ಆವೃತ್ತಿಗಳು
Kannada

17ರ ಹರೆಯದಲ್ಲೇ “ಅನನ್ಯ” ಸಾಧನೆ- 19 ಗ್ರಂಥಾಲಯ ಸ್ಥಾಪಿಸಲು ನೆರವಾದ ಶಾಲಾ ಬಾಲಕಿ

ಟೀಮ್​ ವೈ.ಎಸ್​. ಕನ್ನಡ

YourStory Kannada
29th May 2017
Add to
Shares
6
Comments
Share This
Add to
Shares
6
Comments
Share

ನಮ್ಮಿಂದ ಮತ್ತೊಬ್ಬರ ಮುಖದಲ್ಲಿ ಮಂದಹಾಸ ಮೂಡುತ್ತದೆ ಅಂದರೆ ಅದಕ್ಕಿಂತ ಉತ್ತಮ ಕೆಲಸ ಬೇರೆ ಇಲ್ಲ. ಇವತ್ತಿನ ಫಾಸ್ಟ್ ದುನಿಯಾದಲ್ಲಿ ನಮ್ಮ ಕೆಲಸ ನಾವೇ ಮಾಡಿಕೊಳ್ಳುವುದು ಕಷ್ಟ ಅಂತ ಹೇಳುವವರೇ ಹೆಚ್ಚು. ಇನ್ನು ಮತ್ತೊಬ್ಬರ ನೆರವಿಗೆ ನಿಲ್ಲುವುದು ಕನಸಿನ ಮಾತು. ಆದ್ರೆ ಇದಕ್ಕೆ ವಿರುದ್ಧವಾಗಿ ನಿಂತಿದ್ದಾರೆ ಅನನ್ಯ ಸಲುಜಾ. 17 ವರ್ಷ ವಯಸ್ಸಿನ ಅನನ್ಯ ಮತ್ತೊಬ್ಬರ ಮುಖದಲ್ಲಿ ಸದಾ ಮಂದಹಾಸ ಮೂಡುವಂತೆ ಮಾಡುತ್ತಾರೆ. ವರ್ಷವಿಡೀ ಸಾಮಾಜಿ ಕೆಲಸಗಳನ್ನು ಮಾಡುತ್ತಾರೆ. ಈ ಮೂಲಕ ಸಮಾಜದ ನೆರವಿಗೆ ಈ 17ರ ಹರೆಯದ ಬಾಲೆ ನಿಂತಿದ್ದಾಳೆ.

image


ಅಂದಹಾಗೇ ಅನನ್ಯ ಮಹತ್ವದ ಕೆಲಸ ಮಾಡಿದ್ದಾರೆ. ಈ ವರ್ಷದ ಬೇಸಿಗೆ ರಜಾದಲ್ಲಿ ಲೇಹ್, ಲಡಾಕ್ ನಂತಹ ಗ್ರಾಮಗಳಲ್ಲಿ ಗ್ರಂಥಾಲಯ ಸ್ಥಾಪಿಸಲು ಹಣಕಾಸಿನ ನೆರವು ನೀಡಿದ್ದಾಳೆ. ಅನನ್ಯ ತನ್ನ ಕೈಯಿಂದ ಏನೂ ಖರ್ಚು ಮಾಡಿಲ್ಲ. ಬದಲಾಗಿ ಹಣಕಾಸಿನ ವಿಚಾರದಲ್ಲಿ ದುರ್ಬಲರಾಗಿ ಓದು ನಿಲ್ಲಿಸಿರುವ ಮಕ್ಕಳ ಅಭಿವೃದ್ಧಿಗಾಗಿ ಗ್ರಂಥಾಲಯ ಮಾಡಲು ಹಣದ ಸಂಗ್ರಹ ಮಾಡಿದ್ದಳು. 10 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿದ ಅನನ್ಯ ತನ್ನ ಕನಸು ನನಸಾಗುವಂತೆ ಮಾಡಿಕೊಂಡಿದ್ದಾಳೆ.

ಇದನ್ನು ಓದಿ: ಪಾರಿವಾಳಗಳ ಪಾಲಿಗೆ ಅನ್ನದಾತ- ಪಕ್ಷಿ ಸಂಕುಲವನ್ನು ಕಾಪಾಡುವ ಸಂರಕ್ಷಕ

2 ವರ್ಷಗಳ ಹಿಂದೆ ಅನನ್ಯ ಸಾಮಾನ್ಯ ವಿದ್ಯಾರ್ಥಿಗಳಂತೆ ಓದು ಮತ್ತು ಪರೀಕ್ಷೆ ಬಗ್ಗೆ ಮಾತ್ರ ಯೋಚನೆ ಮಾಡುವ ವಿದ್ಯಾರ್ಥಿನಿಯಾಗಿದ್ದಳು. ಗುರುಗ್ರಾಮದ ಮೌಲ್ಸಾರಿನಲ್ಲಿರುವ ಶ್ರೀರಾಂ ಸ್ಕೂಲ್ ನಲ್ಲಿ ಓದುತ್ತಿದ್ದಳು. ಶಾಲೆಯ ಕಮ್ಯೂನಿಟಿ ಪ್ರೋಗ್ರಾಂ ಯೋಜನೆಯಲ್ಲಿ ಆರ್ಥಿಕವಾಗಿ ಅಶಕ್ತರಾಗಿರುವ ಮಕ್ಕಳಿಗೆ ಪಾಠ ಮಾಡುವ ಅವಕಾಶವನ್ನು ಪಡೆದಿದ್ದಳು. ಆ ಕೆಲಸ ಮುಗಿದ ಮೇಲೆ ಅನನ್ಯ ಮನಸ್ಸು ಬದಲಾಗಿತ್ತು. ಅಷ್ಟೇ ಅಲ್ಲ ಇಂತಹ ಮಕ್ಕಳಿಗೆ ಸದಾ ಸಹಾಯ ಮಾಡಬೇಕು ಅಂತ ಮನಸ್ಸು ಹೇಳುತ್ತಿತ್ತು.

“ ಪಾಠ ಮಾಡುವ ವೇಳೆ ನಾನು ಅಲ್ಲಿದ್ದ ಬಾಲಕಿಯರಿಗೆ ಸಾಕಷ್ಟು ಹತ್ತಿರವಾಗಿದ್ದೆ. ಅವರ ಮುಖದಲ್ಲಿ ನನ್ನ ಸಹಾಯದಿಂದ ಆದ ಖುಷಿಯನ್ನು ಕಂಡೆ. ಅದಕ್ಕೆ ಜಗತ್ತಿನಲ್ಲಿ ಯಾವುದೂ ಕೂಡ ಸಾಟಿಯಾಗಲಾರದು ಅಂತ ಅರಿತುಕೊಂಡೆ. ಈ ಕೆಲಸವನ್ನು ಸದಾ ಮುಂದುವರೆಸಬೇಕು ಎಂದು ನಿರ್ಧಾರ ಮಾಡಿದೆ. ”
- ಅನನ್ಯ, ಶಾಲಾ ಬಾಲಕಿ

ಈ ನಡುವೆ ಅನನ್ಯ ತನ್ನ ಟೀಚರ್ ಆಗಿದ್ದ ಸುಜಾತ ಸಾಹು ಅವರನ್ನು ಭೇಟಿಯಾದಳು. ಅವರು 17,000 ಫೀಟ್ ಅನ್ನುವ ಫೌಂಡೇಷನ್ ಒಂದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದರು. ಇದರ ನೆರವಿನಿಂದ ಲೇಹ್ ಮತ್ತು ಲಡಾಕ್​ನಲ್ಲಿ ಅನನ್ಯ ಸ್ವಯಂ ಸೇವಕಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದಳು.

ರಜಾ ದಿನಗಳಲ್ಲಿ ಲೇಹ್ ಮತ್ತು ಲಡಾಕ್ ಗೆ ಭೇಟಿ ನೀಡುವುದು ಅನನ್ಯ ಪಾಲಿಗೆ ಇವತ್ತು ಮಾಮೂಲಿಯಾಗಿದೆ. ಲಿಕ್ಸ್ಟೇ, ತುರ್​ತುರ್​​ ಮತ್ತು ಟಿಯಾಲಿಂಗ್​ನಂತಹ ಕುಗ್ರಾಮಗಳಿಗೆ 2015ರಲ್ಲಿ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಪಾಠ ಮಾಡಿದ್ದಳು. 2016ರ ಬೇಸಿಗೆ ರಜಾದಲ್ಲಿ ಲೇಹ್ ಜಿಲ್ಲೆಯಲ್ಲಿರುವ ಮಾಥೋದಲ್ಲಿ ಮಕ್ಕಳಿಗಾಗಿ ಆಟ ಮೈದಾನ ರೂಪಿಸಲು ಸಹಾಯ ಮಾಡಿದ್ದಳು.

" ಪ್ರತೀ ವರ್ಷ ನಾನು ಬೇಸಿಗೆ ರಜಾದಲ್ಲಿ ಎನ್​ಜಿಒ ಜೊತೆ ಸೇರಿಕೊಂಡು ಕೆಲಸ ಮಾಡುತ್ತಿರುವುದು ಖುಷಿಕೊಡುತ್ತಿದೆ. ಆದ್ರೆ ಈ ಬಾರಿ ಬೇರೆಯದ್ದೇ ಆದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ. ಲೇಹ್ ಮತ್ತು ಲಡಾಕ್​​ನಲ್ಲಿ ಬಡ ಮಕ್ಕಳಿಗಾಗಿ ಗ್ರಂಥಾಲಯ ಸ್ಥಾಪಿಸಲು ಯೋಚನೆ ಮಾಡಿದೆ. ಅದಕ್ಕಾಗಿ ಹಣ ಸಂಗ್ರಹಸಿದೆ. ನನ್ನ ಕನಸುಗಳು ನನಸಾಗಿವೆ."
- ಅನನ್ಯ, ಶಾಲಾ ಬಾಲಕಿ

ಸದ್ಯಕ್ಕೆ ಅನನ್ಯ ಒಟ್ಟು 19 ಗ್ರಂಥಾಲಯಗಳನ್ನು ಸ್ಥಾಪಿಸುವಷ್ಟು ಹಣ ಸಂಗ್ರಹಿಸಿದ್ದಾಳೆ. ಅನನ್ಯ ಪಾಲಿಗೆ ಇದು ಕೇವಲ ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಅನನ್ಯ ಮತ್ತಷ್ಟು ಸಮಾಜ ಸೇವೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾಳೆ. 17 ವರ್ಷದ ಬಾಲಕಿಯ ಸಾಮಾಜಿಕ ಕಳಕಳಿ ನಮ್ಮೆಲ್ಲರಲ್ಲಿ ಯಾಕಿಲ್ಲ ಅನ್ನುವ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳಬೇಕು..!

ಇದನ್ನು ಓದಿ:

1. ಸ್ಮಾರ್ಟ್​ಶಿಫ್ಟ್​​ನಲ್ಲಿದೆ ಭವಿಷ್ಯದ ಕನಸು- ಉದ್ಯಮಿ ಮತ್ತು ಟ್ರಕ್ ಮಾಲೀಕರ ನಡುವಿನ ಸಂಬಂಧಕ್ಕೆ ಹೊಚ ಟಚ್..! 

2. ಅಜ್ಜಿ ಕಥೆಗೆ ಸರಕಾರಿ ಆರ್ಡರ್..!

3. ಮಗು ಯಾರದ್ದೋ...! ಎದೆಹಾಲು ನೀಡುವವರು ಇನ್ಯಾರೋ..! 

Add to
Shares
6
Comments
Share This
Add to
Shares
6
Comments
Share
Report an issue
Authors

Related Tags