ಆವೃತ್ತಿಗಳು
Kannada

ಜರ್ಮನಿಯಲ್ಲಿ ತರಬೇತಿ ಪಡೆಯಲು ಆಯ್ಕೆಯಾದ ಮಿಝೋರಾಂನ 15ರ ಹರೆಯದ ಬಾಲಕ

ಟೀಮ್​ ವೈ.ಎಸ್​. ಕನ್ನಡ

YourStory Kannada
26th Jan 2017
Add to
Shares
11
Comments
Share This
Add to
Shares
11
Comments
Share

ಭಾರತದಲ್ಲಿ ಕ್ರಿಕೆಟ್ ಅಂದ್ರೆ ಧರ್ಮ. ಕ್ರಿಕೆಟ್​ನಲ್ಲಿ ಏನೇ ಆದ್ರೂ ಸುದ್ದಿ. ಸೋತ್ರೆ ಅಭಿಮಾನಿಗಳು ಬೇಸರದಿಂದ ಇರುತ್ತಾರೆ. ಗೆದ್ರೆ ಸಂಭ್ರಮಿಸುತ್ತಾರೆ. ಭಾರತೀಯರಲ್ಲಿ ಕ್ರಿಕೆಟ್ ಅಷ್ಟರ ಮಟ್ಟಿಗೆ ಆವರಿಸಿದೆ. ಕ್ರಿಕೆಟ್ ಹವಾದಿಂದ ಬೇರೆ ಆಟಗಳು ಸಪ್ಪೆಯಾಗಿ ಕಾಣುತ್ತಿವೆ. ಇದರ ಮಧ್ಯದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಇತರೆ ಕ್ರೀಡೆಗಳು ಸುದ್ದಿ ಮಾಡುವುದುಂಟು. ಆದ್ರೆ ಫುಟ್ಬಾಲ್​ಗೆ ಭಾರತದಲ್ಲಿ ಬೇರೆಯದ್ದೇ ಆದ ಸ್ಥಾನವಿದೆ. ಅದರದ್ದೇ ಆದ ಅಭಿಮಾನಿ ವರ್ಗವಿದೆ. ಕೇರಳ, ಕರ್ನಾಟಕ, ಈಶಾನ್ಯ ಭಾರತದ 7 ರಾಜ್ಯಗಳು ಸೇರಿದಂತೆ ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಫುಟ್ಬಾಲ್ ಕ್ರಿಕೆಟ್​ಗೆ ಅಭಿಮಾನಿಗಳ ಲೆಕ್ಕಾಚಾರದಲ್ಲಿ ಪೈಪೋಟಿ ನೀಡುತ್ತಿದೆ. ಅದರಲ್ಲೂ ಈಶಾನ್ಯ ಭಾರತದ ಪುಟ್ಟ ರಾಜ್ಯ, ಮಿಜೋರಾಂ 2014ರ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿ ಗೆದ್ದ ಮೇಲೆ ಅಲ್ಲಿ ಆಟದ ಬಗ್ಗೆ ಹೊಸ ಅಲೆಯೇ ಎದ್ದಿದೆ. ಮಿಜೋರಾಂನಲ್ಲಿ ತನ್ನದೇ ಆದ ಫುಟ್ಬಾಲ್ ಪ್ರೀಮಿಯರ್ ಲೀಗ್ ನಡೆಯುತ್ತದೆ. ಆಟದ ಬಗ್ಗೆ ಹೆಚ್ಚು ಆಸಕ್ತಿ ಇದೆ. ಪ್ರತಿಭೆಗಳಿಗೆ ಕೊರತೆಯೇ ಇಲ್ಲ. ಮಿಜೋರಾಂನ ರಾಜಧಾನಿ ಐಜ್ವಾಲ್, ಐ-ಲೀಗ್​ನಲ್ಲಿ "ಐಜ್ವಾಲ್ ಫುಟ್ಬಾಲ್ ಕ್ಲಬ್​"ನ್ನೇ ಹೊಂದಿದೆ. ಭಾರತೀಯ ಫುಟ್ಬಾಲ್ ಇತಿಹಾಸಕ್ಕೆ ಮಿಜೋರಾಂನ ಕೊಡುಗೆ ದೊಡ್ಡದಿದೆ.

image


ಈಗ ಮಿಜೋರಾಂನ 15ರ ಹರೆಯದ ಬಾಲಕ ಲಾಲ್​​ಚುಂಗ್​​ನುಂಗ್ವಾ ಸುದ್ದಿ ಮಾಡಿದ್ದಾರೆ. ಲಾಲ್​ಚುಂಗ್ ಜರ್ಮನಿಯ ಬುಂಡೆಲ್​ಸಿಂಗದಲ್ಲಿ ತರಬೇತಿ ಪಡೆಯಲು ಆಯ್ಕೆ ಆಗಿದ್ದಾರೆ. ಲಾಲ್​ಚುಂಗ್ ಸ್ಥಳೀಯವಾಗಿ “ಮಿಜೋ ಮೆಸ್ಸಿ” ಅಂತಲೇ ಪ್ರಖ್ಯಾತಿ ಪಡೆದಿದ್ದಾರೆ. ಈಗ ಲಾಲ್​ಚುಂಗ್ 6 ವರ್ಷಗಳ ಕಾಲ ಜರ್ಮನಿಯಲ್ಲಿ ತರಬೇತಿ ಪಡೆಯಲಿದ್ದಾರೆ.

ಲಾಲ್​ಚುಂಗ್ ಅತ್ಯಂತ ಕಡುಬಡತನದ ಟುಂಬದಲ್ಲಿ ಹುಟ್ಟಿದವರು. ಲಾಲ್​ಚುಂಗ್ ತಂದೆ ಕೂಲಿ ಕಾರ್ಮಿಕ. ಐವರು ಮಕ್ಕಳ ಪೈಕಿ ಲಾಲ್​ಚುಂಗ್ ತುಂಬಾ ಚುರುಕು. ಆದ್ರೆ ಕುಟುಂಬ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದೆ. ಹೀಗಾಗಿ ಲಾಲ್​ಚುಂಗ್ ಫುಟ್ಬಾಲರ್ ಆಗುವ ಕನಸನ್ನು ಅವರ ತಂದೆಯೇ ಕೈ ಬಿಟ್ಟಿದ್ದರು. ಆದ್ರೆ ಹಣೆಬರಹವೇ ಬೇರೆಯಾಗಿತ್ತು. ಲಾಲ್​ಚುಂಗ್ ಫುಟ್ಬಾಲ್ ಲೋಕದಲ್ಲಿ ಸುದ್ದಿ ಮಾಡಿ, ತನ್ನದೇ ಸಾಧನೆ ಮಾಡಿದ್ದಾರೆ. ತನ್ನ ಮಗನ ಬಗ್ಗೆ ಈಗ ಅಪ್ಪ ಸಂತಸಗೊಂಡಿದ್ದಾರೆ. ಅಷ್ಟೇ ಅಲ್ಲ ಮಗನ ಬೆನ್ನಿಗೆ ನಿಂತಿದ್ದಾರೆ.

ಇದನ್ನು ಓದಿ: ಕರ್ನಾಟಕದಲ್ಲೂ ಇದೆ ಕ್ಯಾಶ್​ಲೆಸ್​ ಗ್ರಾಮ- "ಬೆಳಪು" ಡಿಜಿಟಲ್​ ವ್ಯವಹಾರದ ಮೊದಲ ಬೆಳಕು..!

ಲಾಲ್​ಚುಂಗ್ ತನ್ನ 9ನೇ ವರ್ಷದಲ್ಲೇ ಫುಟ್ಬಾಲ್ ಆಡಲು ಆರಂಭಿಸಿದ್ರು. ಅಲ್ಲಿಂದ ಇಲ್ಲಿ ತನಕ ಲಾಲ್​ಚುಂಗ್​ಗೆ ಫುಟ್ಬಾಲ್ ಅಂದ್ರೆ ಪಂಚಪ್ರಾಣ. ಲಾಲ್​ಚುಂಗ್​ಗೆ ಅರ್ಜೆಂಟೈನಾದ ಲಿಯೊನೆಲ್ ಮೆಸ್ಸಿ ಐಕಾನ್ ಪ್ಲೇಯರ್. ಮೆಸ್ಸಿ ಕೂಡ ಬಡ ಕುಟುಂಬದಿಂದ ಬಂದವರು. ಆದ್ರೆ ಸಾಧನೆ ಮೂಲಕವೇ ಎಲ್ಲವನ್ನೂ ಸಾಧಿಸಿದವರು. ಲಾಲ್​ಚುಂಗ್ ಕೂಡ ಅದೇ ಹಠ ಹೊಂದಿದ್ದಾರೆ. ಅಚ್ಚರಿ ಅಂದ್ರೆ ಆರಂಭದಲ್ಲಿ ಲಾಲ್​ಚುಂಗ್ ಅಪ್ಪನಿಗೆ ತನ್ನ ಮಗ ಉತ್ತಮವಾಗಿ ಫುಟ್ಬಾಲ್ ಆಡುತ್ತಿದ್ದಾನೆ ಅನ್ನುವ ಬಗ್ಗೆ ಅರಿವೇ ಇರಲಿಲ್ಲ. ಆದ್ರೆ ಕೂಲಿ ಕೆಲಸಕ್ಕೆ ಹೋದಾಗ ಗೆಳೆಯರು ಲಾಲ್​ಚುಂಗ್ ಅಪ್ಪನಿಗೆ ಮಗನ ಸಾಧನೆ ಬಗ್ಗೆ ತಿಳಿಸುತ್ತಿದ್ದರು. ಆದ್ರೆ 13 ವರ್ಷದ ಒಳಗಿನವರ ಟೂರ್ನಿಯಲ್ಲಿ ಲಾಲ್​ಚುಂಗ್, “ಮೋಸ್ಟ್ ಪ್ರಾಮಿಸಿಂಗ್ ಪ್ಲೇಯರ್” ಅವಾರ್ಡ್ ಪಡೆದಾಗ ಹೊಸ ಕನಸು ಹುಟ್ಟಿಕೊಂಡಿತ್ತು. ಮಗನಿಗೆ ಅಪ್ಪ ಬೆನ್ನೆಲುಬಾಗಿ ನಿಂತು ಬಿಟ್ಟರು.

ಮಿಝೋರಾಂ ಭಾರತದ ಫುಟ್ಬಾಲ್ ಇತಿಹಾಸಕ್ಕೆ ಖ್ಯಾತನಾಮ ಆಟಗಾರರನ್ನು ಕೊಟ್ಟಿದೆ. ಜೆರ್ರಿ ಝಿರ್ಸಾಂಗ, ಶೈಲೋ ಮಲ್ ಸ್ವಾಂತುಲ್ವಾಂಗ ಸಾಧನೆ ಮೂಲಕ ಸುದ್ದಿ ಮಾಡಿದ್ದರು. ಜೆಜೆ ಲಾಲ್ ಪೆಕ್ ಲ್ವಾ, ರಾಲ್ಟೇ ಸೇರಿದಂತೆ ಹಲವರು ಬೇರೆ ಬೇರೆ ಕ್ಲಬ್​ಗಳನ್ನು ಪ್ರತಿನಿಧಿಸಿದ್ದಾರೆ. ಈಗ ಲಾಲ್​ಚುಂಗ್ ಮಿಝೋರಾಂನ ಫುಟ್ಬಾಲ್ ಇತಿಹಾಸವನ್ನು ಮತ್ತಷ್ಟು ಬೆಳಗಿಸಲು ಹೊರಟಿದ್ದಾರೆ. ಲಾಲ್​ಚುಂಗ್ ಭವಿಷ್ಯ ಉಜ್ವಲವಾಗಿರಲಿ.

ಇದನ್ನು ಓದಿ:

1. ಸಾಮಾಜಿಕ ಮಾಧ್ಯಮದ ಹೀರೋ "ಬಕ್​​ಸಾಲಾ”

2. ಕಾಫಿ ಪುಡಿ, ಟೀ ಪೌಡರ್​ ಖಾಲಿ ಆದ್ರೆ ಚಿಂತೆ ಬೇಡ- ಹಾಲಿನ ಜೊತೆಗೆ ಅಗತ್ಯವಸ್ತುಗಳು ಕೂಡ ಬಂದೇ ಬರುತ್ತದೆ..!

3. ಹಾಲೆಂಡ್​ ವಿಜ್ಞಾನಿಗಳ ಅನ್ವೇಷಣೆ- ಸಮುದ್ರವನ್ನು ಕ್ಲೀನ್​ ಮಾಡುತ್ತೆ ಈ ಸ್ಪೆಷಲ್​ "ಶಾರ್ಕ್​"

Add to
Shares
11
Comments
Share This
Add to
Shares
11
Comments
Share
Report an issue
Authors

Related Tags