ಬದಲಾಯಿತು ದೂರದರ್ಶನ- ಸ್ಮಾರ್ಟ್ಫೋನ್ನಲ್ಲೂ ಟಿವಿಯ ದರ್ಶನ
ಟೀಮ್ ವೈ.ಎಸ್.ಕನ್ನಡ
ಸ್ಮಾರ್ಟ್ಫೋನ್ ಲೋಕ ಈಗ ಎಲ್ಲವನ್ನೂ ತನ್ನ ಬಳಿಗೆ ಎಳೆದುಕೊಳ್ಳುತ್ತಿದೆ. ಟಿವಿ ಚಾನೆಲ್ಗಳನ್ನು ಕೂಡ ಈಗ ಮೊಬೈಲ್ನಲ್ಲೇ ನೋಡುವ ಕಾಲ ಬಂದಿದೆ. ಭಾರತದ ಅತೀ ದೊಡ್ಡ ಟಿವಿ ನೆಟ್ವರ್ಕ್ ದೂರದರ್ಶನ ಈಗ ಬದಲಾವಣೆಯತ್ತ ಹೆಜ್ಜೆ ಇಟ್ಟಿದೆ. ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ಸೇವೆ ಇಲ್ಲದೆಯೂ ದೂರದರ್ಶನ ಚಾನೆಲ್ನ್ನು ವೀಕ್ಷಿಸುವ ಕಾಲ ಬಂದಿದೆ. ನಾಲ್ಕು ಮೆಟ್ರೊ ಸಿಟಿಗಳು ಸೇರಿದಂತೆ 16 ಸಿಟಿಗಳಲ್ಲಿ ಮೊಬೈಲ್ ಫೋನ್ ಬಳಕೆದಾರರು ಇಂಟರ್ನೆಟ್ ಸೇವೆ ಇಲ್ಲದೆ ದೂರದರ್ಶನ ಚಾನೆಲ್ಗಳನ್ನು ವೀಕ್ಷಿಸಬಹುದು.
ಇದನ್ನು ಓದಿ: ಅಂತರ್ಜಾಲವನ್ನು ಭಾರತೀಕರಣಗೊಳಿಸಲು ಏನು ಮಾಡಬೇಕು?
ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಗುವಾಹಟಿ, ಪಾಟ್ನಾ, ರಾಂಚಿ, ಕಟಕ್, ಲಕ್ನೋ, ಜಲಂಧರ್, ರಾಯ್ಪುರ, ಇಂಧೋರ್, ಔರಂಗಬಾದ್, ಭೋಪಾಲ್, ಬೆಂಗಳೂರು ಮತ್ತು ಅಹ್ಮದಾಬಾದ್ನಲ್ಲಿ ಸ್ಮಾರ್ಟ್ಫೋನ್ ಬಳಕೆದಾರರು ಈ ಸೌಲಭ್ಯವನ್ನು ಪಡೆಯಬಹುದು. ಮೊಬೈಲ್ ಟಿವಿಯಲ್ಲಿ DVB-T2 ಡಾಂಗಲ್ ಮುಖಾಂತರ, ಒಟಿಜಿ ವ್ಯವಸ್ಥೆಯುಳ್ಳ ಸ್ಮಾರ್ಟ್ಫೋನ್, ಟ್ಯಾಬ್ಗಳಲ್ಲಿ ವೀಕ್ಷಿಸಿಬಹುದು. ಚಲಿಸುತ್ತಿರುವ ವಾಹನಗಳಲ್ಲಿ ವೈ-ಫೈ ಡಾಂಗಲ್ಗಳನ್ನು ಬಳಸಿ, ಇಂಟಗ್ರೆಟೆಡ್ ಡಿಜಿಟಲ್ ಟಿವಿ ವ್ಯವಸ್ಥೆ ಮೂಲಕ ಟಿವಿ ವೀಕ್ಷಿಸಬಹುದು. ಸಾಫ್ಟ್ವೇರ್ ಇನ್ಸ್ಟಾಲ್ ಮಾಡಿದ ನಂತರ ಯಾವುದೇ ಇಂಟರ್ನೆಟ್ ಸಂಪರ್ಕವಿಲ್ಲದೆ, ಉಚಿತವಾಗಿ ಟಿವಿ ನೋಡಬಹುದು.
ಸದ್ಯ ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ಡಿಡಿ ಭಾರತಿ, ಡಿಡಿ ಸ್ಪೋರ್ಟ್ಸ್, ಡಿಡಿ ರೀಜನಲ್, ಡಿಡಿ ಕಿಸಾನ್ ಚಾನೆಲ್ಗಳು ಮೊಬೈಲ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಒಂದು ಬಾರಿ ಡಾಂಗಲ್ಗಳನ್ನು ಇನ್ಸ್ಟಾಲ್ ಮಾಡುವುದಕ್ಕೆ ಮಾತ್ರ ವೆಚ್ಚವಾಗುತ್ತದೆ. ಇದಾದ ಮೇಲೆ ಇಂಟರ್ನೆಟ್ಗಾಗಲಿ ಅಥವಾ ಇನ್ಯಾವುದೇ ವಿಚಾರಕ್ಕೆ ದುಡ್ಡು ಖರ್ಚು ಮಾಡಬೇಕಿಲ್ಲ.
"ಜಗತ್ತು ಮುಂದಕ್ಕೆ ಹೋಗುತ್ತಿದೆ. ಆದ್ರೆ ದೂರದರ್ಶನ ಮಾತ್ರ ಹಿಂದಕ್ಕೆ ಹೋಗುತ್ತಿದೆ. ಹೀಗಾಗಿ ನಾವು ಸ್ಮಾರ್ಟ್ಫೋನ್ ಮೂಲಕ ಮುಂದಕ್ಕೆ ಬರಲೇಬೇಕಿದೆ. ಈಗಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡರೆ ಮಾತ್ರ ನಾವು ಕೂಡ ಎಲ್ಲಾ ಚಾನೆಲ್ಗಳಂತೆ ಜನರ ಬಳಿ ಇರುತ್ತೇವೆ. ಇಲ್ಲದಿದ್ದರೆ ಹಿಂದೆಯೇ ಇರುತ್ತೇವೆ."
- ಸಿಇಒ, ಪ್ರಸಾರ ಭಾರತಿ
ಎಲ್ಲವೂ ಸರಿಯಾಗಿ ನಡೆದ್ರೆ, ಒಂದೇ ವೇದಿಕೆಯಲ್ಲಿ ಒಟ್ಟು 20 ಟಿವಿ ಚಾನಲ್ಗಳು ಮತ್ತು 20 ರೆಡಿಯೋ ಚಾನಲ್ಗಳ ಬಳಕೆಗೆ ಅವಕಾಶ ಸಿಗಲಿದೆ. ಈ ಚಾನೆಲ್ಗಳೆಲ್ಲವೂ ಫ್ರೀ ಟು ಏರ್ ಮತ್ತು ಫ್ರೀ ಟು ಲೈಫ್ ಟೈಮ್. ಡಿಶ್, ಸೆಟ್ಅಪ್ ಬಾಕ್ಸ್ ಮತ್ತು ಇಂಟರ್ನೆಟ್ ಹೀಗೆ ಎಲ್ಲಾ ಕಿರಿಕಿರಿಗಳಿಂದ ಮುಕ್ತಿ ಸಿಗುತ್ತದೆ.
1. ಮಾರಕವಾಗುತ್ತಿದೆ ಬೆಂಗಳೂರು ಟ್ರಾಫಿಕ್ - ಪ್ರಯಾಣಿಕರಲ್ಲಿ ಹೆಚ್ಚುತ್ತಿದೆ ನರದೌರ್ಬಲ್ಯ ಸಮಸ್ಯೆ
2. ಸರಳ ವಿವಾಹಕ್ಕೆ ಜೈ ಎಂದ ಯುವ ಜೋಡಿ : ಮದುವೆಗೆ ಕೂಡಿಟ್ಟ ಹಣ ರೈತರಿಗೆ ದಾನ
3. 70 ಕೊಠಡಿ, 11 ಸಿಬ್ಬಂದಿ, ಇರುವವನೊಬ್ಬನೇ ಭಿಕ್ಷುಕ : ಪುನರ್ವಸತಿ ಹೆಸರಲ್ಲಿ ಹಣ ಪೋಲು