ಕೊರೊನಾವೈರಸ್ ಪರಿಣಾಮ: ಸಾಲದ ಮರುಪಾವತಿಯನ್ನು ಹಾಗೂ ದೀರ್ಘಾವಧಿ ಸಾಲದ ಮಾಸಿಕ ಕಂತುಗಳನ್ನು ಮುಂದೂಡಿದ ಆರ್‌ಬಿಐ

ಕೋವಿಡ್‌-19 ನ ಭಯದ ಬೆನ್ನಲ್ಲೇ ದೇಶ ಮಾತ್ರವಲ್ಲದೇ ಪೂರ್ತಿ ಅರ್ಥವ್ಯವಸ್ಥೆಯೇ ಸ್ಥಬ್ಧಗೊಂಡಿದೆ. ಈ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 15 ವರ್ಷಕ್ಕೂ ಮೇಲ್ಪಟ್ಟ ದೀರ್ಘಾವಧಿಯ ಸಾಲದ ಮಾಸಿಕ ವಾಪತಿಯನ್ನು ಮುಂದೂಡಿರುವುದಲ್ಲದೆ, ಕ್ಯಾಶ್ ರಿಸರ್ವ್ ರೇಶ್ಯೊ (ಸಿಆರ್‌ಆರ್) ಅನ್ನು 5.1 ರಿಂದ 4.4 ಗೆ ಇಳಿಸಿದೆ.

ಕೊರೊನಾವೈರಸ್ ಪರಿಣಾಮ: ಸಾಲದ ಮರುಪಾವತಿಯನ್ನು ಹಾಗೂ ದೀರ್ಘಾವಧಿ ಸಾಲದ ಮಾಸಿಕ ಕಂತುಗಳನ್ನು ಮುಂದೂಡಿದ ಆರ್‌ಬಿಐ

Friday March 27, 2020,

2 min Read

ಇಂದು ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಅವಧಿಯ ಸಾಲಗಳ ಮೇಲಿನ ಇಎಂಐ ಪಾವತಿಗಳನ್ನು ಮೂರು ತಿಂಗಳ ಕಾಲ ತಡೆಹಿಡಿದಿದೆ ಮತ್ತು 11 ವರ್ಷಗಳಲ್ಲಿಯೇ ಅತೀ ಕಡಿಮೆ ಬಡ್ಡಿ ದರವನ್ನು ಘೋಷಿಸಿದೆ. ಕೊರೊನಾವೈರಸ್ ಸುಂಟರಗಾಳಿಯಲ್ಲಿ ಸಿಲುಕಿರುವ ನಿಧಾನಗತಿಯ ಆರ್ಥಿಕತೆಯನ್ನು ರಕ್ಷಿಸುವ ಸರ್ಕಾರದ ಪ್ರಯತ್ನಗಳು ಇವಾಗಿವೆ.


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೊವನ್ನು 4.4 ಪ್ರತಿಶತಕ್ಕೆ ಕಡಿತಗೊಳಿಸಿದೆ, ಇದು ಕನಿಷ್ಠ 15 ವರ್ಷಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಬಡ್ಡಿದರ ಆಗಿದೆ. ಅಲ್ಲದೆ, ಇಂದು ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಬ್ಯಾಂಕುಗಳು ನಿರ್ವಹಿಸುತ್ತಿರುವ ನಗದು ಮೀಸಲು ಅನುಪಾತವನ್ನು ಕಡಿಮೆ ಮಾಡಿದೆ. ಎಲ್ಲಾ ಬ್ಯಾಂಕುಗಳ ಸಿಆರ್‌ಆರ್‌ನಲ್ಲಿ 100 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿ 1.37 ಲಕ್ಷ ಕೋಟಿ ರೂ.ಯನ್ನು ಬ್ಯಾಂಕಿಂಗ್‌ ಸಿಸ್ಟಮ್‌ನಲ್ಲಿ ಬಿಡಬೇಕೆಂದು ನಿರ್ದೇಶಿಸಲಾಗಿದೆ.


ರಿವರ್ಸ್ ರೆಪೊ ದರವನ್ನು 90 ಬಿಪಿಎಸ್‌ನಿಂದ ನಾಲ್ಕು ಪ್ರತಿಶತದಷ್ಟು ಕಡಿತಗೊಳಿಸಿದೆ.


ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ದೊಡ್ಡ ಜಾಗತಿಕ ಆರ್ಥಿಕ ಹಿಂಜರಿತವನ್ನು ಊಹಿಸಿದ್ದಾರೆ ಮತ್ತು ಹೀಗೆ ಮುಂದುವರೆದರೆ ಭಾರತವು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳಲಿದೆ ಎಂದು ಹೇಳಿದರು.


"ಪರಿಸ್ಥಿತಿಗೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ," ಎಂದು ಅವರು ಹೇಳಿದರು.


ಜಾಗತಿಕ ಆರ್ಥಿಕ ಕುಸಿತವು ಕಚ್ಚಾ ವಸ್ತುಗಳ ಬೆಲೆಗಳ ಕುಸಿತಕ್ಕೆ ಕಾರಣವಾಗಿದೆ ಇದರ ಪರಿಣಾಮ ಭಾರತಕ್ಕೂ ತಟ್ಟಲಿದೆ ಎಂದು ದಾಸ್ ಹೇಳಿದರು.


ಇದರಿಂದ ಒಟ್ಟಾರೆ ಬೇಡಿಕೆಯು ದುರ್ಬಲವಾಗಬಹುದು ಮತ್ತು ಹಣದುಬ್ಬರವನ್ನುಂಟು ಮಾಡಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.


ಇಂದು ಹಣದ ದ್ರವ್ಯತೆಯ ಕುರಿತಾದ ಘೋಷಣೆಯು, ದೀರ್ಘಾವಧಿಯ ರೆಪೊ ರೇಟ್ ಅನ್ನು ಮೂರುವರ್ಷದ ಟೆನರ್ ಗೆ ಒಟ್ಟು ಒಂದು ಲಕ್ಷ ಕೋಟಿಮೌಲ್ಯಕ್ಕೆ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ಅಡಿಯಲ್ಲಿ ಹರಾಜಿಗೆ ಇಡುವುದು ಮತ್ತು ಶಾಸನಬದ್ದ ದ್ರವ್ಯತೆಯ ರೇಶ್ಯೊ ಅನ್ನು 2 ರಿಂದ 3ಕ್ಕೆ ಏರಿಸುವುದನ್ನು ಒಳಗೊಂಡಿದೆ. ಈ ಕ್ರಮಗಳು ಜೂನ್ 30 ರಿಂದ ಜಾರಿಗೆ ಬರಲಿದೆ.


ಈ ಮೂರು ಕ್ರಮಗಳು ಒಟ್ಟು 3,74,000 ಕೋಟಿ ರೂ. ಗಳನ್ನು ದೇಶದ ಹಣಕಾಸು ವ್ಯವಸ್ಥೆಗೆ ಲಭ್ಯವಾಗುವಂತೆ ಮಾಡುತ್ತದೆ.


2019 ರಲ್ಲಿ ನೀತಿ ದರಗಳನ್ನು ಐದು ಬಾರಿ ಕಡಿತಗೊಳಿಸಿದ ನಂತರ, ಡಿಸೆಂಬರ್‌ನಿಂದ ಹೆಚ್ಚಿದ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಈ ನಿರ್ಧಾರಕ್ಕೆ ಬಂದಿದೆ.


ಅಭೂತಪೂರ್ವ 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಆರ್ಥಿಕ ಪರಿಣಾಮವನ್ನು ಎದುರಿಸಲು ಸರ್ಕಾರವು 1.7 ಲಕ್ಷ ಕೋಟಿ ರೂ.ಗಳ ಉಚಿತ ಆಹಾರ ಧಾನ್ಯಗಳು ಮತ್ತು ನಗದು ಡೋಲ್‌ಗಳ ಪ್ಯಾಕೇಜ್ ಅನ್ನು ಬಡವರಿಗೆ ನೀಡಿದ ಒಂದು ದಿನದ ನಂತರ ಈ ಕ್ರಮಗಳು ಜಾರಿಗೆ ಬಂದಿವೆ.


ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಮೂಲತಃ ಏಪ್ರಿಲ್ ಮೊದಲ ವಾರದಲ್ಲಿ ಸಭೆ ಸೇರಲು ನಿರ್ಧರಿಸಲಾಗಿದ್ದರೂ, ಕೊರೊನಾವೈರಸ್ ಸಮಸ್ಯೆಯಿಂದ ಅದನ್ನು ಒಂದು ವಾರ ಮುಂಚಿತವಾಗಿ ಸಭೆ ನಡೆಸಲಾಗಿದೆ.