ಕೊರೊನಾವೈರಸ್: ಆಸ್ಪತ್ರೆಗಳ ನೆಲಗಳನ್ನು, ಬಸ್ಸುಗಳನ್ನು ಸ್ವಚ್ಛಗೊಳಿಸಲು ಎಲ್ಇಡಿ ಆಧಾರಿತ ಯಂತ್ರವನ್ನು ಅಭಿವೃದ್ಧಿಪಡಿಸಿದ ಐಐಟಿ

ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ನೆರವಾಗಲು ಐಐಟಿ ಗುವಾಹಟಿ ಅಗ್ಗದ ಎಲ್ಇಡಿ ಆಧಾರಿತ ಸೋಂಕುನಿವಾರಕ ಯಂತ್ರವನ್ನು ಅಭಿವೃದ್ಧಿಪಡಿಸಿದ್ದು ಇದು ಆಸ್ಪತ್ರೆಗಳು, ಬಸ್ಸುಗಳು ಮತ್ತು ರೈಲುಗಳಲ್ಲಿನ ನೆಲಗಳನ್ನು ಸ್ವಚ್ಛಗೊಳಿಸಲು ಸಹಕಾರಿಯಾಗಿದ್ದು, ಯಂತ್ರಕ್ಕೆ ಕೇವಲ 1,000 ಬೆಲೆಯಿದೆ.

ಕೊರೊನಾವೈರಸ್: ಆಸ್ಪತ್ರೆಗಳ ನೆಲಗಳನ್ನು, ಬಸ್ಸುಗಳನ್ನು ಸ್ವಚ್ಛಗೊಳಿಸಲು ಎಲ್ಇಡಿ ಆಧಾರಿತ ಯಂತ್ರವನ್ನು ಅಭಿವೃದ್ಧಿಪಡಿಸಿದ ಐಐಟಿ

Wednesday April 08, 2020,

2 min Read

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಒಂದು ತಂಡವು ಕಡಿಮೆ ಬೆಲೆಯ ಎಲ್‌ಇಡಿ ಆಧಾರಿತ ಯಂತ್ರವನ್ನು ಅಭಿವೃದ್ಧಿಪಡಿಸಿದ್ಧು, ಇದನ್ನು ಆಸ್ಪತ್ರೆಗಳ ಮಹಡಿಗಳ ಜೊತೆಗೆ ಬಸ್ಸುಗಳು ಮತ್ತು ರೈಲುಗಳ ಸೋಂಕು ನಿವಾರಣೆಗೆ ಬಳಸಬಹುದಾಗಿದೆ, ಇದು ದೇಶದಲ್ಲಿ ಕೋವಿಡ್-19 ವಿರುದ್ಧದ ಹೋರಾಟಕ್ಕೆ ನೆರವಾಗುತ್ತವೆ.


ಐಐಟಿ ಗುವಾಹಟಿಯು ಯಂತ್ರಕ್ಕೆ ಪೇಟೆಂಟ್ ಸಲ್ಲಿಸುತ್ತಿದ್ದು, ಮಾರುಕಟ್ಟೆಗೆ ಬಂದಾಗ ಯಂತ್ರವು 1,000 ರೂ ವೆಚ್ಚದಲ್ಲಿ ಲಭ್ಯವಿರಲಿದೆ. ಪ್ರಸ್ತುತ ಯಂತ್ರದ ಮೂಲ ಮಾದರಿಯನ್ನು ಕೈಯಾರೆ ನಿರ್ವಹಿಸುವ ಅಗತ್ಯವಿದೆ, ಆದಾಗ್ಯೂ ತಂಡವು ಇದನ್ನು ರೋಬೋಟ್-ಮಾನವಸಹಿತ ಯಂತ್ರವನ್ನಾಗಿ ಮಾಡುವಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಸೀಮಿತ ಮಾನವ ಹಸ್ತಕ್ಷೇಪದ ಅಗತ್ಯವಿರಲಿದೆ.




ಕರ್ನಾಟಕ ಸರ್ಕಾರದ ಕೋರಿಕೆಯ ಮೇರೆಗೆ ಅಭಿವೃದ್ಧಿಪಡಿಸಿದ ಯಂತ್ರವನ್ನು ಆಸ್ಪತ್ರೆಗಳು ಮತ್ತು ಬಸ್‌ಗಳಲ್ಲಿ ಬಳಸಲು ಮತ್ತು ವಾಣಿಜ್ಯ ಬಳಕೆಗಾಗಿ ಇತರ ಸರ್ಕಾರಗಳಿಗೆ ಪಿಚ್ ಮಾಡಲಾಗಿದೆ.


"ಮುಂಬರುವ ತಿಂಗಳುಗಳಲ್ಲಿ ಲಾಕ್ ಡೌನ ತೆರುವಾದಾಗ ಸಾರ್ವಜನಿಕ ಸ್ಥಳಗಳ ಶುಚಿಗೊಳಿಸುವಿಕೆಯು ಬಹಳ ನಿರ್ಣಾಯಕವಾಗಲಿದೆ, ಆದರಿಂದ ವೈರಸ್ ಹರಡುವುದನ್ನು ತಡೆಗಟ್ಟಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ. ಈಗಿನವರೆಗು, ಸೋಂಕು ತಡೆಗಟ್ಟುವಿಕೆಯ ಕ್ರಮಗಳನ್ನು ಹೊರಮೇಲ್ಮೈಗಳು, ಗೋಡೆಗಳು ಮತ್ತು ತೆರೆದ ಪ್ರದೇಶಗಳಲ್ಲಿ ಮಾತ್ರ ತೆಗೆದುಕೊಳ್ಳಲಾಗುತ್ತಿದೆ ಆದರೆ ನೆಲಗಳ ಶುದ್ಧೀಕರಣಕ್ಕೆ ಇನ್ನೂ ಯಾವುದೇ ವ್ಯವಸ್ಥೆ ಇಲ್ಲ. ಇದಕ್ಕೆ ಯಾರಾದರು ದೈಹಿಕವಾಗಿ ಆಲ್ಕೋಹಾಲ್ ಆಧಾರಿತ ಕ್ಲೀನರ್ ಬಳಸಿ ನೆಲವನ್ನು ಒರೆಸಬೇಕು," ಎಂದು ಸಂಸ್ಥೆಯ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸೆಂಥಿಲ್ಮುರುಗನ್ ಸುಬ್ಬಯ್ಯ ಪಿಟಿಐಗೆ ತಿಳಿಸಿದ್ದಾರೆ.


"ಯುವಿಸಿ ವ್ಯವಸ್ಥೆಯು ಸೂಕ್ಷ್ಮ ಜೀವಿ ಸೋಂಕಿತ ರಂಧ್ರ ರಹಿತ ಹೊರ ಮೈಯನ್ನು ಸ್ವಚ್ಛಗೊಳಿಸುವಲ್ಲಿ ಸಾಬೀತಾಗಿರುವ ತಂತ್ರಜ್ಞಾನವಾಗಿದೆ. 186ಜೆ ಲಸಿಕೆಯಿಂದ ಹೆಚ್ಚು ಸ್ಥಿರವಾದ ವೈರಸ್‌ಗಳಲ್ಲಿ ಒಂದಾದ ಎಂಎಸ್ 2 ಕೊಲಿಫೇಸ್‌ ಅನ್ನು ಯುವಿಸಿ ಸಹಾಯದಿಂದ ತೊಂಬತ್ತು ಪ್ರತಿಶತ ಕೊಲ್ಲುವ ಪ್ರಮಾಣವನ್ನು ಸಾಧಿಸಬಹುದಾಗಿದೆ. ಆದರೆ 36ಜೆ ಲಸಿಕೆ ಅಗತ್ಯವಿರುವುದು ಕೋವಿಡ್-19 ಗೆ ಹೋಲುವ ಇನ್ಫ್ಲುಯೆನ್ಸ (ಶೀತಜ್ವರ) ವೈರಸ್‌ಗಾಗಿ. ತಂಡವು 30 ಸೆಕೆಂಡುಗಳಲ್ಲಿ 400 ಜೆ ಡೋಸ್ ನೀಡುವ ಸಾಮರ್ಥ್ಯವಿರುವ ಯುವಿಸಿ ಎಲ್ಇಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ, ಇದರಿಂದ ವೈರಸ್-ಸೋಂಕಿತ ಮೇಲ್ಮೈಯನ್ನು ಸ್ವಚ್ಛಗೊಳಿಸಲಾಗುತ್ತದೆ. ಈ ಯುವಿಸಿ ವ್ಯವಸ್ಥೆಯು ರಂಧ್ರ ರಹಿತ ವೈರಸ್-ಸೋಂಕಿತ ಪ್ರದೇಶದಲ್ಲಿ ವಿಶಿಷ್ಟ ವಿನ್ಯಾಸವು ಏಕರೂಪದ ಮಾನ್ಯತೆಯನ್ನು ಖಚಿತಪಡಿಸುತ್ತದೆ,” ಎಂದು ಅವರು ಹೇಳಿದರು.


ಇನ್ಸ್ಟಿಟ್ಯೂಟ್ನ ಪ್ರಯೋಗಾಲಯದಲ್ಲಿ ಪರೀಕ್ಷಿಸಲ್ಪಟ್ಟ ಈ ಯಂತ್ರವು ಭೌತಿಕ ವಸ್ತುಗಳ ಚಲನವಲನಗಳ ಗುರುತಿಸುವಿಕೆ ಸಹ ಹೊಂದಿದ್ದು, ಚಿಕಿತ್ಸೆಯ ಸಮಯದಲ್ಲಿ ಮಾನವನ ಚರ್ಮಕ್ಕೆ ಯುವಿಸಿ ಒಡ್ಡಿಕೊಳ್ಳುವುದನ್ನು ತಪ್ಪಿಸಲಾಗುತ್ತದೆ.


"ಕೋವಿಡ್-19 ವಿರುದ್ಧ ಹೋರಾಡಲು ಹಲವಾರು ಇತರ ಬುದ್ದಿವಂತ ಮತ್ತು ಕಡಿಮೆ-ವೆಚ್ಚದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ನಾವು, ಸರ್ಕಾರಿ ಸಂಸ್ಥೆಗಳು ಮತ್ತು ಕೈಗಾರಿಕಾ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ," ಎಂದು ಸುಬ್ಬಯ್ಯ ಹೇಳಿದ್ದಾರೆ.


ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಮಹಾಮಾರಿ ಕೊರೊನಾವೈರಸ್ ಗೆ ಬಲಿಯಾದ ಸಾವುಗಳ ಸಂಖ್ಯೆಯು 148 ಕ್ಕೆ ಏರಿದ್ದು ದೇಶದಲ್ಲಿ ಪ್ರಕರಣಗಳ ಸಂಖ್ಯೆಯು 5,000 ದಾಟಿದೆ ಎಂದು ಹೇಳಲಾಗಿದೆ.


ಪ್ರಸ್ತುತ ಕೋವಿಡ್-19 ಪ್ರಕರಣಗಳ ಸಂಖ್ಯೆ 5351 ಆಗಿದ್ದು, 468 ಜನರನ್ನು ಗುಣಪಡಿಸಿ ಬಿಡುಗಡೆ ಮಾಡಲಾಗಿದೆ ಮತ್ತು ಒಬ್ಬರು ವಲಸೆ ಹೋಗಿದ್ದಾರೆ ಎಂದು ಹೇಳಲಾಗಿದೆ. ಒಟ್ಟು ಪ್ರಕರಣಗಳಲ್ಲಿ 66 ವಿದೇಶಿ ಪ್ರಜೆಗಳಿದ್ದಾರೆ.