ಆವೃತ್ತಿಗಳು
Kannada

ಜನಸಾಮಾನ್ಯರ ಸಾಂಪ್ರದಾಯಿಕ ಬೇಡಿಕೆ ಈಡೇರಿಸುವ ವೇದಿಕೆ- ಇ-ಕಾಮರ್ಸ್‍ನಲ್ಲಿ ಬೆಂಗಳೂರಿನ `ದಿ ಎಥ್ನಿಕ್ ಸ್ಟೋರಿ' ಹವಾ

ಟೀಮ್​​ ವೈ.ಎಸ್​​. ಕನ್ನಡ

YourStory Kannada
8th Dec 2015
Add to
Shares
1
Comments
Share This
Add to
Shares
1
Comments
Share

ಜನಸಾಮಾನ್ಯರಿಗೆ ಗೊತ್ತಿಲ್ಲದ ನವೀನ ಕರಕುಶಲ ವಸ್ತುಗಳಲ್ಲಿ ಕೊನೆಯೇ ಇಲ್ಲದ ಅವಕಾಶವಿದೆ ಅನ್ನೋ ಸತ್ಯ `ಅಮೇಝಾನ್' ಜೊತೆಗಿನ ಸಹಯೋಗದಲ್ಲಿ ವರುಣ್​ ಬಂಟಿಯಾ ಅವರಿಗೆ ಅರಿವಾಗಿತ್ತು. ರಾಜಸ್ಥಾನ ಮೂಲದ ವರುಣ್, ಸಾಂಪ್ರದಾಯಿಕ ಕರುಕುಶಲ ವಸ್ತುಗಳ ಬಗ್ಗೆ ತಮಗಿದ್ದ ಪ್ರೀತಿ ಹಾಗೂ ತಮ್ಮ ಇ-ಕಾಮರ್ಸ್ ಜ್ಞಾನವನ್ನು ಸಂಯೋಜಿಸಲು ವರುಣ್ ಮುಂದಾದ್ರು. ಈ ಮೂಲಕ ಜನಸಾಮಾನ್ಯರ ಸಾಂಪ್ರದಾಯಿಕ ಅಗತ್ಯಗಳನ್ನು ಪೂರೈಸಲು ವೇದಿಕೆಯೊಂದನ್ನು ಸೃಷ್ಟಿಸಿದ್ರು. ಅಮೇಝಾನ್‍ನಲ್ಲಿ ಕೆಲಸ ಮಾಡ್ತಿದ್ದ ವರುಣ್, ಉದ್ಯೋಗ ತ್ಯಜಿಸಿ ಹೊಸ ಸಾಹಸೋದ್ಯಮಕ್ಕಾಗಿ ತಯಾರಿ ಮಾಡಿಕೊಳ್ಳಲಾರಂಭಿಸಿದ್ರು.

2015ರ ಆಗಸ್ಟ್​​​ನಲ್ಲಿ ವರುಣ್ `ದಿ ಎಥ್ನಿಕ್ ಸ್ಟೋರಿ'ಯನ್ನು ಆರಂಭಿಸಿದ್ರು. ಇದೊಂದು ಆನ್‍ಲೈನ್ ಇ-ಕಾಮರ್ಸ್ ವೇದಿಕೆ. ಸಾಂಪ್ರದಾಯಿಕ ಗೃಹಾಲಂಕಾರ ವಸ್ತುಗಳು, ಆಭರಣ, ಉಡುಪುಗಳು, ಸೌಂದರ್ಯ ಸಾಧನಗಳು, ಕಾರ್ಪೊರೇಟ್ ಉಡುಗೊರೆ ಉತ್ಪನ್ನಗಳನ್ನು `ದಿ ಎಥ್ನಿಕ್ ಸ್ಟೋರಿ'ಯಲ್ಲಿ ಮಾರಾಟ ಮಾಡಲಾಗುತ್ತದೆ. ಆರಂಭದಲ್ಲಿ ಕೆಲ ತಿಂಗಳುಗಳ ಕಾಲ ವರುಣ್ ಏಕಾಂಗಿಯಾಗಿ ಉದ್ಯಮವನ್ನು ನಡೆಸ್ತಾ ಇದ್ರು. ಬಳಿಕ ದೀಪೇಶ್ ದರ್ಲಾ, ವರುಣ್‍ಗೆ ಸಾಥ್ ನೀಡಿದ್ರು.

image


`ದಿ ಎಥ್ನಿಕ್ ಸ್ಟೋರಿ', ಕುಶಲಕರ್ಮಿಗಳು ಹಾಗೂ ಮಾರಾಟಗಾರರನ್ನು ಒಂದೆಡೆ ಸೇರಿಸುವ ವೇದಿಕೆ. ಇದು ದಾಸ್ತಾನು ಆಧರಿತ ಮಾದರಿಯಲ್ಲ, ಭಾರತದಾದ್ಯಂತ ಕುಶಲಕರ್ಮಿಗಳು ಹಾಗೂ ಮಾರಾಟಗಾರರ ಜೊತೆ `ದಿ ಎಥ್ನಿಕ್ ಸ್ಟೋರಿ' ಹೊಂದಾಣಿಕೆ ಮಾಡಿಕೊಂಡಿದೆ. ಅದನ್ನೆಲ್ಲ ಛಾಯಾಗ್ರಹಣ ಮಾಡಿ ತಮ್ಮ ಸೈಟ್ ಮೂಲಕ ಮಾರಾಟ ಮಾಡಲು ನೆರವಾಗುತ್ತೇವೆ ಎನ್ನುತ್ತಾರೆ ವರುಣ್. ಕುಶಲಕರ್ಮಿಗಳು ಮಾತ್ರವಲ್ಲ, ಗೃಹಾಲಂಕಾರಕ ವಸ್ತುಗಳು ಹಾಗೂ ಗಿಫ್ಟ್ ಐಟಮ್‍ಗಳ ಮೇಲೆ ಪೇಂಟ್ ಮಾಡುವ ವಿನ್ಯಾಸಗಾರರಿಗೆ ಕೂಡ ವರುಣ್ ಅವಕಾಶ ಕಲ್ಪಿಸಿದ್ದಾರೆ.

ಕುಶಲಕರ್ಮಿಗಳ ಜೊತೆಗೆ ಸಂಪರ್ಕ ಸಾಧಿಸುವುದು, ನಿತ್ಯದ ಕಾರ್ಯ ಚಟುವಟಿಕೆಗಳಿಗೆ ಬಂಡವಾಳ ಹೊಂದಿಸುವುದು ಹೀಗೆ ಈ ಉದ್ಯಮ ಪಯಣದಲ್ಲಿ ಪ್ರತಿದಿನವೂ ವರುಣ್‍ಗೆ ಒಂದೊಂದು ಸವಾಲು ಎದುರಾಗುತ್ತಿದೆ. ಪ್ರತಿ ಹಂತದಲ್ಲೂ ಸಮಸ್ಯೆಗಳನ್ನು ಎದುರಿಸುತ್ತಲೇ, ತಮ್ಮ ಪಯಣ ಇನ್ನೂ ಬಹುದೂರ ಇದೆ ಅನ್ನೋದನ್ನು ಅರ್ಥಮಾಡಿಕೊಂಡು ವರುಣ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಕಷ್ಟಪಟ್ಟು ಕೂಡಿಟ್ಟಿದ್ದ 4 ಲಕ್ಷ ರೂಪಾಯಿ ಬಂಡವಾಳವನ್ನು ಹಾಕಿ ವರುಣ್ `ದಿ ಎಥ್ನಿಕ್ ಸ್ಟೋರಿ' ಆರಂಭಿಸಿದ್ದಾರೆ. ಬ್ರಾಂಡಿಂಗ್ ಹಾಗೂ ವೆಬ್‍ಸೈಟ್ ವಿನ್ಯಾಸ, ಮಾರ್ಕೆಟಿಂಗ್‍ಗಾಗಿ ಸಾಮಾಜಿಕ ಮಾಧ್ಯಮಗಳ ಬಳಕೆ ಹಾಗೂ ಚಿಕ್ಕದೊಂದು ಕಚೇರಿಗಾಗಿ ಹೆಚ್ಚು ಹಣ ವ್ಯಯಿಸಲಾಗಿದೆ. ಉದ್ಯಮವನ್ನು ಯಶಸ್ಸಿನತ್ತ ಕೊಂಡೊಯ್ಯಲು ಇನ್ನಷ್ಟು ಬಂಡವಾಳ ಸಂಗ್ರಹದ ಗುರಿಯನ್ನು ವರುಣ್ ಹಾಕಿಕೊಂಡಿದ್ದಾರೆ.

ಬೆಳವಣಿಗೆ ಅವಕಾಶ ಮತ್ತು ಸವಾಲು

ಸಾಂಪ್ರದಾಯಿಕ ಉಡುಗೊರೆ ಮತ್ತು ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ದೊಡ್ಡದಾಗಿದೆ. ಅದರ ಜೊತೆ ಜೊತೆಗೆ ಅವಕಾಶಗಳು ಮತ್ತು ಸವಾಲುಗಳು ಕೂಡ ಇವೆ. ಭಾರತೀಯ ಕುಶಲಕರ್ಮಿಗಳಲ್ಲಿ ಸೊಗಸಿದೆ, ಅವರ ಕುಶಲತೆಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಪ್ರತಿಯೊಂದು ಕರಕುಶಲ ವಸ್ತು ಕೂಡ ಭಾರತದ ಇತಿಹಾಸ, ಸಂಸ್ಕೃತಿಯ ಪ್ರತೀಕ. ಜೊತೆಗೆ ನಮ್ಮ ಪಾಲಿಗೊಂದು ಹೆಮ್ಮೆ. ದೀಪಾವಳಿ ಹಾಗೂ ಇತರ ಹಬ್ಬಗಳ ಸಮಯದಲ್ಲಿ `ದಿ ಎಥ್ನಿಕ್ ಸ್ಟೋರಿ' ವೇದಿಕೆಗೆ ಅತಿ ಹೆಚ್ಚು ಆರ್ಡರ್‍ಗಳು ಸಿಗುತ್ತವೆ. ಈಗಾಗ್ಲೇ 25,000ಕ್ಕೂ ಅಧಿಕ ಮಂದಿ ವೆಬ್‍ಸೈಟ್‍ಗೆ ಭೇಟಿ ಕೊಟ್ಟಿದ್ದಾರೆ.

ತಮ್ಮ ವೆಬ್‍ಸೈಟ್‍ನಲ್ಲಿ ನೈಜತೆ ಮತ್ತು ಗ್ರಾಹಕರಿಕೆ ಸೂಕ್ತ ಆಯ್ಕೆಗಳನ್ನು ಕಲ್ಪಿಸುವುದಕ್ಕೆ ಮೊದಲ ಆದ್ಯತೆ ಎನ್ನುತ್ತಾರೆ ವರುಣ್. ಸದ್ಯ ಗುಜರಾತ್ ಮತ್ತು ರಾಜಸ್ತಾನದ ಸಾಂಪ್ರದಾಯಿಕ ಉತ್ಪನ್ನಗಳು ಇಲ್ಲಿ ಲಭ್ಯವಿವೆ. ವಿವಿಧ ವರ್ಗ, ಮತ್ತು ಪ್ರದೇಶ ಆಧಾರಿತ ಖರೀದಿ ಅವಕಾಶಗಳನ್ನೂ ಒದಗಿಸಲು ವೆಬ್‍ಸೈಟ್ ನಿರ್ಧರಿಸಿದೆ. ವಿಭಿನ್ನ ಮತ್ತು ವಿನೂತನ ವಿನ್ಯಾಸದ ಉತ್ಪನ್ನಗಳನ್ನು ಹೊಂದಲು, ಸೂಕ್ತ ಕುಶಲಕರ್ಮಿ ಹಾಗೂ ಸೂಕ್ತ ರೀತಿಯ ಉತ್ಪನ್ನಗಳ ತಯಾರಿಕೆಗೆ ಈ ಉದ್ಯಮದಲ್ಲಿರುವ ಸವಾಲುಗಳೇ ಪ್ರೇರಣೆ ಅನ್ನೋದು ವರುಣ್ ಅವರ ಅಭಿಪ್ರಾಯ.

ಮಾರುಕಟ್ಟೆ ಮತ್ತು ಪೈಪೋಟಿ

ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿವರ್ಷ 5,000 ಮಿಲಿಯನ್ ಡಾಲರ್ ಮೊತ್ತದ ಕಲೆ ಮತ್ತು ಕರಕುಶಲ ವಸ್ತುಗಳನ್ನು ರಫ್ತು ಮಾಡಲಾಗುತ್ತೆ. ಉದಯೋನ್ಮುಖ ಉದ್ಯಮಿಗಳು ಈ ವಲಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಫ್ಲಿಪ್‍ಕಾರ್ಟ್, ಸ್ನಾಪ್‍ಡೀಲ್‍ನಂತಹ ದೊಡ್ಡ ಸಂಸ್ಥೆಗಳ ಜೊತೆಗೂ `ದಿ ಎಥ್ನಿಕ್ ಸ್ಟೋರಿ' ಪೈಪೋಟಿಗೆ ಇಳಿದಿದೆ. ಆದ್ರೆ ಉತ್ಪನ್ನಗಳ ವಿಭಾಗ ಹಾಗೂ ವಸ್ತುಗಳ ವಿಚಾರಕ್ಕೆ ಬಂದ್ರೆ `ದಿ ಎಥ್ನಿಕ್ ಸ್ಟೋರಿ' ಇವೆಲ್ಲದಕ್ಕಿಂತ ವಿಭಿನ್ನ ವೇದಿಕೆ. `ಇಂಡಿಯನ್ ರೂಟ್ಸ್' ಮತ್ತು `ಕ್ರಾಫ್ಟ್ಸ್​​​ವಿಲ್ಲಾ' ಕೂಡ ಸಾಂಪ್ರದಾಯಿಕ ಉಡುಪುಗಳ ಬಗ್ಗೆ ಹೆಚ್ಚು ಗಮನಹರಿಸಿವೆ. ಈ ಸೈಟ್‍ಗಳು ಸಾಂಪ್ರದಾಯಿಕ ರೀತಿಯಲ್ಲಿ ಮನೆಗಳ ಅಲಂಕಾರವನ್ನು ಮಾಡಿಕೊಡುತ್ತವೆ, ಮನೆಯನ್ನು ಸಜ್ಜುಗೊಳಿಸಲು ಬೇಕಾದ ಉತ್ಪನ್ನಗಳನ್ನು ಕೂಡ ಒದಗಿಸುತ್ತವೆ. ಭಾರೀ ಪೈಪೋಟಿಯ ನಡುವೆ `ದಿ ಎಥ್ನಿಕ್ ಸ್ಟೋರಿ' ಹೇಗೆ ಯಶಸ್ವಿಯಾಗಿ ಮುನ್ನಡೆಯುತ್ತೆ ಅನ್ನೋದೇ ಕುತೂಹಲದ ಸಂಗತಿ.

ಲೇಖಕರು: ತೌಸಿಫ್​​ ಆಲಮ್​​

ಅನುವಾದಕರು: ಭಾರತಿ ಭಟ್​​

Add to
Shares
1
Comments
Share This
Add to
Shares
1
Comments
Share
Report an issue
Authors

Related Tags