ಅಮೆಜಾನ್‌ ಇನ್ನೂ ಕನ್ನಡದಲ್ಲಿ!

ಮುಂಬರಲಿರುವ ಹಬ್ಬಗಳ ಹಿನ್ನೆಲೆಯಲ್ಲಿ ಅಮೆಜಾನ್‌ ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಗ್ರಾಹಕರಿಗೆ ಸೇವೆ ಒದಗಿಸಲಿದೆ.

ಅಮೆಜಾನ್‌ ಇನ್ನೂ ಕನ್ನಡದಲ್ಲಿ!

Wednesday September 23, 2020,

1 min Read

200-300 ದಶಲಕ್ಷ ಗ್ರಾಹಕರನ್ನು ತಲುಪಲು ಅಮೆಜಾನ್‌ ಇಂಡಿಯಾ ಕನ್ನಡ ಸೇರಿದಂತೆ 4 ಹೊಸ ಭಾಷೆಗಳನ್ನು ತನ್ನ ವೇದಿಕೆಗೆ ಸೇರಿಸಿದೆ ಎಂದು ಗುರುವಾರ ಹೇಳಿದೆ.


ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳ ಸೇರ್ಪಡೆಯು ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಸೇರಿಸಲಾಗಿದ್ದು, ಈ ಸಮಯದಲ್ಲಿ ದೇಶದಲ್ಲಿ ಇಕಾಮರ್ಸ್‌ ಕ್ಷೇತ್ರದಲ್ಲೆ ಅತೀ ಹೆಚ್ಚು ವ್ಯಾಪಾರ ನಡೆಯುತ್ತದೆ.


ಈ ಮೊದಲು ಗ್ರಾಹಕರು ಕೇವಲ ಇಂಗ್ಲೀಷ್‌ ಮತ್ತು ಹಿಂದಿ ಭಾಷೆಯಲ್ಲಿ ಶಾಪಿಂಗ್‌ ಮಾಡಬೇಕಾಗಿತ್ತು.


“ಇನ್ನೂ ಮುಂದೆ ಅಮೆಜಾನ್‌ನ ಗ್ರಾಹಕರು ತಮ್ಮದೆ ಭಾಷೆಯಲ್ಲಿ ವಸ್ತುಗಳ ವಿವರ, ಖಾತೆ ನಿರ್ವಹಣೆ, ಹಣ ಪಾವತಿ, ರಿಚಾರ್ಜ್‌, ಹಣ ಕಳಿಸುವುದು, ಆರ್ಡರ್‌ ಟ್ರಾಕ್‌ ಮಾಡುವುದು ಹೀಗೆ ಇತರ ಸೇವೆಗಳನ್ನು ಪಡೆಯಬಹುದಾಗಿದೆ,” ಎಂದರು ಅಮೆಜಾನ್‌ ಇಂಡಿಯಾದ ಗ್ರಾಹಕ ಅನುಭವ ಮತ್ತು ಮಾರ್ಕೆಟಿಂಗ್ನ ನಿರ್ದೇಶಕ ಕಿಶೋರ್‌ ಥೋಟಾ.

ಗ್ರಾಹಕರು ಸುಲಭವಾಗಿ ತಮ್ಮ ಅಂಡ್ರಾಯ್ಡ್‌, ಐಓಎಸ್‌ ಅಥವಾ ಕಂಪ್ಯೂಟರ್‌ ನಲ್ಲಿ ತಮ್ಮ ನೆಚ್ಚಿನ ಭಾಷೆಯನ್ನು ಆಯ್ದುಕೊಳ್ಳಬಹುದು ಎಂದು ಅವರು ತಿಳಿಸಿದರು.


ಅಮೆಜಾನ್‌ 2018 ರಲ್ಲಿ ಹಿಂದಿ ಭಾಷೆಯಲ್ಲಿ ಸೇವೆ ನೀಡಲಾರಂಭಿಸಿತ್ತು.


ಫ್ಲಿಪ್‌ಕಾರ್ಟ್‌ ಕಳೆದ ವರ್ಷದಲ್ಲಿ ಹಿಂದಿ ಭಾಷೆ ಸೇರಿಸಿತ್ತು ಮತ್ತು ಈ ವರ್ಷದ ಜುಲೈನಲ್ಲಿ ಕನ್ನಡ, ತಮಿಳು, ತೆಲುಗು ಭಾಷೆಯನ್ನು ಸೇರಿಸಿತ್ತು.


ಸಣ್ಣ ಪ್ರತಿಸ್ಪರ್ಧಿ ಸ್ನ್ಯಾಪ್‌ಡೀಲ್ ಸೋಮವಾರ ತನ್ನ ಆ್ಯಪ್ ಇಂಗ್ಲಿಷ್ ಜತೆಗೆ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಗುಜರಾತಿ, ಪಂಜಾಬಿ, ಮತ್ತು ಮರಾಠಿ ಸೇರಿದಂತೆ ಎಂಟು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಎಂದು ಸೋಮವಾರ ಪ್ರಕಟಿಸಿದೆ.


ವೇದಿಕೆಯಲ್ಲಿರುವ ಪ್ರತಿಯೊಂದು ಭಾಷೆಗಳ ನಿಖರತೆಯ ಅನುಭವವನ್ನು ಅಭಿವೃದ್ಧಿಪಡಿಸಲು ಕಂಪನಿಯು ತಜ್ಞ ಭಾಷಾಶಾಸ್ತ್ರಜ್ಞರೊಂದಿಗೆ ಕೆಲಸ ಮಾಡಿದೆ ಎಂದು ಥೋಟಾ ಹೇಳಿದರು.