ಸಂಪೂರ್ಣವಾಗಿ ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಾಣಗೊಳ್ಳುತ್ತಿರುವ ಅಸ್ಸಾಂನ ಅಂಗನವಾಡಿ

ಅಸ್ಸಾಂನ ಹೈಲಕಂಡಿ ಜಿಲ್ಲೆಯ ಈ ಅಂಗನವಾಡಿಯನ್ನು ಪ್ಲಾಸ್ಟಿಕ್ ಬಾಟಲಿಗಳು, ಜೈವಿಕ ವಿಘಟನೀಯವಲ್ಲದ ತ್ಯಾಜ್ಯ ಮತ್ತು ಮಣ್ಣಿನಿಂದ ನಿರ್ಮಿಸಲಾಗುತ್ತಿದೆ. "ಪರಿಸರ ಇಟ್ಟಿಗೆಗಳನ್ನು" ಬಲಪಡಿಸುವ ಸಲುವಾಗಿ ದ್ರವ ಸಿಮೆಂಟ್ ಅನ್ನು ಸಹ ಬಳಸಲಾಗುತ್ತಿದೆ.

ಸಂಪೂರ್ಣವಾಗಿ ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಾಣಗೊಳ್ಳುತ್ತಿರುವ ಅಸ್ಸಾಂನ ಅಂಗನವಾಡಿ

Tuesday February 11, 2020,

2 min Read

ಮೀನುಗಳಿಗಿಂತ ಸಮುದ್ರದಲ್ಲಿ ಹೆಚ್ಚು ಪ್ಲಾಸ್ಟಿಕ್ ಅನ್ನು ಕಾಣುವ ಸಮಯ ಸನಿಹದಲ್ಲಿದೆ, ಹೌದು, ನಮ್ಮ ಜಲಮೂಲಗಳನ್ನು ಡಂಪಿಂಗ್ ಯಾರ್ಡ್ ಆಗಿ ಪರಿವರ್ತಿಸಿದ ಮಾನವ ಚಟುವಟಿಕೆಗಳಿಗೆ ಈ ಕೊಡುಗೆ ಸಲ್ಲುತ್ತದೆ. ಬೆಳೆಯುತ್ತಿರುವ ಈ ತ್ಯಾಜ್ಯ ಸಮಸ್ಯೆಯನ್ನು ನಿಭಾಯಿಸಲು, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಪುಡಿಮಾಡುವ ಯಂತ್ರಗಳು, ಕಟ್ಟಡಗಳ ನಿರ್ಮಾಣದ ಉದ್ದೇಶಗಳಿಗಾಗಿ ಸಾಗರದಿಂದ ಪ್ಲಾಸ್ಟಿಕ್ ಬಳಸುವ ಪ್ರಯೋಗಗಳು ಮುಂತಾದ ಅನೇಕ ಹೊಸ ಯೋಜನೆಗಳು ಬಂದಿವೆ.


ಇದೇ ದೆಸೆಯಲ್ಲಿ ಅಸ್ಸಾಂನ ಹೈಲಕಂಡಿ ಜಿಲ್ಲೆಯ ಅಂಗನವಾಡಿಯನ್ನು ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಿಸಲಾಗುತ್ತಿದೆ ಮತ್ತು ಜೈವಿಕ ವಿಘಟನೀಯವಲ್ಲದ ತ್ಯಾಜ್ಯ ಮತ್ತು ಮಣ್ಣಿನಿಂದ ಮಾಡಲಾಗುತ್ತಿದೆ. ಇದರ ಒಟ್ಟಾರೆ ವೆಚ್ಚ 3.46 ಲಕ್ಷ ರೂ ಎಂದು ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಕೆ. ದಾಮ್ ತಿಳಿಸಿದ್ದಾರೆ.


ಪ್ಲಾಸ್ಟಿಕ್ ಬಾಟಲ್ ಗೋಡೆ – ಸಾಂದರ್ಭಿಕ ಚಿತ್ರ (ಚಿತ್ರಕೃಪೆ: ಎಡೆಕ್ಸ್ ಲೈವ್)




ಎಡೆಕ್ಸ್ ಲೈವ್ ವರದಿಯ ಪ್ರಕಾರ, ‘ಪರಿಸರದ ಇಟ್ಟಿಗೆಗಳನ್ನು’ ಬಲಪಡಿಸಲು ದ್ರವ ಸಿಮೆಂಟ್ ಅನ್ನು ಸಹ ಬಳಸಲಾಗುತ್ತಿದೆ. ಪ್ಲಾಸ್ಟಿಕ್ ಇಟ್ಟಿಗೆಗಳನ್ನು ತ್ಯಾಜ್ಯಗಳಿಂದ ತುಂಬಿಸಲಾಗುತ್ತದೆ. ಕೊಠಡಿಯಲ್ಲಿ ಗಾಳಿ ಬರುವಂತೆ ಮಾಡಲು, ಗೋಡೆಗಳು ಪರಿಸರ ಇಟ್ಟಿಗೆಗಳಲ್ಲಿ ಕೆಲವು ರಂಧ್ರಗಳನ್ನು ಹೊಂದಿರುತ್ತವೆ, ಮತ್ತು ಈ ಯೋಜನೆಯು ‘ಪ್ಲಾಸ್ಟಿಕ್ ಬೊರ್ಜಾನ್ ಅಭಿಯಾನ’ದ ಒಂದು ಭಾಗವಾಗಿದೆ.


ಈ ಅಭಿಯಾನದಡಿಯಲ್ಲಿ, ಪ್ಲಾಸ್ಟಿಕ್ ಅನ್ನು ಪರಿಸರ ಇಟ್ಟಿಗೆಗಳಾಗಿ ಪರಿವರ್ತಿಸುವುದು ಹೇಗೆ ಎಂದು ತಿಳಿಸಲು ಜಾಗೃತಿ ಜಾತಾ ಸೇರಿದಂತೆ ಅನೇಕ ಕಾರ್ಯಾಗಾರವನ್ನು ಜಿಲ್ಲಾ ಕಚೇರಿ ಆಯೋಜಿಸಿತ್ತು.


ಆರ್ ಕೆ. ದಾಮ್ ಮತನಾಡಿ,


“ಮುಂದಿನ ಬಾರಿ, ನಿಮ್ಮ ಕೈಯಲ್ಲಿ ಪ್ಲಾಸ್ಟಿಕ್ ಬಾಟಲಿಯನ್ನು ಹಿಡಿದಿಟ್ಟುಕೊಂಡಾಗ ಅದನ್ನು ಕಸದಂತೆ ವಿಲೇವಾರಿ ಮಾಡುವ ಬದಲು, ಅಸಾಧಾರಣವಾದ ಬಿಲ್ಡಿಂಗ್ ಬ್ಲಾಕ್‌ನಂತೆ ಪರಿವರ್ತಿಸಲು ಯೋಚಿಸಲು ಪ್ರಯತ್ನಿಸಿ. ಗ್ವಾಟೆಮಾಲಾದಲ್ಲಿ ಹುಟ್ಟಿದ ಪರಿಸರ ಇಟ್ಟಿಗೆಗಳ ಪರಿಕಲ್ಪನೆಯು ತ್ಯಾಜ್ಯವನ್ನು ದೃಢವಾದ ಮತ್ತು ಕೈಗೆಟುಕುವ ಕಟ್ಟಡ ಸಾಮಗ್ರಿಯನ್ನಾಗಿ ಪರಿವರ್ತಿಸುತ್ತದೆ, ಇದು ನಿರುದ್ಯೋಗ, ತ್ಯಾಜ್ಯ ಮತ್ತು ವಸತಿ ಕೊರತೆಯ ಸಮಸ್ಯೆಗಳನ್ನು ಏಕಕಾಲದಲ್ಲಿ ನಿಭಾಯಿಸುತ್ತದೆ,” ವರದಿ ಅರುಣಾಚಲ್ ಟೈಮ್ಸ್.


ಪರಿಸರ-ಇಟ್ಟಿಗೆಗಳ ಸಹಾಯದಿಂದ ತ್ಯಾಜ್ಯವನ್ನು ನಿರ್ವಹಿಸುವುದು ತುಂಬಾ ಸುಲಭ. ಏಕೆಂದರೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಲು ಸಾಕಷ್ಟು ಶಕ್ತಿಯ ಅಗತ್ಯವಿರುತ್ತದೆ, ಅಲ್ಲದೇ ಅದು ನಂತರ ಮಾಲಿನ್ಯ ಮತ್ತು ಇತರ ರಸ್ತೆಯ ತೊಂದರೆಗಳಿಗೆ ಕಾರಣವಾಗುತ್ತದೆ.


ಇಡೀ ಯೋಜನೆಗೆ ಯುಎನ್‌ಡಿಪಿ, ರಾಜ್ಯ ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಪಿಡಬ್ಲ್ಯುಡಿ ಇಲಾಖೆಗಳು ಬೆಂಬಲ ನೀಡುತ್ತಿವೆ. ಪರಿಸರ ಸ್ನೇಹಿ ಯೋಜನೆಯಲ್ಲಿ ಭಾಗವಹಿಸಲು ಸ್ಥಳೀಯರನ್ನು ಉತ್ತೇಜಿಸಲು, ಆಡಳಿತವು ಪ್ಲಾಸ್ಟಿಕ್ ಬ್ಯಾಂಕ್ ಅನ್ನು ಸಹ ಸ್ಥಾಪಿಸಿದೆ, ಅಲ್ಲಿ ವಿದ್ಯಾರ್ಥಿಗಳು ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಹಾಕಬಹುದು, ಅದನ್ನು ನಂತರ ಪರಿಸರ ಇಟ್ಟಿಗೆಗಳಾಗಿ ಪರಿವರ್ತಿಸಬಹುದು.