ಆವೃತ್ತಿಗಳು
Kannada

ಸ್ಟಾರ್ಟ್​ಅಪ್ ಉದ್ಯಮಿಗಳಿಗೆ ಸ್ಫೂರ್ತಿ ನೀಡಬಲ್ಲ ಸ್ಪೋರ್ಟ್ಸ್​​​ಮನ್ ಸ್ಪಿರಿಟ್.. !

ಟೀಮ್​ ವೈ.ಎಸ್​ ಕನ್ನಡ

YourStory Kannada
2nd Apr 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಹೆಚ್ಚು ಕಮ್ಮಿ ಅಲ್ಲಿಗೆ ಅದು ಮುಗಿದಿತ್ತು.. ಇನ್ನೇನು ನಾನು ಸೋತು ಹೊರಗೆ ಬಿದ್ದೆ ಅನ್ನೋ ಬೇಸರ, ನೋವು ನಿರಾಸೆ ಒಟ್ಟಿಗೇ ಕಾಡೋದಿಕ್ಕೆ ಶುರುವಾಗಿತ್ತು. ನಿರಾಸೆಯ ಕಡಲಲ್ಲಿ ಮುಳುಗುತ್ತಿದ್ದ ನನಗೆ ಒಂದು ಕ್ಷಣ ಎಲ್ಲವನ್ನೂ ಕಳೆದುಕೊಂಡ ಅನುಭವ. ಇನ್ನೇನು ತಲೆ ತಲೆತಗ್ಗಿಸೋದಷ್ಟೇ ಬಾಕಿ ಅಂತ ಅಂದುಕೊಳ್ಳುವಷ್ಟರಲ್ಲಿ ಚೇರ್ ಅಂಪೈರ್ ಕೂಗಿದ್ದು ಒಂದು ಕ್ಷಣ ರೋಮಾಂಚನವನ್ನುಂಟು ಮಾಡಿತ್ತು. ನನ್ನ ಕಣ್ಣು ಕಿವಿಗಳನ್ನ ನಾನೇ ನಂಬದಾದೆ. ಯಾಕಂದ್ರೆ ಚೇರ್ ಅಂಪೈರ್ ಕೊಟ್ಟಿದ್ದ ತೀರ್ಪು ಡ್ಯುಸ್.. ಎಸ್ ಅಲ್ಲಿಗೆ ನಾನಿನ್ನೂ ಸೋತಿಲ್ಲ.. ನನಗೆ ಮತ್ತೊಂದು ಅವಕಾಶವಿದೆ ಅಂತ ನನ್ನ ಒಳಮನಸ್ಸು ತುಡಿಯುತ್ತಿತ್ತು. ಮೈ ಮನಗಳಲ್ಲಿ ರೋಮಾಂಚನವುಂಟಾಯ್ತು. ಪಂಚೇಂದ್ರಿಯಗಳು ಹಾಗೂ ಅತೀಂದ್ರಿಯಗಳೆಲ್ಲವೂ ಒಮ್ಮೆಲೇ ಜಾಗೃತವಾಗಿದ್ವು. ಯಾಕಂದ್ರೆ ಎಲ್ಲವೂ ಮುಗಿದಿತ್ತು ಅಂತ ಅಂದುಕೊಂಡಿದ್ದ ನನಗೆ ಮತ್ತೊಂದು ಅವಕಾಶದ ಬಾಗಿಲು ತೆರೆದುಕೊಂಡಿತ್ತು. ಒಂದೊಮ್ಮೆ ಆ ಅವಕಾಶವನ್ನ ನಾನು ಬಳಸಿಕೊಂಡು ಗೆದ್ದು ಬಿಟ್ರೆ.. ವಾಹ್ಹ್. ಮೈನಸ್ಸುಗಳಲ್ಲಿ ಅದನ್ನ ಕಲ್ಪಿಸಿಕೊಂಡೇ ಪುಳಕವಾಯ್ತು. ಶರೀರ ಬಿಸಿಯಾಯ್ತು. ಒಂದು ರೀತಿಯ ಶಕ್ತಿ ಮೈಯಲ್ಲಿ ಬಂದಿತ್ತು. ಇನ್ನು ಆ ಕ್ಷಣವನ್ನ ಸಂಭ್ರಮಿಸಿದ್ದೇ ತಡ ಕೋಚ್ ನನ್ನ ಬಳಿ ಕೇಳಿದ್ರು, ಇವತ್ತೇ ಆಡ್ತಿಯೋ ಅಥವಾ ವಿಶ್ರಾಂತಿ ಪಡೆದು ನಾಳೆ ಮುಂದುವರಿಸುತ್ತಿಯೋ ಅಂತಿಯೋ ಅಂತ. ಆದ್ರೆ ನನಗೆ ನಾಳೆ ಬೆಳಿಗ್ಗೆವರೆಗೂ ಕಾಯುವ ತಾಳ್ಮೆಯಂತೂ ನನಗಿರಲಿಲ್ಲ.

image


ಈ ಹಳೇ ನೆನಪನ್ನ ಮತ್ತೆ ಮೆಲುಕು ಹಾಕುತ್ತಿದ್ದ ನನಗೆ ಆಫೀಸ್ ಬಾಗಿಲಿನವರೆಗೂ ತಲುಪಿದ್ದು ಗೊತ್ತೇ ಆಗಲಿಲ್ಲ. ಆದ್ರೆ ಎಂದಿಗಿಂತ ನಾನು ಕೊಂಚ ತಡವಾಗಿ ಆಫೀಸ್ ಗೆ ಬಂದಿದೆ. ಹೀಗಾಗಿ ನನ್ನ ಸಹೋದ್ಯೋಗಿ ನನ್ನ ಹತ್ತಿರ ಬಂದು ಕೇಳಿದ್ರು. ಮೀಟಿಂಗ್ ಮುಂದವರಿಸೋಣ ಅಥವಾ ನಾಳೆಗೆ ಮುಂದೂಡೋಣ ಅಂತ. ಆದ್ರೆ ನನಗೆ ಮತ್ತದೇ ನಾಳೆಗೆ ಕಾಯುವ ತಾಳ್ಮೆ ಇಲ್ಲವಾಗಿತ್ತು. ಆ ದಿನಗಳ ಸ್ಪೋರ್ಟ್ಸ್ ಮನ್ ಸ್ಪಿರಿಟ್ ನನಗೆ ಬ್ಯುಸಿನೆಸ್ ನಲ್ಲೂ ತುಂಬಿತ್ತು. ಅದೇ ನಾನು ಉದ್ಯಮಿಯಾಗಲು ಪ್ರೇರೇಪಿಸಿತ್ತು.

ಇದನ್ನು ಓದಿ: ಟೇಬಲ್ ಟೆನಿಸ್ ಟೂರ್ನಿಗಾಗಿ 10ನೇ ಕ್ಲಾಸ್ ಪರೀಕ್ಷೆಗೆ ಗೈರು... ಅರ್ಧದಲ್ಲೇ ಕಾಲೇಜು ಬಿಟ್ಟು ಉದ್ಯಮ ಆರಂಭಿಸಿದ ದಿಟ್ಟ ಯುವತಿ

ಭಾರತದಲ್ಲಿ ಮಹಿಳೆಯರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ನೀಡುವ ಅವಕಾಶ ಅಷ್ಟಕಷ್ಟೆ.. ಅವರಿಗೆ ಎಂದಿಗೂ ಕ್ರಿಯಾಶೀಲರಾಗಿ ಭಾಗವಹಿಸಲು ಅಷ್ಟಾಗಿ ಪ್ರೇರೇಪಣೆ ನೀಡುವುದಿಲ್ಲ. ಆದ್ರೆ ಅದೃಷ್ಟ ಅನ್ನೋ ಹಾಗೆ ನನಗೆ ನನ್ನ ಕುಟುಂಬದಿಂದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಬೆಂಬಲ ದೊರಕಿತು. ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಕ್ರಿಕೆಟ್ , ಸೈಕ್ಲಿಂಗ್, ಸ್ವಿಮ್ಮಿಂಗ್, ಟ್ರಕ್ಕಿಂಗ್,ಟೆನ್ನಿಸ್ , ಕರಾಟೆ ಹೀಗೆ ಎಲ್ಲವುರಲ್ಲಿ ಭಾಗವಹಿಸಲು ಒಂದು ಅದ್ಭುತ ಸಮಯ ಹಾಗೂ ಬೆಂಬಲ ಸೃಷ್ಠಿಯಾಗಿತ್ತು. ಇದೇ ನನ್ನ ಭವಿಷ್ಯದ ಬೆಳವಣಿಗೆಗಳಿಗೆ ವೇದಿಕೆ ಕಲ್ಪಿಸಿತು. ಟೆನಿಸ್, ಫುಟ್ಬಾಲ್ ನಂತಹ ಆಟಗಳು ನನಗೆ ಉದ್ಯಮದಲ್ಲೂ ನಾಯಕನಾಗಿ ಬೆಳೆಯಲು ಅವಕಾಶ ನೀಡಿತ್ತು.

ಕ್ರೀಡೆಯಲ್ಲಿ ಉದ್ಯಮದ ಬಗ್ಗೆ ಕಲಿತ ಪಾಠ

ಮಾಡಿ ಮುಗಿಸಬೇಕು.. !

ಪವರ್ ಫುಲ್ ಆಗಿರಬೇಕು..

ಟ್ಯುಟೋರಿಯಲ್ ಗಳಲ್ಲಿ ವಿಡಿಯೋಗಳಲ್ಲಿ ಬ್ಯಾಕ್ ಸ್ಟ್ರೋಕ್ ಹಾಗೂ ಬಟರ್ ಫ್ಲೈ ಸ್ಟ್ರೋಕ್ ಗಳ ಬಗ್ಗೆ ಅದ್ಭುತವಾಗಿ ತಿಳಿದುಕೊಳ್ಳಬಹುದು. ಆದ್ರೆ ನೀರಿಗಿಳಿದು ನಾವು ಅದನ್ನ ಅಭ್ಯಾಸಿಸುವ ವರೆಗೂ ಅದನ್ನ ಕಲಿತುಕೊಳ್ಳಲು ನಮಗೆ ಸಾಧ್ಯವಿಲ್ಲ. ನೀರು ನಿಮ್ಮ ಮೂಗಿಗೆ ಮುಟ್ಟಿದಾಕ್ಷಣ ನಿಮಗೇ ಅರಿವಿಲ್ಲದಂತೆ ಕೈಕಾಲುಗಳು ಆಡುತ್ತವೆ. ಬಾಹುಗಳು ಚಲಿಸಲು ಶುರುಮಾಡುತ್ತವೆ. ಇನ್ನು ಟೆನಿಸ್ ನಲ್ಲಿ ಗಣಿತ ಹಾಗೂ ವಿಜ್ಞಾನದ ಸೂತ್ರಗಳು ಒಂದಾಗಿವೆ. ನಾವು ಎಷ್ಟು ಜೋರಾಗಿ ಹೊಡೆಯುತ್ತೆವೆಯೋ ಅಷ್ಟು ಬೇಗ ಎದುರಾಳಿಯೂ ಮಂಕಾಗಿ ಬಿಡುತ್ತಾನೆ. ಅಲ್ಲದೆ ನಮ್ಮ ವೇಗದಿಂದಲೇ ಗೆಲುವು ಸಾಧ್ಯ ಅನ್ನೋದು ಕಟು ಸತ್ಯ.

image


ಸರಿಯಾದ ಜಾಗದಲ್ಲಿರಬೇಕು..

ಫಿಟ್ ನೆಸ್ ಹೆಚ್ಚಿಸಿಕೊಳ್ಳಬೇಕು

ಬ್ಯಾಡ್ಮಿಂಟನ್ ಆಟ ಜಾಣ್ಮೆಯ ಆಟಕ್ಕೊಂದು ಉದಾಹರಣೆ. ಇಲ್ಲಿ ಎದುರಾಳಿ ಎಷ್ಟು ಚುರುಕಾಗಿ ಚಲಿಸುತ್ತಿರುತ್ತಾನೋ ಅಷ್ಟು ಹಿನ್ನಡೆ ನಿಮಗೆ ಖಚಿತ. ಬದಲಾಗಿ ಅವನ ಎಡ ಅಥವಾ ಬಲ ಭಾಗದಲ್ಲಿ ಸಾಕಷ್ಟು ಸ್ಥಳಾವಕಾಶಗಳಿದ್ದು, ಅದನ್ನ ನೀವು ಗುರುತಿಸಿ ಹೊಡೆದ್ರೆ ಫಲಿತಾಂಶ ನಿಮ್ಮ ಕಡೆಗೆ ಸಹಜವಾಗೇ ಬರುತ್ತದೆ. ಹಾಗೇ ಬ್ಯುಸಿನೆಸ್ ನಲ್ಲಿ ಮಾರ್ಕೆಟಿಂಗ್ ಸ್ಟ್ರಾಟಜಿ ಕೂಡ ಇದೇ ರೀತಿಯಾಗಿರುತ್ತದೆ. ಇನ್ನು ಯಾವುದೇ ಆಟ ಅಥವಾ ಪ್ರಯತ್ನದಲ್ಲೂ ಫಿಟ್ ನೆಸ್ ಗೆ ಇನ್ನಿಲ್ಲದ ಮಹತ್ವ. ಯಾಕಂದ್ರೆ ಮಹತ್ವದ ಹಂತದಲ್ಲೇ ಗಾಯದಿಂದಾಗಿ ಹಿನ್ನಡೆ ಅನುಭವಿಸಬೇಕಾದ ಅಥವಾ ಹೋರಾಟದಿಂದ ಹಿಂದೆ ಸರಿಯಬೇಕಾದ ಅಪಾಯಗಳು ಎದುರಾಗಬಹುದು. ಹೀಗಾಗಿ ಮಾಂಸ ಖಂಡಗಳನ್ನ, ನರತಂತುಗಳನ್ನ ಸಡಿಲಪಡಿಸಿಕೊಳ್ಳುವುದು ಸೂಕ್ತ. ಹಾಗೇ ಬ್ಯುಸಿನೆಸ್ ನಲ್ಲೂ ಕೆಲವು ಮುಂಜಾಗ್ರತೆ ವಹಿಸಿದ್ದೇ ಆದ್ರೆ ಎಡವುತ್ತೀವಿ ಅನ್ನೋ ಬಯ ಕಾಡುವುದೇ ಇಲ್ಲ.

ಸೂಕ್ತ ತರಬೇತುದಾರರನ ಆಯ್ಕೆ

ತಂಡದ ಜೊತೆ ಸಂವಹನವಿರಲಿ

ನಿಮ್ಮ ಆಟಕ್ಕೆ ಹಾಗೂ ಅಭ್ಯಾಸಕ್ಕೆ ಎಷ್ಟು ಪ್ರಾಮುಖ್ಯತೆಗಳಿದೆಯೋ ಅಷ್ಟೇ ಮಹತ್ವ ನೀವು ಆಯ್ಕೆ ಮಾಡಿಕೊಳ್ಳುವ ಕೋಚ್ ಗೂ ಇರುತ್ತದೆ. ಯಾಕಂದ್ರೆ ಒಬ್ಬ ಮಾರ್ಗದರ್ಶಕನಾಗಿ ಜವಾಬ್ದಾರಿಯನ್ನ ಹೊರುವ ಆತ ನಿಮ್ಮ ಎಲ್ಲಾ ಯಶಸ್ಸು ಅಥವಾ ವೈಫಲ್ಯಗಳಿಗೆ ಸಾಥ್ ನೀಡುವವನಾಗಿರುತ್ತಾನೆ. ಹೀಗಾಗಿ ಕೋಚ್ ನ ಸ್ಥಾನಮಾನವೂ ಬಹಳ ಮುಖ್ಯವಾಗಿರುತ್ತದೆ. ಹಾಗೇ ಉದ್ಯಮದಲ್ಲೂ ಒಬ್ಬ ಉತ್ತಮ ನಿರ್ದೇಶಕ ಸಿಕ್ಕಿದ್ದೇ ಆದ್ರೆ ಖಂಡಿತ ಯಶಸ್ಸಿನ ಹಾದಿಯನ್ನ ತುಳಿಯಲು ಸಾಧ್ಯವಿದೆ. ಇನ್ನು ಆಟದಲ್ಲಿ ಸೋಲು ಗೆಲವು ಯಾವತ್ತಿಗೂ ನಿರಂತರವಾಗಿ ಇರಬಹುದಾದ ಪ್ರಕೃಯೆ. ಇಲ್ಲಿ ಸೋತಾಗಿ ಕುಗ್ಗುವುದು ಅಥವಾ ಗೆದ್ದಾಗ ಅಬ್ಬರಿಸುವುದು ಸಾಮಾನ್ಯ. ಹಾಗೇ ಬ್ಯುಸಿನೆಸ್ ನಲ್ಲೂ ಇದೆಲ್ಲಾ ಮಾಮೂಲು. ಹೀಗೆ ಯಾವುದೇ ಸ್ಟಾರ್ಟ್ ಅಪ್ ಅಥವಾ ಬ್ಯುಸಿನೆಸ್ ಗಳನ್ನ ಸವಾಲಾಗಿ ಮುಕ್ತವಾಗಿ ಸ್ವೀಕರಿಸಿದ್ರೆ ಅಲ್ಲಿ ಯಶಸ್ಸು ಸಿಗುತ್ತೆ. ಬ್ಯುಸಿನೆಸ್ ನಲ್ಲೂ ಸ್ಪೋರ್ಟ್ಸ್ ಮನ್ ಸ್ಪಿರಿಟ್ ಹೊಂದಿದ್ರೆ ಸಾಗುವ ಹಾದಿಯಲ್ಲಿ ಬೇಸರಕ್ಕೆ ಯಾವತ್ತಿಗೂ ಅವಕಾಶವಿರೋದಿಲ್ಲ.

ಲೇಖಕರು – ವೃಂದಾ ಬನ್ಸೋಡೆ

ಅನುವಾದ - ಸ್ವಾತಿ

ಇದನ್ನು ಓದಿ:

1. ಕ್ಯಾನ್ಸರ್ ಪತ್ತೆಗೆ ನ್ಯಾನೋ ಚಿಪ್..!

2. ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆ ಮಣ್ಣಿನ ಹೂಜಿಗೆ ಡಿಮ್ಯಾಂಡ್

3. ವರ್ತಕರ ಸಮಸ್ಯೆಗೆ ಪರಿಹಾರ ಒದಗಿಸಿಲಿದೆ ರೋಡ್ ರನ್ನರ್

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags