ವರ್ಷದಿಂದ ವರ್ಷಕ್ಕೆ ದಟ್ಟ ಹೊಗೆಯಲ್ಲಿ ಉಸಿರಾಡುತ್ತಿರೋ ದೆಹಲಿ

ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ನವೆಂಬರ್‌ 4ರಂದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಗರಿಷ್ಠ ಮಟ್ಟವಾದ 494ಕ್ಕೆ ತಲುಪಿ, ಕಳಪೆ ವಾಯುವಿನಿಂದಾಗಿ ಭಯದ ವಾತಾವರಣ ಸೃಷ್ಟಿಸಿತ್ತು. ನಂತರದ ದಿನದಂದು 369ಕ್ಕೆ ಇಳಿಯಿತಾದರು ನೆಮ್ಮದಿಯ ನಿಟ್ಟುಸಿರ ಬಿಡಲು ಕಾಲವಿನ್ನು ಸನ್ನಿಹಿತವಾಗಿಲ್ಲ.

ವರ್ಷದಿಂದ ವರ್ಷಕ್ಕೆ ದಟ್ಟ ಹೊಗೆಯಲ್ಲಿ ಉಸಿರಾಡುತ್ತಿರೋ ದೆಹಲಿ

Thursday November 07, 2019,

2 min Read

ನಮ್ಮೆಲ್ಲರಿಗೂ ದೀಪಾವಳಿಯೆಂಬುದು ಪಟಾಕಿ ಸಿಡಿಸುವ ಸಮಯವಾದರೆ, ದೆಹಲಿಯ ಜನರಿಗೆ ಮಾತ್ರ ವಾಯುಗುಣ ಮುಟ್ಟ ಅತ್ಯಂತ ಕಳಪೆಯಾಗುವ ಕಾಲವದು. ಕ್ಷೀಣಿಸುವ ವಾಯುಗುಣಮಟ್ಟದಿಂದಾಗಿ ಬೆಳಕಿನ ಹಬ್ಬ ದೀಪಾವಳಿಯೆಂಬುದು ವಾಯುಗುಣಮಟ್ಟ ಕಡಿಮೆಯಾದುದರ ಕರೆಗಂಟೆಯಂತಾಗಿದೆ.


ಪ್ರತಿ ವರ್ಷ ಈ ಸಮಯದಲ್ಲಿ, ದೆಹಲಿಯ ವಾಯುಗುಣಮಟ್ಟದಲ್ಲಿ ಗಣನೀಯ ಮಟ್ಟದಲ್ಲಿ ಕಡಿಮೆಯಾಗುತ್ತದೆ. ಕಳೆಯನ್ನು, ಕಸವನ್ನು ಹಾಗೂ ವಾಹನಗಳು ಹೊರಸೂಸುವ ಹೊಗೆಯಿಂದಾಗಿ ಉಸಿರಾಟಕ್ಕೆ ತೊಂದರೆಯಾಗಿ ರಾಷ್ಟ್ರ ರಾಜಧಾನಿಯ ಜನರು ಮೂಗಿಗೆ ಗಾಳಿಯನ್ನು ಶುದ್ಧ ಮಾಡುವ ಮಾಸ್ಕ್‌ ಧರಿಸಿಕೊಂಡೆ ಮನೆಯಿಂದ ಹೊರಬರುತ್ತಿದ್ದಾರೆ.


ಕಳೆದ ವಾರವಿಡೀ ಮಬ್ಬುಮಬ್ಬಾಗಿ ಕಾಣುತ್ತಿದ್ದ ನಗರವು ತನ್ನ ಮೂರು ವರ್ಷದ ಅವಧಿಯಲ್ಲೇ ಅತ್ಯಂತ ಕಳಪೆಮಟ್ಟದ ವಾಯುವನ್ನು ಹೊಂದಿದ್ದು, ವಾಯುಗುಣಮಟ್ಟ ಸೂಚ್ಯಂಕದಲ್ಲಿ ನವೆಂಬರ್‌ 4ರಂದು 494ಕ್ಕೇರಿದೆ. ಆದಾಗ್ಯೂ ಮರುದಿನವೆ 369ಕ್ಕೆ ಇಳಿದಿದೆ. ಆದರೆ ನಾವು ನೆಮ್ಮದಿಯ ನಿಟ್ಟುಸಿರು ಬಿಡುವು ಕಾಲವಿನ್ನು ಸನಿಹವಿಲ್ಲ ಯಾಕೆಂದರೆ, ಸೂಚ್ಯಂಕದಲ್ಲಿ ʼತೀವ್ರʼ ಮಟ್ಟದಿಂದ ಕೇವಲ ʼಕಳಪೆʼ ಮಟ್ಟಕ್ಕೆ ಇಳದಿದೆಯಷ್ಟೆ.


ಹವಾಮಾನ ಅಧಿಕಾರಿಗಳ ಪ್ರಕಾರ, ಮಹಾ ಸೈಕ್ಲೋನ್‌ ಹಾಗೂ ಪಶ್ಚಿಮ ಕರಾವಳಿಯಲ್ಲಿನ ವಾಯುಭಾರ ಕುಸಿತದಿಂದಾಗಿ ದೆಹಲಿ, ರಾಜಸ್ಥಾನ, ಪಂಜಾಬ್‌, ಹರಿಯಾಣ ಹಾಗೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗಬಹುದೆಂದು ಹಾಗೂ ರಾಷ್ಟ್ರರಾಜಧಾನಿ ವಲಯದಲ್ಲಿನ ಹೊಗೆ ಕಡಿಮೆಯಾಗಬಹುದೆಂದು ಪಿಟಿಐ ವರದಿ ಮಾಡಿದೆ.


(ಚಿತ್ರ ಕೃಪೆ: ಅಂಕಿತ್ ವರ್ಮಾ ಅವರ ಟ್ವಿಟ್ಟರ್ ಖಾತೆ)


ಏರ್ಪೋಕ್ಯಾಲಿಪ್ಸ್ ಹಾಗೂ ನಾಗರಿಕರ ಕಳಕಳಿ

ದೆಹಲಿಯ ಪರಿಸ್ಥಿತಿಯನ್ನು ‘ಏರ್ಪೋಕ್ಯಾಲಿಪ್ಸ್‌’(ಗಾಳಿಯಿಂದ ಅಂತಿಮ ವಿನಾಶ) ಎಂದು ಕರೆದಿರುವ ಜನರು, ಸಾಮಾಜಿಕ ಮಾಧ್ಯಮದಲ್ಲಿ #MyRightToBreathe ಎಂಬ ಹ್ಯಾಷ್‌ ಟ್ಯಾಗ್‌ಗಳು ಆವೇಗ ಪಡೆದುಕೊಳ್ಳುತ್ತಿವೆ.


ವರುಣ್‌ ಧವನ್‌, ಪ್ರಿಯಾಂಕ ಚೋಪ್ರ ಜೋನಸ್ (ನೆಟ್‌ಫ್ಲಿಕ್ಸ್‌ನ ವೈಟ್‌ ಟೈಗರ್ ಚಿತ್ರೀಕರಣಕ್ಕಾಗಿ ಬಂದಿದ್ದಾರೆ) ಹಾಗೂ ರಿಶಿ ಕಪೂರ್‌ ಕ್ಷೀಣಿಸುತ್ತಿರುವ ವಾಯು ಗುಣಮಟ್ಟದ ವಿರುದ್ಧ ಧ್ವನಿಯೆತ್ತುತ್ತ ಹಾಗೂ ಸುರಕ್ಷಿತ ಪರಿಸರ ನಿರ್ಮಾಣಕ್ಕಾಗಿ ಕೆಲಸಮಾಡಬೇಕು ಎಂದಿದ್ದಾರೆ.




“ನಾನು ಪ್ರತಿದಿನ ಎಚ್ಚರಗೊಂಡಾಗ ನನಗೆ ತಲೆನೋವು ಇರುತ್ತದೆ. ಕೆಲವೊಮ್ಮ ಈ ಗಾಳಿಯೂ ಉಸಿರುಗಟ್ಟಿಸುತ್ತದೆ, ಮತ್ತು ಮೂಗಿನ ಹೊಳ್ಳೆಗಳು ಮತ್ತು ಕಣ್ಣುಗಳಲ್ಲಿ ಉರಿಯೂತ್ತಿರುವಂತೆ ಭಾಸವಾಗುತ್ತದೆ” ಎಂದು ಅನುಷ್ಕಾ ಕುಷಿ ಎಂಬ ವಿದ್ಯಾರ್ಥಿನಿ ಏಎಫ್‌ಪಿ ಗೆ ಹೇಳಿದ್ದಾರೆ.


ದೆಹಲಿ-ಎನ್‌ಸಿಆರ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶದ ಸಮಿತಿಯು ಘೋಷಿಸಿದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 5 ರವರೆಗೆ ಶಾಲೆಗಳನ್ನು ಮುಚ್ಚುವಂತೆ ದೆಹಲಿ ಸರ್ಕಾರ ಆದೇಶಿಸಿತ್ತು.


ಇದಲ್ಲದೆ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೆರೆಯ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್‌ಗಳೂ ತಮ್ಮ ರೈತರನ್ನು ಬೆಳೆ ಕಳೆಗಳನ್ನು ಸುಡುವಂತೆ ಒತ್ತಾಯಿಸಿದ್ದಕ್ಕಾಗಿ, ದೆಹಲಿಯ ಜನರು ಇದರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ ಎಂದರು. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮೂಲಕ 50 ಲಕ್ಷ ಮುಖವಾಡಗಳನ್ನು ವಿತರಿಸುವುದಾಗಿ ಘೋಷಿಸಿದ ಅವರು, ‘ಅಗತ್ಯವಿದ್ದಾಗ ಅವುಗಳನ್ನು ಬಳಸಿಕೊಳ್ಳಿ’ ಎಂದು ಜನರನ್ನು ಕೋರಿದರು.


ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳಾದ ಮನೋಹರ್ ಲಾಲ್ ಖಟ್ಟರ್ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಕ್ರಮವಾಗಿ ಪತ್ರ ಬರೆಯುವಂತೆ ಅವರು ಶಾಲಾಮಕ್ಕಳಲ್ಲಿ ಕೋರಿಕೊಂಡಿದ್ದಾರೆ.


ಎಲ್ಲ ಸ್ಥರಗಳಲ್ಲೂ ಹೋರಾಡುತ್ತ

ಪೈರು ಕಳೆಯ ಸುಡುವಿಕೆಯು ದೆಹಲಿಯ ವಾಯುಮಾಲಿನ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಕಾರಣವಾಗುತ್ತದೆ ಹಾಗೂ ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಣನೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ಮತ್ತು ಗುಪ್ತಾ ದೀಪಕ್ ನೇತೃತ್ವದ ನ್ಯಾಯಪೀಠಗಳು ಈ ಮಟ್ಟದಲ್ಲಿ ಯಾವುದೇ ಸುಸಂಸ್ಕೃತ ದೇಶಗಳು ವಾಸಿಸಲು ಸಾಧ್ಯವಿಲ್ಲ, ಮತ್ತು ಭಾರತವು ತುಂಬಾ ಉದಾರವಾಗಿದೆ ಎಂದು ಹೇಳಿದರು.


"ಹೆಚ್ಚಾಗಿ ಬೆಂಕಿ ಹಚ್ಚದಂತೆ ನೋಡಿಕೊಳ್ಳಲು ನಾವು ಎಲ್ಲಾ ರಾಜ್ಯಗಳನ್ನು ಕೇಳುತ್ತಿದ್ದೇವೆ. ಯಾವುದೇ ಉಲ್ಲಂಘನೆಯ ಸಂದರ್ಭದಲ್ಲಿ, ನಾವು ಎಲ್ಲರ ಹೊಣೆಗಾರಿಕೆಯನ್ನು ಇತ್ಯರ್ಥಪಡಿಸುತ್ತೇವೆ” ಎಂದಿದ್ದಾರೆ.


ಮುಖ್ಯ ಕಾರ್ಯದರ್ಶಿ, ಆಯುಕ್ತರು, ಅಧಿಕಾರಿಗಳು, ಮತ್ತು ಗ್ರಾಮ ಪ್ರಧಾನ್‌ಗಳು ಸೇರಿದಂತೆ ಇಡೀ ಆಡಳಿತವು ಯಾವುದೇ ರಾಜ್ಯದಲ್ಲಿ ಬೆಂಕಿ ಉರಿಯುವ ನಿದರ್ಶನಗಳು ನಡೆದಲ್ಲಿ ಸರಿಯಾದ ಉತ್ತರ ನೀಡಬೇಕಾಗುವುದು ಎಂದು ಅದು ಪ್ರಕಟಿಸಿದೆ.


ದೆಹಲಿಯಲ್ಲಿ, ನಾಗರಿಕರು ಕಾರ್‌ಪೂಲಿಂಗ್ಅನ್ನು ಕಾರ್ಯಸಾಧ್ಯ ಪರಿಹಾರವಾಗಿ ಪ್ರಾರಂಭಿಸಿದ್ದಾರೆ. ಕಳೆದ ತಿಂಗಳು, ರಸ್ತೆ ಸಾರಿಗೆ ಸಚಿವಾಲಯವು ಕಾರ್‌ಪೂಲಿಂಗ್ ಕಾರ್ಯಾಚರಣೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ರೂಪಿಸಿತು ಮತ್ತು ಕಾರ್‌ಪೂಲಿಂಗ್ ಅನ್ನು ವಾಣಿಜ್ಯ ಹಿತಾಸಕ್ತಿಯಿಂದ ದೂರವಿಡುವಂತೆ ಒತ್ತಾಯಿಸಿತು. ಇದು ಲಾಭರಹಿತ ಮತ್ತು ನಷ್ಟವಿಲ್ಲದ ಆಧಾರದ ಮೇಲೆ ನಡೆಯಬೇಕು ಎಂದು ಅವರು ಹೇಳಿದ್ದರು.


ಅಷ್ಟೇ ಅಲ್ಲದೆ ದೆಹಲಿ ಸರಕಾರವು ನಾಲ್ಕು ಚಕ್ರದ ವಾಹನಗಳಿಗೆ ಆಡ್-ಈವನ್‌ ಪದ್ಧತಿ ಜಾರಿಗೆ ತಂದಿದ್ದು, ಇದು ಸ್ಥಳೀಯವಾಗಿ ಹೊರಸೂಸುವ ಇಂಗಾಲವನ್ನು ತಡೆಯಲು ಸ್ವಲ್ಪಮಟ್ಟಿಗೆ ಸಹಕಾರಿಯಾಗಿದೆ.