ಮಹಿಳಾ ಭದ್ರತೆಯನ್ನು ಹೆಚ್ಚಿಸುವುದಕ್ಕಾಗಿ ಪ್ರತ್ಯೇಕ ವಿಭಾಗವೊಂದನ್ನು ಸ್ಥಾಪಿಸಿದ ಬೆಂಗಳೂರು ಪೋಲಿಸ್

ಬೆಂಗಳೂರು ಪೋಲಿಸರು ಮಹಿಳೆಯರ ಸುರಕ್ಷತೆಗಾಗಿ ಪ್ರತ್ಯೇಕ ವಿಭಾಗವೊಂದನ್ನು ಸ್ಥಾಪಿಸಿದ್ದಾರೆ. ಮತ್ತು ಸಹಾಯವಾಣಿಯನ್ನು ಬಲಗೊಳಿಸಿ, ಮೊಬೈಲ್ ಅಪ್ಲಿಕೇಶನ್ ಆದ 'ಬಿಸಿಪಿ‌ ಸುರಕ್ಷಾ' ಅನ್ನು ಸುಧಾರಣೆ ಮಾಡಲಾಗಿದೆ.

ಮಹಿಳಾ ಭದ್ರತೆಯನ್ನು ಹೆಚ್ಚಿಸುವುದಕ್ಕಾಗಿ ಪ್ರತ್ಯೇಕ ವಿಭಾಗವೊಂದನ್ನು ಸ್ಥಾಪಿಸಿದ ಬೆಂಗಳೂರು ಪೋಲಿಸ್

Tuesday December 03, 2019,

2 min Read

ಬೆಂಗಳೂರು ಪೋಲಿಸರು ಮಹಿಳೆಯರ ಸುರಕ್ಷತೆಗಾಗಿ ಪ್ರತ್ಯೇಕ ವಿಭಾಗವೊಂದನ್ನು ಸ್ಥಾಪಿಸಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಮಹಿಳಾ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಯ ಹಿನ್ನೆಲೆಯಲ್ಲಿ ಬೆಂಗಳೂರು ಪೋಲಿಸರು ಸಹಾಯವಾಣಿಯನ್ನು ಮತ್ತಷ್ಟು ಬಲಪಡಿಸಿದ್ದು, ಮೊಬೈಲ್ ಅಪ್ಲಿಕೇಶನ್ ಆದ 'ಬಿಸಿಪಿ‌ ಸುರಕ್ಷಾ' ಅನ್ನು ಸುಧಾರಣೆ ಮಾಡಲಾಗಿದೆ.


ಪೋಲಿಸ್ ಸಹಾಯವಾಣಿ '100' ಅನ್ನು ಬಲಪಡಿಸಲಾಗಿದ್ದು, ಸಹಾಯವಾಣಿಗೆ ಕರೆ ಮಾಡಿದರೆ ಅಲ್ಲಿ ಗಸ್ತು ತಂಡಗಳನ್ನು ಸ್ಥಳಕ್ಕೆ ಬೇಗನೆ ಕಳುಹಿಸಲಾಗುತ್ತದೆ ಎಂದು ಬೆಂಗಳೂರು ಪೋಲಿಸ್ ಕಮಿಷನರ್ ಭಾಸ್ಕರ್ ರಾವ್ ಹೇಳುತ್ತಾರೆ‌.


ಸಾಂಕೇತಿಕ ಚಿತ್ರ


"ನಾವು ಕೇಂದ್ರ ಅಪರಾಧ ಶಾಖೆಯಲ್ಲಿ‌ ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗವೊಂದನ್ನು ರಚಿಸಿದ್ದು, ಇಲ್ಲಿ ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೇಗೆ ಹೆಚ್ಚಿಸುವುದು,‌ ಮಹಿಳೆಯರಿಗೆ ಸ್ವರಕ್ಷಣೆ ತರಬೇತಿ ನೀಡುವುದು ಹೇಗೆ ಎಂದು‌ ನೋಡಿಕೊಳ್ಳುವುದೇ ಅವರ ಏಕೈಕ ಕೆಲಸವಾಗಿದೆ. ಯಾವುದೇ‌ ಘಟನೆ ಮತ್ತು ಆಮ್ಲ(ಆ್ಯಸಿಡ್) ಮಾರಾಟಕ್ಕೆ ನಿರ್ಬಂಧಗಳ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂಬುದರ ಬಗ್ಗೆ ತರಬೇತಿಗಳಿವೆ” ಎಂದು ಭಾಸ್ಕರ್ ರಾವ್ ಹೇಳುತ್ತಾರೆ‌.


ಜನರನ್ನು ಬ್ಲ್ಯಾಕ್ ಮೇಲ್ ಮಾಡಲು ಖಾಸಗಿ ಕ್ಷಣಗಳನ್ನು ವಿಡಿಯೋ ಶೂಟ್ ಮಾಡುವವರ ವಿರುದ್ಧವು ಈ ವಿಂಗ್ ಬಲವಾದ ಕ್ರಮ ಕೈಗೊಳ್ಳುತ್ತದೆ.


"100 ನಂಬರಿನ ಸಹಾಯವಾಣಿಗೆ ಕರೆ ಮಾಡಿದ ಕೂಡಲೆ ಪೋಲಿಸರಿಂದ ಎಸ್ಎಂಎಸ್ ಬರಲಿದ್ದು, ಒಂಭತ್ತು ನಿಮಿಷಗಳಲ್ಲಿ 'ಹೊಯ್ಸಳ' ಗಸ್ತು ತಂಡ ಸ್ಥಳಕ್ಕೆ ತಲುಪುತ್ತದೆ‌." ನಮ್ಮಲ್ಲಿ 220 ಹೊಯ್ಸಳ ವಾಹನಗಳಿವೆ. ಅವು ಜನರಿಗೆ ಭದ್ರತೆ ಒದಗಿಸಲು ಮೀಸಲಾಗಿವೆ. ಪ್ರತಿಕ್ರಿಯೆಯ ಸಮಯವನ್ನು ಮತ್ತಷ್ಟು ಕಡಿಮೆ ಮಾಡುವುದಕ್ಕಾಗಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ" ಎಂದು ರಾವ್ ಹೇಳಿದರು.


"ನಮ್ಮ ಹಕ್ಕುಗಳು ಸರಿಯಾಗಿದೆಯೇ ಎಂದು ಪರಿಶೀಲಿಸಲು ‌ನಾವು 100ಕ್ಕೆ ಕರೆ ಮಾಡಲು ಜನರನ್ನು ಪ್ರೋತ್ಸಾಹಿಸುತ್ತಿದ್ದೇವೆ‌. ನಾವು ಅದನ್ನು ತಮಾಷೆಯಾಗಿ ಪರಿಗಣಿಸುವುದಿಲ್ಲ", ಹೈದರಾಬಾದ್ ನಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ನಾವು ಇದನ್ನು‌ "ಕಾನ್ಫಿಡೆನ್ಸ್ ಬಿಲ್ಡಿಂಗ್ ಕಾಲ್ಸ್" ಎಂದು ಕರೆಯುತ್ತೇವೆ" ಎಂದು ರಾವ್ ಸುದ್ದಿಗಾರರಿಗೆ ತಿಳಿಸಿದರು‌.


ಇದಲ್ಲದೆ ಜನರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ವಿಳಾಸದಂತಹ ಮಾಹಿತಿಯನ್ನು ಅಪ್ಲೋಡ್ ಮಾಡುವಂತಹ 'ಬಿಸಿಪಿ ಸುರಕ್ಷಾ' ಮೊಬೈಲ್ ಅಪ್ಲಿಕೇಶನ್ ಅನ್ನು ಸುಧಾರಿಸಲಾಗಿದ್ದು. ಇದರಲ್ಲಿ ಹತ್ತಿರದ ಸಂಬಂಧಿಕರೊಬ್ಬರ ಸಂಪರ್ಕ ಸಂಖ್ಯೆಯು ಇರುತ್ತದೆ, ಅವರನ್ನು ಎಚ್ಚರಿಸಬಹುದಾಗಿದೆ.


"ಇದು ಬರೀ ಮಹಿಳೆಯರಿಗಲ್ಲ ಅಗತ್ಯವಿರುವ ಯಾರಿಗಾದರೂ ಸರಿ" ಎಂದೆನ್ನುತ್ತಾರೆ‌.


ಅವರು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.