ರಾಜ್ಯದಲ್ಲಿ ತಂತ್ರಜ್ಞಾನದ ಮುನ್ನಡೆ ಪ್ರತಿಬಿಂಬಿಸುವ ತಾಂತ್ರಿಕ ಮೇಳ: ಸಚಿವ ಪ್ರಿಯಾಂಕ್ ಖರ್ಗೆ

Tuesday November 14, 2017,

2 min Read

ಭಾರತ ನಮಗೆಲ್ಲ ತಿಳಿದಿರುವಂತೆ ಕೆಲವೇ ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ಅನೇಕ ಮುಂದುವರಿದ ದೇಶಗಳನ್ನೇ ಹಿಂದಿಕ್ಕಿ ಅತ್ಯಂತ ಮುಂಚೂಣಿಯಲ್ಲಿದೆ ಎಂದು ಹೇಳಿದರೆ ತಪ್ಪಾಗಲಾರದು. ನಮ್ಮ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ದೇಶದ ಯುವಜನತೆಗೆ ಭಾರತವನ್ನು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ಈ ಅತ್ಯಪೂರ್ವ ಮತ್ತು ವಿಶೇಷವಾದ ತಾಂತ್ರಿಕ ಮೇಳಕ್ಕೆ ಆಹ್ವಾನಿಸಿದ್ದಾರೆ.

ವರ್ಲ್ಡ್ ಎಕನಾಮಿಕ್ಸ್ ಫೋರಂನಲ್ಲಿ ರಿಯಲ್ ಎಸ್ಟೇಟ್ ಎಜೆನ್ಸಿ ಜೇಮ್ಸ್ ಲಾಂಗ್ ಲಾಸೆಲ್ ಬೆಂಗಳೂರನ್ನು ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ನಗರ ಎಂದು ಘೋಷಿಸಿದರು. ಒಟ್ಟಾರೆ, ಬೆಂಗಳೂರಿನ ಪರಿಸರ, ಸೃಜನಾತ್ಮಕತೆ, ಉದ್ಯಮಶೀಲತೆ, ಹಣಕಾಸಿನ ಪರಿಸರ, ಜನರ ಕೌಶಲ್ಯ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಮಾಹಿತಿ, ಸಂವಹನ ಇವೆಲ್ಲ ತಂತ್ರಜ್ಞಾನಗಳ ಬೆಳವಣಿಗೆಗೆ ಪೂರಕವಾದ ಅಂಶಗಳೆಂದರೆ ಸುಳ್ಳಾಗಲಾರದು.

"ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರಿನಲ್ಲಿ ಏರ್ಪಡಿಸಿರುವ ಈ ಅಪೂರ್ವವಾದ ತಾಂತ್ರಿಕ ಮೇಳ ತಂತ್ರಜ್ಞಾನದಲ್ಲಿ ನಾವೆಷ್ಟು ಸಮರ್ಥರು ಎಂದು ಇಡೀ ಜಗತ್ತಿಗೇ ಎತ್ತಿ ತೋರಿಸಲು ಸಜ್ಜಾಗಿದೆ" ಎನ್ನುತ್ತಾರೆ ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆಯವರು.

"ಮೊದಮೊದಲು ಬೆಂಗಳೂರಿನಲ್ಲಿ ತಂತ್ರಜ್ಞಾನ ಒಂದು ಬೆಂಚ್‌ಮಾರ್ಕ್ ಮಾತ್ರ ಆಗಿತ್ತು ಆದರೆ ಇನ್ನು ನಾವು ಮೈಚಳಿ ಬಿಟ್ಟು ಧೈರ್ಯವಾಗಿ ಮುನ್ನಡೆದರೆ ಟೆಕ್ನಾಲಾಜಿ ಮಾಸ್ಟರ್ ಆಗುವದರಲ್ಲಿ ಸಂಶಯವೇ ಇಲ್ಲ" ಎನ್ನುತ್ತಾರೆ ಸಚಿವರು.

ಮುಂಬೈನಲ್ಲಿ ಈ ಕಾರ್ಯಕ್ರಮದ ನಿಮಿತ್ತ ರೋಡ್ ಷೋನಲ್ಲಿದ್ದ ಸಚಿವರು, ಮುಂಬೈ ನಿವಾಸಿಗಳಿಗೂ ಸಹಕಾರ ತೋರಿಸಲು ಕೇಳುತ್ತ, "ನಾನು ಮುಂಬೈನಲ್ಲಿ ಕೇವಲ ಹಣ ಹೂಡಿಕೆ ಕೇಳಲು ಬಂದಿಲ್ಲ, ನಿಮ್ಮೆಲ್ಲರ ಸಹಕಾರದಿಂದ ಭಾರತವನ್ನು ರಿಸರ್ಚ್ ಮತ್ತು ದೆವಲಪ್‌ಮೆಂಟ್‌ನಲ್ಲಿ ಮುಂದುವರಿಸಲು ಸಹಕಾರ ಕೇಳಲು ಬಂದಿದ್ದೇನೆ" ಎಂದರು.

ಈ ಮೇಳ ಐಟಿ ಮತ್ತು ಬಿಟಿಯ ಅಪೂರ್ವ ಸಂಗಮವಾಗಿದ್ದು, ಬೆಂಗಳೂರು‌ಐಟಿ.ಬಿಜ್ ಮತ್ತು ಬೆಂಗಳೂರು ಇಂಡಿಯಾ ಬಯೋ 2017 ಎಂದು ಕರೆಸಿಕೊಳ್ಳುತ್ತದೆ.

ಈ ಮೇಳದಿಂದ ನಾವು ಏನೇನು ನಿರೀಕ್ಷಿಸಬಹುದು ಎಂದು ನೋಡೋಣ ಬನ್ನಿ:

೧. ಎಲ್ಲ ಐಟಿ ಮತ್ತು ಬಿಟಿ ದಿಗ್ಗಜರ ಅದ್ಭುತ ಸಮಾಗಮ:

ಇದಕ್ಕಿಂತ ಅಪೂರ್ವವಾದ ಅವಕಾಶ ಸಿಗಲು ಸಾಧ್ಯವೆ? ಎಲ್ಲ ಐಟಿ ಮತ್ತು ಬಿಟಿ ದಿಗ್ಗಜರು ತಮ್ಮ ಅನುಭವ ಮತ್ತು ಅನಿಸಿಕೆಗಳ ವಿಚಾರ ವಿನಿಮಯ ಮಾಡಿಕೊಳ್ಳುವರು. ಈ ದಿಗ್ಗಜರ ಭೇಟಿ ಮಾಡಲು ನೀವು ಕೂಡ ರೆಜಿಸ್ಟರ್ ಮಾಡಿಕೊಳ್ಳಬಹುದು.

೨. ವಿವಿಧ ತಂತ್ರಜ್ಞಾನಗಳ ಸಮ್ಮಿಲನ:

ಬೆಂಗಳೂರನ್ನು ಇನ್ನೋವೇಶನ್ ಹಬ್ ಎಂದು ಕರೆಯುವ ನಿರ್ಧಾರವನ್ನು ಪ್ರತಿಪಾದಿಸುತ್ತ ಖರ್ಗೆಯವರು, " ಬೆಂಗಳೂರು ಕೇವಲ ಸರ್ವೀಸ್ ಇಂಡಸ್ಟ್ರಿಗಳ ತಾಣವಾಗಲಾರದೆ ಇನ್ನೇನು ಅನ್ವೇಷಕರ ಬೀಡಾಗುವದರಲ್ಲಿ ದೂರವಿಲ್ಲ" ಎಂದು ಹೆಮ್ಮೆಯಿಂದ ಹೇಳಿದರು. ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಬಯೋ ಟೆಕ್ನಾಲಜಿ ಹಾಗೂ ಪ್ರವಾಸೋದ್ಯಮ, ಏರೋಸ್ಪೇಸ್, ಇತರೇ ಕೈಗಾರಿಕೆಗಳ ಕುರಿತು ಅನೇಕ ಮಾಹಿತಿಗಳು ಕೂಡ ಇಲ್ಲಿ ಲಭ್ಯವಾಗುವವು.

೩.’ವೈ-ಈ-ಎಸ್-ಎಸ್-ಎಸ್’ ಎಂಬ ಸ್ಟಾರ್ಟಪ್ ಕಂಪನಿಗಳ ಫೋರಮ್ಮಿನ ಮಾಹಿತಿ

"ಯಂಗ್ ಎಂಟರ್‌ಪ್ರೈನರ್ಸ್ ಸ್ಟಾರ್ಟಪ್ಸ್ ಇನ್ ಸೋರಿಂಗ್ ಸ್ಪಿರಿಟ್" ದರ ಶಾರ್ಟ್ ಫಾರ್ಮ್ ’ವೈ-ಈ-ಎಸ್-ಎಸ್-ಎಸ್’. ಇಲ್ಲಿ ಸ್ಟಾರ್ಟಪ್ ಕಂಪನಿಗಳ ಮಾಲೀಕರು ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. "೪೦೦೦ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ರೆಜಿಸ್ಟರ್ ಮಾಡಿಕೊಂಡರೂ, ಶೇ. 95 ರಷ್ಟು ಸ್ಟಾರ್ಟಪ್‌ಗಳು ಯಶಸ್ವಿಯಾಗುವದೇ ಇಲ್ಲ. ಈ ಫೋರಮ್ಮಿನ ಮೂಲಕ ನಾವು ಈ ಯುವ ಉದ್ಯಮಿಗಳಿಗೆ ದಾರಿ ತೊರಿಸುವ ಪ್ರಯತ್ನ ಮಾಡುತ್ತೇವೆ" ಎಂದು ಸಚಿವರು ಹೇಳಿದರು.

೪. ಮೇಕರ್ ಫೇರ್:

ವರ್ಕ್ ಬೆಂಚ್ ಕಂಪನಿಯ ಕೋ-ಫೌಂಡರ್ ಆಗಿರುವ ಪವನ್ ಕುಮಾರ್‌ರವರು ’ಮೇಕರ್ ಫೇರ್’ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಈ ಮುಖಾಂತರ ಅವರು ಉದ್ಯಮಿಗಳು, ಆರ್ಟಿಸ್ಟ್‌ಗಳು, ಹವ್ಯಾಸಿಗಳನ್ನು ಒಟ್ಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ.

೫.ಗ್ರಾಮೀಣ ಐಟಿ ಕ್ವಿಜ್

ಗ್ರಾಮೀಣ ವಲಯದಲ್ಲಿ ಕೂಡ ಮಾಹಿತಿ ತಂತ್ರಜ್ಞಾನದ ಅರಿವು ಮೂಡಿಸಲು ’ಗ್ರಾಮೀಣ ಐಟಿ ಕ್ವಿಜ್’‌ನ್ನು ಕರ್ನಾಟಕದಲ್ಲಿ ಶುರುಮಾಡಲಾಯಿತು. 2010 ರ ನಂತರ ಇದು ಹೊರರಾಜ್ಯಗಳಲ್ಲೂ ಯಶಸ್ವಿಯನ್ನು ಕಂಡಿತು. ಇದರ ಫೈನಲ್ ರೌಂಡನ್ನು ಈ ಸಮ್ಮಿತ್ತಿನಲ್ಲಿ ಹಮ್ಮಿಕೊಳ್ಳಲಾಗಿದೆ.ಅತ್ಯಂತ ಕಡಿಮೆ ಸೌಲಭ್ಯಗಳಲ್ಲಿ ಗ್ರಾಮೀಣ ಮಕ್ಕಳ ಗಳಿಸಿರುವ ಜ್ಞಾನ, ಚಾಣಾಕ್ಷತನವನ್ನು, ಸೊಗಡನ್ನು ನೋಡಬಹುದು.

ಭಾಗವಹಿಸುವವರ ನೋಂದಣಿ ಶುರುವಾಗಿದೆ. ಪದವೀಧರರು, ಓದನ್ನು ಪೂರ್ಣಗೊಳಿಸಲು ಸಾಧ್ಯವಾಗದಿರುವವರಿಗೆ ಕೂಡ ಇಲ್ಲಿ ಅನೇಕ ಅವಕಾಶಗಳು ಲಭ್ಯವಾಗಬಹುದು.

"ಜಗತ್ತಿನಾದ್ಯಂತ ಕೌಶಲ್ಯದ ಅವಶ್ಯಕತೆಗೇನೂ ಕಡಿಮೆಯಿಲ್ಲ. ನಮ್ಮ ದೇಶದ ಪದವೀಧರರು, ಓದನ್ನು ಪೂರ್ಣಗೊಳಿಸಲು ಸಾಧ್ಯವಾಗದಿರುವವರಿಗೆ ಕೂಡ ಮಾಹಿತಿ ತಂತ್ರಜ್ಞಾನ, ಬಯೋಟೆಕ್ನಾಲಜಿಯಲ್ಲಿ ಒಳ್ಳಯ ಅವಕಾಶಗಳನ್ನು ಕಲ್ಪಿಸಿ, ನಮ್ಮ ದೇಶದ ಹಿರಿಮೆಯನ್ನು ಜಾಗತಿಕವಾಗಿ ಬೆಳಗುವಂತೆ ಮಾಡುವದೇ ನಮ್ಮ ಈ ಸಮ್ಮಿತ್ತಿನ ಸದುದ್ದೇಶ" ಎಂದು ಸಚಿವರು ಹೇಳಿದರು. ಎಲ್ಲರೂ ಕೈಜೋಡಿಸಿ ನಡೆದರೆ ಮಹತ್ತರವಾದದನ್ನು ಸುಲಭವಾಗಿ ಸಾಧಿಸಬಹುದು ಎಂದು ಸಚಿವರಿಗೆ ಅಪಾರ ನಂಬಿಕೆ ಇದೆ.