ಜೇಟ್ಲಿ ಬಜೆಟ್ನಲ್ಲಿ ಏನಿತ್ತು...? ಯಾರು ಏನು ಹೇಳಿದ್ರು..?
ಟೀಮ್ ವೈ.ಎಸ್. ಕನ್ನಡ
Thursday February 02, 2017,
2 min Read
ಮಹತ್ವದ ಕೇಂದ್ರ ಸರಕಾರದ ಬಜೆಟ್ ಮಂಡನೆಯಾಗಿದೆ. ಅರುಣ್ ಜೇಟ್ಲಿಯ ಬಜೆಟ್ ಬಗ್ಗೆ ಪ್ರತಿಪಕ್ಷಗಳು ಟೀಕೆ ಮಾಡಿದ್ರೆ, ಮೋದಿ ಸರಕಾರ ಮತ್ತು ಆಡಳಿತ ಪಕ್ಷಗಳು ಎಂದಿನಂತೆ ಸೂಪರ್ ಬಜೆಟ್ ಅಂತ ಕೊಂಡಾಡಿವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಈ ಬಾರಿಯ ಬಜೆಟ್ ರಾಜ್ಯಕ್ಕೆ ಕೊಟ್ಟಿರುವುದು ಅಷ್ಟಕಷ್ಟೆ. ಹಿಂದುಳಿದವರನ್ನು ತನ್ನತ್ತ ಸೆಳೆದುಕೊಳ್ಳುವ ಯತ್ನ ಬಜೆಟ್ನಲ್ಲಿ ನಡೆದಿದೆ. ಜೇಟ್ಲಿ ಬಜೆಟ್ನ ಹೈಲೈಟ್ಗಳು ಹೀಗಿವೆ.
ಗೃಹ ಸಾಲದಲ್ಲಿ ಗಣನೀಯ ಇಳಿಕೆ
➡ ಕೃಷಿ ಸಾಲ 10 ಲಕ್ಷ ಕೋಟಿಗೆ ಏರಿಕೆ
➡ ಬೆಳೆ ವಿಮೆ 5500 ಕೋಟಿಯಿಂದ 13242 ಕೋಟಿಗೆ ಏರಿಕೆ
➡ ಗ್ರಾಮೀಣಾಭಿವೃದ್ದಿ, ಕೃಷಿ ಇಲಾಖೆಗೆ 1.87 ಲಕ್ಷ ಕೋಟಿ
➡ ರೈಲ್ವೆ ಇಲಾಖೆಗೆ 131 ಲಕ್ಷ ಕೋಟಿ
➡ ಮಹಿಳಾ ಶಕ್ತಿ ಕೇಂದ್ರಗಳ ಸ್ಥಾಪನೆ, 500 ಕೋಟಿ
➡ ಪಾರದಶ೯ಕ ಆಡಳಿತಕ್ಕೆ ಡಿಜಿಟೆಲ್ ವ್ಯವಸ್ಥೆ
➡ ದೇಶದ 7 ಸಾವಿರ ರೈಲ್ವೆ ನಿಲ್ದಾಣಗಳಿಗೆ ಸೋಲಾರ್ ವ್ಯವಸ್ತೆ
➡ 2020 ರ ವೇಳೆಯಲ್ಲಿ ಮಾನವ ರಹಿತ ರೈಲ್ವೆ ಕ್ರಾಸಿಂಗ್ಗಳ ನಿಮಾ೯ಣ
➡ ಎಸ್ಸಿ, ಎಸ್ಟಿ ಗಳಿಗೆ ಅನುದಾನ ಹೆಚ್ಚಳ
➡ ರೈತರಿಗೆ "ಮಣ್ಣು ಆರೋಗ್ಯ ಕಾಡ್೯" ವಿತರಣೆ
➡ 2018 ರವೊಳಗೆ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪಕ೯
➡ ರಾಷ್ಟ್ರೀಯ ಹೆದ್ದಾರಿ ನಿಮಾ೯ಣಕ್ಕೆ 64 ಸಾವಿರ ಕೋಟಿ
➡ 2020 ರ ವೇಳೆಗೆ ಎಲ್ಲಾ ರೈಲುಗಳಲ್ಲಿ "ಬಯೋ ಟಾಯ್ಲೆಟ್"
➡ ಸಾರಿಗೆ ಕ್ಷೇತ್ರಕ್ಕೆ 2.41 ಲಕ್ಷ ಕೋಟಿ
➡ 1.5 ಲಕ್ಷ ಆರೋಗ್ಯ ಕೇಂದ್ರಗಳು ಮೇಲ್ಜೆ೯ಗೆ
➡ ರಾಜಸ್ತಾನ, ಓಡಿಶಾದಲ್ಲಿ ತೈಲ ಸಂಗ್ರಹ ಘಟಕ
➡ ಜೀವ ರಕ್ಷಕ ಔಷದಗಳ ಬೆಲೆ ಇಳಿಕೆ
➡ PMY ಯೋಜನೆಗೆ 28 ಸಾವಿರ ಕೋಟಿ
➡ ಯುವಕರಿಗೆ ಮಾರುಕಟ್ಟೆ ವ್ಯವಹಾರಿಕ ತರಬೇತಿ
➡ ಕಾಲೇಜುಗಳಿಗೆ UNI ಸ್ವಾಯುತ್ತತೆ
➡ ವೈದ್ಯಕೀಯ ಕ್ಷೇತ್ರದಲ್ಲಿ 25 ಸಾವಿರ ಸೀಟುಗಳ ಹೆಚ್ಚಳ
➡ ಇ ಟಿಕೆಟ್ ಬುಕ್ ಮಾಡಿದ್ರೆ ಸವಿ೯ಸ್ ಚಾಜ್೯ ಇಲ್ಲ
➡ 50 ಸಾವಿರ ಗ್ರಾ ಪಂ ಅಭಿವೃದ್ದಿಗೆ ಮನ್ನಣೆ
➡ ಮುದ್ರಾ ಯೋಜನೆಗೆ 2.44 ಲಕ್ಷ ಕೋಟಿ
➡ ಗಭೀ೯ಣಿಯರಿಗೆ 6 ಸಾವಿರ ರೂಪಾಯಿ
➡ ಏಲೇಕ್ಟ್ರಾನಿಕ್ ಉತ್ದಾದಕರಿಗೆ 746 ಕೋಟಿ
➡ 14 ಲಕ್ಷ ಅಂಗನವಾಡಿಗಳ ಸ್ತಾಪನೆ
➡ ಗುಜ್ರಾತ್, ಜಾಖ೯ಂಡ್ನಲ್ಲಿ AIIMS ಸ್ಥಾಪನೆ
➡ ಗ್ರಾಮ ಉಪನಗರಗಳಲ್ಲಿ ಡಿಜಿಟೆಲ್ ವ್ಯವಸ್ತೆ ಜಾರಿ
➡ ಅಂಚೆ ಕಚೇರಿಗಳಲ್ಲಿ ಪಾಸ್ಪೋಟ್೯ ನೀಡುವ ವ್ಯವಸ್ಥೆ ಜಾರಿ
➡ ಗ್ರಾ ಪಂ ಗಳಿಗೆ "ಬ್ರಾಡ್ ಬಾಂಡ್" ಸವಿ೯ಸ್
➡ 3500 ಕಿಮೀ ಹೊಸ ರೈಲ್ವೆ ಮಾಗ೯
➡ ಪರಿಶಿಷ್ಟ ಜಾತಿಗೆ 53 ಸಾವಿರ ಕೋಟಿ ಹೆಚ್ಚಳ .
ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಟೀಕೆ ಮಾಡಿವೆ. ರೈಲ್ವೇ ಬಜೆಟ್ನ್ನು ಸೇರಿಸಿಕೊಂಡೇ ಮಂಡನೆಯಾಗಿದ್ದ ಬಜೆಟ್ನಲ್ಲಿ ಏನೂ ಕೂ ಇಲ್ಲ ಅನ್ನುವುದು ಪ್ರತಿಪಕ್ಷಗಳ ವಾದ, ಆದ್ರೆ ಆದಾಯ ತೆರಿಗೆ ಸ್ಲಾಬ್ಗಳನ್ನು ಏರಿಸಿದ್ದು ಸಂಬಳ ಪಡೆಯುವವರ ಮುಖದಲ್ಲಿ ಚಿಕ್ಕ ಸಂತಸ ಮೂಡಿಸಿರುವುದು ಸುಳ್ಳಲ್ಲ.
1. ಸ್ಟಾರ್ಟ್ಅಪ್ ಬಗ್ಗೆ ಕನಸು ಏಕೆ..? ಉದ್ಯಮದ ಯಶಸ್ಸಿಗೆ ಇಲ್ಲಿದೆ ಟಿಪ್ಸ್..!
2. 10,000 ಸಾಲದಿಂದ ಕೋಟ್ಯಾಧಿಪತಿಯಾದ ದಿಲೀಪ್ ಶಾಂಘ್ವಿ ಕಥೆ..!
3. ಅಡುಗೆ ಬರಲ್ಲ ಅನ್ನುವ ಟೆನ್ಷನ್ ಬಿಟ್ಟುಬಿಡಿ- ಆ್ಯಪ್ ಡೌನ್ಲೋಡಿ ಮಾಡಿ ಅಡುಗೆ ಕಲಿಯಿರಿ..!