ಸ್ಮಾರ್ಟ್​ಫೋನ್​ ಕಾಲಕ್ಕೂ ಅಂತ್ಯಬಂತು.. ಇನ್ನೇನಿದ್ರೂ ರೋಬೋ ಫೋನ್​ನದ್ದೇ ಕಾರುಬಾರು..!

ಟೀಮ್​ ವೈ.ಎಸ್​. ಕನ್ನಡ

ಸ್ಮಾರ್ಟ್​ಫೋನ್​ ಕಾಲಕ್ಕೂ ಅಂತ್ಯಬಂತು.. ಇನ್ನೇನಿದ್ರೂ ರೋಬೋ ಫೋನ್​ನದ್ದೇ ಕಾರುಬಾರು..!

Monday May 30, 2016,

1 min Read

ವಿಶ್ವದ ಪ್ರಥಮ ರೊಬೊಟಿಕ್ ಮೊಬೈಲ್ ಈಗ ಎಲ್ಲರ ಕಣ್ಮನ ಸೆಳೆಯುತ್ತಿದೆ. ಥೇಟ್ ಮನುಷ್ಯನ ಆಕೃತಿಯಲ್ಲಿರುವ ಈ ಲಿಲಿಪುಟ್ ಮೊಬೈಲ್, ಸ್ಮಾರ್ಟ್​ಫೋನ್ ಮಾಡುವ ಎಲ್ಲ ಕೆಸಲ ಮಾಡುವುದರ ಜೊತೆಗೆ, ಒಂದು ರೋಬೋ ಮಾಡುವ ಕೆಲಸವನ್ನು ನಿರ್ವಹಿಸುತ್ತಿದೆ. ಈಗಾಗಲೇ ಜಪಾನ್ ಈ ಮೊಬೈಲ್​ನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಮೊಬೈಲ್ ಕ್ಷೇತ್ರದಲ್ಲಿ ಮಹಾನ್ ಕ್ರಾಂತಿಗೆ ಇದು ಕಾರಣವಾಗಲಿದೆ.

image


ರೊಬೋಟಿಕ್ ಮೊಬೈಲ್ ರೊಬೋಹೊನ್ನನ್ನು ಟೊಮೋಟಕ ತಕಹಶಿ ಎಂಬ ಇಂಜಿನಿಯರ್ ಮಾನವನ ಆಕೃತಿಯಲ್ಲೇ ಅಭಿವೃದ್ಧಿ ಪಡಿಸಿದ್ದು, 198 ,000 ಯೆನ್ (1,800 ) ಡಾಲರ್ ಇದರ ಪ್ರಾರಂಭಿಕ ಬೆಲೆಯಾಗಿದೆ. ನಡೆಯುವುದು ಹಾಗೂ ನೃತ್ಯ ಮಾಡುವ ಸಾಮರ್ಥ್ಯ ಹೊಂದಿರುವುದು ಈ ರೊಬೊಟಿಕ್ ಮೊಬೈಲ್​ನ ಮತ್ತೊಂದು ವೈಶಿಷ್ಟ್ಯ.

image


ಜಪಾನ್​ನ ಎಲೆಕ್ಟ್ರಾನಿಕ್ ಸಂಸ್ಥೆಯ ಸಹಯೋಗದಲ್ಲಿ ಈ ರೊಬೊಟಿಕ್ ಮೊಬೈಲ್ ತಯಾರಾಗಿದ್ದು, ಸಾರ್ವಜನಿಕರು ಹೊಸ ಮಾದರಿಯ ಸ್ಮಾರ್ಟ್ ಫೋನ್​ನ್ನು ಪರೀಕ್ಷೆ ಮಾಡುವುದಕ್ಕೆ ಅನುಕೂಲವಾಗಲು ಎಲೆಕ್ಟ್ರಾನಿಕ್ ಸಂಸ್ಥೆ ರೋಬೊಹೋನ್ ಕೆಫೆ ಪ್ರಾರಂಭಿಸಿದ್ದು ಜೂನ್​ 8ರವರೆಗೆ ಕಾರ್ಯನಿರ್ವಹಣೆ ಮಾಡಲಿದೆ. ಜಪಾನ್​ನ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದಕ ಸಂಸ್ಥೆ ಪ್ರತಿ ತಿಂಗಳು 5,000 ಯುನಿಟ್ ರೊಬೋಟಿಕ್ ಮೊಬೈಲ್ ಗಳನ್ನು ಉತ್ಪಾದನೆ ಮಾಡಲಿದ್ದು , ಐಫೋನ್ ಹಾಗೂ ಐಪ್ಯಾಡ್​ಗಳ ಜೋಡಣೆಯಲ್ಲಿ ನಿರತವಾಗಿರುವ ಫಾಕ್ಸ್ ಕಾನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ.

image


ಮಾನವ ಆಕೃತಿಯಲ್ಲೇ ಇರುವ ರೊಬೊಟಿಕ್ ಮೊಬೈಲ್ 19 .5 ಸೆಂಟಿ ಮೀಟರ್ ನಷ್ಟು ಉದ್ದವಿದ್ದು 390 ಗ್ರಾಂಗಳಷ್ಟು ತೂಕ ಹೊಂದಿದೆ. ಇದನ್ನು ಮೊಬೈಲ್ ರೀತಿಯಲ್ಲಷ್ಟೇ ಅಲ್ಲದೆ ವಿಡಿಯೋ, ಫೋಟೊ, ಮ್ಯಾಪ್ ಗಳನ್ನೂ ಪ್ರದರ್ಶಿಸಲು ಪ್ರೊಜೆಕ್ಟರ್ ರೀತಿಯಲ್ಲಿಯೂ ಬಳಸಬಹುದಾಗಿದೆ. ಮುಂದೆ ಈ ಮೊಬೈಲ್​ನ್ನು ಇನ್ನಷ್ಟು ಅಭಿವೃದ್ದಿಪಡಿಸಲು ಸಂಸ್ಥೆ ಮುಂದಾಗಿದೆ. ಸಾಮಾನ್ಯ ಮೊಬೈಲ್ ಮಾಡುವಂತಹ ಎಲ್ಲ ಕೆಲಸವನ್ನು ಈ ಮೊಬೈಲ್ ಮಾಡಲಿದೆ. ಆಯಾ ಗ್ರಾಹಕನ ಅವಶ್ಯಕತೆಗೆ ತಕ್ಕಂತೆ ಸಹಾಯಕಾರಿಯಾಗುವಂತೆ ಕೂಡ ಮೊಬೈಲ್ ತಯಾರಿಸುವ ಸಾಧ್ಯತೆಯಿದೆ.

ಇದನ್ನು ಓದಿ:

1. ಹಿರಿಯ ಐಎಎಸ್​​ ಅಧಿಕಾರಿಯಿಂದ ಜೀವ ಜಲಕ್ಕಾಗಿ ಜಾಗೃತಿ

2.ಹಿರೇಗೌಡರ ಮಂಡ್ಯ ಟು ಇಂಟರ್​ನ್ಯಾಷನಲ್​ ಸ್ಟೋರಿ

3.ಜೇಬಲ್ಲಿ ದುಡ್ಡಿಲ್ಲ...ಮೊಬೈಲ್​ನಲ್ಲಿ ಕರೆನ್ಸಿ ಇಲ್ಲ.. ಡೋಂಟ್​ವರಿ ಉಚಿತವಾಗಿ ವೈ-ಫೈ ಬಳಸಿಕೊಳ್ಳಿ.