೌದು ಕೆಪಿಎಸ್​ಸಿ ಪರೀಕ್ಷೆಗೆ ನೆರವಾಗುವಂತಹ ಆ್ಯಪ್​​ಗಳು ಸಿದ್ಧವಾಗಿವೆ. ಸ್ಮಾರ್ಟ್ ಫೋನ್ ಎಂದರೆ ಅಂಗೈಯಲ್ಲಿ ಆಕಾಶವಿದ್ದಂತೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಅದರ ಮೂಲಕವೇ ಉದ್ಯೋಗಗಳನ್ನು ಪಡೆದುಕೊಳ್ಳಬಹುದು.

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆ್ಯಪ್..

image


ಆ್ಯಪ್ ಸ್ಟೋರ್​ಗೆ ಹೋಗಿ ಮಿಷನ್ ಕೆಪಿಎಸ್​​ಸಿ ಕೆಎಸ್ ಇನ್ ಕನ್ನಡ(KPSCKS in Kannada) ಎಂಬ ಆ್ಯಪ್ ಡೌನ್​​ಲೋಡ್ ಮಾಡಿಕೊಂಡರೆ ಕನ್ನಡ ಮಾಧ್ಯಮದಲ್ಲಿ ಓದುವ ಆಭ್ಯರ್ಥಿಗಳಿಗೆ ಇದು ತುಂಬಾ ಅನುಕೂಲಕರವಾದ ಆ್ಯಪ್. ಇದರಲ್ಲಿ ಹಳೆಯ ಎಸ್​ಡಿಎ ಮತ್ತು ಎಫ್​ಡಿಎ ಪ್ರಶ್ನೆ ಪತ್ರಿಕೆಗಳು, 2015ರ ಪ್ರಚಲಿತ ವಿದ್ಯಮಾನಗಳು ಸಾಮಾನ್ಯ ಜ್ಞಾನ, ಇತಿಹಾಸ, ಕಂಪ್ಯೂಟರ್, ವಿಜ್ಞಾನ, ಅರ್ಥಶಾಸ್ತ್ರ ಮತ್ತಿತರ ವಿಷಯಗಳು ದೊರೆಯುತ್ತವೆ. ಜಿಕೆ ಆ್ಯಂಡ್ ಕರೆಂಟ್ ಆಫೇರ್ಸ್ ಎಂಬ ಆಪ್ಲಿಕೇಷನ್​​ನಲ್ಲಿ ಈ ಮಾಹಿತಿಗಳು ಲಭ್ಯವಾಗುತ್ತವೆ.

ಪ್ರಿಲಿಮ್ಸ್​​​ಗೂ ಒಂದು ಆ್ಯಪ್​​

ಕೆಪಿಎಸ್​ಸಿ ಪರೀಕ್ಷೆ ಬರೆಯಲು ಆಸಕ್ತಿ ಇದ್ದವರು ಕೆಪಿಎಸ್​ಸಿ ಪ್ರಿಲಿಮ್ಸ್ ಎಂಬ ಆ್ಯಪ್​​ ನ್ನು ಡೌನ್ ಲೋಡ್ ಮಾಡಿಕೊಂಡರೆ ಅದರಲ್ಲಿ ಪರೀಕ್ಷೆಗೆ ಬೇಕಾದ ಪಠ್ಯ ಪುಸ್ತಕಗಳು ಕೀ ಉತ್ತರಗಳು, ಪ್ರಶ್ನೆ ಪತ್ರಿಕೆಗಳು ಮತ್ತು ಅಣುಕು ಪರೀಕ್ಷೆಗಳು ಸಿಗುತ್ತವೆ.

ಆಫ್​​​​ಲೈನ್​​ನಲ್ಲಿ ಕನ್ನಡ ಜಿ.ಕೆ.

ಇಂಟರ್ನೆಟ್ ಇದ್ದರೆ ಮಾತ್ರ ಈ ಆ್ಯಪ್​​ಗಳನ್ನು ಬಳಸಬಹುದು ಇಲ್ಲದಿದ್ದರೆ ಆಗದು ಎಂಬುವವರಿಗೆ ಆಫ್​​ಲೈನ್​​ನಲ್ಲೂ ಅನುಕೂಲವಾಗುವಂತೆ ಒಂದು ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಕನ್ನಡ ಜಿಕೆ-ಎಮ್ಸಿಕ್ಯೂ ಆ್ಯಂಡ್ ನೋಟ್ಸ್ ಎಂಬ ಆ್ಯಪ್ ಇಂಟರ್ನೆಟ್ ಇಲ್ಲದಿದ್ದರೂ ನಡೆಯುತ್ತದೆ. ಅದರಲ್ಲಿ ಬಹು ಆಯ್ಕೆಯನ್ನು ಒಳಗೊಂಡ ಪ್ರಶ್ನೆ ಪತ್ರಿಕೆಗಳು ಸ್ವಯಂ ಅಧ್ಯಯಯನ ಮತ್ತು ರಸಪ್ರಶ್ನೆ ಆಯ್ಕೆಗಳಲ್ಲಿ ಅಧ್ಯಯನ ನಡೆಸಬಹುದು. ಇಂಗ್ಲೀಪ್​​ನಲ್ಲಿ ಅಧ್ಯಯನ ನಡೆಸುವವರು ಕರೆಂಟ್ ಆಫೇರ್ಸ್ ಎಂದು ಆ್ಯಪ್ ಸ್ಟೋರ್​​ನಲ್ಲಿ ಹುಡುಕಿದರೆ ಸಾಕಷ್ಟು ಆ್ಯಪ್​​ಗಳು ಸಿಗುತ್ತವೆ.

image


ಕೆಪಿಎಸ್​ಸಿ / ಕರ್ನಾಟಕ ಎಂಬ ಆ್ಯಪ್​​ನಲ್ಲಿ ಲಕ್ಷಕ್ಕೂ ಹೆಚ್ಚು ಪ್ರಶ್ನೋತ್ತರಗಳಿವೆ. ಹೊಸದಾದ ಪ್ರಶ್ನೆಗಳ ಬ್ಯಾಂಕ್ ಇದರಲ್ಲಿ ಲಭ್ಯವಿರುತ್ತದೆ. ಟೈಮರ್ ಜೊತೆಗೆ ಲೈವ್ ಟೆಸ್ಟ್ ಕೂಡಾ ಇಲ್ಲಿ ಸಿಗುತ್ತದೆ. ಕೆಎಎಸ್​​ನ 2015ರ ಆ್ಯಪ್​​ನಲ್ಲಿ ಕೆಎಎಸ್, ಪೊಲೀಸ್ ನೇಮಕಾತಿ, ರೈಲ್ವೇ, ಕೆಟಿಇಟಿ ಮತ್ತಿತರ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳು ಸಿಗುತ್ತವೆ. ಒಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಇಂತಹ ಆ್ಯಪ್​​ಗಳಲ್ಲಿ ಸಮಯ ಕಳೆದರೆ ಅವರ ಬುದ್ದಿ ಮತ್ತೆ ಹೆಚ್ಚು ಸರ್ಕಾರಿ ಹುದ್ದೆ ಪಡೆಯಲು ಅನುಕೂಲವಾಗಬಹುದು.

mission KPSC-IN KANNADA, KANNADA GK-MCQU&Notes, KPSC/KARNATAKA EXAM,KPSC(karnataka)2015 kannada, kpsc prilims, kannada gk & current affairs ಎಂದು ಆ್ಯಪ್ ಸ್ಟೋರ್​​ನಲ್ಲಿ ಸರ್ಚ್ ಕೊಟ್ಟರೆ ನಿಮ್ಮ ಅಂಗೈಯಲ್ಲಿ ಕೆಪಿಎಸ್ಸಿ ತರಬೇತಿ ಕೇಂದ್ರ ಇರುತ್ತದೆ.

ಐಎಎಸ್ ಪರೀಕ್ಷೆಗೆ ಮಾಹಿತಿ ಒದಗಿಸುವ ವೆಬ್

ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಐಎಎಸ್ ಪರೀಕ್ಷಾರ್ಥಿಗಳಿಗಾಗಿ ಒಂದು ವೆಬ್​ಸೈಟ್ ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ಪರೀಕ್ಷಾ ವೇಳಾಪಟ್ಟಿ ಸಂದರ್ಶನಕ್ಕೆ ಬರುವವರಿಗಾಗಿ ಅಗತ್ಯ ಮಾಹಿತಿಯನ್ನು ಸಹ ಇದರಲ್ಲಿ ನೀಡಲಾಗುತ್ತದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವ ವಿಷಯಗಳನ್ನು ತಜ್ಞರಿಂದ ಪ್ರಬಂಧ ಬರೆಯಿಸಿ ಇಲ್ಲಿ ಪ್ರಕಟಿಸಲಾಗುತ್ತದೆ. ಪ್ರತಿ ಬಾರಿಯ ಐಎಎಸ್ ಟಾಪರ್​​ಗಳ ಸಂದರ್ಶನ, ಅವರಿಂದ ಅಭ್ಯರ್ಥಿಗಳಿಗೆ ಸಲಹೆ, ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಎದುರಿಸುವ ಸವಾಲುಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. ಸಾಮಾಜಿಕ ಆರ್ಥಿಕ ವಿಷಯಗಳ ಬಗ್ಗೆ ವಿಶ್ಲೇಷಣೆ, ಪ್ರಚಲಿತ ವಿದ್ಯಮಾನಗಳ ಕುರಿತು ಟಿಪ್ಪಣಿ ಹೀಗೆ ಐಎಎಸ್ ಪರೀಕ್ಷೆಗೆ ನೆರವಾಗುವ ಎಲ್ಲ ರೀತಿಯ ಮಾಹಿತಿಗಳು ಇಲ್ಲಿ ಲಭ್ಯ.www.insightsonindia.com

Add to
Shares
5
Comments
Share This
Add to
Shares
5
Comments
Share
Report an issue
Authors

Related Tags