8 ಗಂಟೆಗಳ ಚಾರಣ ಮಾಡಿ ಅರುಣಾಚಲ ಪ್ರದೇಶದ ದೂರದ ಹಳ್ಳಿಗಳಲ್ಲಿರುವ ಮಕ್ಕಳಿಗೆ ದಡಾರ ರುಬೆಲ್ಲ ಲಸಿಕೆಗಳನ್ನು ನೀಡುವ ವೈದ್ಯಕೀಯ ಸಹಾಯಕ.

ಓದಿರಿ ಶ್ರೀ ಪುರ್ಪಾ ರವರ ಒಂದು ವಿಶೇಷವಾದ ಕತೆ ಸೊಷಿಯಲ್ ಸ್ಟೋರಿ ತಂಡದಿಂದ, ತರಬೇತಿ ಪಡೆದ ವೈದ್ಯಕೀಯ ಸಹಾಯಕರಾಗಿರಿರುವ ಇವರು 2013 ರಿಂದ ಅರುಣಾಚಲ ಪ್ರದೇಶದ ದೂರದ ಹಳ್ಳಿ ಮ್ಯಾಗೊದಲ್ಲಿರುವ ಮಕ್ಕಳು ದಡಾರ ರುಬೆಲ್ಲಗಳಿಂದ ಬಳಲದಂತೆ ಆಸ್ಥೆವಹಿಸಿದ್ದಾರೆ.

8 ಗಂಟೆಗಳ ಚಾರಣ ಮಾಡಿ ಅರುಣಾಚಲ ಪ್ರದೇಶದ ದೂರದ ಹಳ್ಳಿಗಳಲ್ಲಿರುವ ಮಕ್ಕಳಿಗೆ ದಡಾರ ರುಬೆಲ್ಲ ಲಸಿಕೆಗಳನ್ನು ನೀಡುವ ವೈದ್ಯಕೀಯ ಸಹಾಯಕ.

Tuesday July 16, 2019,

4 min Read

ಕೆಲವು ಕತೆಗಳಿಗೆ ಕಾದಷ್ಟು ಬೆಲೆ ಹೆಚ್ಚಾಗುವಂತೆ, ದೂರದ ಅರುಣಾಚಲ ಪ್ರದೇಶದ ಮ್ಯಾಗೊದಲ್ಲಿರುವ ವೈದ್ಯಕೀಯ ಸಹಾಯಕರಾಗಿರಿರುವ ಶ್ರೀ ಪುರ್ಪಾ ರವರ ಜಾಡು ಹಿಡಿಯಲು ನಮ್ಮ ಸೊಷಿಯಲ್ ಸ್ಟೋರಿ ತಂಡಕ್ಕೆ 3 ತಿಂಗಳಿಗಿಂತ ಹೆಚ್ಚು ಸಮಯ ಹಿಡಿಯಿತು.


ಚೀನಾದ ಬಾರ್ಡರ ಮತ್ತು ತವಾಂಗ್ ಜಿಲ್ಲೆಯ ಕೊನೆಯ ಬಾರ್ಡರ ಪೋಸ್ಟ್ ಆಗಿರುವ ಮ್ಯಾಗೊ, ರಾಜ್ಯದ ಪ್ರತ್ಯೆಕವಾಗಿ ಉಳಿದಿರುವ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಯಾವುದೇ ಪ್ರಾಥಮಿಕ ಹಂತದ ಆರೋಗ್ಯ ಸೌಕರ್ಯಗಳಾಗಲಿ, ದಿನನಿತ್ಯದ ಅವಶ್ಯಕತೆಗೆ ಬೇಕಾಗಿರುವ ಸಾಮಾನುಗಳಿಗೆ ಒಂದು ಮಾರುಕಟ್ಟೆ ಸಹ ಇಲ್ಲ. ಮೂಲ ಸೌಕರ್ಯಗಳನ್ನು ಪಡೆಯಲು ಕೂಡ ಕನಿಷ್ಠ 36 ಕಿಮೀ ದೂರದಲ್ಲಿರುವ ಜಾಂಗ ಎನ್ನುವ ಪಟ್ಟಣ್ಣಕ್ಕೆ ಪ್ರಯಾಣ ಬೆಳೆಸಬೇಕಾಗಿದೆ.


2013 ರಿಂದ ಪುರ್ಪಾರವರು ಪ್ರತಿ ತಿಂಗಳು ಮ್ಯಾಗೊನ ಮಕ್ಕಳಿಗೆ ದಡಾರ ರುಬೆಲ್ಲ ಲಸಿಕೆಗಳನ್ನು ನೀಡಲು ಹಲವಾರು ಬೆಟ್ಟಗಳನ್ನು ಹತ್ತಿ ಹೊಳೆಗಳನ್ನು ದಾಟುತ್ತಾರೆ. ಸೊಷಿಯಲ್ ಸ್ಟೋರಿ ತಂಡಕ್ಕೆ ಪುರ್ಪಾರವರನ್ನು ಭೇಟಿಯಾಗಲು ತವಾಂಗ್ ಜಿಲ್ಲೆಯ ಕೇಂದ್ರಕಚೇರಿಯಲ್ಲಿ ಕಾಯಬೇಕಾಗಿತ್ತು, ಅಲ್ಲಿ ಪ್ರತಿ ತಿಂಗಳು ಅವರು ಮೂಲ ವೈದಕೀಯ ಸರಬರಾಜಿಗಾಗಿ ಭೇಟಿ ನೀಡುತ್ತಿದ್ದರು.


Shri Phurpa

ಶ್ರೀ ಪುರ್ಪಾ

75 ಪರಿವಾರಗಳಿರುವ ಮ್ಯಾಗೊ ಹಳ್ಳಿಯಲ್ಲಿ ಇಲ್ಲಿಯವರೆಗೆ ಇವರು 35 ಮಕ್ಕಳಿಗೆ ಲಸಿಕೆಯನ್ನು ನೀಡಿದ್ದಾರೆ. ಇತ್ತೀಚೆಗೆ ಈ ಸ್ಥಳಕ್ಕೆ ಪೋಲಿಯೋ ಲಸಿಕೆಗಳನ್ನು ತಲುಪಿಸಲು ಶುರು ಮಾಡಿದ್ದಾರೆ.


ಸೊಷಿಯಲ್ ಸ್ಟೋರಿಯೊಂದಿಗೆ ಮಾತನಾಡುವಾಗ, ಪುರ್ಪಾರವರು ತಮ್ಮ ಹಳೆಯ ಶ್ರಮವನ್ನು ನೆನಪಿಸಿಕೊಳುತ್ತಾ. ಹೇಳಿದ್ದು,


"ನಾನು ಮೊದಲ ಬಾರಿ ಮ್ಯಾಗೊಗೆ ಲಸಿಕೆಗಳನ್ನು ನೀಡಲು ಪ್ರಯಾಣ ಬೆಳೆಸಿದಾಗ ನನಗಿದು ತುಂಬಾ ಕಷ್ಟವೆನಿಸಿತ್ತು. ಆ ಒಂದು ಪ್ರಯಾಣವು ತುಂಬಾ ದೂರದ ಮತ್ತು ಆಯಾಸದಾಯಕವಾಗಿತ್ತು. ಸ್ಥಳವನ್ನು ಮುಟ್ಟಲು ಗಂಟೆಗಳ ಕಾಲ ನಡೆಯಬೇಕಾಗಿತ್ತು."


2011 ರಲ್ಲಿ ವೈದ್ಯಕೀಯ ತರಬೇತಿಯನ್ನು ಪಡೆದ ನಂತರ , ಪುರ್ಪಾರವರು ತಮ್ಮ ಹಳ್ಳಿಗೆ ಏನಾದರು ಒಂದು ಒಳ್ಳೆ ಕೆಲಸ ಮಾಡಬೇಕೆಂದುಕೊಂಡಿದ್ದರು. ಪುರ್ಪಾರವರು ಈ ಲಸಿಕೆಗಳನ್ನು ಮತ್ತು ವೈದ್ಯಕೀಯ ಸಾಮಾಗ್ರಿಗಳನ್ನು ತವಾಂಗ್ ಜಿಲ್ಲೆಯಿಂದ ತರಿಸುತ್ತಾರೆ. ಇಲ್ಲಿ ಮೊಬೈಲ್ ಸಂಪರ್ಕದ ಕೊರತೆಯಿರುವುದರ ಕಾರಣಕ್ಕಾಗಿ ವೈದ್ಯಕಿಯ ಅಧಿಕಾರಿಗಳು ಇವರ ಮ್ಯಾಗೊ ಊರಿನ ಪ್ರಯಾಣವನ್ನು ಮುಂಚೆಯೆ ನಿರ್ಧರಿಸುತ್ತಾರೆ.


"ನಾನು ಇದನ್ನು ಸವಾಲು ಎಂದು ಸ್ವೀಕರಿಸಿ ರಸ್ತೆಗಳೆ ಇಲ್ಲದಿರುವ ಹಳ್ಳಿಗಳ ಮಕ್ಕಳಿಗೆ ಆರೋಗ್ಯರಕ್ಷಣೆಯನ್ನು ನೀಡಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದ್ದು ಈ ಮಕ್ಕಳು ಈಗ ದಡಾರ ಮತ್ತು ರುಬೆಲ್ಲ ಅಪಾಯದಿಂದ ಪಾರಾಗಿದ್ದಾರೆ.”


ಬದಲಾವಣೆಕಾರನಾಗುವ ಪಯಣದಲ್ಲಿ


2011 ರಿಂದ ಪುರ್ಪಾ ರವರು ದಡಾರ ಮತ್ತು ರುಬೆಲ್ಲದಿಂದಾಗುವ ಅನಾರೋಗ್ಯವನ್ನು, ಸಾವುಗಳನ್ನು ಮತ್ತು ಕೊಂಜೇನಿಟಲ್ ರುಬೆಲ್ಲಾ ಸಿಂಡ್ರೋಮ್(CRS) ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದು 5 ವರ್ಷದ ಕೆಳಗಿನ ಮಕ್ಕಳನ್ನು ಖಾಯಿಲೆಯಿಂದ ತಡೆಗಟ್ಟಲು ಮತ್ತು ಸಿ ಆರ್ ಸಿ ನ್ನು ಕಡಿಮೆ ಮಾಡಲು ಸಹಾಯ ಮಾಡಿದೆ.


Shri Phurpa

ಪುರ್ಪಾರವರು ತಮ್ಮ ದೂರದ ಹಳ್ಳಿಗೆ ಏನಾದರೂ ಒಂದು ಒಳ್ಳೆ ಕೆಲಸ ಮಾಡಬೇಕೆಂದು ಉತ್ಸಾಹಿತರಾದಾಗ ನಿರ್ಧರಿಸಿದ್ದೆ ದೂರದ ಮ್ಯಾಗೊ ಹಳ್ಳಿಗಳಲ್ಲಿರುವ ಮಕ್ಕಳಿಗೆ ದಡಾರ ರುಬೆಲ್ಲ ಲಸಿಕೆಗಳನ್ನು ನೀಡುವುದು.

ಕಷ್ಟದ ಭೂಭಾಗದ ಹೊರತಾಗಿಯೂ, ಪುರ್ಪಾರ ಕಾರ್ಯಾಚರಣೆಯು 100 ಪ್ರತಿಷತ ಯಶಸ್ವಿಯಾಗಿದೆ. ಇದಲ್ಲದೆ ಕೆಲವು ತಿಂಗಳ ಮುಂಚೆ ಲುಕ್ತಾಮ ಎನ್ನುವ ಹಳ್ಳಿಗೆ ಲಸಿಕೆಗಳನ್ನು ನೀಡಲು 12 ಗಂಟೆಗಳ ಆಯಾಸದಾಯಕ ಪ್ರಯಾಣ ನಡೆಸಿದರು. ಪುರ್ಪಾರವರಿಗೆ ಈ ಒಂದು ಕೆಲಸಕ್ಕಾಗಿ ತಿಂಗಳಿಗೆ 25000 ನೀಡಲಾಗುತ್ತದೆ.


ದೊಡ್ದ ಸವಾಲನ್ನು ಎದುರಿಸುವುದು


ದಿನನಿತ್ಯ ದೂರದ ಸ್ಥಳಗಳಿಗೆ ಚಾರಣ ಹೋಗುವುದಕ್ಕೆ ಸಾಕಷ್ಟು ಪ್ರೇರಣೆ ಬೇಕಾಗುತ್ತದೆ. ಆದರೆ ಪುರ್ಪಾರವರು ಸೋಲನ್ನು ಒಪ್ಪಿಕೊಳ್ಳಲು ತಿರಸ್ಕರಿಸುತ್ತಾರೆ.


ಯುವರ್ ಸ್ಟೋರಿ ಸೌಕರ್ಯಗಳ ಬಗ್ಗೆ ಕೇಳಿದಾಗ, ಅವರು ಹೇಳಿದ್ದು,


"ನಮ್ಮಹಳ್ಳಿಗೆ 4 ವರ್ಷಗಳ ಮುಂಚೆ ವಿಧ್ಯುತ್ ದೊರಕಿದೆ. ದೂರವಾಣಿ ಮತ್ತು ಮೊಬೈಲ್ ಸಂಪರ್ಕ ಸಾಧಿಸಲು ಇನ್ನು ಟವರ್ ಗಳಿಲ್ಲ, ಕೆಲವೇ ಕುಟುಂಬಗಳು ವಾಸವಗಿದ್ದು ಒಂದು ಪ್ರಾಥಮಿಕ ಸರಕಾರಿ ಶಾಲೆಯನ್ನು ಹೊಂದಿದೆ. ನನ್ನ ಇಬ್ಬರು ಮಕ್ಕಳು ಇದೇ ಶಾಲೆಯಲ್ಲಿ ಕಲಿಯುತ್ತಿದ್ದು ಮೂರನೇಯವನು ಪಟ್ಟಣ ಸಮೀಪದ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದಾನೆ."


ಭೌಗೋಳಿಕ ನಿರ್ಬಂಧನೆಗಳ ಜೊತೆ ಗಡುಸಾದ ಚಳಿಗಾಲ ಈ ಒಂದು ಕಾರ್ಯವನ್ನು ಇನ್ನಷ್ಟು ಕಠಿಣಗೊಳಿಸಿದೆ. ಹಳ್ಳಿಯಲ್ಲಿ ಕುರಿಕಾಯುವವರ ಸಂಖ್ಯೆ ಜಾಸ್ತಿಯಾಗಿದ್ದು, ಇವರು ಚಳಿಗಾಲದಲ್ಲಿ ಹಸಿರಿನ ಹುಲ್ಲುಗಾವಲಿಗೆ ಹೋಗುವುದರಿಂದ ಇವರ ಮಕ್ಕಳಿಗೆ ಲಸಿಕೆ ನೀಡಲು ಕಠಿಣ ಭೂಬಾಗಗಳಿಗಿಂತ ಇನ್ನು ದೂರದ ಜಾಗಗಳಿಗೆ ಚಾರಣ ಮಾಡಬೇಕಾಗುತ್ತದೆ.


Shri Phurpa

ಶ್ರೀ ಪುರ್ಪಾ ರವರು ಚಳಿಗಾಲದಲ್ಲಿ ಕುರುಬರು ವಲಸೆ ಹೋದಾಗ ಮತ್ತಷ್ಟು ಕಠಿಣ ವಾದ ಮತ್ತು ದೂರದ ಪ್ರದೇಶಗಳಲ್ಲಿ ಚಾರಣ ಮಾಡಬೇಕಾಗುತ್ತಿತ್ತು.

ತವಾಂಗ್ ಜಿಲ್ಲೆಯ ವೈದಕೀಯ ಆಫೀಸರ್ ಆಗಿರುವ ಡಾ. ವಾಂಗ್ಡಿ ಲಮಾ ಅವರು ಪುರ್ಪಾರವರ ಬಗ್ಗೆ ಹೊಗಳತ್ತಾ ಹೇಳಿದ್ದು


"ತವಾಂಗ್ ನ ಜಿಲ್ಲಾಸ್ಪತ್ರೆಯಲ್ಲಿ ಕೆಲವು ಸರಣಿ ತರಬೇತಿಗಳ ನಂತರ, ಪುರ್ಪಾರವರು ಮೇಲಿನ ಅಧಿಕಾರಿಗಳ ಹತ್ತಿರ ಮ್ಯಾಗೊ ಹಳ್ಳಿಗೆ ಪ್ರಯಾಣ ಬೆಳೆಸಲು ಅನುಮತಿ ಕೋರಿದರು, ಅವರು ಅಲ್ಲಿರುವ ಜನರಿಗೆ ಮೂಲಭೂತ ಆರೋಗ್ಯರಕ್ಷಣೆಯನ್ನು ಜನರಿಗೆ ತಲುಪಿಸಬೇಕೆಂದುಕೊಂಡಿದ್ದರು."


ಯಾಕೆ ದಡಾರ ಮತ್ತು ರುಬೆಲ್ಲಗಳನ್ನು ತಡೆಗಟ್ಟಬೇಕು?


ದಡಾರ ಮತ್ತು ರುಬೆಲ್ಲಗಳು ಭಯಂಕರ ಪರಿಣಾಮಗಳನ್ನು ಹೊಂದಿದ್ದು, ಜಾಗತಿಕ ದಡಾರ ಮತ್ತು ರುಬೆಲ್ಲ ನೇತ್ರತ್ವ ಹೇಳಿದ್ದು 2000 ದಿಂದ ಇಲ್ಲಿಯವರೆಗೆ ಜಗತಿನಾದ್ಯಂತ 56,200 ಮಕ್ಕಳು ದಡಾರಗೆ ಬಲಿಯಾಗಿದ್ದರೆ. ಮತ್ತೊಂದು ಕಡೆ ಜರ್ಮನ ದಡಾರ ಎಂದು ಕರೆಯಲ್ಪಡುವ ರುಬೆಲ್ಲ, ಗರ್ಬಿಣಿಯರ ಮತ್ತು ಅವರಿಗೆ ಹುಟ್ಟುವ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ, ಈ ನೇತ್ರತ್ವದ ಅಂಕಿ ಅಂಶಗಳ ಪ್ರಕಾರ 10,000 ಲಕ್ಷ ಮಕ್ಕಳು ಕೊಂಜೇನಿಟಲ್ ರುಬೆಲ್ಲಾ ಸಿಂಡ್ರೋಮ್ ಜೊತೆಗೆ ಹುಟ್ಟುತ್ತಾರೆ ಮತ್ತು ಹೃದಯದ ಕಾಯಿಲೆಗಳು, ಕಿವುಡುತನ ಮತ್ತು ಕುರುಡುತನಕ್ಕೆ ಬಲಿಯಾಗಿದ್ದಾರೆ.


ಭಾರತದ ಆರೋಗ್ಯ ಮತ್ತು ಕುಟುಂಬ ಕ್ಷೇಮಾಭಿವೃದಿ ಸಚಿವಾಲಯದ ನೇತ್ರತ್ವದಲ್ಲಿ 9 ತಿಂಗಳಿಂದ 15 ವರ್ಷಗಳ ನಡುವಿನ ಮಕ್ಕಳಿಗೆ ದಡಾರ ರುಬೆಲ್ಲ ಲಸಿಕೆಯ ಶಿಬಿರವನ್ನು ಶುರುಮಾಡಿದೆ. 2020 ರ ಹೊತ್ತಿಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಹಾಗೂ ಸೌತ್ ಈಸ್ಟ್ ಏಶೀಯಾ ರಿಜನ್ ಸಹಾಯದಿಂದ ಇದನ್ನು ಬೇರುಸಮೇತ ಕಿತ್ತು ಹಾಕುವ ಆಶಯವನ್ನು ಹೊಂದಿದೆ. ಇಲ್ಲಿಯವರೆಗೆ ಹಂತಹಂತವಾಗಿ 41 ಕೋಟಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಒಳಗೊಂಡಿದ್ದಾರೆ.


ಸಮುದಾಯ ಹಾಗೂ ಸಶಸ್ತ್ರ ಪಡೆಗಳಿಂದ ಮನ್ನಣೆ


ದೂರದ ಸ್ಥಳಗಳಿಗೆ ಸಾಮಾನ್ಯವಾಗಿ ಲಸಿಕೆಗಳನ್ನು ಹೆಲಿಕಾಪ್ಟರ್ ನ ಸಹಾಯದೊಂದಿಗೆ ನೀಡಲಾಗುತ್ತದೆ. ಆದರೆ ಪುರ್ಪಾರವರು ಬರೀಗಾಲಿನ ಮೇಲೆ ಪ್ರಯಾಣ ಮಾಡಲು ಅಳುಕದೆ ಎಷ್ಟು ಸಾದ್ಯವೊ ಅಷ್ಟು ಮಕ್ಕಳಿಗೆ ಲಸಿಕೆಯನ್ನು ತಲುಪಿದರು. ಇದರ ಪರಿಣಾಮವಾಗಿ ಅವರಿಗೆ ಕೆಲವು ಚಿಹ್ನೆಗಳು ಹಾಗೂ ಮನ್ನಣೆಗಳು ದೊರೆತಿವೆ.


"ಸ್ಥಳಿಯರನ್ನು ಹೊರತುಪಡಿಸಿ ಮ್ಯಾಗೊದಲ್ಲಿ ಬಿಡುಬಿಟ್ಟಿರುವ ಸೈನ್ಯಾಧಿಕಾರಿಗಳು ಇಂತಹ ದೂರದ ಹಳ್ಳಿಯಲ್ಲು ಲಸಿಕೆ ನೀಡಲಾಗುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ" ಎಂದು ಡಾ. ವಾಂಗ್ಡಿ ಹೇಳಿದ್ದಾರೆ.


ಈ ವರ್ಷದ ಗಣರಾಜ್ಯೋತ್ಸವ ದಿನದಂದು ಪುರ್ಪಾ ರ ಅದ್ಭುತ ಕೆಲಸಕ್ಕೆ ತವಾಂಗ್ ಜಿಲ್ಲೆಯ ಕಮಿಷನರ್ ರವರು ಪ್ರಶಸ್ತಿ ನೀಡಿ ಸನ್ಮಾನಿಸಿದರು. ಇದಲ್ಲದೆ ಅರುಣಾಚಲ ಪ್ರದೇಶದ ಸರಕಾರದಿಂದ ಸಹ ಗೌರವಿಸಲ್ಪಟ್ಟಿದ್ದಾರೆ.


ದೂರದ ಹಳ್ಳಿಗಳಲ್ಲಿ ಲಸಿಕಾ ಕಾರ್ಯಾಚರಣೆ ಮಾಡುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಡಾ. ವಾಂಗ್ಡಿ ಯವರನ್ನು ಕೇಳಿದಾಗ, ಅವರು ಹೀಗೆ ಹೇಳಿದರು,

"ಭಾರತ ಸರ್ಕಾರದ ಪ್ರಕಾರ, ಹಲವಾರು ಮಕ್ಕಳಿಗೆ ಲಸಿಕೆ ಹಾಕಬೇಕಾಗಿದ್ದಾರೆ, ನಮ್ಮದೇ ವಾಹನವನ್ನು ತೆಗೆದುಕೊಂಡು ಮಂಗಳವಾರ ಮತ್ತು ಬುಧವಾರ ಹೊರಡಬೇಕು. ಮಕ್ಕಳ ಸಂಖ್ಯೆ ಕಡಿಮೆ ಮತ್ತು ಅವರನ್ನು ಸುಲಭವಾಗಿ ತಲುಪುವ ಹಾಗಿದ್ದರೆ ತಿಂಗಳಿಗೊಮ್ಮೆ ಲಸಿಕೆ ಹಾಕುತ್ತೇವೆ. ಮ್ಯಾಗೋ ಅಂತಹ ಹಳ್ಳಿಗಳಿಗೆ ತ್ರೈಮಾಸಿಕವಾಗಿ ಲಸಿಕೆ ಹಾಕುತ್ತೆವೆ."


ತುರ್ತು ಆರೋಗ್ಯ ಸೌಕರ್ಯಗಳನ್ನು ಮಾಗೋ ಗೆ ತಲುಪಿಸಲು ಇರುವ ದಾರಿಯನ್ನು ಸುಗಮಗೊಳಿಸಲು ಎಡಬಿಡದೇ ಪುರ್ಪಾರವರು ಪ್ರಯತ್ನಿಸುತ್ತಿದ್ದಾರೆ, ಈ ನಡುವೆ ವೈದ್ಯಕೀಯ ಸಹಾಯಕರು ಕೂಡ ಸ್ಥಳೀಯರನ್ನು ತಲುಪಲು ಶುರುಮಾಡಿದ್ದಾರೆ. ಈಗ ಗರ್ಭಿಣಿ ಮಹಿಳೆ ಸಮಯೋಚಿತವಾಗಿ ಟಿಟಾನಸ್ ಇಂಜೆಕ್ಷನ್ ಗಳನ್ನು ಪಡೆಯುತ್ತಿದ್ದಾಳೆ.


ಅದಾಗ್ಯೂ,31 ಕಿಮೀ ದೂರದ ಜಾಂಗ ನಲ್ಲಿ ಒಂದು ಸಮುದಾಯ ಆರೋಗ್ಯ ಕೇಂದ್ರ ಬಿಟ್ಟು ಯಾವುದೇ ಆಸ್ಪತ್ರೆಗಳಿಲ್ಲಾ, ಇಲ್ಲಿ ಮೂರು ಪೂರ್ಣಾವಧಿಯ ವೈದ್ಯರಿದ್ದಾರೆ. ಈ ಹಳ್ಳಿ ಭಾರತ-ಟಿಬೆಟನ್ ಪೋಲಿಸ್ ಫೋಸ್ಟ(ITBP) ಹೊಂದಿದೆ,ಇದು ಮೂಲಭೂತ ಆರೋಗ್ಯರಕ್ಷಣೆಗಾಗಿ ಒಂದೇ ಒಂದು ಆರೈಕೆಯ ಕೇಂದ್ರವನ್ನು ಹೊಂದಿದೆ.

"ನಾನು ನನ್ನ ಹಳ್ಳಿ ಮ್ಯಾಗೊಗೆ ಆರೋಗ್ಯರಕ್ಷಣಾ ಸೌಕರ್ಯಯಗಳನ್ನು ಬಿಟ್ಟು ಬೇರೇನನ್ನು ಅಪೇಕ್ಷಿಸುವುದಿಲ್ಲ, ಎಲ್ಲಿಯವರೆಗೆ ಈ ಸ್ಥಳದಲ್ಲಿ ಒಳ್ಳೆಯ ಆರೋಗ್ಯರಕ್ಷಣಾ ಸೌಕರ್ಯಯಗಳು ಇರುವುದಿಲ್ಲವೋ ಅಲ್ಲಿಯವರೆಗೆ, ನಾನು ನನ್ನ ಹಳ್ಳಿಗೆ ಸೇವೆ ಮಾಡುತ್ತಲೇ ಇರುತ್ತೆನೆ" ಎಂದು ಪುರ್ಪಾರವರು ಹೇಳುತ್ತಾರೆ.