ವಿ ಆರ್ ಹಾಲಿಡೇಸ್ ಮೂಲಕ ರಜೆಯ ಮಜ ಸವಿಯಿಲು ಸಿದ್ಧರಾಗಿ

ಟೀಮ್​ ವೈ.ಎಸ್​. ಕನ್ನಡ

23rd Dec 2015
  • +0
Share on
close
  • +0
Share on
close
Share on
close


ಭಾರತದ ಆನ್ ಲೈನ್ ಪ್ರವಾಸೋದ್ಯಮದ ಕುರಿತು ದೀಪಕ್ ವಾಧ್ವಾ ಹಾಗೂ ಹರಕಿರತ್ ಸಿಂಗ್ ಅವರಿಗೆ ಆಳವಾದ ಜ್ಞಾನವಿದೆ. ಅವರು ಕಲಿತದ್ದು ಇಂಜಿನಿಯರಿಂಗ್ ಪದವಿಯನ್ನಾದರೂ, ಕೊನೆಗೆ ಆಗಿದ್ದು ಮೇಕ್ ಮೈ ಟ್ರಿಪ್ ನ ಪ್ರಾಡಕ್ಟ್ ಮ್ಯಾನೇಜರ್​. ಮೇಕ್ ಮೈ ಟ್ರಿಪ್ ನಲ್ಲಿ ಭಾರತದ ಆನ್ ಲೈನ್ ಪ್ರವಾಸೋದ್ಯಮ ಹೇಗೆ ಬೆಳೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವ ಅವಕಾಶ ದೊರಕಿತು. “ಮೇಕ್ ಮೈ ಟ್ರಿಪ್ ನಲ್ಲಿ ಕೆಲಸ ಮಾಡುತ್ತಿದ್ದಾಗ, ಗ್ರಾಹಕರ ಸಂಖ್ಯೆ ಹೇಗೆ ಅಗಾಧವಾಗಿ ಬೆಳೆಯುತ್ತಿದೆ ಹಾಗೂ ಹೇಗೆ ನಾವು ಆ ಬೇಡಿಕೆಗಳನ್ನು ಪೂರೈಸುವುದರಲ್ಲಿ ಹಿಂದೆ ಬೀಳುತ್ತಿದ್ದೇವೆ ಎಂಬುದು ಅರಿವಿಗೆ ಬಂತು. ಆಗಷ್ಟೇ ಫ್ಲಿಪ್ ಕಾರ್ಟ್ ಹಾಗೂ ಸ್ನ್ಯಾಪ್ ಡೀಲ್ ಸಂಸ್ಥೆಗಳು ತಮ್ಮ ವ್ಯಾಪಾರವನ್ನು ಆರಂಭಿಸಿದ್ದವು (2009). ಆಗಲೇ ನನಗೆ ಹೊಸ ಆಲೋಚನಾ ಶೈಲಿ ಹಾಗೂ ವಿನೂತನ ಮಾದರಿಯಿಂದ ತಳಮಟ್ಟದಲ್ಲೇ ಈ ಸಮಸ್ಯೆಯನ್ನು ಪರಿಹರಿಸಬೇಕು ಅನಿಸಿದ್ದು”ಎಂದು ಹೇಳುತ್ತಾರೆ ದೀಪಕ್.

image


ಆರಂಭಿಕ ದಿನಗಳು ಹಾಗೂ ಬೆಳವಣಿಗೆಗಳು

2012-13 ರಲ್ಲಿ ತಾವೇ ಸ್ವತಃ ರಜಾದಿನಗಳನ್ನು ಮಾರುವ ಮೂಲಕ ಇಬ್ಬರೂ ತಮ್ಮ ವೃತ್ತಿ ಬದುಕಿನ ದಿನಗಳನ್ನು ಆರಂಭಿಸಿದರು. ಈ ದಿನಗಳಲ್ಲೇ ಅವರಿಗೆ ಗ್ರಾಹಕ ಮತ್ತು ಮಾರುಕಟ್ಟೆಯ ಪರಿಸ್ಥಿತಿಗಳು ಅರ್ಥವಾದವು. ಜಾಗತಿಕ ಮಟ್ಟದಲ್ಲಿ ಅವರು ತಮ್ಮಸೇವೆಯ ಪೂರೈಕೆದಾರರೊಂದಿಗೆ ಸಂಬಂಧಗಳನ್ನು ವಿಸ್ತರಿಸಿ, ತಮ್ಮ ಪ್ರಾಡಕ್ಟ್ ಹಾಗೂ ಅದರ ಹಿಂದೆ ಅಗತ್ಯವಾಗಿರುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು. ಇದೇ ವೇಳೆ, ಪ್ರಸ್ತುತ ಭಾರತದ ಮಾರುಕಟ್ಟೆಯ ಜವಾಬ್ದಾರಿ ನೋಡಿಕೊಳ್ಳುತ್ತಿರುವ ಮೋಹಿತ್ ಪಿಪಲಾನಿ ಅವರನ್ನು ಬೋರ್ಡ್ ಗೆ ಸೇರಿಸಿಕೊಳ್ಳಲಾಯಿತು. ಮೋಹಿತ್ ಅವರಿಗೆ ಈ ಹಿಂದೆ ಮೈಕಲ್ ಪೇಜ್ ಇಂಟರ್ ನ್ಯಾಷನಲ್ ಹಾಗೂ ಐಸಿಐಸಿಐ ಪ್ರುಡೆನ್ಶಿಯಲ್ ನಲ್ಲಿ ಕೆಲಸ ಮಾಡಿದ ಅಪಾರ ಅನುಭವವಿತ್ತು. ಭಾರತದ ಹೊರಗಿನ ಪೂರೈಕೆದಾರರ ಮಾರುಕಟ್ಟೆಯನ್ನು ನಿಪುಣ್ ಭಂಡಾರಿ ನೋಡಿಕೊಳ್ಳುತ್ತಾರೆ. ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ, ಐಐಟಿ ಹಾಗೂ ಐಐಎಂ ಅಲುಮ್ನಿ ಆದ ಪ್ರಶಾಂತ್ ಘಿಲ್ದಯಾಲ್ ನೋಡಿಕೊಳ್ಳುತ್ತಾರೆ.

ಇಬ್ಬರೂ ಕೂಡ ನಂತರ, ವಿ ಆರ್ ಹಾಲಿಡೇಸ್ ಸಲುವಾಗಿ 2014 ರಲ್ಲಿ ಮೊದಲ ಹಂತದ ನಿಧಿ ಸಂಗ್ರಹದ ಮೂಲಕ (ಮೇಟ್ರಿಕ್ಸ್ ಪಾರ್ಟನರ್ಸ್ ನೇತೃತ್ವದಲ್ಲಿ) ದೊಡ್ಡ ಮಟ್ಟದ ಅಭಿವೃದ್ಧಿಗೆ ಕಾರಣರಾದರು.

ಕಂಪನಿ ಈ ವರ್ಷದ ಆರಂಭದಲ್ಲಿ ಮ್ಯಾನೇಜ್ಡ್ ಮಾರ್ಕೆಟ್ ಪ್ಲೇಸ್ ವಿಭಾಗಕ್ಕೆ ಸೇರ್ಪಡೆಯಾಯಿತು. ವಿ ಆರ್ ಹಾಲಿಡೇಸ್ ಗ್ರಾಹಕರ ಸಲುವಾಗಿ ಈ ಮಾದರಿಯಲ್ಲಿ, ಹಾಲಿಡೇ ಪ್ಯಾಕೇಜ್ ಗಳನ್ನು ನೀಡುವ ಮಾರ್ಕೆಟ್ ಪ್ಲೇಸ್ ಸೆಲ್ಲರ್ಸ್ ಜೊತೆಗೆ ಹತ್ತಿರದಿಂದ ಕೆಲಸ ಮಾಡುತ್ತದೆ.

ದೂರದ ಓಟದ ತಯಾರಿ

“ನಾವಿಲ್ಲಿ ದೂರದ ಓಟಕ್ಕಾಗಿ ಇದ್ದೇವೆ. ದೊಡ್ಡ ಮಟ್ಟದ ಬ್ಯುಸಿನೆಸ್​ಗಳು ಭದ್ರವಾಗಿ ತಳವೂರಲು ಕನಿಷ್ಠ 10 ವರ್ಷದ ಕಾಲಾವಧಿಯನ್ನು ಬಯಸುತ್ತವೆ ಹಾಗೂ ಈ ದೂರವನ್ನು ಕ್ರಮಿಸಲು ನಾವು ಸಿದ್ಧರಿದ್ದೇವೆ” ಎನ್ನುತ್ತಾರೆ ದೀಪಕ್. ಮೇಕ್ ಮೈ ಟ್ರಿಪ್ ನ ತಮ್ಮ ಹಳೆಯ ಬಾಸ್ ದೀಪ್ ಕಾರ್ಲಾ ಅವರ ಕಡೆಯಿಂದ ಅವರು ಕಲಿತ ಪಾಠಗಳಲ್ಲಿ ಇದೂ ಒಂದು.

ವಿ ಆರ್ ಹಾಲಿಡೇಸ್ ನ ಪ್ರಕಾರ ರಜಾ ದಿನಗಳ ಪ್ರವಾಸಗಳ ಪ್ಲಾನಿಂಗ್ ನಲ್ಲಿ ಹೇಳಿಕೊಳ್ಳುವಂತಹ ಬದಲಾವಣೆ ಆಗಿಲ್ಲ. ಹತ್ತು ವರ್ಷಗಳ ಹೇಗಿತ್ತೋ ಹಾಗೇ ಇದೆ. “ಆವಿಷ್ಕಾರ ಈ ಉದ್ಯಮದಲ್ಲಿ ತುಂಬಾ ಕಡಿಮೆ ಆಗಿವೆ. ಅದು ಬ್ಯುಸಿನೆಸ್​​ ಮಾದರಿಗಳಲ್ಲಿ ಆಗಿರಬಹುದು, ಪ್ರಾಡಕ್ಟ್, ತಂತ್ರಜ್ಞಾನ ಅಥವಾ ಗ್ರಾಹಕರ ಅನುಭವದಲ್ಲಿಯಾಗಿರಬಹುದು, ನೀರು ನಿಂತ ಹಾಗೇ ಇದೆ. ಮೊದಲಿನ ಕಾಲದಲ್ಲಿ ಇದು ನಡೆಯುತ್ತಿತ್ತು, ಆದರೆ ಇದೀಗ ಕಾಲ ಬದಲಾಗಿದೆ, ಈ ರೀತಿಯ ಪರಿಸ್ಥಿತಿ ಹೆಚ್ಚು ದಿನ ಇರಲಿದೆ ಎಂದು ನನಗನಿಸುವುದಿಲ್ಲ” ಎನ್ನುತ್ತಾರೆ ದೀಪಕ್.

ಪ್ರಸ್ತುತ ವಿ ಆರ್ ಹಾಲಿಡೇಸ್, ರಜಾ ದಿನಗಳಲ್ಲಿ ‘ಹುಡುಕಾಟ’ವನ್ನು ಆಧಾರವಾಗಿಟ್ಟುಕೊಂಡು ತನ್ನ ವ್ಯವಹಾರವನ್ನು ವಿಸ್ತರಿಸುತ್ತಿದೆ. ಪ್ರವಾಸಿಗರು, ಸೇವೆಗಳ ಪೂರೈಕೆದಾರರು ಹಾಗೂ ಪ್ರವಾಸದ ಕುರಿತಂತೆ ವಿವಿಧ ಲೇಖನಗಳನ್ನು ಅಧ್ಯಯನವನ್ನು ಮಾಡಿ ಈ ಕೆಲಸವನ್ನು ಮಾಡುತ್ತಿದೆ. ಸೇವೆಗಳ ಪೂರೈಕೆದಾರರಿಂದ ಅವರ ಬುಕಿಂಗ್ ಗಳು ಆಗುತ್ತಿವೆ. (ಭಾರತ, ಶ್ರೀಲಂಕಾ, ಬಾಲಿ ಮುಂತಾದ ದೇಶಗಳ ಟ್ರಾವೆಲ್ ಸೆಲ್ಲರ್ಸ್ ಹಾಗೂ ಪ್ರವಾಸಿ ತಾಣ ಪರಿಣಿತರ ಸಹಾಯದಿಂದ) ಈ ವರ್ಷ ಮ್ಯಾನೆಜ್ಡ್ ಮಾರ್ಕೆಟ್ ಪ್ಲೇಸ್ ಶ್ರೇಣಿಗೆ ಸೇರ್ಪಡೆಗೊಂಡ ನಂತರ ಸಂಸ್ಥೆಯು ಪ್ರತಿ ತಿಂಗಳು ಶೇ. 50 ರಷ್ಟು ಅಭಿವೃದ್ಧಿ ದರವನ್ನು ಸಾಧಿಸಿದೆ.

ಬೇಡಿಕೆ ಮತ್ತು ಪೂರೈಕೆಯ ಸಮತೋಲನ

ಮಾರುಕಟ್ಟೆಯನ್ನು ಸೃಷ್ಟಿಸುವುದು ಸವಾಲಿನ ಕೆಲಸವೇ ಸರಿ. ಮೊದಲು, ಗುಣಮಟ್ಟದ ಸೇವೆಯನ್ನು ಒದಗಿಸುವ ಸೇವಾ ಪೂರೈಕೆದಾರರನ್ನು ಬೋರ್ಡ್ ನಲ್ಲಿ ಸೇರಿಸಿಕೊಳ್ಳಬೇಕು.

ಇದಾದ ಮೇಲೆ, ಆನ್ ಲೈನ್ ಮುಖಾಂತರ ಬೇಡಿಕೆಯನ್ನು ಸೃಷ್ಟಿಸುವ ಅಗತ್ಯ ಕಂಡುಬರುತ್ತದೆ. ಮಾರಾಟಗಾರರ ವಿಷಯದ ಬಗ್ಗೆ ಮಾತನಾಡುತ್ತ, ದೀಪಕ್ ಹೀಗೆ ಹೇಳುತ್ತಾರೆ, “ಯಶಸ್ಸು ಯಶಸ್ಸನು ಆಕರ್ಷಿಸುತ್ತದೆ. ಯಾವಾಗ ಜನ, ತಮ್ಮ ಸಹೋದ್ಯೋಗಿಗಳು ಬೆಳೆಯುತ್ತಿರುವುದನ್ನು ಅಥವಾ ಮಾರುಕಟ್ಟೆ ವಿಸ್ತರಿಸುವುದನ್ನು ನೋಡಿದಾಗ, ಆ ಯಶಸ್ಸಿನ ಕೊಂಚ ಭಾಗವನ್ನು ತಾವೂ ಪಡೆಯಬೇಕು ಎಂದು ಬಯಸುತ್ತಾರೆ. ಓಲಾ ಹಾಗೂ ಊಬರ್ ಕಂಪನಿಗಳು ಹೇಗೆ ಕಾರು ಡ್ರೈವರ್ ಗಳ ಬದುಕನ್ನು ಬದಲಾಯಿಸಿದವಲ್ಲ, ಹಾಗೆಯೇ ಇದು ಕೂಡ. ನಾವು ನಮ್ಮ ಸೇವಾ ಪೂರೈಕೆದಾರರಿಗೆ ಮೊದಲ ಕೆಲ ಯಶಸ್ಸಿನ ಮೆಟ್ಟಿಲುಗಳನ್ನು ಏರುವುದನ್ನು ಹೇಳಿಕೊಡುತ್ತೇವೆ. ನಂತರ ಉಳಿದ ಬೆಳವಣಿಗೆಗಳು ತನ್ನಿಂದ ತಾನೇ ಆಗುತ್ತವೆ, ನಾವು ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ”. ಇನ್ನು ಗ್ರಾಹಕರಿಗೆ ಸಂಬಂಧಿಸಿದಂತೆ, ಇವರನ್ನು ಆಕರ್ಷಿಸುವ ಕೆಲಸ ಆನ್ ಲೈನ್ ಮುಖಾಂತರ ನಡೆಯುತ್ತದೆ. ವಿ ಆರ್ ಹಾಲಿಡೇಸ್ ತನ್ನ ಎಲ್ಲ ಮಾಹಿತಿಯನ್ನು ಅಚ್ಚುಕಟ್ಟಾಗಿ, ಕರಾರುವಕ್ಕಾಗಿ ಇಟ್ಟಿರುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಿಂದ ವೆಬ್ ಸೈಟ್ ಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ. “ನಾವಿರುವ ಮಾರುಕಟ್ಟೆಯಲ್ಲಿ, ಮರಳಿ ಬರುವ ಗ್ರಾಹಕರು, ಹಾಗೂ ಗ್ರಾಹಕರ ಮುಖಾಂತರವೇ ಬರುವ ಮತ್ತಷ್ಟು ಗ್ರಾಹಕರು ನಮ್ಮ ಮಾರುಕಟ್ಟೆಯನ್ನು ನಿರ್ಧರಿಸುತ್ತಾರೆ. ಪ್ರತಿ ನಾಲ್ಕರಲ್ಲಿ ಓರ್ವ ಗ್ರಾಹಕರು, ಮರಳಿ ಬಂದ ಗ್ರಾಹಕರಾಗಿತ್ತಾರೆ ಅಥವಾ ರೆಫರೆನ್ಸ್ ನಿಂದ ಬಂದವರಾಗಿತ್ತಾರೆ” ಎನ್ನುತ್ತಾರೆ ದೀಪ್ಕ.

ಸೇವಾ ಪೂರೈಕೆದಾರರ ಕೇಸ್ ಸ್ಟಡಿಗಳು

ಸಂತೃಪ್ತ ಸೇವಾ ಪೂರೈಕಾದರರು, ಪಾಲುದಾರರ ಅನಿಸಿಕೆ ಮತ್ತು ಅಭಿಪ್ರಾಯಗಳು ಈ ಮಾರುಕಟ್ಟೆಯಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸಿ, ಮುಂದಿನ ವ್ಯವಹಾರಕ್ಕೆ ಸ್ಫೂರ್ತಿ ನೀಡುತ್ತವೆ. ದೀಪಕ್ ಹಾಗೂ ಹರಿಕಿರತ್, ಈ ಸಂದರ್ಭದಲ್ಲಿ ಎರಡು ಕೇಸ್ ಸ್ಟಡಿಗಳನ್ನು ಮುಂದಿಡುತ್ತಾರೆ.

ಟ್ರಿಪ್ ಸೇಲರ್ : ಸೌರಭ್, ಟ್ರಿಪ್ ಸೇಲರ್ ಅನ್ನು ಮುನ್ನಡೆಸುತ್ತಾರೆ. ವಿಯಾ.ಡಾಮ್ ನಲ್ಲಿ ಎಕ್ಸಿಕ್ಯುಟಿವ್ ಕೆಲಸ ಮಾಡಿ, ಬಳಿಕ ಅದಕ್ಕೆ ರಾಜೀನಾಮೆ ನೀಡಿ, ದೆಹಲಿಯ ದ್ವಾರಕಾ ಹಳ್ಳಿಯ ಸಮೀಪ ತಮ್ಮದೇ ಟ್ರಾವೆಲ್ ಏಜೆನ್ಸಿ ಶುರುಮಾಡಿದರು. ದೈನಂದಿನ ಚಟುವಟಿಕೆಗಳಿಗಾಗಿ ಕೆಲವರನ್ನು ಕೆಲಸಕ್ಕಿಟ್ಟುಕೊಂಡು, ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಜಸ್ಟ್ ಡಯಲ್ ನ ಮೊರೆಹೋದರು. ವಿ ಆರ್ ಹಾಲಿಡೇಸ್ ನೊಂದಿಗೆ ಟ್ರಿಪ್ ಸೇಲರ್ ಜೊತೆಗೂಡಿದ ನಂತರ, ಅದು ಆರು ಲಕ್ಷಕ್ಕಿಂತ ಹೆಚ್ಚು ಗಳಿಸುತ್ತಿದ್ದು, ಅದರ ಉದ್ಯೋಗಿಗಳ ಸಂಖ್ಯೆ 10 ತಲುಪಿದೆ. ಸೌರಭ್, ಇದೀಗ ಸೆಂಟ್ರಲ್ ದೆಹಲಿಯಲ್ಲಿ ತಮ್ಮ ಕಚೇರಿಯನ್ನು ವಿಸ್ತರಿಸುವ ಯೋಚನೆ ಮಾಡುತ್ತಿದ್ದು, ಗ್ರಾಹಕರಿಗಾಗಿ ಜಸ್ಟ್ ಡಯಲ್ ಮೊರೆಹೋಗುವುದನ್ನು ಬಿಟ್ಟುಬಿಟ್ಟಿದ್ದಾರೆ.

ವ್ಯೂ ಹಾಲಿಡೇ ಟ್ರಿಪ್ಸ್ –ದೆಹಲಿಯ ರೋಹಿಣಿ ಪ್ರದೇಶದಲ್ಲಿ ದಿನೇಶ್ ಕುಮಾರ ಸಣ್ಣ ಏಜೆನ್ಸಿಯೊಂದನ್ನು ನಡೆಸುತ್ತಾರೆ. ವಿ ಆರ್ ಹಾಲಿಡೇಸ್ ಜೊತೆಗೂಡುವ ಮೊದಲು ಅವರು ದೆಹಲಿಯ ಜನನಿಬಿಡ ಕೇವಲ 125 ಚದರ ಫೀಟ್ ಅಳತೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಅವರು ನಾಲ್ಕು ಜನರನ್ನು ಕೆಲಸಕ್ಕಿಟ್ಟುಕೊಂಡಿದ್ದು, ತಮ್ಮ ಮೊದಲ ಅಂಗಡಿಗಿಂತ ನಾಲ್ಕು ಪಟ್ಟು ದೊಡ್ಡ ಕಚೇರಿಗೆ ಸ್ಥಳಾಂತರಗೊಂಡಿದ್ದಾರೆ.

ಸ್ಪರ್ಧಾತ್ಮಕ ಮಾರುಕಟ್ಟೆ ವಾತಾವರಣ

ಪ್ರವಾಸೋದ್ಯಮದಲ್ಲಿ ಸ್ಪರ್ಧಾತ್ಮಕ ವಾತಾವರಣ ವಿಸ್ತಾರವಾಗಿಯೇ ಇದೆ. ಇಲ್ಲಿ ಎಲ್ಲವೂ ಮುಖ್ಯ, ಸ್ಫೂರ್ತಿ, ಹುಡುಕಾಟ, ಯೋಜನೆ, ವಿನಿಮಯ, ಪ್ರವಾಸಿ ತಾಣಗಳು ಹೀಗೆ. ದೀಪಕ್, ಈ ವಿಭಾಗಗಳನ್ನು ಮೂರು ಮುಖ್ಯ ವಿಭಾಗಗಳನ್ನಾಗಿ ವಿಂಗಡಿಸುತ್ತಾರೆ.

- ಆಫ್ ಲೈನ್ – ಕಾಕ್ಸ್ ಆಂಡ್ ಕಿಂಗ್ಸ್, ಥಾಮಸ್ ಕುಕ್ ಮುಂತಾದವರು.

- ಆನ್ ಲೈನ್ – ಮೇಕ್ ಮೈ ಟ್ರಿಪ್, ಯಾತ್ರಾ, ಗೋಇಬಿಬೋ ಮುಂತಾದವರು.

- ಸ್ಟಾರ್ಟ್ ಅಪ್ಸ್ – ಟ್ರಾವೆಲ್ ಟ್ರಯಂಗಲ್, ಟ್ರಿಪೊಟೊ, ಟ್ರಿಪ್ ಹೊಬೊ ಹೀಗೆ.

“ಇಂತಹ ಸ್ಪರ್ಧಾತ್ಮಕ ವಾತಾವಾರಣದಲ್ಲಿ ನಾವು ಹುಡುಕಾಟ, ಯೋಜನೆ, ಬುಕಿಂಗ್ ಹಾಗೂ ಗ್ರಾಹಕರ ಬೇಡಿಕೆಗಳ ಪೂರೈಕೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ” ಎನ್ನುತ್ತಾರೆ ದೀಪಕ್.

ಮುಂದಿರುವ ದಾರಿ

ವಿ ಆರ್ ಹಾಲಿಡೇಸ್ ನ ಮುಂದಿರುವ ದಾರಿ ಸುದೀರ್ಘವಾಗಿದೆ. ಹುಡುಕಾಟ ಹಾಗೂ ಯೋಜನೆ ಹಾಕಿಕೊಳ್ಳುತ್ತಿರುವ ಗ್ರಾಹಕರು ಇದೀಗಷ್ಟೇ ಆನ್ ಲೈನ್ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಾರೆ. ಈಗಾಗಲೇ ಇರುವವರು ಕೂಡ ಹೆಚ್ಚಿನ ಸ್ಪರ್ಧೆಗೆ ಸಿದ್ಧರಾಗುತ್ತಿದ್ದಾರೆ. ಆಫ್ ಲೈನ್ ಟ್ರಾವೆಲ್ ಏಜೆಂಟ್ ಗಳು ಇದೀಗ ಆನ್ ಲೈನ್ ನ ಸಾಮರ್ಥ್ಯವನ್ನು ಅರಿತು ಅದಕ್ಕೆ ತಕ್ಕ ಹಾಗೆ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ.

ಗುಡಗಾಂವ್ ನಲ್ಲಿ ನೆಲೆಯೂರಿರುವ ವಿ ಆರ್ ಹಾಲಿಡೇಸ್ ನಲ್ಲಿ ಇದೀಗ 90 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಗ್ರಾಹಕರನ್ನು ಮತ್ತೆ ಬರುವಂತೆ ಮಾಡುವುದರ ಜೊತೆಗೆ, ಜಗತ್ತಿನಾದ್ಯಂತ ಇರುವ ಸೇವಾ ಪೂರೈಕೆದಾರರಿಗೆ ಒಂದು ವಿಶ್ವಾಸಾರ್ಹ ಮಾರುಕಟ್ಟೆಯನ್ನು ಬೆಳೆಸುವುದು ಈ ತಂಡದ ಉದ್ದೇಶವಾಗಿದೆ.


ಅನುವಾದಕರು: ಸುಘೋಶ್​​

Want to make your startup journey smooth? YS Education brings a comprehensive Funding and Startup Course. Learn from India's top investors and entrepreneurs. Click here to know more.

  • +0
Share on
close
  • +0
Share on
close
Share on
close

Our Partner Events

Hustle across India