ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಮೋದಿ ನಡೆದುಬಂದ ಹಾದಿ

ನರೇಂದ್ರ ಮೋದಿ ಭಾರತ ದೇಶಕಂಡ ಉತ್ತಮ ಪ್ರಧಾನಿಗಳಲ್ಲೊಬ್ಬರು. ಅವರ ದಿಟ್ಟ ನಿರ್ಧಾರ, ತಾಂತ್ರಿಕತೆಯ ಮೇಲಿನ ಒಲವು, ಅಭಿವೃದ್ಧಿಯ ಯೋಜನೆಗಳು ಅವರನ್ನು ವಿಭಿನ್ನವಾಗಿ ನಿಲ್ಲುವಂತೆ ಮಾಡಿವೆ.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಮೋದಿ ನಡೆದುಬಂದ ಹಾದಿ

Tuesday September 17, 2019,

2 min Read

ಟ

ನರೇಂದ್ರ ದಾಮೊದರದಾಸ 17 ಸೆಪ್ಟೆಂಬರ್ 1950 ರಂದು ಗುಜರಾತನ ವಡಾನಗರನಲ್ಲಿ ಜನಿಸಿದರು. ಭಾರತದ 14ನೇಯ ಪ್ರಧಾನಿಯಾಗಿ ಆಯ್ಕೆಯಾಗಿ ಜನಪ್ರಿಯ ಅಡಳಿತ ನೀಡಿ ಮರು ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪೂರ್ಣ ಬಹುಮತದಿಂದ ಆಯ್ಕೆಯಾದ ಮೊದಲ ಕಾಂಗ್ರೆಸ್ಯೇತರ ಪ್ರಧಾನಿಯಾಗಿದ್ದಾರೆ ನರೇಂದ್ರ ಮೋದಿ, ಇದು ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ.‌


370ನೆ ವಿಧಿಯನ್ನು ರದ್ದುಗೊಳಿಸುವದರಿಂದ ಹಿಡಿದು ಜನಧನ್ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಬ್ಯಾಂಕ್ ಖಾತೆ ತೆರೆಯಲು ಅನುವು ಮಾಡಿಕೊಟ್ಟ ಇವರ ಯೋಜನೆಗಳು ಗಮನಾರ್ಹವಾಗಿವೆ.

ಬಾಲ್ಯ

ನರೇಂದ್ರ ಮೋದಿಯವರು 17 ಸಪ್ಟೆಂಬರ್ 1950 ರಂದು ತಂದೆ ದಾಮೋದರದಾಸ ಮೂಲಚಂದ ಮೋದಿ ತಾಯಿ ಹೀರಾಬೆನರ ರವರ ಆರು ಮಕ್ಕಳಲ್ಲಿ ಮುರನೆಯರಾಗಿ ಜನಿಸಿದರು. ಬಡ ಕುಟುಂಬದಲ್ಲಿ ಜನಿಸಿದ ಮೋದಿ ತಂದೆಗೆ ಚಹಾ ಮಾರುವಲ್ಲಿ ಸಹಾಯ ಮಾಡುತ್ತ ಜೀವನದ ಕಷ್ಟ ಕಾರ್ಪಣ್ಯಗಳ ಬಗ್ಗೆ ಅರಿತರು. ಮೋದಿಯವರು 8 ವರ್ಷ್ದವರಿದ್ದಾಗ RSS (ರಾಷ್ಟ್ರೀಯ ಸ್ವಯಂ ಸೇವಾ ಸಂಘ) ಸೇರಿ ತುರ್ತು ಪರಿಸ್ಥಿತಿಯಲ್ಲಿ ಹಲವಾರು ವಿರೋಧ ಪಕ್ಷದ ಮುಖಂಡರು ಜೈಲು ಸೇರಿದಾಗ ಹಲವಾರು ಪ್ರತಿಭಟನೆಗಳನ್ನು ಮಾಡಿದರು.


ತದ ನಂತರ 1987 ರಲ್ಲಿ ಬಿಜೆಪಿಗೆ ಸೇರಿ ಗುಜರಾತ್ ನಲ್ಲಿ ಬಿಜೆಪಿಯನ್ನು ಬಲಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. 2001 ರಂದು ಮೊದಲ ಬಾರಿಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನರೇಂದ್ರ ಮೋದಿಯವರು ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ತಮ್ಮ ಅಭಿವೃದ್ಧಿಯ ಯೋಜನೆಗಳಿಂದ ಜನಮನ್ನಣೆಗಳಿಸಿದ ಮೋದಿಯವರನ್ನು ಬಿಜೆಪಿ ಪಕ್ಷವು ತಮ್ಮ ಪ್ರಧಾನ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿ ಕನಕ್ಕಿಳಿಸಿಯಿತು. ಸತತ ಎರಡು ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿ ಜನರ ಮೆಚ್ಚುಗೆ ಗಳಿಸಿದ್ದಾರೆ.

ಪ್ರಧಾನ ಮಂತ್ರಿಯಾಗಿ

ಸಂಪೂರ್ಣ ಬಹುಮತದಿಂದ ಆಯ್ಕೆಯಾದ ಮೋದಿಯವರು ಜನರ ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ. ಜನಧನ ಯೋಜನೆ ಮುಖಾಂತರ ಪ್ರತಿಯೊಬ್ಬ ನಾಗರಿಕನಿಗೂ ಬ್ಯಾಂಕ್ ಖಾತೆ ತೆರೆಯಲು ಅನುವು ಮಾಡಿಕೊಟ್ಟು, ನೇರವಾಗಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವ ಮುಖಾಂತರ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿದರು. ನರೇಂದ್ರ ಮೋದಿಯವರ ತುಂಬಾ ಪ್ರಭಾವ ಬೀರಿದ ಯೋಜನೆಯೆಂದರೆ ಸ್ವಚ್ಛ ಭಾರತ ಅಭಿಯಾನ, ಸ್ವತಃ ತಾವೇ ಕಸ ಗುಡಿಸಿ ಜನರಿಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇಡಲು ಪ್ರೇರೆಪಿಸಿದರು. ಸಂವಿಧಾನ ದ 370 ನೇ ವಿಧಿಯನ್ನು ರದ್ದುಗೊಳಿಸುವುದರ ಮೂಲಕ ಜಮ್ಮು ಕಾಶ್ಮೀರದ ಜನರಿಗೂ ಸಹ ಅಭಿವೃದ್ದಿ ಯೋಜನೆಗಳನ್ನು ತರಲು ಮುಂದಾಗಿದ್ದಾರೆ.


ತಮ್ಮ ದಿಟ್ಟ ನಿರ್ಧಾರಗಳಿಂದ ಹೆಸರುವಾಸಿಯಾಗಿರುವ ಇವರ ಜನಪ್ರಿಯತೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ, ಇತ್ತೀಚೆಗೆ ಮುಸ್ಲಿಂ ರಾಷ್ಟ್ರಗಳಾದ UAE ತಮ್ಮ ದೇಶದ ಅತ್ಯುನ್ನತ ಗೌರವವಾದ "ಆರ್ಡರ್‌ ಅಫ್ ಝಯೆದ‌" ಪದಕವನ್ನು ನೀಡಿ ಸನ್ಮಾನಿಸಿತು ಮತ್ತು ರಷ್ಯ ಸಹ ತಮ್ಮ ದೇಶದ ಅತ್ಯುನ್ನತ ಗೌರವವಾದ‌ "ಆರ್ಡರ್‌ ಅಫ್‌ ಸೆಂಟ್ ಅಂಡ್ರೀವ್" ನೀಡಿ ಗೌರವಿಸಿದೆ. ಭಾರತ ದೇಶವನ್ನು ಒಗ್ಗೂಡಿಸುತ್ತಾ ಮತ್ತು ಬಲಿಷ್ಠ ದೇಶವನ್ನಾಗಿಸುವತ್ತ ಮುನ್ನಡೆಸುತ್ತಿರುವ ಮೋದಿ ಬಾಪೂಜಿಯವರ ಜಯಂತಿಯಂದು ಭಾರತವನ್ನು ಬಯಲು ಬಹಿರ್ದೆಸೆ ಮುಕ್ತ ರಾಷ್ಟ್ರ ಎಂದು ಘೋಷಣೆ ಮಾಡಲಿದ್ದಾರೆ. ಗಾಂಧೀಜಿ ಅವರ ಕನಸಿನಂತೆ ಸ್ವಚ್ಛ ಸುಂದರ ರಾಮರಾಜ್ಯ ನಿರ್ಮಾಣ ಮಾಡುವತ್ತ ಪ್ರಧಾನಿ ಮೋದಿ ಸಾಗುತ್ತಿದ್ದಾರೆ.